ನಿಮಗೆ ಡ್ರೈ ಫಿಶ್ ಇಷ್ಟನಾ? ಈ ರೆಸಿಪಿಯನ್ನು ಟ್ರೈ ಮಾಡಿದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ
ಒಣ ಮೀನನ್ನು ಎಣ್ಣೆಯಲ್ಲಿ ಫ್ರೈ ಮಾಡುವುದು ಅಥವಾ ಒಲೆಯಲ್ಲಿ ಸುಟ್ಟಿ ತಿನ್ನುವುದು ಬಹುತೇಕರಿಗೆ ಗೊತ್ತು. ಆದರೆ ನಾವು ಹೇಳುವ ಈ ರೆಸಿಪಿ ಹೆಚ್ಚಿನ ಜನರಿಗೆ ತಿಳಿದಿಲ್ಲ.
ಡ್ರೈ ಫಿಶ್ ಅಂದರೆ ಬಾಯಲ್ಲಿ ನೀರು ಬರುತ್ತೆ. ಆದ್ರೆ ಮಾಂಸ ಪ್ರಿಯರೆಲ್ಲರಿಗೂ ಒಣ ಮೀನು ಇಷ್ಟವಾಗಲ್ಲ. ಹೀಗಾಗಿ ಡ್ರೈ ಫಿಶ್ ಸೇವಿಸುವವರ ಸಂಖ್ಯೆ ಕಡಿಮೆ. ಆದರೆ ಬೇರೆ ಎಲ್ಲದಕ್ಕಿಂತ ಒಣ ಮೀನು ಇಷ್ಟಪಡುವವರು ಇದ್ದಾರೆ. ಅಂತವರಿಗೆ ಈ ರೆಸಿಪಿ. ಊಟದ ಜೊತೆ ಒಂದು ಒಣ ಮೀನು ಇದ್ದರೆ ಅಂದಿನ ಊಟ ಅದ್ಭುತ ಅನಿಸುತ್ತೆ. ಊಟ ಸೇರಲ್ಲ ಅಂತ ಹೇಳುವವರ ತಟ್ಟೆಯಲ್ಲಿ ಒಂದು ಒಣ ಮೀನು ಇದ್ದರೆ ವಾವ್ ಅಂತ ಊಟ ಸೇವಿಸುತ್ತಾರೆ. ಒಣ ಮೀನನ್ನು ಎಣ್ಣೆಯಲ್ಲಿ ಫ್ರೈ ಮಾಡುವುದು ಅಥವಾ ಒಲೆಯಲ್ಲಿ ಸುಟ್ಟಿ ತಿನ್ನುವುದು ಬಹುತೇಕರಿಗೆ ಗೊತ್ತು. ಆದರೆ ನಾವು ಹೇಳುವ ಈ ರೆಸಿಪಿ ಹೆಚ್ಚಿನ ಜನರಿಗೆ ತಿಳಿದಿಲ್ಲ.
ಒಣ ಮೀನು ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು ಒಣ ಮೀನು (ಬಾಂಗಡೆ 5 ಮೀನು) ಟೊಮ್ಯಾಟೋ- ನಾಲ್ಕು ಹಸಿಮೆಣಸಿನ ಕಾಯಿ- ನಾಲ್ಕರಿಂದ 5 ಈರುಳ್ಳಿ- ಒಂದು ಖಾರದ ಪುಡಿ ಕಾಳುಮೆಣಸಿನ ಪುಡಿ ಕೊತ್ತಂಬರಿ ಸೊಪ್ಪು ಎಣ್ಣೆ ಉಪ್ಪು
ಮೊದಲು ಒಂದು ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದಕ್ಕೆ ಕತ್ತರಿಸಿಕೊಂಡ ಈರುಳ್ಳಿ ಸೇರಿಸಿ. ನಂತರ ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಈಗ ಸಣ್ಣದಾಗಿ ಕತ್ತರಿಸಿದ ಟೊಮ್ಯಾಟೋ ಹಾಕಿ. ಎರಡು ನಿಮಿಷದ ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿ. ಬೆಂದ ನಂತರ ಅದಕ್ಕೆ ಅರಿಶಿನ ಪುಡಿ ಹಾಕಿ. ಎರಡು ಚಮಚ ಖಾರದ ಪುಡಿ, ಒಂದು ಚಮಚ ಕಾಳುಮೆಣಸಿನ ಪುಡಿ ಹಾಕಿ. ನಂತರ ಅದಕ್ಕೆ ಮೀನಿನ ಹೋಳುಗಳನ್ನ ಹಾಕಿ. ಎರಡು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ. ಖಾರ ತಿನ್ನಲು ಇಷ್ಟಪಡುವವರು ಖಾರದ ಪುಡಿ ಅಥವಾ ಕಾಳುಮೆಣಸಿನ ಪುಡಿ ಸ್ವಲ್ಪ ಜಾಸ್ತಿ ಹಾಕಬಹುದು.
ಈ ರೆಸಿಪಿಯನ್ನು ಒಂದು ಸಲ ಮನೆಯಲ್ಲಿ ಮಾಡಿದರೆ, ಮತ್ತೆ ಮತ್ತೆ ತಿನ್ನಬೇಕು ಅಂತ ಅನಿಸುತ್ತೆ. ಈ ರೆಸಿಪಿ ಸಿದ್ಧಪಡಿಸಲು ಕೇವಲ 15 ನಿಮಿಷ ಸಾಕು.
ಇದನ್ನೂ ಓದಿ
ಸೇಬುವನ್ನು ಎಣ್ಣೆಯಲ್ಲಿ ಬೇಯಿಸಿ ತಿಂದ ವ್ಯಕ್ತಿ: ವಿಚಿತ್ರ ಖಾದ್ಯದ ವೀಡಿಯೋ ವೈರಲ್
ಕನ್ನಡದಲ್ಲಿ ಟ್ವೀಟ್ ಮಾಡಿ ‘ಬ್ರಹ್ಮಾಸ್ತ್ರ’ ರಿಲೀಸ್ ಡೇಟ್ ತಿಳಿಸಿದ ಆಲಿಯಾ ಭಟ್; ಶಿವನ ಗೆಟಪ್ನಲ್ಲಿ ರಣಬೀರ್