ಪ್ರೀತಿಯೂ ಎರಡು ಮನಸ್ಸುಗಳ ಮಿಲನ. ಇಬ್ಬರೂ ವ್ಯಕ್ತಿಗಳ ನಡುವಿನ ಸುಂದರವಾದ ಭಾವ. ಈ ಪ್ರೀತಿ ಚಿಗುರಲು ಕಾರಣ ಬೇಕಿಲ್ಲ. ಎರಡು ಪರಿಶುದ್ಧ ಮನಸ್ಸುಗಳು ಇದ್ದರೆ ಸಾಕು. ಆದರೆ ಪ್ರತಿಯೊಬ್ಬರಿಗೂ ತಾನು ಪ್ರೀತಿಸುವ ಹುಡುಗ ಅಥವಾ ಹುಡುಗಿಯೂ ಹೀಗೆಯೇ ಇರಬೇಕು ಎನ್ನುವ ಕಲ್ಪನೆಯಿರುತ್ತದೆ. ಆದರೆ ಹೆಚ್ಚಿನ ಹುಡುಗರು ಕುಳ್ಳಗಿರುವ ಹುಡುಗಿಯನ್ನು ಕಂಡ ಕೂಡಲೇ ಇಷ್ಟವಾಗಿ ಬಿಡುತ್ತಾರಂತೆ.
ಕುಳ್ಳಗೆ ಇರುವ ಹುಡುಗಿಯರು ನೋಡುವುದಕ್ಕೆ ಕ್ಯೂಟ್ ಆಗಿರುತ್ತಾರೆ. ಅವರು ಒಂದೇ ಒಂದು ಕ್ಷಣದಲ್ಲೇ ಎಲ್ಲರನ್ನು ಸೆಳೆಯುತ್ತಾರೆ ಎನ್ನುವ ಕಾರಣಕ್ಕೆ ಕುಳ್ಳಗೆ ಇರುವ ಹುಡುಗಿಯರನ್ನೇ ಹುಡುಗರು ಇಷ್ಟ ಪಡುತ್ತಾರೆ.
ಎತ್ತರವಿರುವ ಹುಡುಗರು ಜೊತೆಯಲ್ಲಿದ್ದರೆ ಕುಳ್ಳಗಿರುವ ಹುಡುಗಿಯರಿಗೆ ಭದ್ರತೆಯ ಭಾವನೆಯಿರುತ್ತದೆ. ತಮ್ಮ ಪ್ರೇಮಿಯನ್ನು ಚೆನ್ನಾಗಿ ನೋಡಬೇಕು, ಆಕೆಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡಬೇಕು ಎನ್ನುವುದು ಹುಡುಗರಲ್ಲಿರುತ್ತದೆ. ಈ ಭಾವನೆಯಿಂದ ಸಂಬಂಧವು ಗಟ್ಟಿಯಾಗಿರುವ ಕಾರಣ ಈ ರೀತಿ ಇರುವ ಹುಡುಗಿಯನ್ನೇ ಇಷ್ಟ ಪಡುತ್ತಾರೆ.
ಕುಳ್ಳಗೆ ಇರುವ ಹುಡುಗಿಯರು ನೋಡುವುದಕ್ಕೆ ಎಷ್ಟು ಮುದ್ದಾಗಿ ಕಾಣಿಸುತ್ತಾರೆಯೋ, ತಬ್ಬಿಕೊಂಡಾಗ ಕಂಫರ್ಟ್ ಫೀಲ್ ಸಿಗುತ್ತದೆಯಂತೆ. ಹೌದು, ಈ ಕುಳ್ಳಗೆ ಇರುವ ಹುಡುಗಿಯರನ್ನು ಅಪ್ಪಿ ಎದೆಗೊತ್ತಿಕೊಳ್ಳಲು ಕಂಫರ್ಟ್ ಆಗುವ ಕಾರಣ ಕುಳ್ಳಿ ಹುಡುಗಿಯರು ಹೆಚ್ಚು ಇಷ್ಟವಾಗುತ್ತಾರಂತೆ.
ಕುಳ್ಳಗೆ ಅಥವಾ ಎತ್ತರ ಕಡಿಮೆಯಿರುವ ಕಾರಣ ಈ ಹುಡುಗಿಯರು ತಮ್ಮ ನಿಜವಾದ ವಯಸ್ಸಿಗಿಂತ ಚಿಕ್ಕವರಂತೆ ಕಾಣಿಸುತ್ತಾರೆ. ಈ ಕಾರಣದಿಂದಲೇ ಹುಡುಗರು ಈ ಕುಳ್ಳಿ ಹುಡುಗಿಯರತ್ತ ಆಕರ್ಷಿಸುತ್ತಾರಂತೆ.
ಕೆಲವು ಕುಬ್ಜ ಹುಡುಗಿಯರು ಸಾಕಷ್ಟು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ತಮ್ಮ ಚುರುಕಾದ ಗುಣದಿಂದ ಎಲ್ಲರ ಗಮನ ಸೆಳೆಯುತ್ತಾರೆ. ಆತ್ಮವಿಶ್ವಾಸವು ಹೆಚ್ಚಿರುವ ಕಾರಣ ಎಲ್ಲಾ ಕೆಲಸ ಕಾರ್ಯಗಳನ್ನು ಅಚ್ಚು ಕಟ್ಟಾಗಿ ಮಾಡಿ ಮುಗಿಸುತ್ತಾರೆ. ಈ ಗುಣದಿಂದಲೇ ಕುಬ್ಜ ಹುಡುಗಿಯರು ಹುಡುಗರಿಗೆ ಇಷ್ಟವಾಗುವುದೇ ಹೆಚ್ಚು ಎನ್ನಬಹುದು.
ಎತ್ತರವಿರುವ ಹುಡುಗಿಯರಿಗೆ ಹೋಲಿಸಿದರೆ ಕುಳ್ಳಗೆ ಇರುವ ಹುಡುಗಿಯರು ಪ್ರೀತಿಯ ವಿಷಯದಲ್ಲಿ ಹಾಗೂ ಸಂಬಂಧದಲ್ಲಿ ಹೆಚ್ಚು ಗಂಭೀರವಾಗಿರುತ್ತಾರೆ. ಹಾಗೂ ತನ್ನ ಪ್ರೇಮಿಯನ್ನು ಹೆಚ್ಚು ಕಾಳಜಿ ವಹಿಸುತ್ತಾರೆ. ಈ ಗುಣವೇ ಪುರುಷರು ಈ ಹುಡುಗಿಯರತ್ತ ಆಕರ್ಷಿತರಾಗುವಂತೆ ಮಾಡುತ್ತದೆ.
ಇದನ್ನೂ ಓದಿ: ಅಪರಿಚಿತ ಹುಡುಗಿಯನ್ನು ಕಂಡಾಗ ಹುಡುಗನ ತಲೆಯಲ್ಲಿ ಏನೆಲ್ಲಾ ಆಲೋಚನೆಗಳು ಓಡುತ್ತೆ ಗೊತ್ತಾ? ಈ ವಿಷಯಗಳಂತೆ
ಉದ್ದನೆಯ ಹುಡುಗಿಯಾರಿಗೆ ಹೋಲಿಸಿದರೆ ಕುಳ್ಳಗಿರುವ ಹುಡುಗಿಯರು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ. ತಮ್ಮ ಸಂಗಾತಿಯ ಜೊತೆಗೆ ಸಂತೋಷವಾಗಿರಲು ಬಯಸುತ್ತಾರೆ. ಅವರ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಅದರೊಂದಿಗೆ ತಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ರೋಮ್ಯಾಂಟಿಕ್ ಆಗಿಯೇ ವ್ಯಕ್ತಪಡಿಸುತ್ತಾರೆ. ಇದೇ ಗುಣವೇ ಪುರುಷರನ್ನು ಸೆಳೆಯಲು ಮುಖ್ಯ ಕಾರಣವಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ