ಸಾಂದರ್ಭಿಕ ಚಿತ್ರ
ಮಾರುಕಟ್ಟೆಗೆ ಬಣ್ಣ ಬಣ್ಣದ ಆಕರ್ಷಕ ಶೂ (Shoe) ಗಳು ಲಗ್ಗೆ ಇಟ್ಟು ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತವೆ. ಈ ಶೂಗಳಲ್ಲಿಯೂ ಸಾಕಷ್ಟು ವೆರೈಂಟಿಗಳನ್ನು ಕಾಣಬಹುದು. ಕೆಲವರು ತಮ್ಮ ಉಡುಗೆ ತೊಡುಗೆಗೆ ಮ್ಯಾಚ್ ಆಗುವಂತೆ ಶೂ ಖರೀದಿಸಿ ಧರಿಸುತ್ತಾರೆ. ಆದರೆ ಕೆಲವರು ಬೇಸಿಗೆ (Summer) ಯಲ್ಲಿ ದಿನವಿಡೀ ಶೂ ಧರಿಸಿ ಓಡಾಡುವುದನ್ನು ನೋಡಿರಬಹುದು. ಈ ಋತುವಿನಲ್ಲಿ ಶೂ ಧರಿಸುವುದು ಎಷ್ಟು ಸೂಕ್ತ?, ಅದಲ್ಲದೇ ಬೇಸಿಗೆಯಲ್ಲಿ ಶೂಗೆ ಹೆಚ್ಚು ಆದ್ಯತೆ ನೀಡುವವರು ಈ ಕೆಲವು ವಿಷಯಗಳನ್ನು ತಿಳಿದುಕೊಂಡಿದ್ದರೆ ಒಳ್ಳೆಯದು.
ಬೇಸಿಗೆಯಲ್ಲಿ ಶೂ ಧರಿಸುವವರಿಗೆ ಇಲ್ಲಿದೆ ಕಿವಿಮಾತು
- ಬೇಸಿಗೆಯಲ್ಲಿ, ಪಾದಗಳಿಗೆ ಉಸಿರಾಡಲು ಅವಕಾಶ ಕೊಡಿ ಹೆಚ್ಚಿನವರು ದಿನಾಪೂರ್ತಿ ಶೂ ಹಾಕಿಕೊಂಡಿರುತ್ತಾರೆ. ಮನೆಗೆ ಬಂದ ಮೇಲೆ ಮತ್ತೆ ಸಾಕ್ಸ್ ಹಾಕಿ ಕೊಂಡು ಓಡಾಡಬೇಡಿ. ಬಿಸಿಲು ಮತ್ತು ಶಾಖದಿಂದಾಗಿ ಪಾದಗಳು ಹೆಚ್ಚು ಬೆವರುತ್ತದೆ. ಶೂಗಳು ಬಿಗಿಯಾಗಿರುವುದರಿಂದ ಇದು ಈ ಪಾದದ ವಾಸನೆಗೆ ಕಾರಣವಾಗುತ್ತದೆ. ಈ ಋತುವಿನಲ್ಲಿ ಲೆದರ್ ಶೂಗಳನ್ನು ಧರಿಸುವುದನ್ನು ಆದಷ್ಟು ತಪ್ಪಿಸಬೇಕು.
- ಬೇಸಿಗೆಯಲ್ಲಿ, ತುಂಬಾ ಬಿಗಿಯಾಗಿಲ್ಲದ ಶೂಗಳು ಅಥವಾ ಪಾದರಕ್ಷೆಗಳನ್ನು ಖರೀದಿಸಿ. ತುಂಬಾ ಬಿಗಿಯಾದ ಶೂಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ಸಮಸ್ಯೆಗಳು, ಊತ ಮತ್ತು ಪಾದಗಳಲ್ಲಿ ನೋವು ಕಂಡು ಬರುತ್ತದೆ.
- ದಿನವಿಡೀ ಗಾಳಿಯ ಪ್ರಸರಣವಿಲ್ಲದೇ ಪಾದಗಳನ್ನು ಶೂಗಳಲ್ಲಿ ಇರಿಸಿದರೆ ಬ್ಯಾಕ್ಟೀರಿಯಾದ ಸೋಂಕು ಮತ್ತು ಶಿಲೀಂಧ್ರಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಸಮಸ್ಯೆಗಳು ಬರದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ಹೀಗಾಗಿ ಗಾಳಿಯಾಡುವ ಹಗುರವಾದ ಪಾದರಕ್ಷೆಗಳ ಧರಿಸುವುದು ಉತ್ತಮ.
- ಒಂದು ವೇಳೆ ಶೂ ಧರಿಸುವವರು ಕಾಲಕಾಲಕ್ಕೆ ಶೂಗಳನ್ನು ಸ್ವಚ್ಛಗೊಳಿಸುತ್ತ ಇರಿ. ಬೂಟುಗಳು ಮತ್ತು ಸಾಕ್ಸ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅದು ನಿಮ್ಮ ಪಾದಗಳ ಚರ್ಮದ ಸೋಂಕಿಗೆ ಕಾರಣವಾಗಬಹುದು.
- ಬೇಸಿಗೆಯಲ್ಲಿ ಭಾರವಾದ ಶೂಗಳನ್ನು ಧರಿಸಬೇಡಿ. ಇದು ನಿಮ್ಮ ಪಾದಗಳನ್ನು ಹೆಚ್ಚು ಬೆವರು ಮಾಡುವಂತೆ ಮಾಡುತ್ತದೆ. ಯಾವಾಗಲೂ ಬಟ್ಟೆಯಿಂದ ಮಾಡಿದ ಶೂ ಹಾಗೂ ಹತ್ತಿ ಸಾಕ್ಸ್‌ಗಳನ್ನು ಶೂಗಳೊಂದಿಗೆ ಧರಿಸಿ. ಈ ಸಮಯದಲ್ಲಿ, ನೈಲಾನ್ ಅಥವಾ ಪಾಲಿಯೆಸ್ಟರ್ ಬಟ್ಟೆಯಿಂದ ಮಾಡಿದ ಸಾಕ್ಸ್ ಧರಿಸುವುದನ್ನು ಆದಷ್ಟು ತಪ್ಪಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ