AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Care: ತ್ವಚೆ ಕಾಂತಿಯುತವಾಗಿ ಕಾಣಲು ಐಸ್ ಬಳಸುವುದು ಹೇಗೆ?

ತ್ವಚೆಯ ಮೇಲೆ ಐಸ್ ಕ್ಯೂಬ್ ಗಳನ್ನು ಹಚ್ಚುವ ಅಭ್ಯಾಸ ಹಲವರಿಗೆ ಇರುತ್ತದೆ. ಇದು ಹೊಸ ತಂತ್ರವೇನಲ್ಲ. ಇದನ್ನು ದೀರ್ಘಕಾಲದಿಂದ ನಾವೆಲ್ಲರೂ ಬಳಸುತ್ತಿದ್ದೇವೆ. ಬಿಸಿ ವಾತಾವರಣ ಮತ್ತು ಭಾರೀ ಬೆವರುವಿಕೆಯಿಂದಾಗಿ ಬೇಸಿಗೆಯು ನಿಮ್ಮ ಚರ್ಮದ ಕಾಂತಿಯನ್ನು ಹದಗೆಡಿಸಬಹುದು. ಇಂತಹ ಸಂದರ್ಭದಲ್ಲಿ ಐಸ್ ಕ್ಯೂಬ್‌ಗಳು ನಿಮ್ಮ ಚರ್ಮಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

Skin Care: ತ್ವಚೆ ಕಾಂತಿಯುತವಾಗಿ ಕಾಣಲು ಐಸ್ ಬಳಸುವುದು ಹೇಗೆ?
ಐಸ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 12, 2024 | 6:31 PM

ನಿಮ್ಮ ತ್ವಚೆಯನ್ನು ತಂಪಾಗಿರಿಸಲು ನೀವು ಬಯಸುತ್ತೀರಾ? ಬೇಸಿಗೆಯಲ್ಲಿ ನಿಮ್ಮ ಮೇಕ್ಅಪ್ (Makeup) ನಿಮ್ಮ ಚರ್ಮದ ಮೇಲೆ ಹೆಚ್ಚು ಕಾಲ ಇರುವಂತೆ ಮಾಡಲು ಬಯಸುತ್ತೀರಾ? ಹಾಗಿದ್ದರೆ ಐಸ್ ಕ್ಯೂಬ್ ಬಳಸಬಹುದು. ನಿಮ್ಮ ಮುಖದ ಮೇಲೆ ಐಸ್ ಕ್ಯೂಬ್ (Ice Cube) ಅನ್ನು ಉಜ್ಜುವುದರಿಂದ ನಿಮ್ಮ ಚರ್ಮಕ್ಕೆ ಆರಾಮ ಸಿಗುತ್ತದೆ. ಇದು ನಿಮ್ಮ ಮುಖದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಕಾಂತಿಯುತವಾಗಿಸುತ್ತದೆ. ಆರೋಗ್ಯದ ಉದ್ದೇಶಗಳಿಗಾಗಿ ದೇಹದ ಒಂದು ಪ್ರದೇಶಕ್ಕೆ ಐಸ್ ಅನ್ನು ಹಚ್ಚುವುದನ್ನು ಶೀತ ಚಿಕಿತ್ಸೆ ಅಥವಾ ಕ್ರೈಯೊಥೆರಪಿ ಎಂದೂ ಕರೆಯಲಾಗುತ್ತದೆ.

ಬಹುತೇಕ ಎಲ್ಲರ ಮನೆಯಲ್ಲೂ ಫ್ರೀಜರ್​ನಲ್ಲಿ ಐಸ್ ಕ್ಯೂಬ್ ಇಟ್ಟುಕೊಂಡಿರುತ್ತಾರೆ. ಈ ಐಸ್ ಅನ್ನು ನಿಮ್ಮ ಚರ್ಮಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮವನ್ನು ಹಿತವಾಗಿ ಮತ್ತು ಆರೋಗ್ಯಕರವಾಗಿಸುತ್ತದೆ. ಏಕೆಂದರೆ ಇದು ನೈಸರ್ಗಿಕ ಹೊಳಪನ್ನು ನೀಡುವ ಗುಣಗಳನ್ನು ಹೊಂದಿದೆ. ಇದು ರಕ್ತದ ಹರಿವನ್ನು ಸುಧಾರಿಸುವ ಮೂಲಕ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Skin Care Tips: ನಿಮ್ಮ ತ್ವಚೆಯ ಸೌಂದರ್ಯಕ್ಕೂ ಆಲೂಗಡ್ಡೆಗೂ ಏನು ಸಂಬಂಧ?

ಸೀರಮ್ ಅನ್ನು ಘನೀಕರಿಸಿ:

ಸೀರಮ್‌ಗಳು ನಮ್ಮ ಚರ್ಮವನ್ನು ಅವುಗಳ ತೀವ್ರ ಸಾಂದ್ರತೆಯೊಂದಿಗೆ ಪೋಷಿಸಲು ಸಹಾಯ ಮಾಡುತ್ತವೆ. ಆದ್ದರಿಂದ, ನೀವು ಐಸ್ ಕ್ಯೂಬ್‌ಗಳಲ್ಲಿ ಸೀರಮ್ ಹಾಕಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬಹುದು. ನಿಮಗೆ ಬೇಕಾದಾಗ ಅವುಗಳನ್ನು ನಿಮ್ಮ ಮುಖದಾದ್ಯಂತ ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬಹುದು.

ಫೇಸ್ ಮಾಸ್ಕ್ ಫ್ರೀಜ್ ಮಾಡಿ:

ಮುಖದ ಮಾಸ್ಕ್​ಗಳನ್ನು ಬಳಸುವಾಗ ಅದನ್ನು ಫ್ರೀಜರ್​ನಲ್ಲಿಡಿ. ಅದು ಗಟ್ಟಿಯಾಗಿ ಐಸ್​ ರೂಪಕ್ಕೆ ಬಂದ ನಂತರ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ನಿಮಗೆ ಹೊಳೆಯುವ ಮತ್ತು ಡಿ-ಪಫ್ಡ್ ಚರ್ಮವನ್ನು ನೀಡುತ್ತದೆ.

ಐಸ್ ಕ್ಯೂಬ್ ಉಬ್ಟಾನ್:

ನಿಮ್ಮ ಮುಲ್ತಾನಿ ಮಿಟ್ಟಿ ಉಬ್ಟಾನ್‌ನ ಪೇಸ್ಟ್ ಅನ್ನು ಹಚ್ಚಿಕೊಂಡರೆ ಅದು ಚರ್ಮ, ಮೊಡವೆ ಮತ್ತು ಕಲೆಗಳನ್ನು ತೆಗೆದುಹಾಕುವ ಶಕ್ತಿಯನ್ನು ಹೊಂದಿದೆ. ಇದು ತಂಪಾದ ಮಂಜುಗಡ್ಡೆಯ ಪರಿಣಾಮದೊಂದಿಗೆ ಎಣ್ಣೆಯುಕ್ತ ಚರ್ಮದಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ತ್ವಚೆಯ ಆರೈಕೆಗೆ ಈ ಫೇಸ್ ಪ್ಯಾಕ್​​​ಗಳು ಬೆಸ್ಟ್

ಕೋಲ್ಡ್ ಅಲೋವೆರಾ ಜೆಲ್:

ನಿಮ್ಮ ಅಲೋವೆರಾ ಜೆಲ್ ಅನ್ನು ಫ್ರೀಜರ್‌ನಲ್ಲಿ ಇರಿಸುವ ಮೂಲಕ ಹೈಡ್ರೀಕರಿಸಿದ ತ್ವಚೆಯನ್ನು ಪಡೆಯಬಹುದಾಗಿದೆ. ಇದು ಮುಖಕ್ಕೆ ಅಗತ್ಯವಿರುವ ಆರ್ಧ್ರಕವನ್ನು ನೀಡುತ್ತದೆ ಮತ್ತು ನಿಮ್ಮ ಚರ್ಮವನ್ನು ಮೊಡವೆಗಳಿಂದ ತಡೆಯುತ್ತದೆ.

ಐಸ್​ ನೀರಿನಲ್ಲಿ ಮುಖ ತೊಳೆಯಿರಿ:

ಪ್ರತಿ ದಿನವೂ ಒಂದು ಬಟ್ಟಲಿನಲ್ಲಿ ತಣ್ಣೀರನ್ನು ಇಟ್ಟುಕೊಂಡು ಅದರಲ್ಲಿ ಐಸ್ ಕ್ಯೂಬ್‌ಗಳನ್ನು ಹಾಕಿಡಿ. ಆ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಬಹುದು. ಇದು ಜಲಸಂಚಯನಕ್ಕೆ ಸಹಾಯ ಮಾಡುತ್ತದೆ, ಚರ್ಮದ ರಂಧ್ರಗಳನ್ನು ತೆರೆಯುತ್ತದೆ ಮತ್ತು ಉಲ್ಲಾಸವನ್ನು ನೀಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್