Rice for Breakfast: ಬೆಳಗಿನ ಉಪಾಹಾರಕ್ಕೆ ಅನ್ನ ತಿನ್ನಬಹುದೇ? ತಜ್ಞರು ಹೇಳುವುದೇನು?

ಬೆಳಗಿನ ತಿಂಡಿಗೆ ಅನ್ನ ತಿನ್ನಬಹುದೇ? ಅನ್ನ ತಿಂದರೆ ಏನಾಗುತ್ತದೆ? ಅನೇಕರಿಗೆ ಈ ಸಂದೇಹವಿದೆ. ಮನೆಯ ಹಿರಿಯರು ಈಗಲೂ ಕೂಡ ಬೆಳಗಿನ ಉಪಾಹಾರಕ್ಕೆ ಗಂಜಿ ಅನ್ನ, ಮಜ್ಜಿಗೆ ಅನ್ನ ತಿನ್ನುತ್ತಾರೆ. ಆದ್ದರಿಂದ ಬೆಳಗಿನ ಉಪಹಾರಕ್ಕೆ ಅನ್ನ ತಿನ್ನುವುದರಿಂದ ಸಿಗುವ ಲಾಭವೇನು? ಹಾಗೂ ಬೆಳಗ್ಗೆ ಅನ್ನ ತಿನ್ನುವುದರಿಂದಾಗುವ ಅಡ್ಡ ಪರಿಣಾಮಗಳಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Rice for Breakfast: ಬೆಳಗಿನ ಉಪಾಹಾರಕ್ಕೆ  ಅನ್ನ ತಿನ್ನಬಹುದೇ? ತಜ್ಞರು ಹೇಳುವುದೇನು?
Rice for Breakfast

Updated on: Dec 12, 2023 | 2:47 PM

ಬೆಳಗಿನ ತಿಂಡಿಗೆ ಕೆಲವರು ದೋಸೆ,ಇಡ್ಲಿ ತಿನ್ನಲು ಬಯಸಿದರೆ, ಕೆಲವೊಂದಿಷ್ಟು ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ಮನೆಗಳಲ್ಲಿ ಈಗಲೂ ಕೂಡ ಮನೆಯ ಹಿರಿಯರು ಬೆಳಗಿನ ಉಪಾಹಾರಕ್ಕೆ ಗಂಜಿ ಅನ್ನ, ಮಜ್ಜಿಗೆ ಅನ್ನ ತಿನ್ನುತ್ತಾರೆ. ಬೆಳಗಿನ ತಿಂಡಿಗೆ ಅನ್ನ ತಿನ್ನಬಹುದೇ? ಅನ್ನ ತಿಂದರೆ ಏನಾಗುತ್ತದೆ? ಅನೇಕರಿಗೆ ಈ ಸಂದೇಹವಿದೆ. ಆದರೆ ಬೆಳಗಿನ ಉಪಾಹಾರಕ್ಕೆ ಅನ್ನ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಅನ್ನ ದೇಹಕ್ಕೆ ಶಕ್ತಿ ನೀಡುತ್ತದೆ ಹಾಗೂ ದಿನ ಪೂರ್ತಿ ಕ್ರಿಯಾಶೀಲವಾಗಿರಿಸುತ್ತದೆ. ಬೀನ್ಸ್, ಕ್ಯಾರೆಟ್, ಪಾಲಕ್ ಮತ್ತು ಬಟಾಣಿಗಳಂತಹ ತರಕಾರಿಗಳನ್ನು ಸೇರಿಸಿ ಅನ್ನ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ.

ಮಧುಮೇಹದ ಹೆಚ್ಚಿದ ಅಪಾಯ:

ಬೆಳಗಿನ ಉಪಾಹಾರಕ್ಕೆ ಅನ್ನ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು. ಇದು ನೀವು ಆಯ್ಕೆ ಮಾಡುವ ಅಕ್ಕಿಯನ್ನು ಅವಲಂಬಿಸಿರುತ್ತದೆ. ಅಲ್ಲದೆ, ವಿನೆಗರ್ ಅಥವಾ ತೆಂಗಿನ ಎಣ್ಣೆಯಿಂದ ಮಾಡಿದ ಅನ್ನವನ್ನು ತಿನ್ನುವುದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಸಾಧ್ಯತೆಯಿದೆ. ಹಾಗಾಗಿ ಮುಂಜಾನೆ ಅನ್ನ ತಿನ್ನಬೇಕೆಂದಿದ್ದರೆ ಹಿತಮಿತವಾಗಿ ತಿನ್ನುವುದು ಒಳ್ಳೆಯದು.

ತೂಕ ಹೆಚ್ಚಾಗಬಹುದು:

ಹಾಗೆಯೇ ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಾಹಾರಕ್ಕೆ ಅನ್ನವನ್ನು ತೆಗೆದುಕೊಳ್ಳಬಾರದು. ಮಿತವಾಗಿ ತಿಂದರೆ ಕ್ಷೇಮ, ಹೆಚ್ಚು ತಿಂದರೆ ತೂಕ ಹೆಚ್ಚುತ್ತದೆ. ಏಕೆಂದರೆ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುತ್ತದೆ.  ಏಕೆಂದರೆ ಅಕ್ಕಿ ಕಡಿಮೆ ಕೊಬ್ಬು, ಸಕ್ಕರೆ ಮತ್ತು ಸೋಡಿಯಂ ಆಹಾರವಾಗಿದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಕಡಿಮೆ ಪ್ರಮಾಣದಲ್ಲಿ ಅನ್ನವನ್ನು ಸೇವಿಸಬಹುದು.

ಇದನ್ನೂ ಓದಿ: ಪ್ರತಿದಿನ ಬೆಳಿಗ್ಗೆ ಈ ಚಹಾ ಕುಡಿಯುವುದರಿಂದ ಮಧುಮೇಹವನ್ನು ತಡೆಯಬಹುದು

ಜೀರ್ಣಕ್ರಿಯೆಗೆ ಒಳ್ಳೆಯದು:

ಬೆಳಗಿನ ಉಪಾಹಾರಕ್ಕೆ ಅನ್ನ ತಿನ್ನುವುದು ಜೀರ್ಣಕ್ರಿಯೆಯ ಆರೋಗ್ಯಕ್ಕೆ ಒಳ್ಳೆಯದು. ಇದಲ್ಲದೆ, ಇದು ಸುಲಭವಾಗಿ ಜೀರ್ಣವಾಗುತ್ತದೆ. ಇದು ಅತಿಸಾರದ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಇದು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಿತವಾಗಿ ತೆಗೆದುಕೊಳ್ಳುವುದು ಉತ್ತಮ:

ಯಾವುದೇ ಅನುಮಾನವಿಲ್ಲದೆ ಅನ್ನವನ್ನು ಉಪಹಾರವಾಗಿ ತೆಗೆದುಕೊಳ್ಳಬಹುದು ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಡಿ. ಅನ್ನ ಮಿತವಾಗಿ ತೆಗೆದುಕೊಂಡರೆ ತುಂಬಾ ಒಳ್ಳೆಯದು. ಆದರೆ ಬೆಳಗ್ಗೆ ಮತ್ತು ಮಧ್ಯಾಹ್ನ ಅನ್ನ ತಿನ್ನುವವರು ರಾತ್ರಿಯೂ ಅನ್ನ ತಿನ್ನುವುದನ್ನು ತಪ್ಪಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: