Self-compassion: ಸ್ವಯಂ ಸಹಾನುಭೂತಿ ಬೆಳೆಸಿಕೊಳ್ಳಿ: ಜೀವನೋತ್ಸಾಹಿಗಳಾಗಿ

ನೀವು ಇತರರ ಬಗ್ಗೆ ಅಥವಾ ಇತರರು ನಿಮ್ಮ ಬಗ್ಗೆ ತೋರಿಸುವ ಸಹಾನುಭೂತಿ ಬೇರೆ ಬೇರೆ ರೀತಿಯಾಗಿರಬಹುದು. ಆದರೆ ನೀವು ನಿಮ್ಮ ಬಗ್ಗೆ ತೋರಿಸುವ ದಯೆ ಅಥವಾ ಸಹಾನುಭೂತಿಯ ಬಗ್ಗೆ ರಾಜಿಯಾಗಬೇಡಿ.

Self-compassion: ಸ್ವಯಂ ಸಹಾನುಭೂತಿ ಬೆಳೆಸಿಕೊಳ್ಳಿ: ಜೀವನೋತ್ಸಾಹಿಗಳಾಗಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Jan 16, 2022 | 12:50 PM

ಬದುಕು ಎಲ್ಲರಿಗೂ ಒಂದೇ  ರೀತಿ ಇರುವುದಿಲ್ಲ. ಕೈಗೆತ್ತಿಕೊಂಡ ನಿರ್ಧಾರಗಳು ದಿಕ್ಕು ತಪ್ಪಿ ಸೋಲನ್ನು ಕೆಲವರು ಅನುಭವಿಸಬಹುದು. ಇನ್ನೂ ಕೆಲವರು ಅಂದುಕೊಂಡಂತೆ ಕುಟುಂಬ(Family)ವನ್ನು ನಿಭಾಯಿಸಲು, ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು ಅಂತಹ ಸಂದರ್ಭಗಳಲ್ಲಿ ಸ್ವಯಂ ಸಹಾನುಭೂತಿ (Self-compassion) ಅಗತ್ಯವಾಗಿದೆ. ಸಾಮಾನ್ಯವಾಗಿ ಕುಟುಂಬದ ಜನರ ಬಗ್ಗೆ , ನಮ್ಮೊಂದಿಗೆ ಕೆಲಸ ಮಾಡುತ್ತಿರುವವರ ಬಗ್ಗೆ ಸಹಾನಭೂತಿ ಇರುತ್ತದೆ. ಅವರ ಕೆಟ್ಟ ಪರಿಸ್ಥಿತಿಗಳು ನಮ್ಮನ್ನು ಘಾಸಿಗೊಳಿಸಿ  ಸಹಾಯ ಹಸ್ತವನ್ನೂ ಅಥವಾ ಹೃದಯತುಂಬಿದ ಸಮಾಧಾನದ ಮಾತುಗಳನ್ನೋ ಆಡುತ್ತೇವೆ. ಆದರೆ ನಮ್ಮ ಕೆಟ್ಟ ಸಂದರ್ಭಗಳಲ್ಲಿ ನಮಗೇಕೆ ನಮ್ಮ ಮೇಲೆ ಸಹಾನುಭೂತಿ ಇರುವುದಿಲ್ಲ. ಬದುಕೇ ಇಷ್ಟು ಎಂದು ಕೆಟ್ಟ ನಿರ್ಧಾರಗಳಿಗೆ ಬಲಿಯಾಗುವ ಎಷ್ಟೋ ಸಂದರ್ಭಗಳನ್ನು ಕಾಣುತ್ತೇವೆ. ಅದರ ಬದಲು ಸ್ವಯಂ ಸಹಾನುಭೂತಿಯನ್ನು ಬೆಳೆಸಿಕೊಳ್ಳಿ. ಮಾಡಿದ ತಪ್ಪುಗಳ ಬಗ್ಗೆ ದಯೆ (Kind) ಇರಲಿ. ನಿಮ್ಮನ್ನು ಕ್ಷಮಿಸಿಕೊಳ್ಳಿ.  ಇತರರ ಎದುರು ನಿಮ್ಮನ್ನು ಹಳಿದುಕೊಳ್ಳುವ ಬದಲು ಸ್ವಯಂ ವಿಮರ್ಶೆ ಮಾಡಿಕೊಳ್ಳಿ. ಆಗ ತಪ್ಪು ನಡೆದ ಬಗ್ಗೆ ಅರಿವಾಗುತ್ತದೆ. ನಿಮ್ಮ ಅತಿಯಾದ ಸ್ವಾಭಿಮಾನ, ನಕಾರಾತ್ಮಕ ಚಿಂತನೆಯ ವ್ಯಕ್ತಿಗಳ ಮಾತನ್ನು ಕೇಳಿಸಿಕೊಂಡರೂ ನಿಮ್ಮನ್ನು ನೀವು ಸಮಾಧಾನವಾಗಿಟ್ಟುಕೊಳ್ಳುವ ಮನಸ್ಥಿತಿಯನ್ನು ಹೊಂದುವುದು ಕೂಡ ಸ್ವಯಂ ಸಹಾನುಭೂತಿಯಾಗುತ್ತದೆ.

ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಿ ಪ್ರತೀ ಮನುಷ್ಯನಿಗೆ ಇತರರ ಅಭಿಪ್ರಾಯಕ್ಕಿಂತ ಸ್ವಯಂ ವಿಮರ್ಶೆ ಹೆಚ್ಚಿನ ಸಮಸ್ಯೆಗಳಿಗೆ ಉತ್ತರವನ್ನು ನೀಡುತ್ತದೆ.  ಸ್ವಯಂ ವಿಮರ್ಶೆ ಮಾಡಿಕೊಳ್ಳದಿದ್ದರೆ ನಿಮ್ಮ ತಪ್ಪುಗಳ ಅರಿವು ನಿಮಗಾಗುವುದಿಲ್ಲ. ಬದಲಾಗಿ ಇತರರು ಬೆರಳು ತೋರಿಸಿ ಹೇಳುವಂತಹ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಲು ಯತ್ನಿಸಿ. ಇದು ನಿಮಗೆ ನೀವು ದಯೆಯನ್ನು ತೋರಿಸಿಕೊಂಡು ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಾಗಲು ಅನುಕೂಲವಾಗುವಂತೆ ಮಾಡುತ್ತದೆ.  ನಿಮ್ಮ ವಯಕ್ತಿಕ ಮತ್ತು ವೃತ್ತಿ ಬದುಕಿಗೂ ಅನ್ವಯವಾಗುತ್ತದೆ. ನಿಮ್ಮ ಶಕ್ತಿ ಮತ್ತು ದುರ್ಬಲತೆಯ ಬಗ್ಗೆ ಅರಿತುಕೊಳ್ಳಿ. ಇದರಿಂದ ನೀವು ಮಾಡುವ ಕೆಲಸದ ಬಗ್ಗೆ ಸಂಪೂರ್ಣ ಚಿತ್ರಣ ಸಿಗಲಿದೆ.  ತಪ್ಪು ಮಾಡುವುದು ಸಹಜ ಅದನ್ನು ಅರಿತು ನಿಮ್ಮನ್ನು ನೀವೇ ಕ್ಷಮಿಸಿಕೊಂಡು ಮತ್ತೆಂದೂ ಪುನಾರಾವರ್ತನೆಯಾಗದೇ ಇರುವ ರೀತಿ ನೋಡಿಕೊಳ್ಳುವುದು ಸ್ವಯಂ ಮೌಲ್ಯಮಾಪನದಿಂದ ಮಾತ್ರ ಸಾದ್ಯ.

ಸ್ವಯಂ ಕಾಳಜಿ ಮತ್ತು ಸ್ವಯಂ ಸಹಾನುಭೂತಿ ಸ್ವಯಂ ಕಾಳಜಿ ಮತ್ತು ಸ್ವಯಂ ಸಹಾನುಭೂತಿ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಿಮ್ಮ ಬಗ್ಗೆ ನೀವು ಕಾಳಜಿವಹಿಸುವುದು ಒಂದು ಕಡೆಯಾದರೆ ಅದೇ ಸಮಯದಲ್ಲಿ ನಿಮ್ಮ ತಪ್ಪುಗಳನ್ನು ಅಥವಾ ನಿಮ್ಮ ಮಾನಸಿಕ ಸ್ಥಿತಿಯನ್ನು ಒಪ್ಪಿಕೊಂಡು ಹಿಡಿತಲ್ಲಿಟ್ಟುಕೊಂಡು ಮುನ್ನಡೆಯುವುದು ಇನ್ನೊಂದು ರೀತಿ. ನಿಮ್ಮ ಆತ್ಮೀಯರೊಂದಿಗೆ ಚರ್ಚಿಸುವಂತೆ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ಒಂದಷ್ಟು ಆ್ಯಂಗಲ್​ಗಳಲ್ಲಿ ಸಾಧ್ಯಾಸಾಧ್ಯತೆಗಳನ್ನು ವಿಮರ್ಶಿಸಿಕೊಳ್ಳಿ. ಆಗ ಸರಿ ತಪ್ಪುಗಳ ಅರಿವು ನಿಮ್ಮಲ್ಲಿಯೇ ಮೂಡುತ್ತದೆ. ನಿಮ್ಮ ಹವ್ಯಾಸಗಳಿಗೆ ಒತ್ತುನೀಡಿ. ನಿಮ್ಮ ದಿನಚರಿಯ ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಿ. ನಿಮ್ಮ ಬಗ್ಗೆ ನಿಮಗೆ ಸಂಪೂರ್ಣ ನಂಬಿಕೆಯಿರಲಿ. ಆಗ ಮಾತ್ರ ನಿಮ್ಮನ್ನು ನೀವು ನಿಯಂತ್ರಿಸಿಕೊಂಡು ತಪ್ಪುಗಳಿಂದ ದೂರ ಉಳಿಯುವಂತೆ ಮಾಡಿಕೊಳ್ಳಲು ಸಾಧ್ಯ

ಸ್ವಯಂ ಸಹಾನುಭೂತಿಯನ್ನು ಅಭ್ಯಸಿಸಿಕೊಳ್ಳಲು ಹೀಗೆ ಮಾಡಿ ನೀವು ಇತರರ ಬಗ್ಗೆ ಅಥವಾ ಇತರರು ನಿಮ್ಮ ಬಗ್ಗೆ ತೋರಿಸುವ ಸಹಾನುಭೂತಿ ಬೇರೆ ಬೇರೆ ರೀತಿಯಾಗಿರಬಹುದು. ಆದರೆ ನೀವು ನಿಮ್ಮ ಬಗ್ಗೆ ತೋರಿಸುವ ದಯೆ ಅಥವಾ ಸಹಾನುಭೂತಿಯ ಬಗ್ಗೆ ರಾಜಿಯಾಗಬೇಡಿ. ಪ್ರತಿದಿನ ನಿಮ್ಮ ಮಾನಸಿಕ ಮತ್ತು ದೈಹಿಕ  ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಧ್ಯಾನ, ಆಟ, ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮನ್ನು ಒತ್ತಡದ ಬದುಕಿನಿಂದ ದೂರ ಉಳಿಸುತ್ತದೆ. ನಿಮ್ಮ ಮೇಲೆ ನಿಮಗಿರುವ ಪ್ರೀತಿಯನ್ನು ಹೆಚ್ಚಿಸುತ್ತದೆ. ಉತ್ತಮ ಆಹಾರದ ಜೀವನಶೈಲಿಯನ್ನು ರೂಢಿಸಿಕೊಳ್ಳಿ. ನಿಮ್ಮ ಕರ್ತವ್ಯವನ್ನು ನಿಭಾಯಿಸಿ. ಹಾಗೆಂದ ಮಾತ್ರಕ್ಕೆ ಇಷ್ಟವಿಲ್ಲದ ಕೆಲಸಗಳಿಗೆ ಒಡ್ಡಿಕೊಳ್ಳಬೇಡಿ. ಸ್ವಯಂ ಸಹಾನುಭೂತಿಯು ನಿಮ್ಮನ್ನು ಇನ್ನಷ್ಟು ಉತ್ತಮ ಕೆಲಸಗಳಿಗೆ, ಜೀವನೋತ್ಸಾಹಕ್ಕೆ ಪ್ರೇರೇಪಿಸುತ್ತದೆ.

ಇದನ್ನೂ ಓದಿ:

Tips to Boost Mental Health: ಮಾನಸಿಕ ಒತ್ತಡದಿಂದ ಹೊರಬರಲು ಈ ಮೂರು ಕೆಲಸಗಳನ್ನು ಮಾಡಿ

(ಈ ಮೇಲಿನ ಸ್ಟೋರಿಯನ್ನು ಇಂಡಿಯನ್​ ಎಕ್ಸ್​ಪ್ರೆಸ್ ಸುದ್ದಿಸಂಸ್ಥೆ  ಹಿರಿಯ ಮನೋವೈದ್ಯ ಡಾ.ದೀಪಕ್​ ರಹೇಜಾ ಅವರು ನೀಡಿದ ಸಲಹೆಯನ್ನು ಉಲ್ಲೇಖಸಿ ಪ್ರಕಟಿಸಿದ ಮಾಹಿತಿಯಿಂದ ತೆಗೆದುಕೊಳ್ಳಲಾಗಿದೆ.)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ