Relationship Tips : ಹುಡುಗಿಯರು ಈ ವಿಷಯದಲ್ಲಿ ಹುಡುಗರನ್ನು ಅರ್ಥ ಮಾಡಿಕೊಳ್ಳುವುದೇ ಇಲ್ವಂತೆ

ಗಂಡಿರಲಿ ಹೆಣ್ಣಿರಲಿ ಇಬ್ಬರಿಗೂ ಕೂಡ ಭಾವನೆಗಳಿವೆ. ಆದರೆ ಹೆಣ್ಣು ಭಾವನೆಗಳನ್ನು ವ್ಯಕ್ತಪಡಿಸುವಷ್ಟು ಗಂಡು ತನ್ನೊಳಗೆ ಎಲ್ಲವನ್ನು ಇಟ್ಟುಕೊಳ್ಳುತ್ತಾನೆ. ಆದರೆ ಹುಡುಗನು ಹುಡುಗಿಯಲ್ಲಿ ಕೆಲವು ವಿಷಯಗಳಲ್ಲಿ ನಿರೀಕ್ಷೆ ಮಾಡುತ್ತಾರೆ. ಈ ಸೂಕ್ಷ್ಮ ವಿಷಯಗಳ ಬಗ್ಗೆ ಅರಿವಿದ್ದರೂ ಅದನ್ನು ತನ್ನ ಪ್ರೇಮಿಯೂ ನಿರೀಕ್ಷಿಸುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳುವಲ್ಲಿ ಹುಡುಗಿಯೂ ಸೋಲುತ್ತಾಳೆ. ಹಾಗಾದ್ರೆ ಹುಡುಗಿಯೂ ಯಾವೆಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎನ್ನುವ ಕುತೂಹಲಕಾರಿ ಸಂಗತಿ ಇಲ್ಲಿದೆ.

Relationship Tips : ಹುಡುಗಿಯರು ಈ ವಿಷಯದಲ್ಲಿ ಹುಡುಗರನ್ನು ಅರ್ಥ ಮಾಡಿಕೊಳ್ಳುವುದೇ ಇಲ್ವಂತೆ
Relationship Tips
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Nov 27, 2024 | 6:45 PM

ಯಾವುದೇ ಸಂಬಂಧವಿರಲಿ, ಭಾವನೆಗಳನ್ನು ವ್ಯಕ್ತ ಪಡಿಸುವುದು ಹಾಗೂ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಆದರೆ ಗಂಡು ಹೆಣ್ಣಿನ ಭಾವನೆಗಳನ್ನು ಅರ್ಥ ಮಾಡಿಕೊಂಡಷ್ಟು ಆಕೆಯ ನಿರೀಕ್ಷೆಯಂತೆ ನಡೆದುಕೊಂಡಷ್ಟು, ಹೆಣ್ಣು ನಡೆದುಕೊಳ್ಳುವುದಿಲ್ಲ. ತಾನು ಏನನ್ನೂ ಬಯಸುತ್ತೇವೆ ಅದನ್ನೇ ಆತನು ಕೂಡ ಬಯಸುತ್ತಾನೆ ಎಂದು ಯೋಚನೆಯೂ ಮಾಡುವುದಿಲ್ಲ. ಹಾಗಾದ್ರೆ ಗಂಡು ಏನೆಲ್ಲಾ ನಿರೀಕ್ಷೆ ಇಟ್ಟುಕೊಂಡಿರುತ್ತಾನೆ. ಹೆಣ್ಣು ಏನೆಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಿ.

ಹೆಣ್ಣುಮಕ್ಕಳು ಹೊಗಳಿಕೆಯನ್ನು ನಿರೀಕ್ಷಿಸುತ್ತಾರೆ :

ಹೆಣ್ಣು ಮಕ್ಕಳು ಹೊಗಳಿಕೆಯನ್ನು ಹೆಚ್ಚು ನಿರೀಕ್ಷೆ ಮಾಡುತ್ತಾರೆ ಎಂದು ಎಲ್ಲರೂ ಭಾವಿಸುತ್ತೇವೆ. ಹೌದು, ಹೆಣ್ಣುಮಕ್ಕಳು ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ಕೂಡ ತನ್ನನ್ನು ಪ್ರೀತಿಸುವವರು ತನ್ನನ್ನು ಹೊಗಳಬೇಕು ಎನ್ನುವುದಿರುತ್ತದೆ. ಆದರೆ ಹುಡುಗರು ತನ್ನನ್ನು ಇಷ್ಟ ಪಡುವ ವ್ಯಕ್ತಿಯೂ ತನ್ನ ಕೆಲಸಗಳಿಗೆ ಹೊಗಳಲಿ ಎಂದು ಬಯಸುತ್ತಾನೆ. ಆದರೆ ಈ ಬಗ್ಗೆ ಬಾಯಿ ಬಿಟ್ಟು ಹೇಳಿಕೊಳ್ಳುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಹುಡುಗಿಯರೂ ನಿಜಕ್ಕೂ ಸೋಲುತ್ತಾರೆ.

ಪ್ರೇಮಿಯೂ ತನ್ನ ಸ್ನೇಹಿತರ ಬಗ್ಗೆ ಮಾತನಾಡಿದ್ರೆ ಹುಡುಗರು ಇಷ್ಟಪಡಲ್ಲ :

ಹುಡುಗಿಯೂ ತನ್ನ ಸ್ನೇಹಿತೆಯರ ಬಗ್ಗೆ ತನ್ನ ಹುಡುಗನು ಕೆಟ್ಟದಾಗಿ ಮಾತನಾಡಬಾರದು ಎಂದು ಬಯಸುತ್ತಾಳೆ. ಒಂದು ವೇಳೆ ಮಾತನಾಡಿದ್ರೆ ಸಂಬಂಧ ಮುರಿಯುವ ಹಂತಕ್ಕೆ ತಲುಪುತ್ತಾಳೆ. ಅದೇ ರೀತಿ ಹುಡುಗನಿಗೆ ತನ್ನ ಗೆಳೆಯರ ಬಗ್ಗೆ ಪ್ರೇಯಸಿ ಕೆಟ್ಟದಾಗಿ ಮಾತನಾಡಿದ್ರೆ ಸಹಿಸುವುದಕ್ಕೆ ಆಗಲ್ಲ, ಇಷ್ಟನೂ ಆಗಲ್ಲ. ಆದರೆ ಈ ಸೂಕ್ಷ್ಮ ವಿಷಯಗಳನ್ನು ಹುಡುಗಿಯೂ ಅರ್ಥ ಮಾಡಿಕೊಳ್ಳುವುದೇ ಇಲ್ಲ.

ಹುಡುಗರ ಸಮಸ್ಯೆಯನ್ನು ಆಲಿಸುವುದಿಲ್ಲ:

ಹುಡುಗಿಯರಿಗೆ ಏನಾದರೂ ಸಣ್ಣ ಪುಟ್ಟ ಸಮಸ್ಯೆಗಳಾದರೆ ತಾನು ಪ್ರೀತಿಸುವ ಹುಡುಗನನ್ನು ನೆನಪಿಸಿಕೊಳ್ಳುತ್ತಾಳೆ. ಒಂದೇ ಒಂದು ಕಾಲ್ ಮಾಡಿದರೆ ಸಾಕು ಓಡೋಡಿ ಬರುವ ಹುಡುಗನಿಗೂ ನೂರಾರು ಸಮಸ್ಯೆಗಳಿರುತ್ತದೆ. ಆದರೆ ಈ ಬಗ್ಗೆ ಒಂದು ಕ್ಷಣವು ಹುಡುಗಿಯೂ ಯೋಚಿಸುವುದಿಲ್ಲ. ನನ್ನ ಸಮಸ್ಯೆಯನ್ನು ಬಗೆಹರಿಸುವವನು ಆತನ ಜೀವನದ ಕಷ್ಟಗಳನ್ನು ಹೇಗೆ ಪರಿಹಾರ ಕಂಡುಕೊಳ್ಳುತ್ತಾನೆ ಎನ್ನುವುದನ್ನು ಯೋಚಿಸುವುದಿಲ್ಲ. ಜೀವನದ ಕೆಲವು ಸಂದರ್ಭದಲ್ಲಿ ಪ್ರೀತಿಸುವ ಹುಡುಗಿಯೂ ನನ್ನ ಜೊತೆಗೆ ನಿಲ್ಲಲಿ, ಧೈರ್ಯ ತುಂಬಲಿ ಎಂದು ಹುಡುಗರು ಕೂಡ ಬಯಸುತ್ತಾರೆ.

ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಲಿ :

ಹುಡುಗಿಯೂ ತಾನು ಪ್ರೀತಿಸುವ ಹುಡುಗನ ಬಳಿ ನನ್ನನ್ನು ನೀನು ಎಷ್ಟು ಪ್ರೀತಿಸುವೆ ಎಂದು ಪ್ರಶ್ನಿಸುತ್ತಾಳೆ. ಅದಲ್ಲದೇ ಉಡುಗೊರೆ ನೀಡುವ ಮೂಲಕ ಅಥವಾ ವಿಭಿನ್ನವಾಗಿ ಪ್ರೀತಿಯನ್ನು ವ್ಯಕ್ತಪಡಿಸಲಿ ಎಂದು ಬಯಸುತ್ತಾಳೆ. ಈ ನಿರೀಕ್ಷೆಯೂ ಹುಡುಗನಲ್ಲಿಯೂ ಇರುತ್ತದೆ. ಆದರೆ ತನಗೆ ಏನು ಬೇಕು ಎಂದು ಕೇಳಿ ಪಡೆಯುವ ಹೆಣ್ಣು ತನ್ನ ಪ್ರೇಮಿಗೂ ಇಂತಹ ಸಣ್ಣ ಪುಟ್ಟ ಆಸೆಗಳಿರುತ್ತವೆ ಎಂದು ತಿಳಿದುಕೊಳ್ಳುವಲ್ಲಿ ಸೋಲುತ್ತಾಳೆ.

ಇದನ್ನೂ ಓದಿ: ಅಪರಿಚಿತ ಹುಡುಗಿಯನ್ನು ಕಂಡಾಗ ಹುಡುಗನ ತಲೆಯಲ್ಲಿ ಏನೆಲ್ಲಾ ಆಲೋಚನೆಗಳು ಓಡುತ್ತೆ ಗೊತ್ತಾ? ಈ ವಿಷಯಗಳಂತೆ

ತನ್ನ ಕುಟುಂಬವನ್ನು ಗೌರವಿಸಲಿ :

ಜೀವಕ್ಕಿಂತ ಜೀವ ಎನ್ನುವಷ್ಟು ಪ್ರೀತಿಸುತ್ತಿರಲಿ, ಗಂಡು ಹೆಣ್ಣು ಇಬ್ಬರಿಗೂ ಅವರವರ ಕುಟುಂಬವು ಬಹಳ ಮುಖ್ಯ. ಹುಡುಗಿಯೂ ತನ್ನ ಪ್ರಿಯಕರನು ತನ್ನ ಮನೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು, ಗೌರವ ನೀಡಲಿ. ನನ್ನ ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಲಿ ಎಂದು ಬಯಸುತ್ತಾಳೆ. ಅದೇ ರೀತಿ ಹುಡುಗನು ತಾನು ಪ್ರೀತಿಸುವ ಹುಡುಗಿಯಿಂದಲೂ ಇದನ್ನೇ ನಿರೀಕ್ಷಿಸುತ್ತಾನೆ. ಈ ಬಗ್ಗೆ ಆಕೆಯ ಬಳಿ ಎಂದಿಗೂ ಹೇಳಿಕೊಳ್ಳುವುದಿಲ್ಲ. ಆದರೆ ಆತನಿಗೆ ಆ ನಿರೀಕ್ಷೆ ಯಾವಾಗಲು ಇರುತ್ತದೆ. ಆದರೆ ಹೆಣ್ಣು ಈ ಕೆಲವು ಸೂಕ್ಷ್ಮ ವಿಚಾರಗಳನ್ನು ತಲೆಗೆ ಹಾಕಿಕೊಳ್ಳುವುದಿಲ್ಲ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್