AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Remedies : ನೀರು ಕುಡಿದ್ರು ಬಿಕ್ಕಳಿಕೆ ನಿಲ್ಲುತ್ತಿಲ್ವಾ? ಈ ಮನೆ ಮದ್ದನ್ನೊಮ್ಮೆ ಟ್ರೈ ಮಾಡಿ

Hiccups: ಬಹುತೇಕರನ್ನು ಕಾಡುವ ಸಮಸ್ಯೆಗಳಲ್ಲಿ ಬಿಕ್ಕಳಿಕೆ ಕೂಡ ಒಂದು. ಆದರೆ ಇದೊಂದು ಕಾಯಿಲೆ ಖಂಡಿತವಲ್ಲ. ವೇಗವಾಗಿ ಊಟ ಮಾಡಿದಾಗ, ಒಂದೇ ಗುಟುಕಿಗೆ ನೀರು ಕುಡಿದಾಗ, ಅತಿಯಾದ ಮದ್ಯ ಸೇವಿಸಿದಾಗ ಈ ಬಿಕ್ಕಳಿಕೆಯು ಬರುತ್ತದೆ. ಈ ಸಮಸ್ಯೆಯು ಎದುರಾದಾಗ ಕೆಲವರಿಗೆ ಎಷ್ಟೇ ನೀರು ಕುಡಿದರೂ ಕಡಿಮೆಯಾಗುವುದೇ ಇಲ್ಲ. ಮನೆಯಲ್ಲೇ ಈ ಕೆಲವು ಮನೆ ಮದ್ದನ್ನು ಸೇವನೆ ಮಾಡುವುದರಿಂದ ಬಿಕ್ಕಳಿಕೆಯನ್ನು ದೂರ ಮಾಡಬಹುದು.

Home Remedies : ನೀರು ಕುಡಿದ್ರು ಬಿಕ್ಕಳಿಕೆ ನಿಲ್ಲುತ್ತಿಲ್ವಾ? ಈ ಮನೆ ಮದ್ದನ್ನೊಮ್ಮೆ ಟ್ರೈ ಮಾಡಿ
ಸಾಯಿನಂದಾ
| Edited By: |

Updated on: Mar 12, 2024 | 3:51 PM

Share

ದಿನನಿತ್ಯದ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತಿರುತ್ತದೆ. ಆದರೆ ಆಕಳಿಕೆ ಹಾಗೂ ಬಿಕ್ಕಳಿಕೆಯಂತಹ ಸಮಸ್ಯೆಗಳು ಖಂಡಿತವಾಗಿಯು ಕಾಯಿಲೆಯಲ್ಲ. ಆದರೆ ಏನು ಮಾಡದೇ ಸುಮ್ಮನೆ ಕೂತಿದ್ದರೂ ಬಿಕ್ಕಳಿಕೆ ಬರುವುದಿದೆ. ಹೀಗಾದಾಗ ನಿಮ್ಮ ಪ್ರೀತಿ ಪಾತ್ರರು ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳುವುದಿದೆ. ಆದರೆ ಇದು ಯಾಕಾಗಿ ಯಾವ ಸಮಯದಲ್ಲಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಸಭೆ ಸಮಾರಂಭಗಳಿಗೆ ಹೋದಾಗ ಈ ರೀತಿ ಬಿಕ್ಕಳಿಕೆ ಬಂದರೆ ಎಲ್ಲರೂ ನಿಮ್ಮನ್ನೇ ನೋಡುತ್ತಿರುತ್ತಾರೆ. ಈ ಸಮಯದಲ್ಲಿ ಮುಜುಗರದೊಂದಿಗೆ ಕಿರಿಕಿರಿಯಾಗುವುದೇ ಹೆಚ್ಚು. ಬಿಕ್ಕಳಿಕೆಯು ಬಂದಾಗ ತಿನ್ನುವುದಕ್ಕಾಗಲಿ, ಮಾತನಾಡುವುದಕ್ಕಾಗಲಿ ಆಗುವುದೇ ಇಲ್ಲ. ಕೆಲವೇ ಕೆಲವು ನಿಮಿಷಗಳಲ್ಲಿ ಇದರಿಂದ ಮುಕ್ತಿ ಹೊಂದುವುದು ಸುಲಭ.

ಬಿಕ್ಕಳಿಕೆಗೆ ಸರಳ ಮನೆ ಮದ್ದುಗಳು

  • ಬಿಕ್ಕಳಿಕೆ ಬಂದಾಗ ಲವಂಗವನ್ನು ಹಲ್ಲುಗಳಿಂದ ಅಗಿದು ಚಪ್ಪರಿಸುತ್ತಿದ್ದರೆ ಕಡಿಮೆಯಾಗುತ್ತದೆ.
  • ಬಾಳೆಎಲೆಯ ಭಸ್ಮವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಬಿಕ್ಕಳಿಕೆ ನಿಂತು ಹೋಗುತ್ತದೆ.
  • ಜೇನುತುಪ್ಪವನ್ನು ಬಾಯಿಗೆ ಹಾಕಿ ಸ್ವಲ್ಪ ಹೊತ್ತಿನವರೆಗೆ ಇಟ್ಟುಕೊಂಡು, ಆ ಬಳಿಕ ನುಂಗಿದರೆ ಕಡಿಮೆಯಾಗುತ್ತದೆ.
  • ಅರ್ಧ ಲೋಟ ನೀರಿನಲ್ಲಿ ಜೇನು ತುಪ್ಪ ಬೆರೆಸಿ ಕುಡಿಯುವುದು ಈ ಬಿಕ್ಕಳಿಕೆ ನಿಲ್ಲುವುದಕ್ಕೆ ಪರಿಣಾಮಕಾರಿ ಔಷಧ.
  • ಒಂದು ಚಚಮಚ ಜೇನು ಹಾಗೂ ಒಂದು ಚಮಚ ಹರಳೆಣ್ಣೆಯನ್ನು ಬೆರೆಸಿ ಕುಡಿಯಬೇಕು. ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಪದೇ ಪದೇ ಕಾಡುವ ಬಿಕ್ಕಳಿಕೆಯಿಂದ ಮುಕ್ತಿ ಹೊಂದಬಹುದು.
  • ಬಿಕ್ಕಳಿಕೆ ಬಂದ ತಕ್ಷಣವೇ ತಣ್ಣನೆಯ ನೀರನ್ನು ಕುಡಿದರೆ ನಿಲ್ಲುತ್ತದೆ.
  • ಒಂದು ಚಮಚ ಪೀನಟ್ ಬಟರ್ ಅನ್ನು ಬಾಯಿಗೆ ಹಾಕಿ ಸ್ವಲ್ಪ ಹೊತ್ತಿನ ಬಳಿಕ ನುಂಗುವುದು ಉತ್ತಮ ಮನೆ ಮದ್ದಾಗಿದೆ.
  • ಒಂದು ಚಮಚ ಸಬ್ಬಸಿಗೆ ಬೀಜಗಳನ್ನು ಬಾಯಿಗೆ ಹಾಕಿ ಅಗಿದು ನುಂಗುವುದರಿಂದ ಬಿಕ್ಕಳಿಕೆಯು ನಿಲ್ಲುತ್ತದೆ.
  • ಅರ್ಧ ಚಮಚ ಲಿಂಬೆರಸವನ್ನು ನೇರವಾಗಿ ಸೇವಿಸಬೇಕು. ಹುಳಿ ಸೇವನೆ ಕಷ್ಟ ಎನ್ನುವವರು ನಿಂಬೆ ರಸವನ್ನು ಉಗುರುಬೆಚ್ಚನೆಯ ನೀರಿಗೆ ಬೆರೆಸಿ ಕುಡಿಯಬಹುದು.
  • ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ಬಿಸಿನೀರಿಗೆಗೆ ಹಾಕಿ, ಹತ್ತು ನಿಮಿಷಗಳ ಬಳಿಕ ಸೋಸಿ ಕುಡಿಯುವುದು ಬಿಕ್ಕಳಿಕೆಗೆ ಶೀಘ್ರ ಪರಿಹಾರವಾಗಿದೆ.
  • ಬಿಕ್ಕಳಿಕೆ ಬಂದ ಕೂಡಲೇ ಹಿಂಬದಿಯಿಂದ ಕುತ್ತಿಗೆಯ ಸಮೀಪವಿರುವ ಪ್ರದೇಶವನ್ನು ಮಸಾಜ್ ಮಾಡಿದರೆ ಬಿಕ್ಕಳಿಕೆಯು ನಿಂತು ಹೋಗುತ್ತದೆ.
  • ಒಂದು ಚಮಚ ಬೆಣ್ಣೆಯನ್ನು ಸೇವಿಸುವುದರಿಂದಲೂ ಈ ಬಿಕ್ಕಳಿಕೆ ಸಮಸ್ಯೆಯು ಕಡಿಮೆಯಾಗುತ್ತದೆ.
  • ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆಯುವುದರಿಂದ ಬಿಕ್ಕಳಿಕೆಯು ನಿವಾರಣೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?