ನಿಮ್ಮ ಸಂಜೆಯ ಟೀ ಸಮಯದಲ್ಲಿ ಲೆಮನ್ ಬಟರ್ ಕುಕೀಸ್ ನೊಂದಿಗೆ ಆಸ್ವಾದಿಸಿ. ಲಿಂಬೆಯ ಪರಿಮಳ ಹಾಗೂ ಬೆಣ್ಣೆಯಿಂದ ಕೂಡಿದ್ದು ಇದು ಅದ್ಭುತವಾದ ರುಚಿಯನ್ನು ನೀಡುತ್ತದೆ. ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ. ಮನೆಯಲ್ಲೇ ಕಡಿಮೆ ಸಮಯದಲ್ಲಿ ರುಚಿಕರ ಲೆಮನ್ ಬಟರ್ ಕುಕ್ಕೀಸ್ ಮಾಡಬಹುದಾಗಿದೆ.
ಸಾಮಾನ್ಯವಾಗಿ, ಕುಕ್ಕೀಸ್ ಗಳನ್ನು ಹಣ್ಣುಗಳು ಅಥವಾ ಕೋಕೋ ಪೌಡರ್‌ನಿಂದ ತಯಾರಿಸಲಾಗುತ್ತದೆ, ಆದರೆ ಲೆಮನ್ ಬಟರ್ ಕುಕ್ಕೀಸ್ ಲಿಂಬೆಯ ರುಚಿಕಾರಕದಿಂದ ತಯಾರಿಸಲಾಗುತ್ತದೆ. ಆದ್ದರಿಂದ ಈ ವಿಶೇಷ ಕುಕ್ಕೀಸ್ ಅನ್ನು ನಿಮ್ಮ ಮನೆಯಲ್ಲೂ ಒಮ್ಮೆ ಪ್ರಯತ್ನಿಸಿ ನೋಡಿ. ಮನೆಗೆ ಅತಿಥಿಗಳು ಬಂದ ಸಮಯದಲ್ಲಿ ಅವರಿಗೆ ಈ ವಿಶೇಷ ಕುಕ್ಕೀಸ್ ಅನ್ನು ಸವಿಯಲು ನೀಡಿ. ಇದು ನಿಮ್ಮ ಸಂಜೆಯ ಚಹಾ ಅಥವಾ ಕಾಫಿಯೊಂದಿಗೆ ಉತ್ತಮ ಜೋಡಿಯಾಗಿದೆ.
ಬೇಕಾಗುವ ಸಾಮಾಗ್ರಿಗಳು:
4 ಚಮಚ ನಿಂಬೆ ರುಚಿಕಾರಕ
100 ಗ್ರಾಂ ಸಕ್ಕರೆ
1 ಚಿಟಿಕೆ ಉಪ್ಪು
1 ಚಮಚ ಬೇಕಿಂಗ್ ಪೌಡರ್
125 ಗ್ರಾಂ ಬೆಣ್ಣೆ
1 ಮೊಟ್ಟೆ
190 ಗ್ರಾಂ ಮೈದಾ ಹಿಟ್ಟು
ಮಾಡುವ ವಿಧಾನ:
ಹಂತ 1
ಒಂದು ಬಟ್ಟಲಿನಲ್ಲಿ, ಸಕ್ಕರೆ, ಉಪ್ಪು, ಬೆಣ್ಣೆ ಮತ್ತು ನಿಂಬೆ ರುಚಿಕಾರಕವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಹಂತ 2
ನಂತರ ಈ ಮೇಲೆ ಮಾಡಿಟ್ಟ ಮಿಶ್ರಣಕ್ಕೆ ಹಸಿ ಮೊಟ್ಟೆಯನ್ನು ಹೊಡೆದು ಹಾಕಿ. ಇವೆಲ್ಲವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಗಂಟುಗಳು ಆಗದಂತೆ ಮಿಶ್ರಣ ಮಾಡಿ.
ಹಂತ 3
ನಂತರ ಈ ಮಿಶ್ರಣಕ್ಕೆ ಹಿಟ್ಟು ಮತ್ತು ಬೇಕಿಂಗ್ ಪೌಡರ್ ಸೇರಿಸಿ ಮತ್ತು ಚೆನ್ನಾಗಿ ಹಿಟ್ಟನ್ನು ತಯಾರಿಸಿ. ಈ ಹಿಟ್ಟನ್ನು ಉದ್ದವಾದ ಆಕಾರಕ್ಕೆ ಸುತ್ತಿಕೊಳ್ಳಿ ಹಾಗು ಅದನ್ನು ಬೇಕಿಂಗ್ ಪೇಪರ್ ಬಳಸಿ ಕನಿಷ್ಟ ಒಂದು ಗಂಟೆಗಳ ಕಾಲ ಫ್ರೀಜ್ ಮಾಡಿ.
ಹಂತ 4
ನಂತರ ಫ್ರೀಜ್ ನಲ್ಲಿ ಉದ್ದವಾದ ಆಕಾರಕ್ಕೆ ಸುತ್ತಿಟ್ಟಿದ್ದ ಹಿಟ್ಟನ್ನು ಒಂದೇ ಆಕೃತಿಯಲ್ಲಿ ಕತ್ತರಿಸಿ. ನಂತರ ಬೇಕಿಂಗ್ ಟ್ರೇನಲ್ಲಿ ಇರಿಸಿ. ನಂತರ ಓವನ್ ನಲ್ಲಿ 180 ಡಿಗ್ರಿಯಲ್ಲಿ 8-10 ನಿಮಿಷಗಳ ಕಾಲ ಬೇಯಲು ಬಿಡಿ.
ಇದನ್ನು ಓದಿ: ಮನೆಯಲ್ಲೇ ಆರೋಗ್ಯಕರ ಕೇಕ್ ತಯಾರಿಸಿ ಇಲ್ಲಿದೆ ಸುಲಭ ರೆಸಿಪಿ
ಹಂತ 5
8-10 ನಿಮಿಷಗಳ ಕಾಲ ಬೇಯಿಸಿದ ನಂತರ ಲೆಮನ್ ಬಟರ್ ಕುಕ್ಕೀಸ್ ಸರ್ವ್ ಮಾಡಲು ಸಿದ್ಧವಾಗಿದೆ. ನಿಮಗೆ ಇನಷ್ಟು ರುಚಿಗಾಗಿ ಅಥವಾ ಅಲಂಕಾರಕ್ಕಾಗಿ ಅದರ ಮೇಲೆ ಸ್ವಲ್ಪ ಪುಡಿಮಾಡಿದ ಸಕ್ಕರೆಯನ್ನು ಬೆರೆಸಿ ಸೇವಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:47 pm, Sat, 5 November 22