ಬೇಸಿಗೆ ಪ್ರಾರಂಭವಾಗಿದೆ, ಜೊತೆಗೆ ಇದು ಮದುವೆಯ ಸೀಸನ್ ಕೂಡ ಹೌದು. ಆದರೆ ಈ ಸುಡು ಬಿಸಿಲು ಹಾಗೂ ಸೆಕೆಯ ಮದುವೆ ಸಮಾರಂಭಗಳಲ್ಲಿ ಹೇಗಪ್ಪ ಭಾಗಿಯಾಗಿವುದು ಎಂಬುದು ಸಾಕಷ್ಟು ಜನರ ಚಿಂತೆ. ಹೌದು ಮದುವೆ ಸಮಾರಂಭಗಳಿಗಾಗಿಯೇ ದುಬಾರಿ ಬೆಲೆಯ ಬಟ್ಟೆಗಳನ್ನು, ಆಭರಣಗಳನ್ನು ಧರಿಸುವುದಂತೂ ಸಾಮಾನ್ಯ. ಆದರೆ ಬೇಸಿಗೆಯಲ್ಲಿ ಸಾಕಷ್ಟು ಆಭರಣಗಳು ಹಾಗೂ ಗ್ರ್ಯಾಂಡ್ ಬಟ್ಟೆಗಳು ಸಾಕಷ್ಟು ಕಿರಿ ಕಿರಿಯನ್ನುಂಟು ಮಾಡುತ್ತವೆ. ಆದ್ದರಿಂದ ಈ ಬೇಸಿಗೆಯಲ್ಲಿ ಮದುವೆ ಸಮಾರಂಭಗಳಿಗೆ ಯಾವ ರೀತಿ ಬಟ್ಟೆಗಳನ್ನು ಧರಿಸಬೇಕು ಎಂದು ಕಾಸ್ಟೂಮ್ ಡಿಸೈನರ್ ರಿಧಿ ಮೆಹ್ರಾ ಹೆಚ್ ಟಿ ಲೈಫ್ಸ್ಟೈಲ್ನ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.
ಮದುವೆ ಸಮಾರಂಭಗಳಲ್ಲಿ ಸಾಮಾನ್ಯ ವಧು ವರರಿಗೆ ಗಾಢ ಬಣ್ಣದ ಬಟ್ಟೆಗಳನ್ನೇ ಆಯ್ಕೆ ಮಾಡುತ್ತಾರೆ. ಗಾಢ ಕೆಂಪು, ಕೇಸರಿ , ಹಳದಿ ಬಣ್ಣಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ವಿಶೇಷವಾಗಿ ಬೇಸಿಗೆಯಲ್ಲಿ ಇಂತಹ ಬಟ್ಟೆಗಳು ಅಧಿಕ ಸೆಕೆ ಹಾಗೂ ಸಾಕಷ್ಟು ಕಿರಿಕಿರಿಯನ್ನುಂಟು ಮಾಡಬಹುದು. ಆದ್ದರಿಂದ ಈ ಗಾಢ ಬಣ್ಣದ ಬಟ್ಟೆಗಳಿಗೆ ಪರ್ಯಾಯವಾಗಿ ಲ್ಯಾವೆಂಡರ್, ತಿಳಿ ನೀಲಿಬಣ್ಣದ ಛಾಯೆಗಳು ಬೇಸಿಗೆಯ ವಿವಾಹಗಳಿಗೆ ಹಸಿರು ಮತ್ತು ಪುಡಿ ನೀಲಿ ಬಣ್ಣವು ಉತ್ತಮ ಆಯ್ಕೆಯಾಗಿದೆ ಎಂದು ರಿಧಿ ಮೆಹ್ರಾ ಹೇಳುತ್ತಾರೆ.
ಇದನ್ನೂ ಓದಿ: ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಇದ್ದಿಲಿನ ಪಾತ್ರವನ್ನು ತಿಳಿದುಕೊಳ್ಳಿ
ಸಾಮಾನ್ಯವಾಗಿ ಮದುವೆ ಸಮಾರಂಭವೆಂದರೆ ಲೆಹೆಂಗಾ, ಸೀರೆಗಳೇ ಮೊದಲ ಆಯ್ಕೆಯಾಗಿರುತ್ತದೆ. ಆದರೆ ವಿಶೇಷವಾಗಿ ಬೇಸಿಗೆಯಲ್ಲಿ ಮದುವೆ ನಡೆಯುತ್ತಿದ್ದರೆ ಆದಷ್ಟು ಹಗುರವಾಗಿ ವಿನ್ಯಾಸಗೊಳಿಸಿರುವ ಬಟ್ಟೆಗಳನ್ನು ಆಯ್ಕೆ ಮಾಡಿ. ಚಿಫೋನ್, ಜಾರ್ಜೆಟ್ ಮತ್ತು ಆರ್ಗನ್ಜಾದಂತಹ ಹಗುರವಾದ ಬಟ್ಟೆಗಳನ್ನು ಆಯ್ದು ಕೊಳ್ಳಿ, ಇದು ಬೇಸಿಗೆಯ ಶಾಖದಲ್ಲಿಯೂ ಕೂಡ ತಂಪಾಗಿರುತ್ತದೆ ಮತ್ತು ಆರಾಮದಾಯಕವಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:04 pm, Sat, 1 April 23