Vidura Niti : ನಿಮ್ಮ ಬದುಕಿನಲ್ಲಿ ಇವುಗಳಿದ್ದರೆ ಖುಷಿಯಾಗಿರಲು ಸಾಧ್ಯ ಎನ್ನುತ್ತಾನೆ ವಿದುರ

ಸಂತೋಷ ಯಾರಿಗೆ ತಾನೇ ಬೇಡ ಹೇಳಿ. ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತಾನು ಖುಷಿಯಾಗಿರಲಬೇಕು ಬಯಸುತ್ತಾನೆ. ಕೆಲವರು ಸಂತೋಷವಾಗಿರಲು ಹೆಚ್ಚು ಹಣ, ಹೊಸ ಬಟ್ಟೆಗಳು, ಬೇಕೆನಿಸಿದ್ದನ್ನು ಖರೀದಿ ಮಾಡುತ್ತಾರೆ. ಆದರೆ ಇಷ್ಟು ಇದ್ದ ಮಾತ್ರಕ್ಕೆ ಸಂತೋಷವಾಗಿರಲು ಸಾಧ್ಯವಿಲ್ಲ. ಆದರೆ ವಿದುರನು ತನ್ನ ನೀತಿಯಲ್ಲಿ ಖುಷಿಯಾಗಿರಲು ಜೀವನದಲ್ಲಿ ಈ ಐದು ಸಂಗತಿಗಳಿರಲೇಬೇಕು ಎಂದಿದ್ದಾನೆ. ಹಾಗಾದ್ರೆ ಆ ಐದು ವಿಷಯಗಳಾವುವು ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.

Vidura Niti : ನಿಮ್ಮ ಬದುಕಿನಲ್ಲಿ ಇವುಗಳಿದ್ದರೆ ಖುಷಿಯಾಗಿರಲು ಸಾಧ್ಯ ಎನ್ನುತ್ತಾನೆ ವಿದುರ
Vidura Niti
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on:Nov 29, 2024 | 3:46 PM

ಜೀವನದಲ್ಲಿ ಒಂದು ದಿನವು ಸಂತೋಷವನ್ನೇ ಕಂಡಿಲ್ಲ ನೆಮ್ಮದಿಯಂತೂ ಇಲ್ಲವೇ ಇಲ್ಲ ಎಂದು ಹೇಳುವುದನ್ನು ಕೇಳಿರಬಹುದು. ಹೀಗಾಗಿ ನೆಮ್ಮದಿ ಹಾಗೂ ಸಂತೋಷ ಎನ್ನುವುದು ಎಲ್ಲರ ಜೀವನಕ್ಕೂ ಬಹಳ ಮುಖ್ಯ. ಆದರೆ ಯಾವುದೇ ವ್ಯಕ್ತಿಯೂ ಏನೇ ಕೆಲಸ ಮಾಡಿದರೂ ಕೂಡ ತಾನು ತನ್ನ ಕುಟುಂಬದವರು ಖುಷಿಯಾಗಿರಲೆಂದೇ ಬಯಸುತ್ತಾರೆ. ಆದರೆ ವಿದುರನು ಈ ಕೆಲವು ಸಂಗತಿಗಳು ಜೀವನದಲ್ಲಿದ್ದರೆ ಸಂತೋಷವಾಗಿರಲು ಸಾಧ್ಯ ಎಂದು ಸ್ಪಷ್ಟವಾಗಿ ಹೇಳಿದ್ದಾನೆ

ಹೆಚ್ಚು ಆದಾಯ ಮೂಲವನ್ನು ಹೊಂದಿರುವ ವ್ಯಕ್ತಿ:

ಒಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಬಯಸಿದ್ದೆಲ್ಲವನ್ನು ಪಡೆಯಬೇಕಾದರೆ ಕೈಯಲ್ಲಿ ದುಡ್ಡಿರಲೇಬೇಕು. ಜೀವನಕ್ಕಾಗಿ ಒಂದೇ ಕೆಲಸವನ್ನು ನಂಬಿಕೊಂಡರೆ ಏನು ಮಾಡಲು ಆಗದು. ಒಂದಕ್ಕಿಂತ ಹೆಚ್ಚು ಆದಾಯದ ಮೂಲವನ್ನು ಹೊಂದಿರುವ ಯಾವುದೇ ವ್ಯಕ್ತಿಯು ಯಾವಾಗಲೂ ಉತ್ತಮ ಜೀವನವನ್ನು ನಡೆಸುತ್ತಾನೆ. ಹಣದ ಕೊರತೆಯಿದ್ದರೆ ಇತರರ ಮೇಲೆ ಅವಲಂಬಿತನಾಗಬೇಕಾಗುತ್ತದೆ. ಇದರಿಂದಾಗಿ ಅವನು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರಿಂದ ಒಂದಕ್ಕಿಂತ ಹೆಚ್ಚು ಆದಾಯ ಮೂಲವನ್ನು ಹೊಂದಿರುವ ವ್ಯಕ್ತಿಯೂ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯ ಎಂದಿದ್ದಾನೆ ವಿದುರ.

ಒಳ್ಳೆಯ ಆರೋಗ್ಯ:

ಈಗಿನ ಕಾಲದಲ್ಲಿ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಆರೋಗ್ಯವಿದ್ದರೆ ಜೀವನದಲ್ಲಿ ಬಯಸ್ಸಿದ್ದನ್ನು ಪಡೆಯಲು ಸಾಧ್ಯ. ದೈಹಿಕ ಸಮಸ್ಯೆಗಳು ಮನುಷ್ಯನನ್ನು ದೈಹಿಕ ಹಾಗೂ ಮಾನಸಿಕವಾಗಿ ದುರ್ಬಲನನ್ನಾಗಿ ಮಾಡುತ್ತದೆ. ಹೀಗಾಗಿ ಒಳ್ಳೆಯ ಆರೋಗ್ಯ, ಒಳ್ಳೆಯ ಮನಸ್ಥಿತಿ ಕೆಲಸ ಮಾಡಲು ಪ್ರೇರಣೆಯಾಗುತ್ತದೆ. ಆರೋಗ್ಯವಂತ ವ್ಯಕ್ತಿಯನ್ನು ಅದೃಷ್ಟಶಾಲಿ ಎಂದು ಪರಿಗಣಿಸಿದ್ದು, ಆರೋಗ್ಯವಂತ ವ್ಯಕ್ತಿಯೂ ಸದಾ ಸಂತೋಷವಾಗಿರುವವನು ಎಂದಿದ್ದಾನೆ ವಿದುರ.

ಸೌಮ್ಯವಾಗಿ ಮಾತನಾಡುವ ವ್ಯಕ್ತಿ:

ಯಾವ ವ್ಯಕ್ತಿಯೂ ತುಂಬಾ ಸಿಹಿಯಾಗಿ ಹಾಗೂ ಸೌಮ್ಯವಾಗಿ ಮಾತನಾಡುತ್ತಾನೋ ಆತನು ತನ್ನ ಸುತ್ತಮುತ್ತಲಿನ ವ್ಯಕ್ತಿಗಳ ಮನಸ್ಸು ಗೆಲ್ಲುತ್ತಾನೆ. ಹೃದಯಕ್ಕೆ ಹತ್ತಿರವಾಗುವ ವ್ಯಕ್ತಿಯನ್ನು ಟೀಕಿಸುವವರು ಹಾಗೂ ಕಾಲೆಳೆಯುವವರು ಇರದ ಕಾರಣ ಸಂತೋಷವಾಗಿರುತ್ತಾನೆ. ಅದಲ್ಲದೇ ಒಳ್ಳೆಯ ಮಾತು ಹಾಗೂ ನಡವಳಿಕೆಯನ್ನು ಹೊಂದಿದ ವ್ಯಕ್ತಿಯೂ ಅದೃಷ್ಟಶಾಲಿಯಾಗಿರುತ್ತಾನೆ. ತನ್ನ ಜೀವನದಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯ ಎನ್ನುತ್ತಾನೆ ವಿದುರ.

ಇದನ್ನೂ ಓದಿ: Chanakya Niti : ಮದುವೆಗೂ ಮುನ್ನ ಈ ಮೂರು ಪ್ರಶ್ನೆಗಳನ್ನು ಕೇಳಿದ್ರೆ ವೈವಾಹಿಕ ಜೀವನ ಮುರಿದು ಬೀಳೋದೇ ಇಲ್ವಂತೆ

ಜ್ಞಾನವನ್ನು ಹೊಂದಿರುವವನು:

ಜ್ಞಾನದ ಸಂಪತ್ತನ್ನು ಹೊಂದಿರುವ ವ್ಯಕ್ತಿಯು ಕಷ್ಟದ ಸಂದರ್ಭಗಳಲ್ಲಿಯೂ ಹೆದರುವುದಿಲ್ಲ. ಹಣ ಹಾಗೂ ದೈಹಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಯೂ ಅದನ್ನು ಕಳೆದುಕೊಳ್ಳಬಹುದು. ಆದರೆ ಜ್ಞಾನವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಬುದ್ಧಿ ವಂತಿಕೆ ಹಾಗೂ ಜ್ಞಾನವೊಂದಿದ್ದರೆ ಯಾವುದೇ ಕೆಲಸವನ್ನು ಮಾಡಿ ಪ್ರಗತಿಯನ್ನು ಗಳಿಸಲು ಸಾಧ್ಯ. ಈ ಪ್ರಗತಿಯೂ ಸಂತೋಷಕ್ಕೆ ಕಾರಣವಾಗುತ್ತದೆ.

ವಿಧೇಯ ಮಕ್ಕಳನ್ನು ಹೊಂದಿರುವ ವ್ಯಕ್ತಿ:

ವಿಧೇಯ ಮಕ್ಕಳನ್ನು ಹೊಂದಿರುವ ತಂದೆ ತಾಯಂದಿರು ನಿಜಕ್ಕೂ ಅದೃಷ್ಟವಂತರು. ಸದ್ಗುಣಗಳನ್ನು ಹೊಂದಿರುವ ಮಕ್ಕಳು ಯಾವಾಗಲೂ ತನ್ನ ಹೆತ್ತವರಿಗೆ ಕೀರ್ತಿ ತರುತ್ತಾರೆ. ಅದಲ್ಲದೇ, ವಯಸ್ಸಾದಾಗ ತಂದೆತಾಯಿಯನ್ನು ಕಾಳಜಿಯುತವಾಗಿ ನೋಡಿಕೊಳ್ಳುತ್ತಾರೆ. ಅಂತಹ ವ್ಯಕ್ತಿಯು ಯಾವಾಗಲೂ ಸಂತೋಷವಾಗಿರುತ್ತಾನೆ ಎಂದಿದ್ದಾನೆ ವಿದುರ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:45 pm, Fri, 29 November 24

ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ
ಮೈಸೂರು: 188 ವರ್ಷಗಳ ಹಳೆಯದಾದ ಗರಡಿ ಮನೆ ಗೋಡೆ ಕುಸಿತ
ಮೈಸೂರು: 188 ವರ್ಷಗಳ ಹಳೆಯದಾದ ಗರಡಿ ಮನೆ ಗೋಡೆ ಕುಸಿತ
ಎಸ್ ಟಿ ಸೋಮಶೇಖರ್ ವಿರುದ್ಧ ಶಿಸ್ತುಕ್ರಮ, ಸುಳಿವು ನೀಡಿದ ಬಿವೈ ವಿಜಯೇಂದ್ರ
ಎಸ್ ಟಿ ಸೋಮಶೇಖರ್ ವಿರುದ್ಧ ಶಿಸ್ತುಕ್ರಮ, ಸುಳಿವು ನೀಡಿದ ಬಿವೈ ವಿಜಯೇಂದ್ರ
ಒಂದಿಬ್ಬರ ನಡುವಿನ ಜಗಳ ಪಕ್ಷದ ಕಲಹ ಆಗಲಾರದು: ರಾಧಾ ಮೋಹನ್ ದಾಸ್ ಅಗರವಾಲ್
ಒಂದಿಬ್ಬರ ನಡುವಿನ ಜಗಳ ಪಕ್ಷದ ಕಲಹ ಆಗಲಾರದು: ರಾಧಾ ಮೋಹನ್ ದಾಸ್ ಅಗರವಾಲ್
Video: ಅಪಘಾತದ ಬಳಿಕ ಹೊತ್ತಿ ಉರಿದ ಕಾರುಗಳು, ಓರ್ವ ಸಾವು
Video: ಅಪಘಾತದ ಬಳಿಕ ಹೊತ್ತಿ ಉರಿದ ಕಾರುಗಳು, ಓರ್ವ ಸಾವು
ತೆಲಂಗಾಣದಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ
ತೆಲಂಗಾಣದಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ
ಸಚಿನ್ ತೆಂಡೂಲ್ಕರ್ ಮುಂದೆ ಅಸಹಾಯಕತೆ ತೋಡಿಕೊಂಡ ವಿನೋದ್ ಕಾಂಬ್ಳಿ
ಸಚಿನ್ ತೆಂಡೂಲ್ಕರ್ ಮುಂದೆ ಅಸಹಾಯಕತೆ ತೋಡಿಕೊಂಡ ವಿನೋದ್ ಕಾಂಬ್ಳಿ
ಸ್ಥಾನ ಉಳಿಸಿಕೊಳ್ಳಲು ಐಶ್ವರ್ಯಾ ಹೋರಾಟ; ಮಂಜುನೇ ಎದುರು ಹಾಕಿಕೊಂಡ್ರು
ಸ್ಥಾನ ಉಳಿಸಿಕೊಳ್ಳಲು ಐಶ್ವರ್ಯಾ ಹೋರಾಟ; ಮಂಜುನೇ ಎದುರು ಹಾಕಿಕೊಂಡ್ರು
ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ
ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ