ಕಿರಿಕಿರಿಯನ್ನುಂಟು ಮಾಡುವ ಬಾಯಿಹುಣ್ಣಿಗೆ ಹೇಳಿ ಗುಡ್ ಬೈ , ಇಲ್ಲಿದೆ ಸರಳ ಮನೆ ಮದ್ದು

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 20, 2024 | 2:29 PM

ಆಹಾರ ಕ್ರಮ ಹಾಗೂ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಬಿಡದೇ ಕಾಡುತ್ತದೆ. ಕೆಲವರಿಗೆ ದೇಹದಲ್ಲಿನ ಉಷ್ಣಾಂಶವು ಸ್ವಲ್ಪ ಏರುಪೇರಾದರೂ ಬಾಯಿಹುಣ್ಣು, ಗುಳ್ಳೆಗಳು, ಕಣ್ಣು ಉರಿ, ಹೆಚ್ಚಾದರೆ ಬಾಯಿಹುಣ್ಣು, ಗುಳ್ಳೆಗಳು, ಕಣ್ಣು ಉರಿ ಹಾಗೂ ಕಾಲುರಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಬೇಸಿಗೆಯಲ್ಲಿ ದೇಹವು ಹೀಟ್ ಆಗಿ ಬಾಯಿಹುಣ್ಣು ಆಗುವುದು ಸರ್ವೇ ಸಾಮಾನ್ಯ. ಹೀಗಾದಾಗ ಮನೆಯಲ್ಲಿರುವ ಆಹಾರ ಪದಾರ್ಥಗಳಿಂದ ಮನೆ ಮದ್ದನ್ನು ತಯಾರಿಸಿ ಗುಣ ಪಡಿಸಿಕೊಳ್ಳಬಹುದು.

ಕಿರಿಕಿರಿಯನ್ನುಂಟು ಮಾಡುವ ಬಾಯಿಹುಣ್ಣಿಗೆ ಹೇಳಿ ಗುಡ್ ಬೈ , ಇಲ್ಲಿದೆ ಸರಳ ಮನೆ ಮದ್ದು
ಸಾಂದರ್ಭಿಕ ಚಿತ್ರ
Follow us on

ಬೇಸಿಗೆಗಾಲದಲ್ಲಿ ಹೆಚ್ಚಿನವರನ್ನು ಕಾಡುವ ಸಮಸ್ಯೆಗಳಲ್ಲಿ ಬಾಯಿಹುಣ್ಣು ಕೂಡ ಒಂದು. ಹೀಗಾಗಿ ಈ ಸಮಯದಲ್ಲಿ ಶರೀರವನ್ನು ತಂಪಾಗಿರುವಂತೆ ನೋಡಿಕೊಳ್ಳಬೇಕು. ಬಾಯಿಹುಣ್ಣು ಆದಾಗ ಆಹಾರವನ್ನು ಸೇವಿಸಲು ಆಗುವುದಿಲ್ಲ. ಮಸಾಲೆಯುಕ್ತ ಪದಾರ್ಥಗಳನ್ನು ತಿಂದರೆ ಉರಿ ಅನುಭವವಾಗುತ್ತದೆ. ಈ ಸಮಯದಲ್ಲಿ ತಣ್ಣನೆಯ ಆಹಾರವನ್ನು ಸೇವಿಸುವತ್ತ ಗಮನ ಹರಿಸಬೇಕು.

ಬಾಯಿ ಹುಣ್ಣಿಗೆ ಸರಳ ಮನೆ ಮದ್ದುಗಳು

* ತುಳಸಿ ಎಲೆಯನ್ನು ಜಗಿದು ತಿನ್ನುತ್ತಿದ್ದರೆ ಬಾಯಿಹುಣ್ಣಿನ ಸಮಸ್ಯೆಯೂ ಕಡಿಮೆಯಾಗುತ್ತದೆ.

* ಕೊತ್ತಂಬರಿ ಬೀಜದ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ, ಬಾಯಿಹುಣ್ಣು ಇರುವಲ್ಲಿ ಹಚ್ಚಿಕೊಂಡರೆ ಬೇಗನೆ ಗುಣಮುಖವಾಗುತ್ತದೆ.

* ಕೊತ್ತಂಬರಿ ಸೊಪ್ಪನ್ನು ಹಸಿಯಾಗಿಯೇ ಜಗಿಯುವುದರಿಂದ ಬಾಯಿಹುಣ್ಣು ನಿವಾರಣೆಯಾಗುತ್ತದೆ.

* ದಿನಕ್ಕೆ ಮೂರು ನಾಲ್ಕು ಬಾರಿಯಾದರೂ ಬಾಯಿಹುಣ್ಣಿಗೆ ಜೇನುತುಪ್ಪ ಹಚ್ಚುತ್ತಿದ್ದರೆ ಬೇಗ ವಾಸಿಯಾಗುತ್ತದೆ.

* ದಾಳಿಂಬೆ ಹಣ್ಣಿನ ದಿಂಡನ್ನು ಬೇಯಿಸಿ ಕಷಾಯ ತಯಾರಿಸಿ, ಅದಕ್ಕೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಿದರೆ ಅತ್ಯುತ್ತಮ ಔಷಧಿಯಾಗಿದೆ.

* ಕೆಂಪು ಗಣಿಕೆ ಸೊಪ್ಪನ್ನು ಬೇಯಿಸಿ ತಿನ್ನುವುದರಿಂದ ಬಾಯಿಹುಣ್ಣು ಸಮಸ್ಯೆ ನಿವಾರಣೆಯಾಗುತ್ತದೆ.

* ಮಾಗಿದ ಟೊಮಾಟೋ ಹಣ್ಣನ್ನು ತಿನ್ನುವುದರಿಂದಲೂ ಬಾಯಿ ಹುಣ್ಣು ವಾಸಿಯಾಗುತ್ತದೆ.

* ಬಾಯಿಹುಣ್ಣಿಗೆ ತೆಂಗಿನೆಣ್ಣೆ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.

* ರಾತ್ರಿ ಮಲಗುವ ಮೊದಲು ಮೆಂತೆ ಕಾಳನ್ನು ಸೇವಿಸುವುದು ಕೂಡ ಈ ಸಮಸ್ಯೆಗೆ ಪರಿಣಾಮಕಾರಿ ಔಷಧಿಯಾಗಿದೆ.

* ಶುದ್ಧ ತುಪ್ಪವನ್ನು ಬಾಯಿ ಹುಣ್ಣಿರುವ ಜಾಗಕ್ಕೆ ಹಚ್ಚಿದರೆ ಹುಣ್ಣು ಮಾಗುತ್ತದೆ.

* ಲೋಳೆಸರವನ್ನು ಹುಣ್ಣು ಇರುವ ಜಾಗಕ್ಕೆ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಮನಸ್ಸಿನ ಭಾವನೆಗೆ ಭಾವ ನೀಡುವ ಭಾಷೆಯೇ ತಾಯ್ನುಡಿ

* ಎಳನೀರನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ದೇಹವು ತಂಪಾಗಿ ಬಾಯಿ ಹುಣ್ಣು ಶಮನವಾಗುತ್ತದೆ.

* ಬೆಳ್ಳುಳ್ಳಿ ಜಜ್ಜಿ ಹುಣ್ಣಿರುವಲ್ಲಿಗೆ ಇಟ್ಟುಕೊಂಡು, ಆ ಬಳಿಕ ನೀರಿನಿಂದ ಬಾಯಿ ಮುಕ್ಕಳಿಸಿದರೆ ಈ ಸಮಸ್ಯೆ ಇಲ್ಲದಂತಾಗುತ್ತದೆ.

* ನಿಯಮಿತವಾಗಿ ಕಿತ್ತಳೆ ರಸವನ್ನು ಸೇವನೆ ಈ ಸಮಸ್ಯೆಗೆ ರಾಮಬಾಣವಾಗಿದೆ.

* ನೆಲ್ಲಿಕಾಯಿಯ ಎಲೆಗಳಿಂದ ಕಷಾಯ ಮಾಡಿ ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ದೂರವಾಗುತ್ತದೆ.

* ಕಲ್ಲುಸಕ್ಕರೆ ಮತ್ತು ಒಣಕೊಬ್ಬರಿಯನ್ನು ತಿನ್ನುವುದರಿಂದ ಬಾಯಿಹುಣ್ಣಿಗೆ ಪರಿಣಾಮಕಾರಿ ಔಷಧ.

* ಬಾಯಿಹುಣ್ಣು ಇದ್ದವರು ಬಿಸಿನೀರಿಗೆ ಉಪ್ಪು ಬೆರೆಸಿ, ಬಾಯಿ ಮುಕ್ಕಳಿಸಿದರೆ ಕಡಿಮೆಯಾಗುತ್ತದೆ.

* ಗಸಗಸೆ ಹಾಗೂ ಒಣಕೊಬ್ಬರಿಯನ್ನು ತಿನ್ನುವುದರಿಂದ ಬಾಯಿಹುಣ್ಣು ಸಮಸ್ಯೆ ಮಾಯವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ