ಭಾರತದಲ್ಲಿ ಇಸ್ಲಾಂ ಧರ್ಮದ ಅತ್ಯಂತ ಪವಿತ್ರವಾದ ರಂಜಾನ್ (Ramadan) ತಿಂಗಳು ಇಂದಿನಿಂದ ಶುರುವಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಚಕ್ರವನ್ನು ಅವಲಂಬಿಸಿರುವುದರಿಂದ ರಂಜಾನ್ ತಿಂಗಳು ಪ್ರತಿ ವರ್ಷ ಸುಮಾರು 10 ದಿನಗಳವರೆಗೆ ಬದಲಾಗುತ್ತದೆ. ಮಾರ್ಚ್ 10ರಂದು ಸೌದಿ ಅರೇಬಿಯಾದಲ್ಲಿ ಅರ್ಧಚಂದ್ರಾಕೃತಿ ಕಾಣಿಸಿಕೊಂಡಿತ್ತು. ಭಾರತದಲ್ಲಿ ಸೋಮವಾರ ಅರ್ಧಚಂದ್ರನ ದರ್ಶನವಾಗಿತ್ತು. ಹೀಗಾಗಿ, ಭಾರತದಲ್ಲಿ ಇಂದಿನಿಂದ ರಂಜಾನ್ (Ramzan) ಪ್ರಾರಂಭವಾಗಲಿದೆ. ರಂಜಾನ್ ಅರ್ಧಚಂದ್ರಾಕೃತಿ ಹೈದರಾಬಾದ್ ಮತ್ತು ಲಕ್ನೋದಲ್ಲಿ ಕಾಣಿಸಿಕೊಂಡಿದೆ.
ಈ ತಿಂಗಳಲ್ಲಿ, ಪ್ರಪಂಚದಾದ್ಯಂತದ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಉಪವಾಸದ ಅವಧಿಯಲ್ಲಿ ಎರಡು ಮುಖ್ಯ ಊಟಗಳೆಂದರೆ ಸೂರ್ಯಾಸ್ತದ ನಂತರ ತಿನ್ನುವ ಇಫ್ತಾರ್ ಮತ್ತು ಸೂರ್ಯೋದಯಕ್ಕೆ ಮೊದಲು ಸೇವಿಸುವ ಸೆಹ್ರಿ. ಇಫ್ತಾರ್ ಸಮಯಗಳು ಸೂರ್ಯಾಸ್ತದ ಆಧಾರದ ಮೇಲೆ ಪ್ರತಿದಿನವೂ ಬದಲಾಗುತ್ತವೆ. ದೇಶದ ಬೃಹತ್ ಭೌಗೋಳಿಕ ವ್ಯತ್ಯಾಸಗಳಿಂದಾಗಿ ಭಾರತದಲ್ಲಿ ಇಫ್ತಾರ್ ಸಮಯಗಳು ಗಮನಾರ್ಹವಾಗಿ ಬದಲಾಗುತ್ತವೆ. ನೀವು ವಾಸಿಸುವ ಸ್ಥಳವನ್ನು ಅವಲಂಬಿಸಿ, ಮುಂಜಾನೆ- ಮುಸ್ಸಂಜೆಯ ಉಪವಾಸವು 12ರಿಂದ 17 ಗಂಟೆಗಳವರೆಗೆ ಇರುತ್ತದೆ.
ಇದನ್ನೂ ಓದಿ: Ramadan 2024: ರಂಜಾನ್ ಹಬ್ಬ; ಭಾರತದಲ್ಲಿ ಚಂದ್ರನ ದರ್ಶನ ಯಾವಾಗ?
ಕುಟುಂಬಗಳು ಮತ್ತು ಸಮುದಾಯಗಳು ಸಾಮಾನ್ಯವಾಗಿ ಇಫ್ತಾರ್ ಹಬ್ಬದಂದು ತಮ್ಮ ಉಪವಾಸವನ್ನು ಮುರಿಯುತ್ತಾರೆ. ಇಫ್ತಾರ್ ಸಮಯವನ್ನು ಸೂರ್ಯಾಸ್ತದ ಮೂಲಕ ನಿರ್ಧರಿಸಲಾಗುತ್ತದೆ. ಆದ್ದರಿಂದ, ಅವುಗಳು ಸಹ ಪ್ರತಿದಿನ ಬದಲಾಗುತ್ತವೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ಸೂರ್ಯಾಸ್ತದ ಸಮಯವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಭಾರತದಲ್ಲಿನ ವಿಶಾಲವಾದ ಭೌಗೋಳಿಕ ವ್ಯತ್ಯಾಸಗಳ ಕಾರಣದಿಂದ ಇಫ್ತಾರ್ ಸಮಯದಲ್ಲಿ ಗಮನಾರ್ಹ ವ್ಯತ್ಯಾಸಗಳು ಉಂಟಾಗುತ್ತವೆ.
ಪ್ರಮುಖ ಭಾರತೀಯ ನಗರಗಳಲ್ಲಿನ ಸೆಹ್ರಿ ಮತ್ತು ಇಫ್ತಾರ್ ಸಮಯವನ್ನು ಕೆಳಗೆ ನೀಡಲಾಗಿದೆ:
ಅಹಮದಾಬಾದ್- ಸೆಹ್ರಿ: 05:38 AM; ಇಫ್ತಾರ್: 06:47 PM
ಬೆಂಗಳೂರು- ಸೆಹ್ರಿ: 05:19 AM; ಇಫ್ತಾರ್: 06:31 PM
ಚೆನ್ನೈ- ಸೆಹ್ರಿ: 05:08 AM; ಇಫ್ತಾರ್: 06:20 PM
ದೆಹಲಿ- ಸೆಹ್ರಿ 05:18 AM; ಇಫ್ತಾರ್: 06:27 PM
ಹೈದರಾಬಾದ್- ಸೆಹ್ರಿ 05:16 AM; ಇಫ್ತಾರ್: 06:26 PM
ಕೋಲ್ಕತ್ತಾ- ಸೆಹ್ರಿ: 04:35 AM; ಇಫ್ತಾರ್: 05:45 PM
ಕಾನ್ಪುರ- ಸೆಹ್ರಿ: 05:06 AM; ಇಫ್ತಾರ್: 06:15 PM
ಮುಂಬೈ- ಸೆಹ್ರಿ: 05:38 AM; ಇಫ್ತಾರ್: 06:48 PM
ಪುಣೆ- ಸೆಹ್ರಿ: 05:34 AM; ಇಫ್ತಾರ್: 06:44 PM
ಸೂರತ್- ಸೆಹ್ರಿ: 05:38 AM; ಇಫ್ತಾರ್: 06:47 PM
ಇದನ್ನೂ ಓದಿ: Ramadan 2024: ರಂಜಾನ್ ಉಪವಾಸ ಮಾಡುತ್ತೀರಾ?; WHO ನೀಡಿರುವ ಸೂಚನೆಗಳಿವು
ಜಗತ್ತಿನ ದಕ್ಷಿಣದ ರಾಷ್ಟ್ರಗಳಲ್ಲಿನ ಮುಸ್ಲಿಮರು ಸರಿಸುಮಾರು 12 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಆದರೆ ವಿಶ್ವದ ಉತ್ತರದ ರಾಷ್ಟ್ರಗಳಲ್ಲಿರುವವರು 17 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಏಕೆಂದರೆ ಪ್ರಪಂಚದಾದ್ಯಂತ ಹಗಲಿನ ಸಮಯವು ವಿಭಿನ್ನವಾಗಿರುತ್ತದೆ. ಈ ವರ್ಷ ಭಾರತದಲ್ಲಿ ಮುಸ್ಲಿಮರಿಗೆ ಸರಾಸರಿ ಉಪವಾಸ ಅವಧಿಯು ಸುಮಾರು 14 ಗಂಟೆಗಳಿರುತ್ತವೆ.
29 ಅಥವಾ 30 ದಿನಗಳ ಅವಧಿಯ ನಂತರ ರಂಜಾನ್ ಏಪ್ರಿಲ್ 9ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಈದ್ ಅಲ್-ಫಿತರ್ ಆಚರಣೆಯು ಏಪ್ರಿಲ್ 10ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ