Chanakya Niti : ಮದುವೆಗೂ ಮುನ್ನ ಈ ಮೂರು ಪ್ರಶ್ನೆಗಳನ್ನು ಕೇಳಿದ್ರೆ ವೈವಾಹಿಕ ಜೀವನ ಮುರಿದು ಬೀಳೋದೇ ಇಲ್ವಂತೆ

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುವುದನ್ನು ಕೇಳಿರಬಹುದು. ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಮಾನಸಿಕವಾದ ಸಿದ್ಧತೆಯ ಜೊತೆಗೆ ಇಬ್ಬರೂ ವ್ಯಕ್ತಿಗಳ ತಮ್ಮ ಮುಂದಿನ ಜೀವನದ ಕುರಿತು ಮಾತನಾಡಿಕೊಳ್ಳುವುದು ಅಷ್ಟೇ ಮುಖ್ಯ. ಹೀಗಾಗಿ ಆಚಾರ್ಯ ಚಾಣಕ್ಯನು ಮದುವೆಗೆ ಸಂಬಂಧ ಪಟ್ಟಂತೆ ಕೆಲವು ಸಲಹೆಗಳನ್ನು ನೀಡಿದ್ದಾನೆ. ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೂ ಮುನ್ನ ಸಂಗಾತಿ ಈ ಕೆಲವು ವಿಷಯಗಳ ಬಗ್ಗೆ ಪರಸ್ಪರ ಪ್ರಶ್ನೆ ಕೇಳಿಕೊಳ್ಳಬೇಕು ಎಂದಿದ್ದಾನೆ. ಹಾಗಾದ್ರೆ ಆಚಾರ್ಯ ಚಾಣಕ್ಯ ಹೇಳುವಂತೆ ಸಂಗಾತಿಗಳಿಬ್ಬರೂ ಕೇಳಬಹುದಾದ ಪ್ರಶ್ನೆಗಳೇನು? ಎನ್ನುವುದರ ಮಾಹಿತಿ ಇಲ್ಲಿದೆ.

Chanakya Niti : ಮದುವೆಗೂ ಮುನ್ನ ಈ ಮೂರು ಪ್ರಶ್ನೆಗಳನ್ನು ಕೇಳಿದ್ರೆ ವೈವಾಹಿಕ ಜೀವನ ಮುರಿದು ಬೀಳೋದೇ ಇಲ್ವಂತೆ
Chanakya Niti
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 28, 2024 | 6:18 PM

ಮದುವೆ ಎರಡು ಕುಟುಂಬಗಳ ಬೆಸುಗೆ, ಎರಡು ಮನಸ್ಸುಗಳ ಸಮ್ಮಿಲನ. ಈ ಬಂಧದಿಂದ ಹೆಣ್ಣು ಗಂಡಿನ ಬದುಕಿನಲ್ಲಿ ಮಹತ್ತರದ ಬದಲಾವಣೆಯಾಗುತ್ತದೆ. ಆದರೆ ಕೆಲವೊಮ್ಮೆ ಸಂಗಾತಿಗಳಿಬ್ಬರೂ ಮುಚ್ಚಿಡುವ ಕೆಲವು ವಿಷಯಗಳೇ ವೈವಾಹಿಕ ಜೀವನದ ಬಿರುಕಿಗೆ ಕಾರಣವಾಗುತ್ತದೆ. ಹೀಗಾಗಿ ಆಚಾರ್ಯ ಚಾಣಕ್ಯನು ವೈವಾಹಿಕ ಜೀವನಕ್ಕೆ ಸಂಬಂಧ ಪಟ್ಟಂತೆ ಕೆಲವು ಸಲಹೆ ನೀಡುವುದರೊಂದಿಗೆ ಮದುವೆಗೂ ಮೊದಲು ಈ ಕೆಲಸಗಳನ್ನು ಮಾಡಲೇ ಬೇಕು ಎಂದಿದ್ದಾನೆ. ಅದಲ್ಲದೇ, ಸಂಬಂಧದಲ್ಲಿ ಯಾವುದೇ ಬಿರುಕು ಉಂಟಾಗದಂತೆ, ಮದುವೆಗೆ ಮೊದಲು ನಿಮ್ಮ ಭವಿಷ್ಯದ ಸಂಗಾತಿಗೆ ಖಂಡಿತವಾಗಿಯೂ ಮೂರು ಪ್ರಶ್ನೆಗಳನ್ನು ಕೇಳಬೇಕು ಎಂದು ತನ್ನ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾನೆ.

ವಯಸ್ಸಿನ ಅಂತರವನ್ನು ತಿಳಿದುಕೊಳ್ಳಿ :

ಮದುವೆಯಾಗಲು ಹೊರಟಿರುವ ಗಂಡು ಹೆಣ್ಣು ಇಬ್ಬರೂ ಕೂಡ ನಿಖರವಾದ ವಯಸ್ಸನ್ನು ಕೇಳಿ ತಿಳಿದುಕೊಳ್ಳುವುದು ಬಹಳ ಮುಖ್ಯ. ದಂಪತಿಗಳು ಮದುವೆಗೆ ಸರಿಯಾದ ವಯಸ್ಸಿನ ಅಂತರವನ್ನು ಹೊಂದಿದ್ದರೆ ಪರಸ್ಪರ ಹೊಂದಾಣಿಕೆ ಇರುತ್ತದೆ. ದೀರ್ಘವಾದ ವಯಸ್ಸಿನ ಅಂತರವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ವಯಸ್ಸಿನ ಅಂತರದಿಂದ ಇಬ್ಬರ ಯೋಚನಾಲಹರಿಯು ವಿಭಿನ್ನವಾಗಿರುವ ಸಂಬಂಧವು ಬೇಗನೇ ಮುರಿದು ಬೀಳಬಹುದು. ಎಷ್ಟೋ ಜನರ ವೈವಾಹಿಕ ಜೀವನದಲ್ಲಿ ವಯಸ್ಸಿನ ಅಂತರವು ಸಂಬಂಧ ಮುರಿಯಲು ಕಾರಣವಾಗಿದೆ. ಹೀಗಾಗಿ ನೀವು ಮದುವೆಯಾಗಲು ಹೊರಟಿದ್ದರೆ, ಸೂಕ್ತವಾದ ವಯಸ್ಸಿನ ಅಂತರವಿದೆ ಎಂದು ತಿಳಿದುಕೊಳ್ಳುವುದು ಇಬ್ಬರಿಗೂ ಬಹಳ ಮುಖ್ಯ ಎಂದಿದ್ದಾನೆ ಚಾಣಕ್ಯ.

ಆರೋಗ್ಯದ ಸ್ಥಿತಿ ಬಗ್ಗೆ ತಿಳಿಯಿರಿ :

ಚಾಣಕ್ಯರ ಪ್ರಕಾರ ನೀವು ಮದುವೆಯಾಗಲಿರುವ ಹುಡುಗ ಅಥವಾ ಹುಡುಗಿಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲೇ ಬೇಕು ಎಂದಿದ್ದಾನೆ. ನೀವು ಮದುವೆಯಾಗಲು ಹೊರಟಿರುವ ಹುಡುಗ ಅಥವಾ ಹುಡುಗಿಗೆ ದೈಹಿಕ ಅಥವಾ ಮಾನಸಿಕ ಸಮಸ್ಯೆ ಇದೆಯೇ? ಖಚಿತ ಪಡಿಸಿಕೊಳ್ಳಿ, ಇಲ್ಲದಿದ್ದರೆ ನೀವು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯ ಸಮಸ್ಯೆಗಳೇ ಸಂಬಂಧವು ಮುರಿದು ಬೀಳಲು ಪ್ರಮುಖ ಕಾರಣವಾಗಬಹುದು.

ಇದನ್ನೂ ಓದಿ: ಅಪರಿಚಿತ ಹುಡುಗಿಯನ್ನು ಕಂಡಾಗ ಹುಡುಗನ ತಲೆಯಲ್ಲಿ ಏನೆಲ್ಲಾ ಆಲೋಚನೆಗಳು ಓಡುತ್ತೆ ಗೊತ್ತಾ? ಈ ವಿಷಯಗಳಂತೆ

ಹಳೆಯ ಸಂಬಂಧದ ಬಗ್ಗೆ ಕೇಳಿ ತಿಳಿದುಕೊಳ್ಳಿ:

ಮದುವೆಯಾಗಲಿರುವಾಗ, ಸಂಗಾತಿಯೂ ನೀವು ಸಿಗುವ ಮುನ್ನ ಹಳೆಯ ಸಂಬಂಧವನ್ನು ಹೊಂದಿದ್ದರೆ ಆ ಬಗ್ಗೆಯೂ ಕೇಳಿ ತಿಳಿದುಕೊಳ್ಳಿ ಎನ್ನುವುದು ಚಾಣಕ್ಯನ ಸಲಹೆಯಾಗಿದೆ. ಸಂಗಾತಿಯ ಬಳಿ ಪ್ರಶ್ನೆ ಕೇಳುವಾಗ ಆ ಸಂಬಂಧವು ಮುರಿದು ಬೀಳಲು ಕಾರಣ, ಈಗ ಆ ವ್ಯಕ್ತಿಯೊಂದಿಗೆ ಸ್ನೇಹ ಸಂಬಂಧವನ್ನು ಮುಂದುವರೆಸಿದ್ದೀರಾ ಹೀಗೆ ಎಲ್ಲದಕ್ಕೂ ಉತ್ತರ ಕಂಡುಕೊಳ್ಳುವುದು ಬಹಳ ಮುಖ್ಯ. ಇದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಅನುಮಾನ ಮೂಡದಂತೆ ಮಾಡುತ್ತದೆ. ಈ ಬಗ್ಗೆ ಮುಕ್ತವಾಗಿ ಮಾತನಾಡಿದರೆ, ನಿಮ್ಮ ಮುಂದಿನ ವೈವಾಹಿಕ ಜೀವನವು ಸಂತೋಷದಿಂದರಲು ಇರಲು ಸಾಧ್ಯ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ