Relationship: ಹೊಂದಾಣಿಕೆಯಿಲ್ಲದ ದಾಂಪತ್ಯವು ನೋವುಂಟುಮಾಡಬಹುದು, ಆದರೂ ಮುಂದುವರೆಯಲು ಕಾರಣ ಇಲ್ಲಿದೆ

ಹೊಂದಾಣಿಕೆಯಿಲ್ಲದ ದಾಂಪತ್ಯವು ನಿಮಗೆ ನೋವುಂಟುಮಾಡಬಹುದು ಮತ್ತು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಬಹುದು. ಆದರೂ ಕೂಡಾ ಜನರು ಇಂತಹ ಸಂಬಂಧವನ್ನು ತೊರೆಯಲು ಮತ್ತು ಹೆಚ್ಚು ಸಕಾರಾತ್ಮಕ ಜೀವನದತ್ತ ಸಾಗಲು ಹಿಂಜರಿಯುತ್ತಾರೆ.

Relationship: ಹೊಂದಾಣಿಕೆಯಿಲ್ಲದ ದಾಂಪತ್ಯವು ನೋವುಂಟುಮಾಡಬಹುದು, ಆದರೂ ಮುಂದುವರೆಯಲು ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 02, 2023 | 6:46 PM

ಹೊಂದಾಣಿಕೆಯಿಲ್ಲದ ದಾಂಪತ್ಯವು ನಿಮಗೆ ನೋವುಂಟುಮಾಡಬಹುದು ಮತ್ತು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಬಹುದು. ಆದರೂ ಕೂಡಾ ಜನರು ಇಂತಹ ಸಂಬಂಧವನ್ನು ತೊರೆಯಲು ಮತ್ತು ಹೆಚ್ಚು ಸಕಾರಾತ್ಮಕ ಜೀವನದತ್ತ ಸಾಗಲು ಹಿಂಜರಿಯುತ್ತಾರೆ. ಜನರು ತೃಪ್ತಿಕರವಲ್ಲದ ದಾಂಪತ್ಯದಲ್ಲಿ ಉಳಿಯಲು ಪ್ರಮುಖ ಕಾರಣಗಳು ಇಲ್ಲಿವೆ. ಆರೋಗ್ಯಕರ ಮತ್ತು ಸಂತೋಷದಾಯಕ ದಾಂಪತ್ಯವು ದೈನಂದಿನ ಜೀವನದಲ್ಲಿ ಬರುವ ಸವಾಲುಗಳನ್ನು ಲೆಕ್ಕಿಸದೆ ಆರಾಮದಾಯಕವಾಗಿ ಸಾಗುತ್ತದೆ. ಆದರೆ ಅತೃಪ್ತ ಅಥವಾ ನೆಮ್ಮದಿಯಿಲ್ಲದ ದಾಂಪತ್ಯವು ಇದಕ್ಕೆ ವಿರುದ್ಧವಾಗಿದೆ. ಇದು ನಿಮ್ಮ ಮಾನಸಿಕ ಶಾಂತಿಯನ್ನು ಕದಡಬಹುದು ಮತ್ತು ಜೀವನವನ್ನು ನಡೆಸಲು ನಿಮ್ಮನ್ನು ಒತ್ತಾಯಿಸಬಹುದು. ಹೊಂದಾಣಿಕೆಯಿಲ್ಲದ ದಾಂಪತ್ಯವು ನಿಮಗೆ ನೋವುಂಟುಮಾಡಬಹುದು ಮತ್ತು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಬಹುದು. ಆದರೂ ಕೂಡಾ ಜನರು ಅಂತಹ ಸಂಬಂಧವನ್ನು ತೊರೆಯಲು ಹಾಗೂ ಹೆಚ್ಚು ಸಕಾರಾತ್ಮಕ ಜೀವನದತ್ತ ಸಾಗಲು ಹಿಂಜರಿಯುತ್ತಾರೆ. ಜನರು ನೆಮ್ಮದಿಯಿಲ್ಲದ ದಾಂಪತ್ಯದಲ್ಲಿ ಉಳಿದುಕೊಳ್ಳಲು ಅನೇಕ ಕಾರಣಗಳಿವೆ ಬದಲಾವಣೆಯ ಭಯ, ಸೌಕರ್ಯ ವಲಯ, ಹಣ ಅಥವಾ ಜನರು ನಮ್ಮ ಬಗ್ಗೆ ಏನು ಯೋಚಿಸಬಹುದು ಎಂಬ ಭಯ ಕೂಡಾ ಇದಕ್ಕೆ ಪ್ರಮುಖ ಕಾರಣವಾಗಿದೆ.

ನೀವು ಮದುವೆಯ ಬಗ್ಗೆ ಯೋಚಿಸುವಾಗ, ಸುಖಾಂತ್ಯಗಳು ಸಾಮಾನ್ಯ ಗುರಿಯಾಗಿರುತ್ತವೆ. ಆದರೂ ಎಲ್ಲಾ ಮದುವೆಗಳು ನಗು ಮತ್ತು ಸಂತೋಷದಿಂದ ತುಂಬಿರುವುದಿಲ್ಲ. ದಂಪತಿಗಳು ಹೊಂದಾಣಿಕೆಯಿಲ್ಲದ ದಾಂಪತ್ಯದಲ್ಲಿ ತಮ್ಮನ್ನು ತಾವು ಕಂಡುಕೊಂಡಾಗ, ಮುಂದೆ ಏನು ಮಾಡಬೇಕೆಂದು ತಿಳಿಯುವುದು ಸವಾಲಾಗಿರಬಹುದು. ಇವೆಲ್ಲದರ ಹೊರತಾಗಿಯೂ ಮದುವೆಯು ಜೀವನಪರ್ಯಂತದ ಬದ್ಧತೆಯಾಗಿದೆ’ ಎಂದು ಗೇಟ್‌ವೇ ಆಫ್ ಹೀಲಿಂಗ್‌ನ ಸಂಸ್ಥಾಪಕಿ, ನಿರ್ದೇಶಕಿ ಹಾಗೂ ಸೈಕೋಥೆರಪಿಸ್ಟ್, ಲೈಫ್‌ಕೋಚ್ ಆದ ಡಾ. ಚಾಂದಿನಿ ತುಗ್ನೆಟ್ ಹೇಳುತ್ತಾರೆ.

ಇದನ್ನೂ ಓದಿ:Relationship: ದಾಂಪತ್ಯದಲ್ಲಿ ಸಂತೋಷವಿಲ್ಲದಿದ್ದರೂ ಸಂಬಂಧವನ್ನು ಮುಂದುವರೆಸಲು ಕಾರಣವೇನು?

ಹೊಂದಾಣಿಕೆಯಿಲ್ಲದ ದಾಂಪತ್ಯದಲ್ಲಿ ಯಾರಾದರೂ ಏಕೆ ಉಳಿಯುತ್ತಾರೆ?

ಡಾ. ಚಾಂದಿನಿ ತುಗ್ನೆಟ್ ಹೊಂದಾಣಿಕೆಯಿಲ್ಲದ ಮದುವೆಗಳಲ್ಲಿ ಉಳಿಯಲು ಇರುವ ಸಾಮಾನ್ಯ ಕಾರಣಗಳ ಬಗ್ಗೆ ಮಾತನಾಡಿದ್ದಾರೆ.

ಬದಲಾವಣೆಯ ಭಯ: ಇದು ವಿರೋಧಾಭಾಸವೆಂದು ತೋರುತ್ತದೆ, ಆದರೆ ಅತೃಪ್ತಿಕರ ಮದುವೆಗಳಲ್ಲಿ ಅನೇಕ ಜನರು ಅಪರಿಚಿತರಿಗೆ ಭಯ ಪಡುತ್ತಾರೆ. ವರ್ಷಗಳಿಂದ ಸಂಗಾತಿಯ ಜೊತೆಗಿದ್ದು, ಈಗ ಒಂಟಿ ಜೀವನವನ್ನು ನಡೆಸಲು ಮತ್ತು ಆ ಬದಲಾವಣೆಯನ್ನು ತಮ್ಮ ಜೀವನದಲ್ಲಿ ತರಲು ಭಯ ಪಡುತ್ತಾರೆ. ಬದಲಾವಣೆ ಮತ್ತು ಅನಿಶ್ಚಿತತೆಯ ಜೀವನವು ಹೊಂದಾಣಿಕೆಯಿಲ್ಲದ ದಾಂಪತ್ಯದಲ್ಲಿ ಉಳಿಯುವುದಕ್ಕಿಂತಲೂ ಹೆಚ್ಚು ಕಷ್ಟಕರವಾಗಿರುತ್ತದೆ.

ಸೌಕರ್ಯ: ನಮಗೆ ಗೊತ್ತಿರುವ ಯಾವುದನ್ನಾದರೂ ನಾವು ಮೆಚ್ಚಿಕೊಂಡಾಗ ಅದು ಕೆಟ್ಟದಾಗಿದ್ದರೂ ಸಹ, ಅದು ನಮಗೆ ಸಾಂತ್ವನ ನೀಡುತ್ತದೆ. ಏಕೆಂದರೆ ಅದು ಪರಿಚಿತ ಮತ್ತು ಸುರಕ್ಷಿತವಾಗಿದೆ. ಹೊಂದಾಣಿಕೆಯಿಲ್ಲದ ದಾಂಪತ್ಯದಲ್ಲಿ ಉಳಿಯುವವರು ಸಾಮಾನ್ಯವಾಗಿ ಈ ವರ್ಗಕ್ಕೆ ಸೇರುತ್ತಾರೆ. ಆದಾಗ್ಯೂ ದಂಪತಿಗಳು ಕಾಲಾನಂತರದಲ್ಲಿ ಸಂಬಂಧ ಎಷ್ಟೇ ಅಹಿತಕರವಾಗಿದ್ದರೂ ಸಹ ತಮ್ಮ ದಿನಚರಿ ಮತ್ತು ಅಭ್ಯಾಸಗಳಲ್ಲಿ ಆರಾಮದಾಯಕವಾಗಬಹುದು.

ಹಣಕಾಸು: ಹೊಂದಾಣಿಕೆಯಿಲ್ಲದ ದಾಂಪತ್ಯದಲ್ಲಿ ಉಳಿಯಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವಾಗ ಹಣದ ವಿಷಯಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ. ಕೆಲವು ದಂಪತಿಗಳಿಗೆ ವಿಚ್ಛೇದನ ಅಥವಾ ಬೇರ್ಪಡಿಕೆ ಎಂದರೆ ಅವರ ಹಣಕಾಸಿನ ಆಸ್ತಿಯನ್ನು ಒಂದು ಕುಟುಂಬಕ್ಕೆ ಬದಲಾಗಿ ಎರಡು ಕುಟುಂಬಗಳಿಗೆ ವಿಭಜಿಸುವುದು. ಈ ಕಾರಣದಿಂದ ಅತೃಪ್ತಿಕರ ದಾಂಪತ್ಯದಲ್ಲೇ ಅವರು ಉಳಿದು ಬಿಡುತ್ತಾರೆ.

ಸಮನ್ವಯಕ್ಕಾಗಿ ಭರವಸೆ: ಕೆಲವೊಮ್ಮೆ ತಮ್ಮ ಅತೃಪ್ತಿಯ ಹೊರತಾಗಿಯೂ ದಂಪತಿಗಳನ್ನು ಒಟ್ಟಿಗೆ ಇರಿಸಲು ಭರವಸೆ ಸಾಕು. ಒಬ್ಬ ಸಂಗಾತಿಯು ಅಂತಿಮವಾಗಿ ಪರಿಸ್ಥಿತಿಗಳು ಉತ್ತಮಗೊಳ್ಳುತ್ತವೆ ಎಂಬ ನಂಬಿಕೆಯನ್ನು ಹೊಂದಿದ್ದರೆ, ಸಮಯವು ಕಷ್ಟಕರವಾದಗಲೂ ಅವರು ಜೊತೆಗಿರುತ್ತಾರೆ ಏಕೆಂದರೆ ಅವರು ಅಂತಿಮವಾಗಿ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತಾರೆ ಮತ್ತು ದಂಪತಿಗಳಾಗಿ ಮತ್ತೆ ಸಂತೋಷವನ್ನು ಕಂಡುಕೊಳ್ಳುತ್ತೇವೆ ಎಮದು ಅವರು ಭಾವಿಸುತ್ತಾರೆ.

ಸಾಮಾಜಿಕ ಅಥವಾ ಧಾಮಿಕ ಕಟ್ಟುಪಾಡುಗಳು: ವಿಚ್ಛೇದನ ಪಡೆಯುವುದು ಅಥವಾ ಬೇರ್ಪಡುವುದನ್ನು ಒಬ್ಬರ ಕುಟುಂಬದ ಹಿನ್ನೆಲೆ ಅಥವಾ ಧಾರ್ಮಿಕ ಸಂಬಂಧವನ್ನು ಅವಲಂಬಿಸಿ ವಿಭಿನ್ನವಾಗಿ ನೋಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ದಾಂಪತ್ಯವನ್ನು ಕೊನೆಗೊಳಿಸುವುದು ವೈಫಲ್ಯ ಅಥವಾ ಅವಮಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗೂ ಸಮಾಜವು ನಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತದೆಯೋ ಎಂಬ ಭಯದಿಂದ ಹೊಂದಾಣಿಕೆಯಿಲ್ಲದಿದ್ದರೂ ದಂಪತಿಗಳು ಜೊತೆಯಲ್ಲಿರುತ್ತಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:46 pm, Thu, 2 February 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್