CIMA ಅವಾರ್ಡ್ಸ್ 2022ನಲ್ಲಿ ಪ್ರಥಮ ಸ್ಥಾನ ಪಡೆದ ಸುಮನ್ ಚಂದ್ರ
ಆರ್ಟ್ ಮತ್ತು ಹೆರಿಟೇಜ್ ಫೌಂಡೇಶನ್ ಸಹಯೋಗದೊಂದಿಗೆ ಸೆಂಟರ್ ಆಫ್ ಇಂಟರ್ನ್ಯಾಷನಲ್ ಮಾಡರ್ನ್ ಆರ್ಟ್ (CIMA) ಆಯೋಜಿಸಿದ, ಕಲ್ಲಿದ್ದಲು ಧೂಳು, ಇಟ್ಟಿಗೆ ಧೂಳು, ಇದ್ದಿಲು, ಅಕ್ರಿಲಿಕ್ ಮತ್ತು ಕ್ಯಾನ್ವಾಸ್‌ನಲ್ಲಿನ ಬ್ಲ್ಯಾಕ್ ಗ್ರೇವ್ 2 ಎಂಬ ಶೀರ್ಷಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಪಶ್ಚಿಮ ಬಂಗಾಳದ ಕಲಾವಿದ ಸುಮನ್ ಚಂದ್ರ ಪ್ರಥಮ ಸ್ಥಾನವನ್ನು ಪಡೆದುಕೊಂಡರು.
ಆರ್ಟ್ ಮತ್ತು ಹೆರಿಟೇಜ್ ಫೌಂಡೇಶನ್ ಸಹಯೋಗದೊಂದಿಗೆ ಸೆಂಟರ್ ಆಫ್ ಇಂಟರ್ನ್ಯಾಷನಲ್ ಮಾಡರ್ನ್ ಆರ್ಟ್ (CIMA) ಆಯೋಜಿಸಿದ, ಕಲ್ಲಿದ್ದಲು ಧೂಳು, ಇಟ್ಟಿಗೆ ಧೂಳು, ಇದ್ದಿಲು, ಅಕ್ರಿಲಿಕ್ ಮತ್ತು ಕ್ಯಾನ್ವಾಸ್‌ನಲ್ಲಿನ ಬ್ಲ್ಯಾಕ್ ಗ್ರೇವ್ 2 ಎಂಬ ಶೀರ್ಷಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಪಶ್ಚಿಮ ಬಂಗಾಳದ ಕಲಾವಿದ ಸುಮನ್ ಚಂದ್ರ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಅತ್ಯುತ್ತಮ ಚಿತ್ರ ಎಂಬ ಪ್ರಶಂಸೆಯನ್ನು ಪಡೆದುಕೊಂಡರು ಈ ಬಗ್ಗೆ ಹೆರಿಟೇಜ್ ಫೌಂಡೇಶನ್ ಕೂಡ ಅಭಿಮಾನ ವ್ಯಕ್ತಪಡಿಸಿತ್ತು. 7.5ಲಕ್ಷ ರೂ. ನಗದು ಹಾಗೂ ಒಂದು ಟ್ರೋಫಿ ಮತ್ತು ಚಾಂಪಿಯನ್ ಶಿಫ್ ಕೂಡ ಪಡೆದುಕೊಂಡರು. ಇವರ ಈ ಸಾಧನೆಗೆ ರಾಷ್ಟ್ರೀಯ ಮಟ್ಟದಲ್ಲಿ ಭಾರಿ ಪ್ರಶಂಸೆಯನ್ನು ಪಡೆದುಕೊಂಡಿದೆ. CIMA ಅವಾರ್ಡ್ಸ್ 2022 ನಲ್ಲಿ ನಮ್ಮ ಕಲೆ ಮತ್ತು ಸಾಂಸ್ಕೃತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದೆ. ಇದು ಎರಡು ನಮ್ಮ ದೇಶದ ಆತ್ಮ ಮತ್ತು ಹೃದಯ, ಚಿತ್ರಕಲೆ ನಮ್ಮ ದೇಶದ ಯುವ ಪೀಳಿಗೆ ಧ್ವನಿಯಾಗಿ ನಿಂತಿದೆ. ಈ ಸ್ಪರ್ಧೆ ನಮ್ಮ ಯುವ ಸಮಾಜದ ಮೇಲೆ ಒಳ್ಳೆಯ ಪರಿಣಾಮವನ್ನು ಬೀರಬಹುದು ಎಂದು CIMA ನಿರ್ದೇಶಕಿ ರಾಖಿ ಸರ್ಕಾರ್ ಹೇಳಿದ್ದಾರೆ.
ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಸೋನಾಲ್ ವರ್ಷೇನಿಯಾಗೆ, ಕೃತಿ ಕಿಸ್ಸಾ ಗೋಯಿ ಮತ್ತು ಪರೇಶ್ ಮೈಟಿ 2 ನೇ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದರು ಹಾಗೂ ಸ್ಲಿಪ್ ಕಲರ್‌ನಲ್ಲಿ ಸ್ಟ್ರಕ್ಚರಲ್ ಅನ್ಯಾಟಮಿ ಕೆಲಸಕ್ಕಾಗಿ ಅಕ್ಷಯ್ ಮೈತಿ ಪ್ರಶಸ್ತಿಯನ್ನು ಪಡೆದರು.
CIMA AWARDS 2022 pic.twitter.com/nqIMpp3Ebw
— Cima Gallery,Kolkata (@cimaartindia) January 31, 2022
ಎರಡು ವಿಶೇಷ ತೀರ್ಪುಗಾರರ ಪ್ರಶಸ್ತಿಗಳನ್ನು ತೆಲಂಗಾಣದ ಆಸಿಸ್ ಕುಮಾರ್ ಮಹಾಖುದ್ ಅವರಿಗೆ ವರ್ಚುವಲ್ ಸಾಂಗ್ ಶೀರ್ಷಿಕೆಯ ಆಡಿಯೊ ವಿಡಿಯೋ ಪ್ರೊಜೆಕ್ಷನ್‌ಗಾಗಿ ಮತ್ತು ರವಿ ಮೊರ್ಯ ಅವರು ಕ್ಯಾನ್ವಾಸ್‌ನಲ್ಲಿ ಶೀರ್ಷಿಕೆರಹಿತ ಅಕ್ರಿಲಿಕ್ ಮತ್ತು ಪೇಪರ್ ಕೊಲಾಜ್‌ಗಾಗಿ ನೀಡಲಾಯಿತು.
ಕಲಾ ಜಗತ್ತಿಗೆ ಅಮೂಲ್ಯ ಕೊಡುಗೆ ನೀಡಿದ ಪ್ರಮುಖ ಹೆಸರುಗಳನ್ನು ಗುರುತಿಸಿ, 2022 ರ CIMA ಪ್ರಶಸ್ತಿಗಳು ಆಧುನಿಕತಾವಾದಿ ಅರ್ಪಿತಾ ಸಿಂಗ್ ಮತ್ತು ಡಾ. ಭೌ ದಾಜಿ ಲಾಡ್ ಮ್ಯೂಸಿಯಂನ ವ್ಯವಸ್ಥಾಪಕ ಟ್ರಸ್ಟಿ ಮತ್ತು ಗೌರವ ನಿರ್ದೇಶಕರಾದ ತಸ್ನೀಮ್ ಜಕಾರಿಯಾ ಮೆಹ್ತಾ ಅವರನ್ನು ಮ್ಯೂಸಿಯಂನ “ಪುನಃಸ್ಥಾಪನೆ ಮತ್ತು ಪುನರ್ಯೌವನಗೊಳಿಸುವಿಕೆ” ಗಾಗಿ ಗೌರವಿಸಲಾಯಿತು.