
ಬೇಸಿಗೆ (Summer) ಬಂದೇಬಿಡ್ತು, ಈ ಋತು ಶುರು ಆಗುತ್ತಲೇ ಬಿಸಿಲು ನೆತ್ತಿಯನ್ನು ಸುಡುತ್ತಿದೆ. ಇನ್ನೂ ದಿನ ಉರುಳುತ್ತಾ ಹೇಗಪ್ಪಾ ತಡೆದುಕೊಳ್ಳುವುದು. ಈಗಿನ ಬಿಸಿಲು ನೋಡಿದರೆ ಯಾಕಾದ್ರೂ ಬೇಸಿಗೆ ಶುರುವಾಗುತ್ತದೆ ಎಂದು ಗೊಣಗುವವರೇ ಹೆಚ್ಚಾಗಿದ್ದಾರೆ. ಬಿಸಿಲಿನ ಝಳ ಸಹಿಸಿಕೊಳ್ಳುವುದೇ ಕಷ್ಟ ಎನ್ನುವಂತಾಗಿದೆ. ಫ್ಯಾನ್ (Fan) ನಡಿಯಲ್ಲಿ ಕುಳಿತುಕೊಂಡರೂ ಬಿಸಿ ಗಾಳಿಯಿಂದ ಬಿಸಿ ಬಿಸಿ ಅನುಭವವಾಗುತ್ತಿದೆ. ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವ ಎಂದು ಮನಸ್ಸು ಬಯಸಿದ್ರು ಟ್ಯಾಂಕ್ (Tank) ನಲ್ಲಿ ತುಂಬಿಸಿಟ್ಟ ನೀರು ಬಿಸಿಯಾಗಿರುತ್ತದೆ. ಈ ಋತುವಿನಲ್ಲಿ ಬಿಸಿಲು ಮತ್ತು ಶಾಖದಿಂದಾಗಿ ಟ್ಯಾಂಕ್‌ನಲ್ಲಿನ ನೀರು ತುಂಬಾ ಬಿಸಿಯಾಗುತ್ತದೆ. ಆದರೆ ಟ್ಯಾಂಕ್ ನಲ್ಲಿದ್ದ ನೀರನ್ನು ಸಂಪೂರ್ಣವಾಗಿ ತಂಪಾಗಿಸಲು ಈ ಕೆಲವು ಸಲಹೆಗಳು ಉಪಯೋಗವಾಗಬಹುದು.