AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

December 2024 Festival List: ಡಿಸೆಂಬರ್‌ ತಿಂಗಳಿನಲ್ಲಿ ಆಚರಿಸಲಾಗುವ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ

ನಮ್ಮ ಭಾರತದಲ್ಲಿ ವರ್ಷವಿಡೀ ಧಾರ್ಮಿಕ ಹಬ್ಬಗಳು, ವ್ರತಾಚರಣೆಗಳು ನಡೆಯುತ್ತಲೇ ಇರುತ್ತವೆ. ಇಲ್ಲಿ ಪ್ರತಿ ತಿಂಗಳಲ್ಲೂ ಕೂಡಾ ಒಂದಲ್ಲಾ ಒಂದು ವ್ರತಾಚರಣೆ, ಹಬ್ಬಗಳು ಇದ್ದೇ ಇರುತ್ತದೆ. ಅದರಂತೆ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲೂ ಹಲವಾರು ಹಬ್ಬ, ಆಚರಣೆಗಳಿದ್ದು, ಈ ತಿಂಗಳಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ.

December 2024 Festival List: ಡಿಸೆಂಬರ್‌ ತಿಂಗಳಿನಲ್ಲಿ ಆಚರಿಸಲಾಗುವ  ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ
December 2024 Festival List
ಮಾಲಾಶ್ರೀ ಅಂಚನ್​
| Edited By: |

Updated on: Nov 29, 2024 | 11:18 AM

Share

ಭಾರತವು ಹಬ್ಬಗಳ ನಾಡು ಅಂತಾನೇ ಹೇಳಬಹುದು. ಇಲ್ಲಿ ವರ್ಷವಿಡಿ ರಾಜ್ಯವಾರು, ಧರ್ಮಾಧಾರಿತ ಮತ್ತು ಸಮುದಾಯವಾರು ಹಲವಾರು ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಪ್ರತಿ ತಿಂಗಳಲ್ಲೂ ಕೂಡಾ ಒಂದಲ್ಲಾ ಒಂದು ವ್ರತ, ವಿಶೇಷ ಹಬ್ಬಗಳು ಇದ್ದೇ ಇರುತ್ತದೆ. ಜನವರಿಯಿಂದ ಹಿಡಿದು ನವೆಂಬರ್‌ ವರೆಗೆ ಸಂಕ್ರಾತಿ, ಯುಗಾದಿ, ಕೃಷ್ಣ ಜನ್ಮಾಷ್ಟಾಮಿ, ನವರಾತ್ರಿ ಅಂತೆಲ್ಲಾ ಹತ್ತು ಹಲವು ಹಬ್ಬಗಳನ್ನು ಬಹಳ ಅದ್ಧೂರಿಯಾಗಿ ಆಚರಿಸಿದ್ದೇವೆ. ಅಂತೆಯೇ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲೂ ಕೆಲವೊಂದು ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಹಾಗಾದರೆ ವರ್ಷದ ಕೊನೆಯ ತಿಂಗಳಿನಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ.

ಡಿಸೆಂಬರ್‌ ತಿಂಗಳಿನಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ:

  1. 6 ಡಿಸೆಂಬರ್ 2024- ವಿವಾಹ ಪಂಚಮಿ
  2. 7 ಡಿಸೆಂಬರ್ 2024- ಸುಬ್ರಹ್ಮಣ್ಯ ಷಷ್ಠಿ
  3. 8 ಡಿಸೆಂಬರ್ 2024- ಭಾನು ಸಪ್ತಮಿ
  4. 11 ಡಿಸೆಂಬರ್ 2024- ಗೀತಾ ಜಯಂತಿ
  5. 11 ಡಿಸೆಂಬರ್ 2024- ಮೋಕ್ಷದ ಏಕಾದಶಿ
  6. 12 ಡಿಸೆಂಬರ್ 2024- ಮತ್ಸ್ಯ ದ್ವಾದಶಿ
  7. 12 ಡಿಸೆಂಬರ್ 2024- ಹನುಮ ಜಯಂತಿ
  8. 13 ಡಿಸೆಂಬರ್ 2024- ಪ್ರದೋಷ ವ್ರತ
  9. 14 ಡಿಸೆಂಬರ್ 2024- ದತ್ತಾತ್ರೇಯ ಜಯಂತಿ
  10. 14 ಡಿಸೆಂಬರ್ 2024- ಪ್ರತಿಷ್ಠಾ ಹುಣ್ಣಿಮೆ
  11. 15 ಡಿಸೆಂಬರ್ 2024- ತ್ರಿಪುರ ಭೈರವಿ ಜಯಂತಿ
  12. 15 ಡಿಸೆಂಬರ್ 2024- ಧನು ಸಂಕ್ರಮಣ
  13. 15 ಡಿಸೆಂಬರ್ 2024- ಮಾರ್ಗಶೀರ್ಷ ಪೂರ್ಣಿಮಾ ಉಪವಾಸ
  14. 18 ಡಿಸೆಂಬರ್‌ 2024- ಸಂಕಷ್ಟ ಚತುರ್ಥಿ
  15. 25 ಡಿಸೆಂಬರ್ 2024- ಕ್ರಿಸ್ಮಸ್
  16. 26 ಡಿಸೆಂಬರ್ 2024- ಸರ್ವೈಕಾದಶಿ
  17. 28 ಡಿಸೆಂಬರ್‌ 2024- ಶನಿಪ್ರದೋಷ
  18. 29 ಡಿಸೆಂಬರ್‌ 2024- ಮಾಸ ಶಿವರಾತ್ರಿ
  19. 30 ಡಿಸೆಂಬರ್ 2024- ಸೋಮವತಿ ಅಮವಾಸ್ಯೆ
  20. 30 ಡಿಸೆಂಬರ್ 2024- ಎಳ್ಳಮವಾಸ್ಯೆ

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ