ಸ್ಥೂಲಕಾಯವು ಅನೇಕ ರೋಗಗಳ ಮೂಲವಾಗಿದ್ದು, ದೇಹದಲ್ಲಿ ಅನೇಕ ರೋಗಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಆರೋಗ್ಯ ಪ್ರಜ್ಞೆಯುಳ್ಳವರು ಸ್ಥೂಲಕಾಯ (obesity) ವನ್ನು ಕಡಿಮೆ ಮಾಡಲು ಆಹಾರದಲ್ಲಿ ಪಥ್ಯ ಮಾಡುತ್ತಾರೆ. ನೀವು ಸ್ಥೂಲಕಾಯವನ್ನು ಕಡಿಮೆ ಮಾಡಲು ಬಯಸುವುದಾದರೆ ಮೊದಲು ಅನ್ನವನ್ನು ತಿನ್ನುವುದನ್ನು ಬಿಡಬೇಕಾಗುತ್ತದೆ. ಹಾಗಾದರೆ ಅನ್ನ ತಿನ್ನುವುದರಿಂದ ಬೊಜ್ಜು ಹೆಚ್ಚುತ್ತದೆಯೇ? ಎಂಬ ಪ್ರಶ್ನೆ ನಿಮ್ಮಲ್ಲಿ ಉಂಟಾಗಬಹುದು. ಅದಕ್ಕೆ ಉತ್ತರ ಈ ಲೇಖದಲ್ಲಿದೆ ಮುಂದೆ ಓದಿ. ಅನ್ನ ತಿಂದ ಮಾತ್ರಕ್ಕೆ ಬೊಜ್ಜು ಹೆಚ್ಚುತ್ತದೆ ಎಂದಲ್ಲವೆಂದು ಹಿರಿಯ ಆಹಾರ ತಜ್ಞೆ ಅನಿಕಾ ಬಗ್ಗಾ ಹೇಳುತ್ತಾರೆ. ಸ್ಥೂಲಕಾಯವನ್ನು ಹೆಚ್ಚಿಸಲು ಇತರೆ ಕಾರಣಗಳೂ ಇರಬಹುದು ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿಯೂ ಕಂಡುಬಂದಿದೆ. ಅನ್ನ ಸ್ಥೂಲಕಾಯವನ್ನು ಹೆಚ್ಚಿಸುವುದಿಲ್ಲ, ಏಕೆಂದರೆ ಅನ್ನದಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಿರುತ್ತದೆ. ಒಂದು ಕಪ್ ಅನ್ನವು ಮಧ್ಯಮ ಗಾತ್ರದ ರೊಟ್ಟಿಯಂತೆ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ ಎನ್ನುತ್ತಾರೆ.
ಸಂಶೋಧನೆ ಏನು ಹೇಳುತ್ತದೆ:
ಒಂದು ಕಪ್ ಅನ್ನ ಸೇವನೆಯನ್ನು ಹೆಚ್ಚಿಸಿದರೂ, ಜಾಗತಿಕ ಬೊಜ್ಜಿನ ಪ್ರಮಾಣವು ಕೇವಲ ಒಂದು ಪ್ರತಿಶತದಷ್ಟು ಹೆಚ್ಚಾಗಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಇದಕ್ಕೆ ಕಾರಣವೆಂದರೆ ಅನ್ನವನ್ನು ತಿನ್ನುವುದರಿಂದ ಅನ್ನದಲ್ಲಿರುವ ಪೌಷ್ಟಿಕಾಂಶದ ಅಂಶಗಳಾದ ಫೈಬರ್, ಪೋಷಕಾಂಶಗಳು ಒಬ್ಬ ವ್ಯಕ್ತಿಯ ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ ಮತ್ತು ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಹಾಗಾಗಿ ಇದು ತೂಕ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅನ್ನದಲ್ಲಿ ಕೊಬ್ಬಿನಂಶ ಕಡಿಮೆಯಿದ್ದು, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಇನ್ಸುಲಿನ್ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ಕೂಡ ತೂಕ ಹೆಚ್ಚಾಗದಿರಲು ಮುಖ್ಯ ಕಾರಣವಾಗಿದೆ.
ಅನ್ನದಲ್ಲಿ ಯಾವೆಲ್ಲ ಪೋಷಕಾಂಶಗಳಿವೆ:
ಅನ್ನದಲ್ಲಿ ಮುಖ್ಯವಾಗಿ ಬಿಳಿ ಮತ್ತು ಕಂದು ಎಂಬ ಎರಡು ವಿಧಗಳಿವೆ. ಪೌಷ್ಠಿಕಾಂಶದ ಬಗ್ಗೆ ಹೇಳುವುದಾದರೆ, ಸುಮಾರು 186 ಗ್ರಾಂ ಬಿಳಿ ಬೇಯಿಸಿದ ಅನ್ನವು 242 ಕೆ.ಕೆ.ಎಲ್, 4.43 ಗ್ರಾಂ ಪ್ರೋಟೀನ್, .39 ಗ್ರಾಂ ಕೊಬ್ಬು, 53.2 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು .56 ಗ್ರಾಂ ಫೈಬರ್ನ್ನು ಹೊಂದಿರುತ್ತದೆ. ಇದಲ್ಲದೆ, ಈ ಅನ್ನದಲ್ಲಿ ಸ್ವಲ್ಪ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ಇರುತ್ತವೆ. ಆದರೆ ಬೇಯಿಸಿದ ಬ್ರೌನ್ ರೈಸ್ 248 kcal, 5.54 ಗ್ರಾಂ ಪ್ರೋಟೀನ್, 2 ಗ್ರಾಂ ಕೊಬ್ಬು, 51 ಗ್ರಾಂ ಕಾರ್ಬೋಹೈಡ್ರೇಟ್, 3.2 ಗ್ರಾಂ ಫೈಬರ್, ಫೋಲೇಟ್, ಕಬ್ಬಿಣ ಮತ್ತು ಇತರೆ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಹೆಚ್ಚು ಅನ್ನವನ್ನು ತಿನ್ನುವವರಲ್ಲಿ ತೂಕ ಹೆಚ್ಚಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಬ್ರೌನ್ ಅನ್ನ ತಿನ್ನುವುದು ಹೆಚ್ಚು ಆರೋಗ್ಯಕರವಾದರೂ.
ಅನ್ನವನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅನ್ನದ ಪ್ರಕಾರವು ಆರೋಗ್ಯಕರವಾಗಿದೆ ಎಂಬುದನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ. ಕಡಿಮೆ ಸಂಸ್ಕರಿಸಿದ ಅಕ್ಕಿಯನ್ನು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ‘ವೂಟ್ ಸೆಲೆಕ್ಟ್’ ಮೂಲಕ ನೇರವಾಗಿ ರಿಲೀಸ್ ಆಗಲಿದೆ ‘ಡಿಯರ್ ವಿಕ್ರಮ್’; ಗಮನ ಸೆಳೆದ ಟ್ರೇಲರ್