ಭಾರತೀಯ ಸಿಹಿ ಖಾದ್ಯಗಳ ಪಟ್ಟಿಯಲ್ಲಿ ಪಾಯಸ(Kheer) ಅತ್ಯಂತ ಸುಲಭ ಹಾಗೂ ಜನಪ್ರಿಯ ಪಾಕವಾಗಿದೆ. ಇದು ಉತ್ತಮ ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಕಾರಿಯಾಗಿದೆ. ಇದರಲ್ಲಿ ಬಳಸುವ ಧವಸ ಧಾನ್ಯಗಳು, ಹಣ್ಣು ತರಕಾರಿಗಳು ನಿಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಸಾಂಪ್ರದಾಯಿಕವಾಗಿ ಹಾಲು, ಸಕ್ಕರೆ ಮತ್ತು ಕೆಲವು ಒಣ ಹಣ್ಣುಗಳೊಂದಿಗೆ ತಯಾರಿಸಲಾಗುತ್ತದೆ. ಜೊತೆಗೆ ಕೇಸರಿ, ಏಲಕ್ಕಿ, ಜಾಯಿಕಾಯಿ, ಇತ್ಯಾದಿ ಕೆಲವು ಮಸಾಲೆಗಳು ಮತ್ತು ರೋಸ್ ವಾಟರ್ ಕೂಡ ಬಳಸಲಾಗುತ್ತದೆ.
1/4 ಕಪ್ ಅಕ್ಕಿ
1ಲೀಟರ್ ಹಾಲು
1 ಚಮಚ ಕೇಸರಿ
5 ರಿಂದ 6 ಟೇಬಲ್ ಸ್ಪೂನ್ ಸಕ್ಕರೆ
ಒಂದು ಟೀ ಚಮಚ ಏಲಕ್ಕಿ ಪುಡಿ
1 ಚಮಚ ಬಾದಾಮಿ, ಗೋಡಂಬಿ, ಪಿಸ್ತಾ
1 ಚಮಚ ರೋಸ್ ವಾಟರ್
1/4 ಕಪ್ ಬಾಸ್ಮತಿ ಅಕ್ಕಿಯನ್ನು ನೀರಿನಲ್ಲಿ ಒಂದೆರಡು ಬಾರಿ ತೊಳೆಯಿರಿ ಮತ್ತು ನಂತರ 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಪ್ಯಾನ್ ಅಥವಾ ಕಡಾಯಿ ತೆಗೆದುಕೊಂಡು ಅದಕ್ಕೆ 1-ಲೀಟರ್ ಹಾಲನ್ನು ಹಾಕಿ ಬಿಸಿ ಮಾಡಿ. ಕುದಿಯುತ್ತಿರುವ ಹಾಲಿನಿಂದ ಒಂದು ಚಮಚ ಹಾಲು ತೆಗೆದುಕೊಂಡು ಒಂದು ಚಿಕ್ಕ ಬೌಲ್ಗೆ ಹಾಕಿ ಮತ್ತು ಅದಕ್ಕೆ ಕೇಸರಿ ಹಾಕಿ.
ಈಗಾಗಲೇ ನೆನೆಸಿಟ್ಟ ಅಕ್ಕಿಯಿಂದ ನೀರನ್ನು ತೆಗೆದು ಕುದಿಯುತ್ತಿರುವ ಹಾಲಿಗೆ ಹಾಕಿ. ಇದನ್ನು ಮಧ್ಯಮ ಹುರಿಯಲ್ಲಿಟ್ಟು ಕೈಯಾಡಿಸುತ್ತಾ ಇರಿ. ಇಲ್ಲದಿದ್ದರೆ ಇದು ಪಾತ್ರೆಯ ತಳ ಹಿಡಿಯುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಗರ್ಭಿಣಿಯರು ಯಾವ ರೀತಿಯ ಆಹಾರ ಸೇವಿಸಬೇಕು, ಇಲ್ಲಿದೆ ಮಾಹಿತಿ
ಅಕ್ಕಿ ಬೇಯುತ್ತಾ ಬಂದ ಹಾಗೇ ಅದಕ್ಕೆ 5 ರಿಂದ 6 ಟೇಬಲ್ ಸ್ಪೂನ್ ಸಕ್ಕರೆಯನ್ನು ಸೇರಿಸಿ. ಇದನ್ನು ಇನ್ನೂ ಸ್ವಲ್ಪ ಹೊತ್ತು ಹಾಗೆಯೇ ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಇದಕ್ಕೆ ಒಂದು ಟೀ ಚಮಚ ಏಲಕ್ಕಿ ಪುಡಿ ಸೇರಿಸಿ. ನಂತರ 1 ಚಮಚ ಬಾದಾಮಿ, ಗೋಡಂಬಿ, ಪಿಸ್ತಾ ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
ಈಗ ಇದಕ್ಕೆ ಆಗಲೇ ತೆಗೆದಿಟ್ಟ ಕೇಸರಿ ಹಾಲು ಸೇರಿಸಿ. ನಂತರ ಕೊನೆಯದಾಗಿ ರೋಸ್ ವಾಟರ್ ಸೇರಿಸಿ. ಈಗ ಅಕ್ಕಿ ಪಾಯಾಸ ಸಿದ್ದವಾಗಿದೆ. ಈಗ ಸರ್ವಿಂಗ್ ಬೌಲ್‌ಗಳಲ್ಲಿ ಅಕ್ಕಿ ಪಾಯಸವನ್ನು ಸುರಿಯಿರಿ ಮತ್ತು ಬಿಸಿಯಾಗಿ ಸವಿಯಿರಿ. ಉತ್ತಮ ಸುವಾಸನೆಯೊಂದಿಗೆ ರುಚಿಯಂತೂ ಅಧ್ಭುತ. ಉಳಿದ ಅಕ್ಕಿ ಪಾಯಸವನ್ನು ಫ್ರಿಜ್ನಲ್ಲಿ ಇರಿಸಿ. ಇದನ್ನು 2 ದಿನಗಳ ವರೆಗೆ ಸೇವಿಸಬಹುದಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:20 pm, Tue, 3 January 23