ದೇವರ ದರ್ಶನ ಪಡೆದು ಹೊರ ಬರುವ ಮುನ್ನ ಸ್ವಲ್ಪ ಹೊತ್ತು ದೇವಾಲಯದಲ್ಲಿ ಕುಳಿತುಕೊಳ್ಳುವುದೇಕೆ?

ನೀವು ಕೂಡಾ ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತೀರಿ ಅಲ್ವಾ. ಹೀಗೆ ಭೇಟಿ ನೀಡಿದಾಗ ದೇವರ ದರ್ಶನ ಪಡೆದು ಹೊರ ಬರುವ ಸಂದರ್ಭದಲ್ಲಿ ಸ್ವಲ್ಪ ಹೊತ್ತು ದೇವಾಲಯದೊಳಗೆ ಕುಳಿತು ಬಳಿಕ ಹೊರ ಬರುತ್ತೀರಿ ಅಲ್ವಾ. ಸಾಮಾನ್ಯವಾಗಿ ಎಲ್ಲಾ ಭಕ್ತರು ಇದೇ ನಿಯಮವನ್ನು ಅನುಸರಿಸುತ್ತಾರೆ. ಹೀಗೆ ದೇವರ ದರ್ಶನ ಪಡೆದು ಹೊರ ಬರುವ ಮುನ್ನ ದೇವಾಲಯದಲ್ಲಿ ಸ್ವಲ್ಪ ಹೊತ್ತು ಕೂರುವುದರ ಹಿಂದಿನ ಕಾರಣ ಏನು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ದೇವರ ದರ್ಶನ ಪಡೆದು ಹೊರ ಬರುವ ಮುನ್ನ ಸ್ವಲ್ಪ ಹೊತ್ತು ದೇವಾಲಯದಲ್ಲಿ ಕುಳಿತುಕೊಳ್ಳುವುದೇಕೆ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 23, 2025 | 6:27 PM

ಏನೇ ಕೆಟ್ಟದಾಗಲಿ ಅಥವಾ ಒಳ್ಳೆಯದಾಗಲಿ ನಾವು ಮೊದಲು ನೆನೆಯುವುದೇ ದೇವರನ್ನು (God). ಮನಸ್ಸಿಗೆ ನೋವಾಗುವಂತಹ ಘಟನೆಗಳು ನಡೆದರೆ, ಮನಸ್ಸಿಗೆ ಸಮಧಾನ ಸಿಗಲೆಂದು ದೇವಾಲಯಕ್ಕೆ (Temple) ಹೋದ್ರೆ, ಒಳ್ಳೆಯದು ನಡೆದಾಗ ದೇವರಿಗೆ ಧನ್ಯವಾದ ಅರ್ಪಿಸಲು ಭೇಟಿ ನೀಡುತ್ತೇವೆ. ಹೀಗೆ ಪ್ರತಿಯೊಬ್ಬರೂ ಕೂಡ ಮನಸ್ಸಿನ ಶಾಂತಿಗಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಮತ್ತು ದೇವರ ದರ್ಶನ ಪಡೆದು ಸ್ಪಲ್ಪ ಹೊತ್ತು ಅಲ್ಲೇ ಕುಳಿತು ಬಳಿಕ ಹೊರ ಬರುತ್ತಾರೆ. ದೇವರ ದರ್ಶನ ಪಡೆದು ಹೊರ ಬರುವ ಮೊದಲು ದೇವಾಲಯದಲ್ಲಿ ಹೀಗೆ ಎಲ್ಲರೂ ಸ್ಪಲ್ಪ ಹೊತ್ತು ಕುಳಿತುಕೊಳ್ಳುವುದೇಕೆ ಗೊತ್ತಾ? ಇದರ ಹಿಂದಿನ ಕಾರಣವನ್ನು ತಿಳಿಯಿರಿ.

ದರ್ಶನ ಪಡೆದು ಹೊರ ಬರುವ ಸ್ವಲ್ಪ ಹೊತ್ತು ದೇವಾಲಯದಲ್ಲಿ ಕುಳಿತುಕೊಳ್ಳುವುದೇಕೆ?

ಹಿಂದೂ ಸಂಪ್ರದಾಯದಲ್ಲಿ, ದೇವರ ದರ್ಶನ ಪಡೆದು ದೇವಾಲಯದಿಂದ ಹೊರ ಬರುವ ಮೊದಲು ದೇವಾಲಯದ ಪ್ರಾಂಗಣದಲ್ಲಿದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳುವ ವಾಡಿಕೆ ಇದೆ. ಇದರ ಹಿಂದೆಯೂ ಒಂದು ಕಾರಣವಿದೆಯಂತೆ. ಅದೇನೆಂದರೆ, ದೇವಾಲಯಕ್ಕೆ ಭೇಟಿ ಕೊಟ್ಟು ದೇವರನ್ನು ನೋಡಿ ಅರ್ಜೆಂಟ್‌ ಆಗಿ ಸೀದಾ ಹೊರಗೆ ನಡೆದರೆ, ಅದೇ ಕೆಲಸ, ಅದೇ ಜಂಜಾಟದ ಟೆನ್ಷನ್‌ ಹಾಗೆಯೇ ಮನಸ್ಸಲ್ಲಿ ಉಳಿದು ಬಿಡುತ್ತದೆ. ಶಾಂತಿ ಎನ್ನುವುದು ಲಭಿಸುವುದೇ ಇಲ್ಲ. ಆದ್ರೆ ದರ್ಶನದ ನಂತರ ಸ್ವಲ್ಪ ಸಮಯ ದೇವರನ್ನು ಸ್ಮರಿಸುತ್ತಾ, ಪೂಜೆ, ಹೋಮ ಹವನಗಳನ್ನು ಕಣ್ತುಂಬಿಕೊಂಡರೆ ಮನಸ್ಸಿನಲ್ಲಿರುವ ಕಲ್ಮಶ, ನೋವು ಕರಗಿ ಮನಸ್ಸು ಹಗುರವಾಗುತ್ತದೆ. ಇದರ ಜೊತೆಗೆ ದೇವಾಲಯದಲ್ಲಿರುವ ಸಕಾರಾತ್ಮಕ ಶಕ್ತಿಯು ನಮ್ಮೊಳಗೆ ಸೇರಿ, ಇದು ನಮ್ಮ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ.

ಇದನ್ನೂ ಓದಿ
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ ಗೊತ್ತಾ?
ಬೆಳಿಗ್ಗೆ ನೀವು ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗುತ್ತದೆ
ಈ ಅಭ್ಯಾಸಗಳಿದ್ದರೆ ಶ್ರೀಮಂತಿಕೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ
ಆರೋಗ್ಯವನ್ನು ವೃದ್ಧಿಸುವ ಆಧ್ಯಾತ್ಮಿಕ ಅಭ್ಯಾಸಗಳಿವು

ಧನಾತ್ಮಕ ಶಕ್ತಿಯನ್ನು ಪಡೆಯಲು: ದೇವಾಲಯಗಳನ್ನು ಶಕ್ತಿಯ ಮಹಾ ಕೇಂದ್ರಗಳು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ದೇವರ ದರ್ಶನ ಪಡೆದು ದೇವಾಲಯದಿಂದ ಹೊರ ಬರುವ ಮುನ್ನ ಸ್ವಲ್ಪ ಹೊತ್ತು ಅಲ್ಲಿ ಕುಳಿತುಕೊಳ್ಳುವುದರಿಂದ ಅಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ನಿಮ್ಮ ಮನಸ್ಸು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದರಿಂದ ಧನಾತ್ಮಕ ಶಕ್ತಿಯೂ ಲಭಿಸುತ್ತದೆ. ಜೊತೆಗೆ ದೇವರನ್ನು ನೋಡಿದ ತಕ್ಷಣ ನಮ್ಮ ಕೋಪ, ಅಹಂಕಾರದ ಭಾವನೆಗಳು ಮಾಯವಾಗುತ್ತದೆ.

ಮಾನಸಿಕ ನೆಮ್ಮದಿ: ನಾವು ದೇವಸ್ಥಾನದಲ್ಲಿ ಕುಳಿತು ಮನಸ್ಸಿನಲ್ಲಿ ದೇವರನ್ನು  ಸ್ಮರಿಸಿದಾಗ, ನಮ್ಮ ಸಂಪರ್ಕವು ನೇರವಾಗಿ ಪರಮಾತ್ಮನೊಂದಿಗೆ ಇರುತ್ತದೆ. ಆಗ ನಮ್ಮ ಮನಸ್ಸನ್ನು ಸಕಾರಾತ್ಮಕತೆಯಿಂದ ತುಂಬುತ್ತದೆ. ಈ ಸಂದರ್ಭದಲ್ಲಿ ಒತ್ತಡ, ಆತಂಕ ಎಲ್ಲವೂ ಒಂದು ಕ್ಷಣಕ್ಕೆ ಮಾಯವಾಗಿ ಮಾನಸಿಕ ಶಾಂತಿ ಎನ್ನುವಂತಹದ್ದು ಲಭಿಸುತ್ತದೆ. ಅದಕ್ಕಾಗಿಯೇ ದರ್ಶನದ ನಂತರ ಸ್ವಲ್ಪ ಸಮಯದವರೆಗೆ ದೇವಸ್ಥಾನದಲ್ಲಿ ಕುಳಿತುಕೊಳ್ಳಬೇಕು.

ಇದನ್ನೂ ಓದಿ: ಈ ಕೆಲವು ಆಧ್ಯಾತ್ಮಿಕ ಅಭ್ಯಾಸಗಳ ಪಾಲನೆಯಿಂದ ಆರೋಗ್ಯವನ್ನು ವೃದ್ಧಿಸಬಹುದಂತೆ

ಸಕಾರಾತ್ಮಕತೆ: ದೇವರ ದರ್ಶನ ಪಡೆದ ನಂತರ ದೇವಾಲಯದಲ್ಲಿ ಸ್ವಲ್ಪ ಸಮಯ ಏಕಾಂತದಲ್ಲಿ ಕುಳಿತುಕೊಳ್ಳಬೇಕು. ಈ ಸಮಯದಲ್ಲಿ ನೀವು ದೇವರನ್ನು ಸ್ಮರಿಸುತ್ತಾ ಮೌನವಾಗಿದ್ದರೆ ಉತ್ತಮ. ಈ ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣ ಏನೆಂದರೆ, ದೇವಾಲಯದಲ್ಲಿ ಬಹಳಷ್ಟು ಸಕಾರಾತ್ಮಕ ಶಕ್ತಿ ಇರುತ್ತದೆ. ನಾವು ದೇವಾಲಯದಲ್ಲಿ ಸ್ಪಲ್ಪ ಸಮಯ ಶಾಂತವಾಗಿ ಕುಳಿತಾಗ, ಈ ಸಕಾರಾತ್ಮಕ ಶಕ್ತಿಯು ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಅದು ನಮಗೆ ಚೈತನ್ಯವನ್ನು  ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:26 pm, Wed, 23 July 25