ಕತ್ತಿನ ಸುತ್ತಲಿನ ಕಪ್ಪು ಕಲೆಗೆ ತಜ್ಞರು ನೀಡಿರುವ ಮನೆಮದ್ದು ಇಲ್ಲಿದೆ

|

Updated on: Mar 17, 2023 | 3:11 PM

ಆದರೆ ಇನ್ನೂ ಮುಂದೆ ಇಂತಹ ಸಮಸ್ಯೆಗಳಿಗೆ ಚಿಂತಿಸಬೇಕಿಲ್ಲ. ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಕತ್ತಿನ ಭಾಗ ಕಪ್ಪು ಕಲೆಯನ್ನು ನಿವಾರಿಸಬಹುದಾಗಿದೆ ಎಂದು ಡಾ. ಶರದ್​​​ ಕುಲಕರ್ಣಿ ಸಲಹೆ ನೀಡುತ್ತಾರೆ.

ಕತ್ತಿನ ಸುತ್ತಲಿನ ಕಪ್ಪು ಕಲೆಗೆ ತಜ್ಞರು ನೀಡಿರುವ ಮನೆಮದ್ದು ಇಲ್ಲಿದೆ
ಕತ್ತಿನ ಸುತ್ತಲಿನ ಕಪ್ಪು ಕಲೆ
Image Credit source: Fabbon
Follow us on

ಮೈ ಎಲ್ಲ ಬೆಳಗ್ಗಿದ್ದರೂ, ಕುತ್ತಿಗೆಯ ಸುತ್ತ ಕಪ್ಪಾಗಿರುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಕೇವಲ ಸಮಸ್ಯೆಯಾಗಿರದೇ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಈ ಕಪ್ಪು ಕಲೆಗೆ ಸರಿಯಾದ ಚಿಕಿತ್ಸೆ ಇಲ್ಲದಿದ್ದಾಗ ಸಾಕಷ್ಟು ಜನರು ಕುತ್ತಿಗೆ ಸಂಪೂರ್ಣವಾಗಿ ಮುಚ್ಚಿಕೊಂಡಿರುವ ಬಟ್ಟೆಯನ್ನು ಧರಿಸುತ್ತಾರೆ. ಆದರೆ ಇನ್ನೂ ಮುಂದೆ ಇಂತಹ ಸಮಸ್ಯೆಗಳಿಗೆ ಚಿಂತಿಸಬೇಕಿಲ್ಲ. ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಕತ್ತಿನ ಭಾಗ ಕಪ್ಪು ಕಲೆಯನ್ನು ನಿವಾರಿಸಬಹುದಾಗಿದೆ ಎಂದು ಡಾ. ಶರದ್​​​ ಕುಲಕರ್ಣಿ ಸಲಹೆ ನೀಡುತ್ತಾರೆ.

ಡಾ. ಶರದ್​​​ ಕುಲಕರ್ಣಿ ನೀಡಿರುವ ಮೂರು ಮನೆಮದ್ದುಗಳ ಕುರಿತು ಮಾಹಿತಿ ಇಲ್ಲಿದೆ.

1 ಚಮಚ ಕಡ್ಲೇ ಹಿಟ್ಟು, 1/4 ಚಮಚ ಅರಶಿನ ಪುಡಿ, 3 ಚಮಚ ನಿಂಬೆ ಹಣ್ಣಿನ ರಸ, ಸ್ವಲ್ಪ ರೋಸ್​ ವಾಟರ್​​. ಇವಿಷ್ಟು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್​​​​ ತಯಾರಿಸಿ. ಈ ಪೇಸ್ಟ್​​ನ್ನು ಕುತ್ತಿಯ ಸುತ್ತ ಹಚ್ಚಿ. ಇದನ್ನು 45 ನಿಮಿಷಗಳ ಕಾಲ ಹಾಗೆಯೇ ಬಿಡಿ. ವಾರದಲ್ಲಿ ಎರಡು ಬಾರೀ ಈ ರೀತಿ ಮಾಡುವುದರಿಂದ ನಿಮ್ಮ ಕುತ್ತಿಗೆಯ ಸುತ್ತಲಿನ ಕಪ್ಪು ಕಲೆಯೂ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಡಾ. ಶರದ್ ಹೇಳುತ್ತಾರೆ.

ಇನ್ನೊಂದು ಮನೆಮದ್ದು ಅಲೂಗಡ್ಡೆ ಸಿಪ್ಪೆಯ ಒಳಭಾಗವನ್ನು 5ರಿಂದ 8 ನಿಮಿಷದಷ್ಟು ನಿಮ್ಮ ಕುತ್ತಿಯ ಸುತ್ತಲೂ ರಬ್​​ ಮಾಡಿ. ಇದು ಕೂಡ ಕಪ್ಪು ಕಲೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯಕವಾಗಿದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಚರ್ಮದ ಆರೈಕೆಗಾಗಿ ರೋಸ್ ವಾಟರ್ ಬಳಸಿ

ಡಾ. ಶರದ್ ಹಂಚಿಕೊಂಡಿರುವ ಮೂರನೇ ಮನೆಮದ್ದು, ಕಿತ್ತಳೆಯ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅಥವಾ ನೆಲ್ಲಿಕಾಯಿ ಪುಡಿ ಬಳಸಿ ಇದಕ್ಕೆ ಅರ್ಧ ಚಮಚ ಅರಶಿನ ಮತ್ತು ಒಂದು ಚಮಚ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಕುತ್ತಿಯ ಸುತ್ತಲೂ ಹಚ್ಚಿ, 45 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಕೂಡ ಕುತ್ತಿಗೆಯ ಸುತ್ತಲಿನ ಕಪ್ಪು ಕಲೆಯನ್ನು ಕಡಿಮೆ ಮಾಡಲು ಒಂದು ಒಳ್ಳೆಯ ಮನೆಮದ್ದು ಎಂದು ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:11 pm, Fri, 17 March 23