ನಿಮ್ಮ ಸಂಬಂಧ ಮುರಿದುಬೀಳುತ್ತಿದೆ ಎಂದು ಗೊತ್ತಾಗೋದು ಹೇಗೆ?

ಉತ್ತಮವಾದ ಸಂಬಂಧ ಮುಂದುವರೆಯಬೇಕೆಂದರೆ ಅದಕ್ಕೆ ಇಬ್ಬರೂ ಕಾರಣರಾಗುತ್ತಾರೆ. ಹಾಗೇ, ಆ ಸಂಬಂಧ ಮುರಿಯಲು ಕೂಡ ಇಬ್ಬರೂ ಕಾರಣರಾಗಿರುತ್ತಾರೆ. ಯಾವುದೇ ಒಂದು ಸಂಬಂಧವನ್ನು ನಾವು ಹೇಗೆ ನಿಭಾಯಿಸುತ್ತೇವೆ ಎಂಬುದರ ಆಧಾರದಲ್ಲಿ ಆ ಸಂಬಂಧ ಎಷ್ಟು ದಿನ ಉಳಿಯುತ್ತದೆ ಎಂಬುದು ನಿರ್ಧರಿತವಾಗಿರುತ್ತದೆ.

ನಿಮ್ಮ ಸಂಬಂಧ ಮುರಿದುಬೀಳುತ್ತಿದೆ ಎಂದು ಗೊತ್ತಾಗೋದು ಹೇಗೆ?
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 02, 2024 | 2:42 PM

ಪ್ರತಿಯೊಂದು ಸಂಬಂಧವೂ ವಿಶಿಷ್ಟವಾಗಿರುತ್ತದೆ. ಆ ಸಂಬಂಧವನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬುದು ಮುಖ್ಯ. ಕೆಲವೊಮ್ಮೆ ಗಟ್ಟಿಯಾದ ಸಂಬಂಧಗಳು ಸಹ ಬಿರುಗಾಳಿಗಳನ್ನು ಎದುರಿಸುತ್ತವೆ. ಅದನ್ನು ನಿರ್ಲಕ್ಷ್ಯ ಮಾಡಿದರೆ ನಿಮ್ಮ ಪ್ರೀತಿಯ ಮೇಲೆ ಅದು ಕೆಟ್ಟ ಪರಿಣಾಮ ಬೀರಿ, ಸಂಬಂಧವೇ ಹಳಸಿಹೋಗಬಹುದು. ಹೀಗಾಗಿ, ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುತ್ತಿರುವ ಆರಂಭಿಕ ಚಿಹ್ನೆಗಳನ್ನು ಗುರುತಿಸುವುದು, ಅದನ್ನು ಸರಿಪಡಿಸುವುದು ಬಹಳ ಮುಖ್ಯವಾಗಿದೆ. ಈ ಕೆಳಗಿನ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು, ಜಗಳ ಉಂಟಾದರೆ ನಿಮ್ಮ ಸಂಬಂಧ ಆರೋಗ್ಯಕರವಾಗಿಲ್ಲ ಎಂದು ಅರ್ಥ.

ಸಂಗಾತಿಗಳಿಬ್ಬರೂ ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಮಾತನಾಡದೇ ಇದ್ದಾಗ ಸಮಸ್ಯೆ ಇನ್ನೂ ಜಟಿಲವಾಗುತ್ತಾ ಹೋಗುತ್ತದೆ. ಮುಕ್ತವಾಗಿ ಮಾತನಾಡಿದಾಗ ಅವರ ಮನಸಿನಲ್ಲಿರುವುದು ಏನೆಂಬುದು ಇನ್ನೊಬ್ಬರಿಗೆ ಗೊತ್ತಾಗುತ್ತದೆ, ಆಗ ಅವರು ತಿದ್ದಿಕೊಳ್ಳಲು ಅವಕಾಶಗಳಿರುತ್ತದೆ. ಭಿನ್ನಾಭಿಪ್ರಾಯಗಳು ಯಾವುದೇ ಒಂದು ಸಂಬಂಧದ ಸ್ವಾಭಾವಿಕ ಭಾಗವಾಗಿದ್ದರೂ, ನಿರಂತರವಾದ, ಬಗೆಹರಿಸಲಾಗದ ಘರ್ಷಣೆಗಳು ಆ ಸಂಬಂಧಕ್ಕೆ ಹಾನಿಕಾರಕವಾಗಬಹುದು. ಪ್ರತಿಯೊಂದು ಮಾತುಕತೆಯೂ ವಾದಕ್ಕೆ ತಿರುಗಿದರೆ ಅಥವಾ ನೀವು ಅದೇ ಸಮಸ್ಯೆಗಳನ್ನು ಪರಿಹರಿಸದೆಯೇ ನಿರ್ಲಕ್ಷ್ಯ ತೋರಿದರೆ ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.

ಇದನ್ನೂ ಓದಿ: ಡಯಾಬಿಟಿಸ್​ಗೂ ತುರಿಕೆಗೂ ಏನು ಸಂಬಂಧ?; ಇದನ್ನು ನಿಯಂತ್ರಿಸೋದು ಹೇಗೆ?

ಆರೋಗ್ಯಕರ ಸಂಬಂಧಗಳಲ್ಲಿ ಪಾರ್ಟನರ್​ಗಳು ಪರಸ್ಪರರ ಕನಸುಗಳು, ಆಕಾಂಕ್ಷೆಗಳು ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಬೆಂಬಲಿಸುತ್ತಾರೆ. ನಂಬಿಕೆಯು ಒಂದು ಯಶಸ್ವಿ ಸಂಬಂಧದ ಮೂಲಾಧಾರವಾಗಿದೆ. ಗೌಪ್ಯತೆ, ಅಪ್ರಾಮಾಣಿಕತೆ ಅಥವಾ ನಿರಂತರ ಅನುಮಾನವು ನಿಮ್ಮ ಕ್ರಿಯಾತ್ಮಕತೆಯ ಭಾಗವಾಗಿದ್ದರೆ ಅದು ನಂಬಿಕೆಯ ಕುಸಿತಕ್ಕೆ ಕಾರಣವಾಗಬಹುದು. ಹೀಗಾಗಿ, ನಂಬಿಕೆಯನ್ನು ಉಳಿಸಿಕೊಳ್ಳಲು ಇಬ್ಬರೂ ಪ್ರಯತ್ನಿಸಬೇಕು.

ಇದನ್ನೂ ಓದಿ: ವಿಚ್ಛೇದನದ ಯೋಚನೆ ಮಾಡುವ ದಂಪತಿ ಈ ವಿಷಯವನ್ನೆಂದೂ ಮರೆಯಬೇಡಿ

ದಂಪತಿಗಳು ಒಟ್ಟಿಗೆ ಭವಿಷ್ಯದ ಬಗ್ಗೆ ಕನಸು ಕಾಣುವುದು ಸಹಜ. ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳನ್ನು ಹಂಚಿಕೊಳ್ಳುವುದು ಕೂಡ ಸಹಜ. ಆದರೆ, ಭವಿಷ್ಯದ ಕುರಿತಾದ ಸಂಭಾಷಣೆಗಳು ಅಹಿತಕರವಾದಾಗ ಅಥವಾ ಸಂಪೂರ್ಣವಾಗಿ ವಾದಕ್ಕೆ ಇಳಿದಾಗ ಯಾರಾದರೂ ಒಬ್ಬರು ಸುಮ್ಮನಾಗಬೇಕು. ಅಥವಾ ಅಂದುಕೊಂಡಂತೆ ಭವಿಷ್ಯದ ಪ್ಲಾನ್ ಮಾಡಲು ಬದ್ಧರಾಗಿರಬೇಕು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್