‘ವೂಟ್ ಸೆಲೆಕ್ಟ್​’ ಮೂಲಕ ನೇರವಾಗಿ ರಿಲೀಸ್​ ಆಗಲಿದೆ ‘ಡಿಯರ್​ ವಿಕ್ರಮ್​’; ಗಮನ ಸೆಳೆದ ಟ್ರೇಲರ್​

Sathish Ninasam | Shraddha Srinath: ಪ್ರೇಕ್ಷಕರ ಮನದಲ್ಲಿ ‘ಡಿಯರ್​ ವಿಕ್ರಮ್​’ ಸಿನಿಮಾದ ಬಗ್ಗೆ ಕುತೂಹಲ ಮೂಡಿಸುವಲ್ಲಿ ಈ ಟ್ರೇಲರ್​ ಯಶಸ್ವಿ ಆಗಿದೆ. ಜೂನ್​ 30ರಂದು ‘ವೂಟ್​ ಸೆಲೆಕ್ಟ್’​ ಒಟಿಟಿಯಲ್ಲಿ ಈ ಚಿತ್ರ ಸ್ಟ್ರೀಮಿಂಗ್​ ಆರಂಭಿಸಲಿದೆ.​

‘ವೂಟ್ ಸೆಲೆಕ್ಟ್​’ ಮೂಲಕ ನೇರವಾಗಿ ರಿಲೀಸ್​ ಆಗಲಿದೆ ‘ಡಿಯರ್​ ವಿಕ್ರಮ್​’; ಗಮನ ಸೆಳೆದ ಟ್ರೇಲರ್​
‘ಡಿಯರ್ ವಿಕ್ರಮ್’ ಸಿನಿಮಾದ ಸುದ್ದಿಗೋಷ್ಠಿ
Follow us
TV9 Web
| Updated By: ಮದನ್​ ಕುಮಾರ್​

Updated on: Jun 25, 2022 | 7:15 AM

ನಟ ಸತೀಶ್​ ನೀನಾಸಂ (Sathish Ninasam) ಅವರು ಮೊದಲಿನಿಂದಲೂ ಭಿನ್ನವಾದ ಕಥಾಹಂದರಗಳ ಸಿನಿಮಾ ಒಪ್ಪಿಕೊಳ್ಳುತ್ತಲೇ ಬರುತ್ತಿದ್ದಾರೆ. ಅದೇ ಪ್ರಕಾರಕ್ಕೆ ಸೇರುವ ಚಿತ್ರ ‘ಡಿಯರ್​ ವಿಕ್ರಮ್​’. ಈ ಮೊದಲು ‘ಗೋದ್ರಾ’ ಎಂದಿದ್ದ ಈ ಸಿನಿಮಾದ ಶೀರ್ಷಿಕೆಯನ್ನು ಇತ್ತೀಚೆಗೆ ‘ಡಿಯರ್​ ವಿಕ್ರಮ್​’ (Dear Vikram) ಎಂದು ಬದಲಾಯಿಸಲಾಯಿತು. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು. ಆದರೆ ಚಿತ್ರಮಂದಿರದಲ್ಲಿ ಅಲ್ಲ. ಬದಲಿಗೆ, ನೇರವಾಗಿ ಒಟಿಟಿ ಮೂಲಕ ರಿಲೀಸ್​ ಮಾಡಲು ನಿರ್ಧರಿಸಲಾಗಿದೆ. ಜೂನ್​ 30ರಿಂದ ಈ ಸಿನಿಮಾ ‘ವೂಟ್​ ಸೆಲೆಕ್ಟ್​’ನಲ್ಲಿ (Voot Select) ವೀಕ್ಷಣೆಗೆ ಲಭ್ಯವಾಗಲಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ಸಿನಿಮಾಗೆ ಶ್ರದ್ಧಾ ಶ್ರೀನಾಥ್​ ನಾಯಕಿ.

ಒಂದಷ್ಟು ದಿನಗಳ ಹಿಂದೆ ‘ಡಿಯರ್ ವಿಕ್ರಮ್​’ ಸಿನಿಮಾ ಟೀಸರ್​ ಮೂಲಕ ಗಮನ ಸೆಳೆದಿತ್ತು. ಈಗ ಟ್ರೇಲರ್ ಕೂಡ ಅನಾವರಣ ಆಗಿದ್ದು, ಚಿತ್ರದ ಬಗ್ಗೆ ಇನ್ನಷ್ಟು ವಿವರಗಳು ತೆರೆದುಕೊಂಡಿವೆ. ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವಲ್ಲಿ ಈ ಟ್ರೇಲರ್​ ಯಶಸ್ವಿ ಆಗಿದೆ. ಇದು ಮಾಮೂಲಿ ನಾಯಕ-ನಾಯಕಿ ನಡುವಿನ ಲವ್​ ಸ್ಟೋರಿ ಅಲ್ಲ. ಕೇವಲ ವಿಲನ್​ ಜೊತೆಗಿನ ನಾಯಕನ ಹೊಡಿಬಡಿ ಕಹಾನಿ ಅಲ್ಲ. ಸಮಾಜದ ಕೆಲವು ಗಂಭೀರ ವಿಚಾರಗಳ ಕುರಿತಾದ ಸಿನಿಮಾ ಎಂಬುದು ಟ್ರೇಲರ್​ನಿಂದ ತಿಳಿದುಬಂದಿದೆ.

ಇದನ್ನು ಕ್ರಾಂತಿಕಾರಿಯೊಬ್ಬನ ಪ್ರೇಮಕತೆಯನ್ನು ಒಳಗೊಂಡ ಸಿನಿಮಾ ಎನ್ನಬಹುದು. ಸತೀಶ್​ ನೀನಾಸಂ ಅವರ ವೃತ್ತಿಜೀವನದಲ್ಲಿ ನೇರವಾಗಿ ಒಟಿಟಿಯಲ್ಲಿ ತೆರೆಕಾಣುತ್ತಿರುವ ಮೊದಲ ಸಿನಿಮಾ ಇದು. ಜೇಕಬ್ ವರ್ಗೀಸ್ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಕೆ.ಎಸ್. ನಂದೀಶ್ ಅವರು ‘ಡಿಯರ್ ವಿಕ್ರಮ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಭಟ್ಕಳ, ಕರ್ನೂಲ್ ಹಾಗೂ ಮಲೇಷ್ಯಾದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಇದನ್ನೂ ಓದಿ
Image
Bhool Bhulaiyaa 2: ಒಟಿಟಿಗೆ ಬರ್ತಿದೆ ‘ಭೂಲ್​ ಭುಲಯ್ಯ 2’; ಕಾರ್ತಿಕ್​ ಆರ್ಯನ್​ ಫ್ಯಾನ್ಸ್​ಗೆ ಸಿಹಿ ಸುದ್ದಿ​ ನೀಡಿದ ನೆಟ್​ಫ್ಲಿಕ್ಸ್​
Image
ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ
Image
‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ
Image
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?

ಸತೀಶ್​ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್​ ಮಾತ್ರವಲ್ಲದೇ ವಸಿಷ್ಠ ಸಿಂಹ, ಸೋನು ಗೌಡ, ಅಚ್ಯುತ್ ಕುಮಾರ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರೆಲ್ಲರ ನಟನೆಯಿಂದಾಗಿ ಸಿನಿಮಾದ ಪಾತ್ರವರ್ಗ ಬಲವಾಗಿದೆ. ‘ವಾಸ್ತವವನ್ನು ಬಣ್ಣದ ಕನ್ನಡಕದೊಳಗಿನಿಂದ ಮಾತ್ರ ನೋಡಿ ಬೆಳೆದ ಹುಡುಗಿಯ ಪಾತ್ರ ನನ್ನದು. ಇಂಥ ಡಿಫರೆಂಟ್​ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ ಶ್ರದ್ಧಾ ಶ್ರೀನಾಥ್​.

ಇದನ್ನೂ ಓದಿ: ಕೆಲವೊಮ್ಮೆ ರೈತರ ಪರವಾಗಿ ನಿಂತರೂ ವಿಲನ್​ ಆಗುತ್ತೇವೆ; ಸತೀಶ್​ ನೀನಾಸಂ ನೇರ ಮಾತು

ಹೇಗಿದೆ ಸತೀಶ್​ ನೀನಾಸಂ ತಮಿಳು ಸಿನಿಮಾ ಲುಕ್​?; ರಮ್ಯಾ ರಿಲೀಸ್​ ಮಾಡಿದ್ರು ಪೋಸ್ಟರ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ