
ಕೆಲವೊಂದು ಹೆಸರುಗಳು ಶ್ವಾಶತ ಅದನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಸಾಧ್ಯವಿಲ್ಲ.ಅದರಲ್ಲೂ ಈ ತಿಂಡಿ ವಿಚಾರದಲ್ಲಿ ಇದನ್ನು ಮಾಡಲು ಸಾಧ್ಯವೇ ಇಲ್ಲ. ಹೌದು ಇತ್ತೀಚೆಗ ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿಯ ನಂತರ ಭಾರತ ಸೇನೆ ಆಪರೇಷನ್ ಸಿಂಧೂರ್ ಮೂಲಕ ಪಾಕ್ಗೆ ತಕ್ಕ ಉತ್ತರ ನೀಡಿತ್ತು. ಇದಕ್ಕೆ ರಾಜಸ್ಥಾನದ ಜೈಪುರದಲ್ಲಿರುವ ಅಂಗಡಿಗಳು ಪ್ರಸಿದ್ಧ ವಿವಿಧ ಸಿಹಿತಿಂಡಿಗಳ ಹೆಸರನ್ನು ಬದಲಾಯಿಸಿವೆ. ಬೇಕರಿಯೊಂದರಲ್ಲಿ ಎಲ್ಲಾ ಸಿಹಿತಿಂಡಿಗಳ ಹೆಸರುಗಳಿಂದ ‘ಪಾಕ್’ ಪದವನ್ನು ತೆಗೆದುಹಾಕಿ, ಅದಕ್ಕೆ ಶ್ರೀ ಎಂದು ಹೆಸರಿಸಲಾಗಿತ್ತು. ಅದರಲ್ಲೊಂದು ಮೈಸೂರಿನ ಮೈಸೂರು ಪಾಕ್. ಮೈಸೂರು ಪಾಕ್ನ್ನು ‘ಮೈಸೂರು ಶ್ರೀ’ ( mysore shree) ಎಂದು ಮರುನಾಮಕರಣ ಮಾಡಲಾಗಿದೆ. ಆದರೆ ಈ ಬದಲಾವಣೆ ಭಾರೀ ಅಕ್ರೋಶ ಕಾರಣವಾಗಿದೆ. ಮೈಸೂರು ಪಾಕ್ (mysore pak) ಎಂಬ ಹೆಸರನ್ನು ಮೈಸೂರಿನ ರಾಜ 4ನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ಈ ಹೆಸರನ್ನು ಇಡಲಾಗಿತ್ತು. ಇದೀಗ ಈ ಹೆಸರನ್ನು ಬದಲಾವಣೆ ಮಾಡಿರುವ ಬಗ್ಗೆ ರಾಜ ಕಾಲದಿಂದಲ್ಲೂ ರಾಜಮನೆತನದಲ್ಲಿ ಅಡುಗೆ ಮಾಡಿಕೊಂಡು ಬರುತ್ತಿದ್ದ ವಂಶಸ್ಥರಾದ ಎಸ್. ನಟರಾಜ್ ಅವರು ಮೈಸೂರ್ ಪಾಕ್ ಹೆಸರನ್ನು ಬದಲಾವಣೆ ಮಾಡಬೇಡಿ ಎಂದು ಹೇಳಿದ್ದಾರೆ. ಈ ಬಗ್ಗೆ ಎನ್ಡಿ ಟಿವಿ ವರದಿ ಮಾಡಿದೆ.
ನಮ್ಮ ಪೂರ್ವಜರು ನೀಡಿದ ಈ ಆವಿಷ್ಕಾರಕ್ಕೆ ಬೇರೆ ಯಾವುದೇ ಹೆಸರಿಲ್ಲ, ಪ್ರತಿಯೊಂದು ಸ್ಮಾರಕ ಅಥವಾ ಸಂಪ್ರದಾಯವು ತನ್ನದೇ ಆದ ಹೆಸರನ್ನು ಹೊಂದಿರುವಂತೆಯೇ, ಮೈಸೂರು ಪಾಕ್ ಕೂಡ ಹೊಂದಿದೆ. ಅದನ್ನು ಬದಲಾಯಿಸಬಾರದು ಎಂದು ಹೇಳಿದ್ದಾರೆ. ಇನ್ನು ಈ ಮೈಸೂರು ಪಾಕ್ ಎಂಬ ಹೆಸರು ಹೇಗೆ ಬಂದಿದೆ ಎಂಬುದನ್ನು ವಿವರಿಸಿದ್ದಾರೆ. ಕನ್ನಡದಲ್ಲಿ ಪಾಕ ಎಂಬ ಪದವು ಸಕ್ಕರೆಯ ಸಿಹಿಯಾದ ಪಾಕವನ್ನು ಸೂಚಿಸುತ್ತದೆ. ಇದನ್ನು ಮೈಸೂರಿನಲ್ಲಿ ತಯಾರಿಸಲಾಗಿರುವುದರಿಂದ, ಇದನ್ನು ಮೈಸೂರು ಪಾಕ್ ಎಂದು ಕರೆಯಲಾಯಿತು. ಹಾಗಾಗಿ ಇದನ್ನು ಬೇರೆ ಹೆಸರಿನಿಂದ ಕರೆಯುವಂತಿಲ್ಲ ಎಂದು ಹೇಳಿದ್ದಾರೆ. ಮೂಲ ಹೆಸರನ್ನು ಉಳಿಸಿಕೊಳ್ಳುವ ಬಗ್ಗೆ ಒತ್ತಿ ಹೇಳಿದ್ದಾರೆ.
ನೀವು ಜಗತ್ತಿನ ಎಲ್ಲೇ ಹೋದರೂ, ಮೈಸೂರು ಪಾಕ್ನ್ನು ಮೈಸೂರ್ ಪಾಕ್ ಎಂದೇ ಗುರುತಿಸುತ್ತಾರೆಯೇ ಹೊರತು. ಇದನ್ನು ಬೇರೆ ಹೆಸರಿನಿಂದ ಗುರುತಿಸುವುದಿಲ್ಲ. ಹಾಗಾಗಿ ಇದರ ಹೆಸರನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಪ್ರಸಿದ್ಧ ಗುರು ಸ್ವೀಟ್ಸ್ ಕುಟುಂಬವನ್ನು ಇಂದಿಗೂ ಅಲ್ಲಿನ ಜನ ಗೌರವದಿಂದ ಕಾಣುತ್ತಾರೆ. ಏಕೆಂದರೆ ಮೈಸೂರು ಪಾಕ್ನ್ನು ನೀಡಿದ ಅಂಗಡಿ ಅದು, ಈಗ ಐದನೇ ತಲೆಮಾರಿನಲ್ಲಿರುವ ಈ ಅಂಗಡಿಯನ್ನು ಮೂಲತಃ ನಟರಾಜ್ ಅವರ ಮುತ್ತಜ್ಜ ನಡೆಸುತ್ತಿದ್ದರು. ಅವರು ಮೊದಲ ಬಾರಿ ರಾಜಮನೆತಕ್ಕೆ ಈ ಮೈಸೂರು ಪಾಕ್ನ್ನು ನೀಡುತ್ತಿದ್ದರು. ಇದು ರಾಜಮನೆತನಕ್ಕೆ ಸೀಮಿತವಾಗಬಾರದು ಎಂದು ರಾಜರು ಇಡೀ ಸಮಾಜಕ್ಕೆ ಪರಿಚಯಿಸಿ ಎಂದು ಹೇಳಿದರು.
ಇದನ್ನೂ ಓದಿ: ಪಾಕಿಸ್ತಾನದ ಜೊತೆಗಿನ ಗಲಾಟೆಯಿಂದ ಮೈಸೂರು ಪಾಕ್ ಹೆಸರೂ ಬದಲು!
ಇನ್ನು ಈ ಕುಟುಂಬದ ನಾಲ್ಕನೇ ತಲೆಮಾರಿನ ಸದಸ್ಯ ಸುಮೇಘ್ ಎಸ್ ಅವರ ಹೇಳುವ ಪ್ರಕಾರ, ಮೈಸೂರು ಪಾಕ್ ಕೇವಲ ಸಿಹಿ ತಿನಿಸು ಮಾತ್ರ ಅಲ್ಲ. ಇದು ಮೈಸೂರು ಮತ್ತು ಕರ್ನಾಟಕಕ್ಕೆ ಆಳವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ.ಮೈಸೂರು ಪಾಕ್ ಮೈಸೂರು, ಕರ್ನಾಟಕ ಮತ್ತು ಕನ್ನಡಿಗರ ಹೆಮ್ಮೆ. ಇದು ನಮ್ಮ ಜನರ ಮಾಧುರ್ಯ ಮತ್ತು ಕನ್ನಡ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪೂರ್ವಜರು ಸೃಷ್ಟಿಸಿದ ಸಿಹಿ ತಿಂಡಿ – ಮೈಸೂರು ಪಾಕ್ – ಈಗ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಅನಗತ್ಯ ವಿವಾದಗಳಿಗೆ ಅದನ್ನು ಎಳೆಯಬೇಡಿ ಎಂದು ಹೇಳಿದ್ದಾರೆ ಎಂದು ಎನ್ಡಿ ಟಿವಿ ವರದಿ ಮಾಡಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Mon, 26 May 25