ಮನೆಯಲ್ಲಿ ಗೆದ್ದಲು ಹುಳುಗಳ ಕಾಟವೇ? ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಟಿಪ್ಸ್ ಫಾಲೋ ಮಾಡಿ
ತಂಪಿನ ವಾತಾವರಣದಿಂದಾಗಿ ಮನೆಯ ಬಾಗಿಲು ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಗೆದ್ದಲು ಹುಳುಗಳು ಕಾಣಿಸಿಕೊಳ್ಳುವುದೇ ಹೆಚ್ಚು. ಮನೆಯಲ್ಲಿರುವ ಹಳೆಯ ಪುಸ್ತಕಗಳು, ತುಕ್ಕು ಹಿಡಿದ ವಸ್ತುಗಳು ಹಾಗೂ ಮನೆಯ ಪೀಠೋಪಕರಣಗಳಿಗೂ ಗೆದ್ದಲು ಹಿಡಿಯುತ್ತವೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಮನೆಯ ಪೀಠೋಪಕರಣಗಳು ಸಂಪೂರ್ಣವಾಗಿ ಹಾಳಾಗಿ ಬಿಡುತ್ತದೆ. ಹೀಗಾಗಿ ಈ ನೈಸರ್ಗಿಕ ಸಲಹೆಗಳನ್ನು ಅನುಸರಿಸಿದರೆ ಈ ಗೆದ್ದಲು ಹುಳುವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಎಲ್ಲರ ಮನೆಯಲ್ಲೂ ಮರದ ಪೀಠೋಪಕರಣಗಳು ಇದ್ದೆ ಇರುತ್ತದೆ. ಆದರೆ ತಂಪಾದ ವಾತಾವರಣವಿದ್ದಾಗ ಮನೆಯ ಬಾಗಿಲು, ಕಿಟಕಿ ಸೇರಿದಂತೆ ಪೀಠೋಪಕರಣಗಳು ಗೆದ್ದಲು ಹಿಡಿಯುವುದು ಗ್ಯಾರಂಟಿ. ಒಮ್ಮೆ ಗೆದ್ದಲುಗಳು ಪೀಠೋಪಕರಣಗಳಿಗೆ ಪ್ರವೇಶಿಸಿದರೆ, ಅದನ್ನು ಸಂಪೂರ್ಣವಾಗಿ ಟೊಳ್ಳು ಮಾಡದೇ ಬಿಡದು. ನಿಮ್ಮ ಮನೆಯಲ್ಲಿಯೂ ಗೆದ್ದಲು ಹುಳುಗಳ ಕಾಟ ಹೆಚ್ಚಾಗಿದ್ದರೆ, ಇವುಗಳಿಂದ ಮುಕ್ತಿ ಪಡೆಯಲು ಈ ಕೆಲವು ನೈಸರ್ಗಿಕ ಸಲಹೆಗಳು ಇಲ್ಲಿದೆ.
ನಿಂಬೆ ರಸ ಹಾಗೂ ವಿನೆಗರ್ :
ಮನೆಯಲ್ಲಿ ಗೆದ್ದಲು ಹುಳುಗಳ ಕಾಟ ಹೆಚ್ಚಾಗಿದ್ದರೆ ಎರಡು ಟೀ ಚಮಚ ವಿನೆಗರ್ ಗೆ ಒಂದು ಟೀ ಚಮಚ ನಿಂಬೆ ರಸ ಸೇರಿಸಿ, ಇದಕ್ಕೆ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಗೆದ್ದಲುಗಳಿರುವ ಜಾಗದಲ್ಲಿ ಸ್ಪ್ರೇ ಮಾಡಿದರೆ ಗೆದ್ದಲು ಹುಳುಗಳು ನಾಶವಾಗುತ್ತವೆ.
ಬೇವಿನ ಎಣ್ಣೆ:
ಬೇವಿನ ಎಣ್ಣೆಗೆ ಗೆದ್ದಲುಗಳನ್ನು ನಾಶ ಪಡಿಸುವ ಶಕ್ತಿಯಿದೆ. ಈ ಬೇವಿನ ಎಣ್ಣೆಯನ್ನು ಗೆದ್ದಲುಗಳಿರುವ ಜಾಗದಲ್ಲಿ ಸ್ಪ್ರೇ ಮಾಡಿ ಇಲ್ಲವಾದರೆ ಒಂದು ಬಟ್ಟೆಯಲ್ಲಿ ಅದ್ದಿ ಆ ಜಾಗದಲ್ಲಿ ಒರೆಸಿದರೆ ಗೆದ್ದಲುಗಳು ಸಂಪೂರ್ಣವಾಗಿ ಹೋಗುತ್ತವೆ.
ಬೇವು ಹಾಗೂ ಬೆಳ್ಳುಳ್ಳಿ:
ಬೆಳ್ಳುಳ್ಳಿ ಮತ್ತು ಬೇವಿನ ಸ್ಪ್ರೇ ಬಳಸಿ ಗೋಡೆಗಳು ಮತ್ತು ಪೀಠೋಪಕರಣಗಳಿಗೆ ಹಿಡಿದಿರುವ ಗೆದ್ದಲುಗಳನ್ನು ಹೋಗಲಾಡಿಸಬಹುದು. ಹೀಗಾಗಿ 8 ರಿಂದ 9 ಬೆಳ್ಳುಳ್ಳಿಯನ್ನು ಜಜ್ಜಿ ರಸ ತೆಗೆದು ಅದಕ್ಕೆ ಬೇವಿನ ಎಣ್ಣೆಯನ್ನು ಸೇರಿಸಿ ಸ್ಪ್ರೇ ಮಾಡುವುದು ಪರಿಣಾಮಕಾರಿಯಾಗಿದೆ.
ಸಿಟ್ರಸ್ ಎಣ್ಣೆ:
ಸಿಟ್ರಸ್ ಎಣ್ಣೆಯಿಂದಲೂ ಗೆದ್ದಲುಗಳನ್ನು ಓಡಿಸುವುದು ಸುಲಭದಾಯಕವಾಗಿದೆ. ಈ ಎಣ್ಣೆಯನ್ನು ಗೆದ್ದಲು ಇರುವಲ್ಲಿಗೆ ಸ್ಪ್ರೇ ಮಾಡಿದರೆ ಗೆದ್ದಲುಗಳು ಸಂಪೂರ್ಣವಾಗಿ ಹೋಗುತ್ತವೆ.
ಉಪ್ಪು:
ಮನೆಯಲ್ಲಿ ಗೆದ್ದಲು ಹುಳುಗಳು ಕಂಡುಬಂದರೆ, ನೀವು ತಕ್ಷಣವೇ ಆ ಪ್ರದೇಶಗಳಿಗೆ ಉಪ್ಪನ್ನು ಸಿಂಪಡಿಸಿ. ಅಥವಾ ಉಪ್ಪು ನೀರಿನಿಂದ ಆ ಗೆದ್ದಲು ಹಿಡಿದಿರುವ ಜಾಗವನ್ನು ಒರೆಸಿಕೊಳ್ಳಿ.
ಇದನ್ನೂ ಓದಿ: ಕಾಫಿ ಪುಡಿಯನ್ನು ತಿಂಗಳುಗಳ ಕಾಲ ತಾಜಾವಾಗಿ ಸಂಗ್ರಹಿಸಿಡಲು ಇಲ್ಲಿದೆ ಸಿಂಪಲ್ ಟಿಪ್ಸ್
ಬೋರಿಕ್ ಆಸಿಡ್:
ಗೆದ್ದಲು ಬಾಧೆ ಇರುವ ಜಾಗದಲ್ಲಿ ಬೋರಿಕ್ ಆಸಿಡ್ ಪುಡಿಯನ್ನು ಸಿಂಪಡಿಸುವುದರಿಂದ ಈ ಗೆದ್ದಲು ನಿವಾರಣೆಯಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಲವಂಗ:
ಗೆದ್ದಲನ್ನು ತಡೆಯಲು ಲವಂಗ ತುಂಬಾ ಉಪಯುಕ್ತವಾಗಿದೆ. ಹೀಗಾಗಿ ಲವಂಗ ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ಕುದಿಸಿಕೊಳ್ಳಿ. ಆ ನೀರು ತಣ್ಣಗಾದ ಬಳಿಕ ಸ್ಪ್ರೇ ಬಾಟಲಿಗೆ ಹಾಕಿ ಗೆದ್ದಲು ಇರುವಲ್ಲಿ ಸಿಂಪಡಿಸಿ. ಹೀಗೆ ಮಾಡಿದರೆ ಈ ಲವಂಗದ ವಾಸನೆಗೆ ಗೆದ್ದಲು ಹುಳುಗಳು ಬೇಗನೇ ಸಾಯುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ