Mental Health: ಅತಿಯಾಗಿ ಆಲೋಚಿಸುವುದನ್ನು ನಿಯಂತ್ರಿಸುವುದು ಹೇಗೆ?

ಯಾವುದಾದರೂ ವಿಷಯದ ಕುರಿತು ಆಲೋಚನೆ ಮಾಡುವುದು ಸಾಮಾನ್ಯ, ಆದರೆ ಅತಿಯಾದ ಆಲೋಚನಾ ಕ್ರಮವು ಬೇರೆಯವರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ.

Mental Health: ಅತಿಯಾಗಿ ಆಲೋಚಿಸುವುದನ್ನು ನಿಯಂತ್ರಿಸುವುದು ಹೇಗೆ?
Overthinking
Follow us
TV9 Web
| Updated By: ನಯನಾ ರಾಜೀವ್

Updated on: Aug 03, 2022 | 8:00 AM

ಯಾವುದಾದರೂ ವಿಷಯದ ಕುರಿತು ಆಲೋಚನೆ ಮಾಡುವುದು ಸಾಮಾನ್ಯ, ಆದರೆ ಅತಿಯಾದ ಆಲೋಚನಾ ಕ್ರಮವು ಬೇರೆಯವರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ನಾವು ಕೆಲವೊಮ್ಮೆ ಕ್ಷುಲ್ಲಕ ವಿಷಯಗಳ ಬಗ್ಗೆ ತುಂಬಾ ಆಲೋಚನೆ ಮಾಡುತ್ತೇವೆ, ಸುಖಾಸುಮ್ಮನೆ ಬೇಡದ ಅಲೋಚನೆಗಳು ನಿಮ್ಮನ್ನು ಆವರಿಸಿಕೊಳ್ಳುತ್ತದೆ, ಈ ಆಲೋಚನೆಗಳು ನಮ್ಮನ್ನು ಅಸಮಾಧಾನಗೊಳಿಸುತ್ತವೆ, ದುಃಖಿಸುವಂತೆ ಮಾಡುತ್ತದೆ.

ವಾಸ್ತವದಿಂದ ನಮ್ಮನ್ನು ಬೇರ್ಪಡಿಸುತ್ತವೆ. ಯಾವ ಕ್ಷಣ ನೀವು ನೀವಲ್ಲದಿರುವ ಸಂಗತಿಗಳೊಂದಿಗೆ ಗುರುತಿಸಿಕೊಳ್ಳುವಿರೋ, ಆ ಕ್ಷಣವೇ ಮನಸ್ಸಿನ ಚಟುವಟಿಕೆ ಆರಂಭವಾಗುತ್ತದೆ.

ನಿಮಗೆ ಅದನ್ನು ನಿಲ್ಲಿಸಲಾಗುವುದಿಲ್ಲ. ನೀವು ಪ್ರಯತ್ನಿಸಿರುವಿರೇ? ಒಂದಿಷ್ಟು ಮನರಂಜನೆ ಪಡೆದು, ಜೀವನ ಸಾಗಿಸುತ್ತೀರಷ್ಟೇ. ನಿಮಗೆ ನೀವೇ ಮನರಂಜಿಸಿಕೊಳ್ಳಬೇಡಿ. 24 ಗಂಟೆಗಳ ಕಾಲ ಸುಮ್ಮನೆ ಕುಳಿತು, ಮನಸ್ಸನ್ನು ನಿಲ್ಲಿಸಲು ಶತಪ್ರಯತ್ನ ಮಾಡಿ. ಅದನ್ನು ನಿಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುವುದು ಎಂದು ನಿಮಗೇ ತಿಳಿಯುತ್ತದೆ. ಮೂರೇ ದಿನಗಳಲ್ಲಿ ನೀವು ಹುಚ್ಚರಾಗುವಿರಿ.

ಅತಿಯಾಗಿ ಯೋಚಿಸುವುದು ಅಭ್ಯಾಸವಾಗಿಬಿಡಬಹುದು, ಹಾಗೆಯೇ ಕ್ರಮೇಣವಾಗಿ ನಿಮ್ಮ ಮಾನಸಿಕ ಶಾಂತಿ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು.

ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ: ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ, ನೀವು ಆಲೋಚಿಸುತ್ತಿರುವ ವಿಷಯಕ್ಕೆ ನಿಜವಾಗಿಯೂ ಅಷ್ಟು ಪ್ರಾಮುಖ್ಯತೆ ಇದೆಯೇ ಎಂದು ಅರಿತುಕೊಳ್ಳಿ.

-ಒಮ್ಮೆ ನೀವು ಜೀವನವನ್ನು ಮನಸ್ಸು ತೋರಿಸುತ್ತಿರುವ ರೀತಿಯಲ್ಲಿ ನೋಡದೇ, ಕೇವಲ ಅದಿರುವ ರೀತಿಯಲ್ಲಿ ನೋಡಿದರೆ, ಆಗ ಎಲ್ಲವೂ ಬಹಳ ಚಿಕ್ಕದು ಎಂಬುದು ನಿಮಗೆ ಗೋಚರಿಸುತ್ತದೆ.

– ಅತಿಯಾಗಿ ಯೋಚಿಸುವುದು ವ್ಯಸನಕಾರಿಯಾಗಿರಬಹುದು ಮತ್ತು ಅದನ್ನು ಸಂಪೂರ್ಣವಾಗಿ ನಿಲ್ಲಿಸುವುದು ನಿಮಗೆ ದೊಡ್ಡ ಸವಾಲಾಗಬಹುದು. -ಆಲೋಚನೆಗಳನ್ನು ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಗಳನ್ನು ಮಾಡಬಹುದು.

-ಕೆಲವೊಮ್ಮೆ ಭಯದಿಂದಾಗಿ ಅತಿಯಾಗಿ ಯೋಚನೆ ಮಾಡುತ್ತೇವೆ, ಇದರಿಂದ ಇತರೆ ಕಾರ್ಯಗಳಿಗೆ ಅಡಚಣೆಯುಂಟಾಗುತ್ತದೆ.

-ಈಗ ನಡೆಯುತ್ತಿರುವ ವಿಷಯದ ಬಗ್ಗೆ ಕೊರಗುವುದರಲ್ಲಿ ಅರ್ಥವಿದೆ, ಆದರೆ ಒಂದೆರಡು ವರ್ಷಗಳ ಹಿಂದೆ ನಡೆದ ವಿಷಯದ ಬಗ್ಗೆ ಈಗ ನೆನಪು ಮಾಡಿಕೊಂಡು ಕೊರಗುವುದರಲ್ಲಿ ಅರ್ಥವಿಲ್ಲ.