Hair Care : ಬೇಸಿಗೆಯಲ್ಲಿ ಕೂದಲಿನ ಆರೋಗ್ಯ ಅಗತ್ಯ, ನಿಮ್ಮ ಪ್ರತಿದಿನದ ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸಿ

ಹೆಣ್ಣು ಮಕ್ಕಳ ಸೌಂದರ್ಯವನ್ನು ಹೆಚ್ಚಿಸುವುದೇ ಕೂದಲು. ಹೆಣ್ಣಿಗೆ ನೀಳವಾದ ಕೂದಲಿದ್ದರೇನೇ ಚಂದ. ಆದರೆ ಈಗಿನ ಕಾಲದಲ್ಲಿ ಕೂದಲಿಗೆ ಕತ್ತರಿ ಹಾಕುವವರ ಸಂಖ್ಯೆಯು ಹೆಚ್ಚಾಗಿದೆ. ಉದ್ದ ಕೂದಲಿದ್ದರೆ ಅದರ ಆರೈಕೆ ಮಾಡುವುದು ಕಷ್ಟ ಎನ್ನುವ ಕಾರಣ ಶಾರ್ಟ್ ಹೇರ್ ಹೊಂದುತ್ತಿದ್ದಾರೆ. ಆದರೆ ಹವಾಮಾನ ಬದಲಾಗುತ್ತಿದ್ದಂತೆ ಕೂದಲಿನ ಆರೈಕೆಗೆ ಗಮನ ಕೊಡಬೇಕಾಗುತ್ತದೆ. ಬೇಸಿಗೆಯಲ್ಲಿ ಈ ಕೆಲವು ಹಣ್ಣುಗಳ ಸೇವನೆಯನ್ನು ಮಾಡಿ ಆರೋಗ್ಯಯುತ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.

Hair Care : ಬೇಸಿಗೆಯಲ್ಲಿ ಕೂದಲಿನ ಆರೋಗ್ಯ ಅಗತ್ಯ, ನಿಮ್ಮ ಪ್ರತಿದಿನದ ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 12, 2024 | 2:14 PM

ಸೂರ್ಯನ ಸುಡು ಬಿಸಿಲಿನ ನಡುವೆ ಚರ್ಮದ ಕಾಳಜಿಯ ಬಗ್ಗೆ ಗಮನ ಹರಿಸುವ ನಾವುಗಳು ಕೂದಲಿನ ಆರೈಕೆಯತ್ತ ಕಾಳಜಿ ವಹಿಸುವುದೇ ಇಲ್ಲ. ಅದಲ್ಲದೇ ದೇಹವನ್ನು ತಂಪಾಗಿಸಲು ದ್ರವ ರೂಪದ ಆಹಾರವನ್ನು ಸೇವಿಸುತ್ತೇವೆ. ಕೂದಲ ಆರೋಗ್ಯಕ್ಕೆ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವ ಬಗ್ಗೆ ಸ್ವಲ್ಪವಾದರೂ ಯೋಚನೆ ಮಾಡುವುದೇ ಇಲ್ಲ. ಈ ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಕೂದಲಿನಲ್ಲಿರುವ ನೈಸರ್ಗಿಕ ಸುರಕ್ಷತಾ ಪದರವನ್ನು ಹಾಳು ಮಾಡುತ್ತವೆ. ಹೀಗಾಗಿ ಕೂದಲು ಉದುರುವುದು, ತಲೆ ಹೊಟ್ಟು, ಚರ್ಮದ ತುರಿಕೆ ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಕೂದಲಿನ ಆರೈಕೆಗೆ ಉತ್ತಮವಾದ ಆಹಾರಗಳ ಸೇವನೆಯತ್ತ ಗಮನ ಹರಿಸುವುದು ಮುಖ್ಯವಾಗಿರುತ್ತದೆ.

ಆರೋಗ್ಯಯುತ ಕೂದಲಿಗೆ ಉತ್ತಮ ಹಣ್ಣುಗಳು:

  1. ಬೆರ್ರಿ ಹಣ್ಣುಗಳು : ಸ್ಟ್ರಾಬೆರಿಗಳು, ಬೆರ್ರಿ ಹಣ್ಣುಗಳು ಹಾಗೂ ಆಮ್ಲೀಯ ಹಣ್ಣುಗಳ ಸೇವನೆ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಈ ಬೆರ್ರಿಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಇದು ಕೂದಲು ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.
  2. ಮಾವಿನ ಹಣ್ಣು : ‘ಹಣ್ಣುಗಳ ರಾಜ’ ಎಂದೇ ಕರೆಸಿಕೊಂಡಿರುವ ಮಾವು ಆರೋಗ್ಯಕರ ಕೂದಲನ್ನು ನೀಡುತ್ತದೆ. ಮಾವಿನಹಣ್ಣುಗಳು ವಿಟಮಿನ್ ಎ ಹೇರಳವಾಗಿದ್ದು ಇದು ಕೂದಲನ್ನು ನೈಸರ್ಗಿಕವಾಗಿ ತೇವಗೊಳಿಸುತ್ತದೆ. ವಿಟಮಿನ್ ಸಿ ಮತ್ತು ಇ, ಕ್ಯಾಲ್ಸಿಯಂ ಮತ್ತು ಫೋಲೇಟ್, ಇದು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ.
  3. ಆವಕಾಡೊ : ಈ ಆವಕಾಡೊದಲ್ಲಿ ವಿಟಮಿನ್ ಇ ಅಧಿಕವಾಗಿದ್ದು, ಪೋಷಕಾಂಶವು ರಕ್ತ ಪರಿಚಲನೆ ಸುಧಾರಿಸಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ತೈಲ ಮತ್ತು ಪಿಹೆಚ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
  4. ಕಲ್ಲಂಗಡಿ : ಬೇಸಿಗೆಯ ಸೀಜನಲ್ ಫುಡ್ ಆಗಿರುವ ಈ ಕಲ್ಲಂಗಡಿಯನ್ನು ಹೆಚ್ಚಿನವರು ಸೇವಿಸುತ್ತಾರೆ. ಹೆಚ್ಚಿನ ನೀರು ಮತ್ತು ಕಡಿಮೆ ಕ್ಯಾಲೋರಿ ಅಂಶದಿಂದಾಗಿ ಬೇಸಿಗೆಯಲ್ಲಿ ಹೈಡ್ರೇಟ್ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೂದಲು ತೆಳುವಾಗುವುದು ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.
  5. ಪೇರಳೆ : ಕೂದಲಿನ ಆರೋಗ್ಯಕ್ಕೆ ಕಬ್ಬಿಣವನ್ನು ಪ್ರಮುಖ ಅಂಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಕಬ್ಬಿಣದ ಅಂಶ ಹೆಚ್ಚಿರುವ ಆಹಾರಕ್ಕೆ ಪೇರಲೆ ಒಂದು ಉದಾಹರಣೆಯಾಗಿದೆ. ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ಪೇರಲ ಕೂದಲು ಕಿರುಚೀಲಗಳಿಗೆ ಸಾಮಾನ್ಯ ಆಮ್ಲಜನಕದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಆರೋಗ್ಯಕರ ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ