AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips : ನಿಮ್ಮ ಸಂಗಾತಿ ಸಣ್ಣ ಪುಟ್ಟ ವಿಷ್ಯಕ್ಕೂ ನಿಮ್ಮ ಮೇಲೆ ಅನುಮಾನ ಪಡ್ತಾರಾ? ಹಾಗಾದ್ರೆ ಈ ರೀತಿ ನಂಬಿಕೆ ಗಳಿಸಿಕೊಳ್ಳಿ

ಪತಿ ಹಾಗೂ ಪತ್ನಿಯರ ನಡುವೆ ಪ್ರೀತಿಯೊಂದಿದ್ದರೆ ಸಾಲದು. ಈ ಸಂಬಂಧವು ಗಟ್ಟಿಯಾಗಬೇಕಾದರೆ ನಂಬಿಕೆ ಬಹಳ ಮುಖ್ಯ.ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ ನಂಬಿಕೆ ಎನ್ನುವುದು ಮುರಿದು ಬೀಳುತ್ತಿದೆ. ಅದರಲ್ಲೂ ಈ ಸಂಬಂಧ ಎಷ್ಟೇ ಮಧುರವಾಗಿದ್ದರೂ ಸಂದೇಹ ಒಮ್ಮೆ ತಲೆಗೆ ಹೊಕ್ಕಿ ಬಿಟ್ಟರೆ ಮುಗಿದೇ ಹೋಯಿತು. ನೀವು ಹೇಗೆ ಇದ್ದರೂ ನಿಮ್ಮ ಸಂಗಾತಿ ನಿಮ್ಮ ಮೇಲೆ ಅನುಮಾನ ಪಡುತ್ತಿದ್ದರೆ ಈ ಕೆಲಸ ಮಾಡುವ ಮೂಲಕ ಅವರ ನಂಬಿಕೆ ಗೆಲ್ಲಬಹುದು. ಈ ಕುರಿತಾದ ಕೆಲವು ಸಲಹೆಗಳು ಇಲ್ಲಿವೆ.

Relationship Tips : ನಿಮ್ಮ ಸಂಗಾತಿ ಸಣ್ಣ ಪುಟ್ಟ ವಿಷ್ಯಕ್ಕೂ ನಿಮ್ಮ ಮೇಲೆ ಅನುಮಾನ ಪಡ್ತಾರಾ? ಹಾಗಾದ್ರೆ ಈ ರೀತಿ ನಂಬಿಕೆ ಗಳಿಸಿಕೊಳ್ಳಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 01, 2025 | 5:32 PM

Share

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ತಿರುವಿನ ಘಟ್ಟ. ಹೀಗಾಗಿ ಪ್ರತಿಯೊಬ್ಬರು ತಮ್ಮ ಜೀವನ ಸಂಗಾತಿ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ನಮ್ಮ ಸುಖ ಕಷ್ಟಗಳಲ್ಲಿ ಭಾಗಿಯಾಗಬೇಕು, ನಮ್ಮನ್ನು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳಬೇಕು ಎನ್ನುವುದಿರುತ್ತದೆ. ಯೋಗ್ಯವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಜೀವನವು ಸುಖಕರವಾಗಿ ಸಾಗಲು ಸಾಧ್ಯ. ಆದರೆ ಕೆಲವೊಮ್ಮೆ ಸಾಂಸಾರಿಕ ಜೀವನದಲ್ಲಿ ಅನುಮಾನವೆಂಬ ಭೂತ ಕಾಡುತ್ತದೆ. ಇದೇ ಎಷ್ಟೋ ಸಲ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಒಂದು ವೇಳೆ ನಿಮ್ಮ ಪತಿ ಅಥವಾ ಪತ್ನಿಯು ನಿಮ್ಮ ನಡವಳಿಕೆ ಮೇಲೆ ಅನುಮಾನ ಹೊಂದಿದರೆ ಈ ರೀತಿ ನಂಬಿಕೆ ಗಳಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ದಾಂಪತ್ಯ ಜೀವನ ಬಹುಬೇಗನೇ ಮುರಿದು ಹೋಗಬಹುದು.

  • ಸಂಗಾತಿಯ ಖಾಸಗಿತನ ಗೌರವಿಸಿ : ಸಾಮಾನ್ಯವಾಗಿ ಪತಿ-ಪತ್ನಿಯ ನಡುವಿನ ಸಂಬಂಧದಲ್ಲಿ ಯಾವುದೇ ಮುಚ್ಚುಮರೆ ಇರಬಾರದು. ಎಲ್ಲವನ್ನು ಹೇಳಿಕೊಳ್ಳ ಬೇಕು ಎಂದು ಹೇಳುತ್ತೇವೆ. ಆದರೆ, ಪ್ರತಿಯೊಂದು ಸಂಬಂಧದಲ್ಲೂ ಖಾಸಗಿತನವು ಇರಲೇಬೇಕು. ಸಂಗಾತಿ ಯಾವಾಗಲೂ ತನ್ನ ಜೊತೆಗೆ ಇರಬೇಕು ಎನ್ನುವುದನ್ನು ಮೊದಲೂ ತಲೆಯಿಂದ ತೆಗೆದು ಬಿಡಿ. ಸಣ್ಣ ಸಣ್ಣ ವಿಷಯವನ್ನು ನಿಮಗೆ ಹೇಳುವುದು ಅನಿವಾರ್ಯವಲ್ಲ.. ಪ್ರತಿಯೊಬ್ಬ ವ್ಯಕ್ತಿಗೂ ಪರ್ಸನಲ್ ಸ್ಪೇಸ್ ಎನ್ನುವುದು ಬೇಕು. ಪರ್ಸನಲ್ ಸ್ಪೇಸ್ ನೀಡದೇ ಇರುವುದು ಕೂಡ ಸಂಬಂಧವನ್ನು ಹಾಳು ಮಾಡುತ್ತದೆ. ಸಂಗಾತಿಯ ಖಾಸಗಿತನ ಗೌರವಿಸುವುದು ಅನುಮಾನದಿಂದ ಮುಕ್ತಿ
  • ಇಬ್ಬರ ನಡುವೆ ಸಂಭಾಷಣೆ ಇರಲಿ : ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ಸಂವಹನ ಬಹಳ ಅಗತ್ಯ. ಆದರೆ ನಿಮ್ಮ ಸಂಗಾತಿ ಮೇಲೆ ನಿಮಗೆ ಅನುಮಾನವಿದ್ದರೆ ಆ ಬಗ್ಗೆ ಮುಕ್ತವಾಗಿ ಮಾತನಾಡಿ ಬಗೆಹರಿಸುವುದು ಮುಖ್ಯ. ನಿಮಗೆ ಯಾಕಾಗಿ ಅನುಮಾನ ಮೂಡಿದೆ. ಏನನ್ನೂ ಹೇಳಲು ಬಯಸುತ್ತಿರಿ ಹಾಗೂ ಏನು ಮಾಡಬಾರದು ಎಂಬುದನ್ನು ನಿಮ್ಮ ಸಂಗಾತಿಗೆ ತಿಳಿಸಿ ಹೇಳಿ. ಇದು ಇಬ್ಬರ ನಡುವಿನ ಅಂತರ ಕಡಿಮೆ ಮಾಡಿ ಅನುಮಾನದಂತಹ ಭೂತವನ್ನು ದೂರವಾಗಿಸುತ್ತದೆ. ಸಂಭಾಷಣೆ ಮಾಡದೇ ಮನಸ್ಸಿನಲ್ಲಿಯೇ ನಾನಾ ರೀತಿಯ ಪ್ರಶ್ನೆಗಳನ್ನು ಇಟ್ಟುಕೊಂಡರೆ ಇದೇ ಮುದೊಂದು ದಿನ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ.
  • ಭಯ ಪಡುವುದು ಬಿಟ್ಟು ಬಿಡಿ : ಸಂಗಾತಿ ತನ್ನನ್ನು ಬಿಟ್ಟು ಹೋಗಬಹುದೆಂಬ ಭಯ ಬಹುತೇಕ ಜನರ ಮನಸ್ಸಿನಲ್ಲಿ ಇರುತ್ತದೆ. ಇದೇ ಕಾರಣಕ್ಕೆ ಸಣ್ಣ ಪುಟ್ಟ ವಿಷ್ಯಕ್ಕೂ ಅನುಮಾನ ಪಡಲು ಶುರು ಮಾಡುತ್ತಾರೆ. ಆದರೆ ತಮ್ಮ ಸಂಗಾತಿಯು ಕಚೇರಿಯ ಸ್ನೇಹಿತ ಅಥವಾ ಸಹೋದ್ಯೋಗಿಯೊಂದಿಗೆ ಆತ್ಮೀಯವಾಗಿ ಮಾತನಾಡಿದರೆ ಸಾಕು ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಅನುಮಾನ ಮೂಡುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಸಂಗಾತಿಯ ಬಳಿ ಈ ಬಗ್ಗೆ ಮಾತನಾಡಿ ಭಯವನ್ನು ದೂರ ಮಾಡಿ. ನಿಮ್ಮ ಪತಿ ಅಥವಾ ಪತ್ನಿಯ ಮೇಲೆ ನಂಬಿಕೆ ಇಟ್ಟರೆ ಸಂಬಂಧವು ಗಟ್ಟಿಯಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ