Inspiring Story: ಹಳ್ಳಿ ಜೀವನಕ್ಕಾಗಿ ಬೆಂಗಳೂರು ಬಿಟ್ಟ ಉದ್ಯೋಗಿ; 18,500 ರೂ. ವೆಚ್ಚದಲ್ಲಿ ನೈಸರ್ಗಿಕ ಮನೆ ನಿರ್ಮಾಣ!

|

Updated on: Jun 25, 2022 | 3:34 PM

ಬೆಂಗಳೂರಿನ ಕೆಲಸಕ್ಕೆ ಗುಡ್​ ಬೈ ಹೇಳಿದ ಮಹೇಶ್ ಚಾಮರಾಜನಗರದ ಸಣ್ಣ ತೋಟದ ಜಾಗದಲ್ಲಿ 125 ದಿನಗಳಲ್ಲಿ ಕೇವಲ 18,500 ರೂ. ವೆಚ್ಚದಲ್ಲಿ ತಾವೇ ಒಂದು ಮಣ್ಣಿನ ಮನೆಯನ್ನು ಕಟ್ಟಿಕೊಂಡಿದ್ದಾರೆ.

Inspiring Story: ಹಳ್ಳಿ ಜೀವನಕ್ಕಾಗಿ ಬೆಂಗಳೂರು ಬಿಟ್ಟ ಉದ್ಯೋಗಿ; 18,500 ರೂ. ವೆಚ್ಚದಲ್ಲಿ ನೈಸರ್ಗಿಕ ಮನೆ ನಿರ್ಮಾಣ!
ಬೆಂಗಳೂರಿನ ವ್ಯಕ್ತಿಯ ಮಣ್ಣಿನ ಮನೆ
Image Credit source: The Better India
Follow us on

ಬೆಂಗಳೂರು: ಹಳ್ಳಿಯಲ್ಲಿದ್ದವರಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಬೇಕೆಂಬ ಆಸೆ. ಬೆಂಗಳೂರಿನಲ್ಲಿದ್ದವರು ವೀಕೆಂಡ್​ಗೆ ಹಳ್ಳಿ, ರೆಸಾರ್ಟ್​, ಹಿಲ್​ಸ್ಟೇಷನ್​ ಎಂದು ಸಾವಿರಾರು ರೂ. ಹಣ ಚೆಲ್ಲಿ ಟ್ರಿಪ್ ಹೋಗುತ್ತಾರೆ. ಇದೀಗ ಬೆಂಗಳೂರಿನ ಲೀ ಮೆರಿಡಿಯನ್ ಮತ್ತು ತಾಜ್ ಗೇಟ್‌ವೇಯಂತಹ ಬೃಹತ್ ಹೋಟೆಲ್​ಗಳಲ್ಲಿ ಸುಮಾರು 19 ವರ್ಷಗಳ ಕಾಲ ಕೆಲಸ ಮಾಡಿದ ಮಹೇಶ್ ಕೃಷ್ಣನ್ ಮೊದಲು ಎಲ್ಲರಂತೆ ಐಷಾರಾಮಿ ಜೀವನವನ್ನು ನಡೆಸಲು ಬಯಸಿದ್ದರು. ಆದರೆ, ಕ್ರಮೇಣ ಬೆಂಗಳೂರಿನ ಬ್ಯುಸಿ ಲೈಫ್ ಅವರಿಗೆ ಬೇಸರ ತರಿಸಿತ್ತು.

ಹೀಗಾಗಿ, ಬೆಂಗಳೂರಿನಿಂದ ದೂರ ಹೋಗಿ ಸುಸ್ಥಿರ ಜೀವನ ನಡೆಸಲು ನಿರ್ಧರಿಸಿದರು. ಬೆಂಗಳೂರಿನ ಕೆಲಸಕ್ಕೆ ಗುಡ್​ ಬೈ ಹೇಳಿದ ಅವರು ಚಾಮರಾಜನಗರದಲ್ಲಿ ಮಣ್ಣಿನ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ಚಾಮರಾಜನಗರದ ಸಣ್ಣ ಜಾಗದಲ್ಲಿ 125 ದಿನಗಳಲ್ಲಿ ಕೇವಲ 18,500 ರೂ. ವೆಚ್ಚದಲ್ಲಿ ತಾವೇ ಒಂದು ಮಣ್ಣಿನ ಮನೆಯನ್ನು ಕಟ್ಟಿಕೊಂಡಿದ್ದಾರೆ. (Source)

ಮಹೇಶ್ ಅವರು ಈ ಹಿಂದೆ ಕೆಲವು ಕಾರ್ಯಾಗಾರಗಳಿಗೆ ಹಾಜರಾಗಿದ್ದರು. ಮಣ್ಣು, ಸಗಣಿ, ಕಲ್ಲುಗಳು, ಹೊಟ್ಟು, ತಾಳೆ ಎಲೆಗಳು ಮುಂತಾದ ನೈಸರ್ಗಿಕ ವಸ್ತುಗಳನ್ನು ಬಳಸಿ ಮನೆ ನಿರ್ಮಿಸಲು ಹಲವಾರು ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಿದರು. ಯೂಟ್ಯೂಬ್​ ವಿಡಿಯೋ ನೋಡಿಕೊಂಡು, ಕೆಲವು ತಜ್ಞರಿಂದ ಮಾಹಿತಿ ಪಡೆದು ಮಣ್ಣಿನ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ.

ಇದನ್ನೂ ಓದಿ
Inspirational Story: 73ರ ಇಳಿ ವಯಸ್ಸಿನಲ್ಲೂ ಸೈಕಲ್​ನಲ್ಲೇ 2,500 ಕಿ.ಮೀ. ಪ್ರಯಾಣಿಸಿದ ವೃದ್ಧ
Success Story: ಇಂಜಿನಿಯರಿಂಗ್ ಕೆಲಸ ಬಿಟ್ಟು ಚಹಾ ಅಂಗಡಿ ತೆರೆದ ಯುವಕ; ತಿಂಗಳ ಆದಾಯ ಕೇಳಿದ್ರೆ ಅಚ್ಚರಿ ಪಡ್ತೀರ!
Success Story: 71ನೇ ವಯಸ್ಸಿನಲ್ಲೂ ಜೆಸಿಬಿ, ಲಾರಿಯಂತಹ 11 ರೀತಿಯ ವಾಹನಗಳನ್ನು ಚಲಾಯಿಸುತ್ತಾರೆ ಈ ಅಜ್ಜಿ!

ತಾವೇ ನಿರ್ಮಿಸಿದ ಮಣ್ಣಿನ ಮನೆ ಎದುರು ಮಹೇಶ್

ಇದನ್ನೂ ಓದಿ: Inspiring Story: ಸಾಫ್ಟ್​ವೇರ್​ ಉದ್ಯೋಗ ಬಿಟ್ಟು ಭಾರತೀಯ ಸೇನೆ ಸೇರಿದ ಬೆಂಗಳೂರಿನ ಇಂಜಿನಿಯರ್

ಬೆಂಗಳೂರಿನ ಚಾಮರಾಜನಗರದಲ್ಲಿರುವ 300 ಚದರ ಅಡಿಯ ಮನೆಯನ್ನು ಸಂಪೂರ್ಣವಾಗಿ ಮಹೇಶ್ ಅವರೇ ಸ್ವತಃ ನಿರ್ಮಿಸಿದ್ದಾರೆ. ಈ ಮನೆಯನ್ನು ಯಾರು ಬೇಕಾದರೂ ನೋಡಬಹುದಾಗಿದೆ. ಹಾಗೇ, ಆಸಕ್ತರಿಗೆ ಈ ಮನೆಯಲ್ಲಿ ಉಚಿತವಾಗಿ ವಾಸ್ತವ್ಯ ಹೂಡಲು ಅವಕಾಶ ನೀಡಲಾಗುತ್ತದೆ.

2015ರಲ್ಲಿ ಮಹೇಶ್ ತನ್ನ ಕುಟುಂಬದೊಂದಿಗೆ ಶಾಂತಿಯುತ ಜೀವನವನ್ನು ನಡೆಸುವ ಸಲುವಾಗಿ ಬೆಂಗಳೂರಿನ ತನ್ನ ಕೆಲಸವನ್ನು ತೊರೆದರು. ಬಳಿಕ ಅವರು ನೈಸರ್ಗಿಕ ಕೃಷಿಯನ್ನು ಪ್ರಾರಂಭಿಸಿದರು, ಈಗ ಅವರು ಹೊಸದಾಗಿ ನಿರ್ಮಿಸಲಾದ ಮಣ್ಣಿನ ಮನೆಯಲ್ಲಿ ವಾಸವಾಗಿ, ನೈಸರ್ಗಿಕ ಕೃಷಿಯನ್ನು ಮುಂದುವರೆಸಿದ್ದಾರೆ. ತಮಗೆ ನಿತ್ಯ ಬಳಕೆಗೆ ಬೇಕಾದ ಸಾವಯವ ತರಕಾರಿಗಳನ್ನು ಇಲ್ಲಿ ಬೆಳೆಯುತ್ತಾರೆ.

ಇದನ್ನೂ ಓದಿ: Success Story: ಇಂಜಿನಿಯರಿಂಗ್ ಕೆಲಸ ಬಿಟ್ಟು ಚಹಾ ಅಂಗಡಿ ತೆರೆದ ಯುವಕ; ತಿಂಗಳ ಆದಾಯ ಕೇಳಿದ್ರೆ ಅಚ್ಚರಿ ಪಡ್ತೀರ!

2019ರಲ್ಲಿ ಚಾಮರಾಜನಗರದ ಅಮೃತ ಭೂಮಿ ಸಂಘಟನೆಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾಗ ಮಣ್ಣಿನ ಮನೆ ಕಟ್ಟಬೇಕು ಎಂದು ಅವರಿಗೆ ಅನಿಸಿತು. ನಾನು ಸಾಂಪ್ರದಾಯಿಕ ಮಣ್ಣಿನ ಮನೆಯನ್ನು ಏಕಾಂಗಿಯಾಗಿ ಮಾಡಲು ಸಾಧ್ಯವೇ? ಎಂದು ಅನುಮಾನಪಟ್ಟಿದ್ದೆ. ಆದರೆ, ಕೆಲಸ ಆರಂಭಿಸಿದ ನಂತರ ನನಗೆ ಆತ್ಮವಿಶ್ವಾಸ ಹೆಚ್ಚಾಯಿತು. ಮಣ್ಣಿನ ಮನೆ ಮಾಡಿ, ಸೋಗೆ ಹಾಕಿ ಮನೆ ಕಟ್ಟಲಾಗಿದೆ. ಈ ಮಣ್ಣಿನ ಗೋಡೆಗಳು ಸುಂದರವಾದ ಕಲಾಕೃತಿಗಳಿಂದ ಅಲಂಕರಿಸಲ್ಪಟ್ಟಿವೆ. ಬೇಸಿಗೆಯ ಸಮಯದಲ್ಲಿ ಸಹ ಒಳಾಂಗಣವು ನೈಸರ್ಗಿಕವಾಗಿ ತಂಪಾಗಿರುತ್ತದೆ. ಕೇವಲ 18 ಸಾವಿರ ರೂ.ನಲ್ಲಿ ನೈಸರ್ಗಿಕ ಮನೆಯನ್ನು ನಿರ್ಮಿಸಿಕೊಂಡು ಹಲವರಿಗೆ ಇವರು ಮಾದರಿಯಾಗಿದ್ದಾರೆ.

Published On - 3:33 pm, Sat, 25 June 22