International Jaguar Day 2024: ಅಂತಾರಾಷ್ಟ್ರೀಯ ಜಾಗ್ವಾರ್ ದಿನ ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ

ಅಳಿವಿನಂಚಿನಲ್ಲಿರುವ ಜಾಗ್ವಾರ್ ಪ್ರಭೇದಗಳನ್ನು ರಕ್ಷಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ವಾರ್ಷಿಕವಾಗಿ ನವೆಂಬರ್ 29 ರಂದು ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನ ವು ಜಾಗ್ವಾರ್ ಸಂತತಿಗಳ ರಕ್ಷಣೆ ಹಾಗೂ ಮತ್ತು ಅವುಗಳ ಆವಾಸಸ್ಥಾನಗಳ ಸಂರಕ್ಷಣೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ಹಾಗಾದ್ರೆ ಈ ದಿನದ ಆಚರಣೆಯೂ ಯಾವಾಗ ಪ್ರಾರಂಭವಾಯಿತು? ಈ ದಿನದ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

International Jaguar Day 2024: ಅಂತಾರಾಷ್ಟ್ರೀಯ ಜಾಗ್ವಾರ್ ದಿನ ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ
International Jaguar Day 2024
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Nov 29, 2024 | 10:25 AM

ಜಾಗ್ವಾರ್​ಗಳು ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಕಾಣಿಸುವ ಪರಭಕ್ಷಕ ಪ್ರಾಣಿಗಳಲ್ಲಿ ಒಂದು. ಆದರೆ ಈ ಪ್ರಾಣಿಗಳ ಬೇಟೆ, ಅರಣ್ಯನಾಶ, ಹವಾಮಾನ ಬದಲಾವಣೆ ಹಾಗೂ ಆವಾಸಸ್ಥಾನದ ಬದಲಾವಣೆಗಳಿಂದಾಗಿ ಕಳೆದ ಕೆಲವು ದಶಕಗಳಲ್ಲಿ ಜಾಗ್ವಾರ್ ಸಂಖ್ಯೆಗಳ ಕುಸಿತಕ್ಕೆ ಕಾರಣವಾಗಿದೆ. ಈ ಕಾಡುಬೆಕ್ಕುಗಳ ಜಾತಿಗೆ ಸೇರಿದ ಈ ಜಾಗ್ವಾರ್ ಗಳು ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲಿಯೂ ಈ ದಕ್ಷಿಣ ಅಮೆರಿಕಾದಲ್ಲಿ ಜೀವವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಇವುಗಳ ಪಾತ್ರ ಅಗಾಧವಾದದ್ದು. ಹೀಗಾಗಿ ಇವುಗಳ ಸಂತತಿಗಳನ್ನು ಉಳಿಸುವುದು ಹಾಗೂ ಆವಾಸಸ್ಥಾನಗಳ ಸಂರಕ್ಷಣೆಗೆ ಸಂಬಂಧ ಪಟ್ಟಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು ಆಚರಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಜಾಗ್ವಾರ್ ದಿನದ ಇತಿಹಾಸ ಹಾಗೂ ಮಹತ್ವ:

2020 ರಲ್ಲಿ, ವರ್ಲ್ಡ್ ವೈಲ್ಡ್‌ಲೈಫ್ ಫೆಡರೇಶನ್ (WWF) ಜಾಗ್ವಾರ್‌ಗಳ ಸಂತತಿಗಳನ್ನು ಉಳಿಸಲು ಹಾಗೂ 2030 ರ ವೇಳೆಗೆ ಅವುಗಳ ಆವಾಸಸ್ಥಾನಗಳನ್ನು ಉಳಿಸಲು ಸಹಾಯ ಮಾಡುವ ಯೋಜನೆಯನ್ನು ಪ್ರಾರಂಭಿಸಿತು. ಮಾರ್ಚ್ 2018 ರಲ್ಲಿ ನ್ಯೂಯಾರ್ಕ್‌ನಲ್ಲಿ ಯುನೈಟೆಡ್ ನೇಷನ್ಸ್‌ನಲ್ಲಿ ಜಾಗ್ವಾರ್ ಆವಾಸಸ್ಥಾನಗಳನ್ನು ಹೊಂದಿರುವ 14 ದೇಶಗಳ ಪ್ರತಿನಿಧಿಗಳು ಜಾಗ್ವಾರ್ ಉಳಿಯುವಿಕೆ 2030 ಗಾಗಿ ಒಟ್ಟುಗೂಡಿದರು. ಈ ಸಭೆಯಲ್ಲಿ ಅಂತಾರಾಷ್ಟ್ರೀಯ ಜಾಗ್ವಾರ್ ದಿನದ ಕಲ್ಪನೆಯನ್ನು ಒಳಗೊಂಡಂತೆ ಜಾಗ್ವಾರ್‌ಗಳನ್ನು ಉಳಿಸಲು ಅನೇಕ ಜಂಟಿ ಪ್ರಯತ್ನಗಳಿಗೆ ಕಾರಣವಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 29 ರಂದು ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಅಳಿವಿನಂಚಿನಲ್ಲಿರುವ ಜಾಗ್ವಾರ್ ಗಳ ರಕ್ಷಣೆ ಹಾಗೂ ಮತ್ತು ಅವುಗಳ ಆವಾಸಸ್ಥಾನಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವೂ ಮಹತ್ವದ್ದಾಗಿದೆ. ಅದಲ್ಲದೇ, ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಈ ಪರಭಕ್ಷಕಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಇದು ಒಂದು ಅವಕಾಶವಾಗಿದೆ. ಈ ನಿಟ್ಟಿನಲ್ಲಿ ಜಾಗ್ವಾರ್ ಗಳ ರಕ್ಷಣೆಗಾಗಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿ ಗೆದ್ದಲು ಹುಳುಗಳ ಕಾಟವೇ? ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಟಿಪ್ಸ್ ಫಾಲೋ ಮಾಡಿ

ಚಿರತೆಗೂ ಜಾಗ್ವಾರ್ ಗೂ ಏನೆಲ್ಲಾ ವ್ಯತ್ಯಾಸಗಳಿವೆ?

  • ಚಿರತೆಯ ದೇಹದ ಮೇಲಿನ ಮಚ್ಚೆಗಳು ಅಷ್ಟೊಂದು ದೊಡ್ಡ ಗಾತ್ರವನ್ನು ಹೊಂದಿಲ್ಲ. ಎರಡು ಚುಕ್ಕೆಗಳ ನಡುವಿನ ಅಂತರವು ತುಂಬಾ ಕಡಿಮೆಯಾಗಿರುತ್ತದೆ. ಆದರೆ ಜಾಗ್ವಾರ್​ನ ಮೈ ಮೇಲಿರುವ ಮಚ್ಚೆಗಳು ದೊಡ್ಡದಾಗಿರುತ್ತವೆ.
  • ಚಿರತೆಗಳು ಹೆಚ್ಚು ಗಾಢವಾದ ಚುಕ್ಕೆಗಳು ಮತ್ತು ಚರ್ಮದ ಮೇಲೆ ಕಂಡುಬರುವ ಗುಲಾಬಿ-ತರಹದ ಗುರುತುಗಳಿಂದ ಆವೃತವಾಗಿವೆ. ಆದರೆ ಜಾಗ್ವಾರ್​ಗಳು ವಿಭಿನ್ನ ಆಂತರಿಕ ಚುಕ್ಕೆಗಳನ್ನು ಹೊಂದಿರುವ ಕಪ್ಪು ಬಣ್ಣದಿಂದ ಕೂಡಿದ ಗುಲಾಬಿ ಆಕೃತಿಯಲ್ಲಿರುತ್ತವೆ.
  • ಜಾಗ್ವಾರ್​ಗಳು ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಆದರೆ ಚಿರತೆಗಳನ್ನು ಆಫ್ರಿಕಾ ಮತ್ತು ಏಷ್ಯಾದಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ.
  • ಚಿರತೆಗೆ ಹೋಲಿಸಿದರೆ ಈ ಜಾಗ್ವಾರ್‌ ಗಾತ್ರದಲ್ಲಿ ತುಂಬಾನೇ ದೊಡ್ಡದು. ಇವು 65ರಿಂದ 140 ತೂಕವನ್ನು ಹೊಂದಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ