Cold Water: ನೀವು ನಿತ್ಯ ಕೋಲ್ಡ್ ವಾಟರ್ ಕುಡೀತೀರಾ, ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು
ಬೇಸಿಗೆ, ಮಳೆ, ಚಳಿಗಾಲವೆಂದೇನಿಲ್ಲ ಸಾಕಷ್ಟು ಮಂದಿಗೆ ಕೋಲ್ಡ್ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಫ್ರಿಜ್ನಲ್ಲಿಟ್ಟಿರುವ ನೀರನ್ನು ಕುಡಿಯುವ ಮುನ್ನ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಆಲೋಚಿಸಬೇಕು. ಬೇಸಿಗೆಯಲ್ಲಿ, ಒಂದು ಗುಟುಕು ತಣ್ಣೀರು ನಮ್ಮ ಗಂಟಲಿಗೆ ಆರಾಮವನ್ನು ನೀಡುತ್ತದೆ. ಇದು ಗಂಟಲು ನೋವಿಗೆ ಮಾತ್ರ ಕಾರಣವಾಗಬಹುದು ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಅದು ನಿಜವಲ್ಲ. ತಣ್ಣೀರಿನ ಹಾನಿಕಾರಕ ಪರಿಣಾಮಗಳು ಹಲವಿದೆ. -ತಣ್ಣೀರು ಕುಡಿಯುವುದರಿಂದ ಮೈಗ್ರೇನ್ ಲಕ್ಷಣಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬಹುದು. -ತಣ್ಣೀರು ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಇದು […]
ಬೇಸಿಗೆ, ಮಳೆ, ಚಳಿಗಾಲವೆಂದೇನಿಲ್ಲ ಸಾಕಷ್ಟು ಮಂದಿಗೆ ಕೋಲ್ಡ್ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಫ್ರಿಜ್ನಲ್ಲಿಟ್ಟಿರುವ ನೀರನ್ನು ಕುಡಿಯುವ ಮುನ್ನ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಆಲೋಚಿಸಬೇಕು. ಬೇಸಿಗೆಯಲ್ಲಿ, ಒಂದು ಗುಟುಕು ತಣ್ಣೀರು ನಮ್ಮ ಗಂಟಲಿಗೆ ಆರಾಮವನ್ನು ನೀಡುತ್ತದೆ. ಇದು ಗಂಟಲು ನೋವಿಗೆ ಮಾತ್ರ ಕಾರಣವಾಗಬಹುದು ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಅದು ನಿಜವಲ್ಲ. ತಣ್ಣೀರಿನ ಹಾನಿಕಾರಕ ಪರಿಣಾಮಗಳು ಹಲವಿದೆ.
-ತಣ್ಣೀರು ಕುಡಿಯುವುದರಿಂದ ಮೈಗ್ರೇನ್ ಲಕ್ಷಣಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬಹುದು.
-ತಣ್ಣೀರು ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಇದು ಹೊಟ್ಟೆ ನೋವು ಮತ್ತು ಅತಿಸಾರಕ್ಕೂ ಕಾರಣವಾಗಬಹುದು.
-ತಣ್ಣೀರು ಕುಡಿಯುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯುತ್ತೇವೆ. ಮೂತ್ರ ವಿಸರ್ಜನೆಯ ಆವರ್ತನವನ್ನು ಹೆಚ್ಚಿಸುವುದರಿಂದ, ನಾವು ಸಾಮಾನ್ಯವಾಗಿ ದೇಹದಲ್ಲಿ ಉಪ್ಪಿನ ಪ್ರಮಾಣವನ್ನು ಕಳೆದುಕೊಳ್ಳುತ್ತೇವೆ.
-ತಣ್ಣೀರು ಕುಡಿಯುವುದರಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ.
-ತಣ್ಣೀರು ಹೃದಯರಕ್ತನಾಳದ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಊಟದ ಬಳಿಕ ತಣ್ಣೀರು ಕುಡಿಯುವುದು ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು.
-ತಣ್ಣೀರು ದೇಹದಲ್ಲಿ ಅಗತ್ಯವಾದ ಪೋಷಕಾಂಶಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ನೀವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
-ತಣ್ಣೀರು ನಿಯಮಿತವಾಗಿ ಕುಡಿಯುವುದರಿಂದ ಥೈರಾಯ್ಡ್ ಅಥವಾ ಟಾನ್ಸಿಲ್ ಗ್ರಂಥಿಗಳ ಬೆಳವಣಿಗೆಗೆ ಕಾರಣವಾಗಬಹುದು.