Sweet Potatoes: ಚಳಿಗಾಲದಲ್ಲಿ ಸಿಹಿಗೆಣಸು ತಿನ್ನುವ ಆಸೆಯೇ, ಆದರೆ ಅವುಗಳನ್ನು ಈ ವಿಧಾನದಲ್ಲಿ ಬೇಯಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 02, 2023 | 6:54 PM

ಸಿಹಿಗೆಣಸು ಚಳಿಗಾಲದಲ್ಲಿ ಹೆಚ್ಚು ಆನಂದಿಸುವ ತಿಂಡಿ. ಇದು ರುಚಿಕರವಾಗಿರುತ್ತದೆ, ಬೆಚ್ಚಗಾಗಿರುತ್ತವೆ ಮತ್ತು ಆರೋಗ್ಯಕರವಾಗಿರುತ್ತದೆ. ಈ ಸಿಹಿಗೆಣಸಿನಿಂದ ಶರ್ಕಂಡಿ ಚಾಟ್, ಚಿಪ್ಸ್ ಹಾಗೂ ಇನ್ನು ಅನೇಕ ಬಗೆಯ ತಿನಿಸನ್ನು ತಯಾರಿಸಬಹುದು. ಆದರೆ ಅದನ್ನು ಬೇಯಿಸಲು ಹಲವು ಹಂತಗಳು ಇವೆ.

Sweet Potatoes: ಚಳಿಗಾಲದಲ್ಲಿ ಸಿಹಿಗೆಣಸು ತಿನ್ನುವ ಆಸೆಯೇ, ಆದರೆ ಅವುಗಳನ್ನು ಈ ವಿಧಾನದಲ್ಲಿ ಬೇಯಿಸಿ
ಸಾಂದರ್ಭಿಕ ಚಿತ್ರ
Follow us on

ಸಿಹಿ ಗೆಣಸು ಚಳಿಗಾಲದ ಸಮಯದಲ್ಲಿ ಸಂಪೂರ್ಣವಾಗಿ ರುಚಿಕರವಾದ ಮತ್ತು ಆರೋಗ್ಯಕರ ತಿಂಡಿಯ ಆಯ್ಕೆಯಾಗಿದೆ. ಅವುಗಳನ್ನು ಹೇಗೆ ಬೇಯಿಸುವುದು ಎಂಬುದು ಇಲ್ಲಿದೆ. ಸಿಹಿಗೆಣಸು ಚಳಿಗಾಲದಲ್ಲಿ ಹೆಚ್ಚು ಆನಂದಿಸುವ ತಿಂಡಿ. ಇದು ರುಚಿಕರವಾಗಿರುತ್ತದೆ, ಬೆಚ್ಚಗಾಗಿರುತ್ತವೆ ಮತ್ತು ಆರೋಗ್ಯಕರವಾಗಿರುತ್ತದೆ. ಈ ಸಿಹಿಗೆಣಸಿನಿಂದ ಶರ್ಕಂಡಿ ಚಾಟ್, ಚಿಪ್ಸ್ ಹಾಗೂ ಇನ್ನು ಅನೇಕ ಬಗೆಯ ತಿನಿಸನ್ನು ತಯಾರಿಸಬಹುದು. ಯಾವುದೇ ಖಾದ್ಯವನ್ನು ತಯಾರಿಸಲು ನೀವು ಮೊದಲು ಸಿಹಿಗೆಣಸನ್ನು ಬೇಯಿಸಬೇಕು. ಇದರಿಂದ ಅವು ಮೃದುವಾಗುತ್ತದೆ. ಮತ್ತು ಬಾಯಿಯಲ್ಲಿ ಕರಗುತ್ತದೆ. ಸಿಹಿಗೆಣಸನ್ನು ಬೇಯಿಸುವುದು ಹೇಗೆ ಎಂದು ನೋಡೋಣ.

ಸಿಹಿ ಗೆಣಸು ನಿಸ್ಸಂದೇಹವಾಗಿ ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ ಮತ್ತು ಯಾವುದೇ ಅಪರಾಧವಿಲ್ಲದೆ ಇದರ ಸವಿಯಾದ ಖಾದ್ಯಗಳನ್ನು ಆನಂದಿಸಬಹುದು. ಇವುಗಳು ಹೆಚ್ಚಿನ ಫೈಬರ್ ಮತ್ತು ನೀರಿನ ಅಂಶವನ್ನು ಹೊಂದಿರುತ್ತದೆ. ಇದು ಧೀರ್ಘ ಕಾಲದವರೆಗೆ ನಮ್ಮನ್ನು ಹೊಟ್ಟೆ ತುಂಬಿರುವಂತೆ ಮಾಡಲು ಮತ್ತು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದು ಪತ್ರಿಯಾಗಿ ತೂಕ ಇಳಿಕೆಯನ್ನು ಉತ್ತೇಜಿಸುತ್ತದೆ. ಈ ಸಿಹಿಗೆಣಸು ವಿಟಮಿನ್ ಬಿ ಯ ಸಮೃದ್ಧ ಮೂಲವಾಗಿದೆ. ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದರಲ್ಲಿರುವ ಕ್ಯಾರೊಟಿನಾಯ್ಡ್‍ಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನು ಓದಿ:lifestyle: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ

ಇದು ಪ್ರತಿದಿನ ಸೀಮಿತ ಪ್ರಮಾಣದಲ್ಲಿ ತಿನ್ನಬಹುದಾದ ಒಂದು ಆಹಾರವಾಗಿದೆ. ಮಧುಮೇಹಿಗಳು ಸಹ ಇದರ ಸದುಪಯೋಗವನ್ನು ಪಡೆಯಬಹುದು. ಸಿಹಿಗೆಣಸು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿರುತ್ತದೆ, ಅಂದರೆ ಸಿಹಿಗೆಣಸು ಇತರ ಹೆಚ್ಚಿನ ಜಿಐ ಆಹಾರಗಳಂತೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.

ತುಂಬಾ ರುಚಿಕರವಾದ ಸಿಹಿಗೆಣಸನ್ನು ಈ ಚಳಿಗಾಲದ ಋತುವಿನಲ್ಲಿ ಹೇಗೆ ಬೇಯಿಸುವುದು ಎಂಬ ವಿಧಾನ ಇಲ್ಲಿದೆ:

ಹಂತ 1

ನೀವು ಮೃದುವಾಗಿರದೆ ಮತ್ತು ಒದ್ದೆಯಾಗಿರದೆ ಇರುವ ಗಟ್ಟಿಯಾಗಿರುವ ಸಿಹಿ ಗೆಣಸನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿರುವ ಮಣ್ಣು ಹಾಗೂ ಕೊಳಕು ಅಂಶಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ಹಂತ 2

ನೀವು ಸಿಹಿಗೆಣಸನ್ನು ತೊಳೆದ ನಂತರ, ನೀವು ಅವುಗಳನ್ನು ದಪ್ಪ ತಳವಿರುವ ಪ್ಯಾನ್ ಅಥವಾ ಕಡಾಯಿಯಲ್ಲಿ ಹಾಕಬೇಕು. ಮತ್ತು ಗೆಣಸಿನ ಸಿಪ್ಪೆ ತೆಗೆಯಬೇಡಿ ಹಾಗೂ ಕತ್ತರಿಸಬೇಡಿ. ಅವುಗಳನ್ನು ಹಾಗೆಯೇ ಬಿಸಿ ಮಾಡಿ.

ಹಂತ 3

ಈ ಸಿಹಿಗೆಣಸನ್ನು ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ, ಅವುಗಳು ಮೃದುವಾಗುವವರೆಗೆ ಬೇಯಿಸಿ. 15 ನಿಮಿಷ ಬೇಯಿಸಿ ನಂತರ ಅವುಗಳನ್ನು ತಿರುಗಿಸಿ ಮತ್ತೆ ಮುಚ್ಚಳವನ್ನು ಮುಚ್ಚಿ. ಮತ್ತು ಅದು ಬೇಯುವವರೆಗೆ ಇದೇ ರೀತಿ ಮಾಡಿ. ಸಿಹಿಗೆಣಸು ಬೆಂದಿದೆಯೇ ಎಂದು ಪರೀಕ್ಷಿಸಲು ಅದಕ್ಕೆ ಚಾಕು ಚುಚ್ಚಿ ನೋಡಬಹುದು.

ಹಂತ 4

ಸಿಹಿ ಗೆಣಸು ಬೆಂದ ನಂತರ ನೀವು ಅದರ ಸಿಪ್ಪೆ ತೆಗೆದು ಹಾಗೆಯೇ ತಿನ್ನಬಹುದು ಅಥವಾ ಸಿಹಿಗೆಣಸಿನ ಚಾಟ್ ಅಥವಾ ಅದರ ಯಾವುದೇ ಪಾಕ ವಿಧಾನವನ್ನು ಮಾಡಬಹುದು.

ಹಂತ 5

ಸಿಹಿ ಗೆಣಸನ್ನು ಬೇಯಿಸಲು ಇದು ಒಂದೇ ಮಾರ್ಗವಲ್ಲ. ನೀವು ಅವುಗಳನ್ನು ಕುಕ್ಕರ್​​ನಲ್ಲಿಯೂ ಬೇಯಿಸಬಹುದು ಹಾಗೂ ಒಲೆಯಲ್ಲಿಯೂ ಬೇಯಿಸಬಹುದು. ಒಲೆಯಲ್ಲಿ ಬೇಯಿಸುವಾಗ ಅವುಗಳನ್ನು ಫಾಯಿಲ್‍ನಿಂದ ಮುಚ್ಚಿ ಮತ್ತು 350 ಡಿಗ್ರಿ ಸೆಲ್ಸಿಯಸ್‍ನಲ್ಲಿ 30 ನಿಮಿಷಗಳ ಕಾಲ ಅಥವಾ ಅವುಗಳ ಸಿಪ್ಪೆ ಗರಿಗರಿಯಾಗುವವರೆಗೆ ಮತ್ತು ಅದರ ಒಳಭಾಗವು ಮೃದುವಾಗುವವರೆಗೆ ಬೇಯಿಸಿ. ಮನೆಯಲ್ಲಿ ಸಿಹಿಗೆಣಸು ಬೇಯಿಸಲು ಈ ವಿಧಾನವನ್ನು ಪ್ರಯತ್ನಿಸಿ ಮತ್ತು ಸಂಪೂರ್ಣವಾಗಿ ಆರೋಗ್ಯಕರ ಚಳಿಗಾಲದ ಚಾಟ್ ಸವಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ