Tamarind Drink: ಹುಣಸೆ ಹಣ್ಣಿನ ಹಿತವಾದ ಪಾನಕ ಮಾಡುವ ವಿಧಾನ ಇಲ್ಲಿದೆ
ರುಚಿಯ ಜೊತೆಗೆ ಹುಣಸೆ ಹಣ್ಣಿನಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದ್ದರಿಂದ ಮನೆಯಲ್ಲಿಯೇ ಆರೋಗ್ಯಕರ ಹುಣಸೆ ಹಣ್ಣಿನ ಹಿತವಾದ ಪಾನಕ ತಯಾರಿಸಿ ಸವಿಯಿರಿ.
ಹುಣಸೆ ಹಣ್ಣಿನ ಪಾನಕ
Follow us on
ಈಗ ಹುಣಸೆ(Tamarind) ಹಣ್ಣಿನ ಹಂಗಾಮು ಶುರುವಾಗಿದೆ. ತಾಜ ಹಣ್ಣಿನಲ್ಲಿ ಹಿತವಾದ ಹುಳಿ ಸಿಹಿ ಮಿಶ್ರಣ ಇರುತ್ತದೆ. ಹಣ್ಣು ಹಳೆಯದಾದಷ್ಟು ಹುಳಿ ಹೆಚ್ಚುತ್ತದೆ. ರುಚಿಯ ಜೊತೆಗೆ ಹುಣಸೆ ಹಣ್ಣಿನಲ್ಲಿ ಸಾಕಷ್ಟು ಆರೋಗ್ಯಪ್ರಯೋಜನಗಳನ್ನು ಕಾಣಬಹುದು. ಆದ್ದರಿಂದ ಮನೆಯಲ್ಲಿಯೇ ಆರೋಗ್ಯಕರ ಹುಣಸೆ ಹಣ್ಣಿನ ಹಿತವಾದ ಪಾನಕ ತಯಾರಿಸಿ ಸವಿಯಿರಿ. ಹೃದಯ, ಕಿಡ್ನಿ, ಯಕೃತ್ ಗಳ ಆರೋಗ್ಯ ರಕ್ಷಣೆಗೆ ನೆರವಾಗುವ ಹುಣಸೆ ಹಣ್ಣು ಶುಚಿಕಾರಕವೂ ಹೌದು. ಪಾನಕ ಕುಡಿದ ಬಳಿಕ ಬೀಜಕ್ಕೆ ಅಂಟಿಕೊಂಡ ತಿರುಳನ್ನು ಬಾಯಲ್ಲಿ ಹಾಕಿಕೊಂಡು ಸವಿಯಬಹುದು. ಬೇರ್ಪಡಿಸಿದ ಬೀಜಗಳನ್ನು ಸುಟ್ಟುಕೊಂಡು ಅಥವಾ ಹುರಿದುಕೊಂಡು ಸಿಪ್ಪೆ ತೆಗೆದು ನೆನಸಿಟ್ಟು ತಿನ್ನುತಿದ್ದರೆ ಮಂಡಿ ನೋವು ಬೇಗ ವಾಸಿ ಆಗುತ್ತದೆ ಎಂದು ಅನುಭವಿಗಳು ಹೇಳುತ್ತಾರೆ. ಹುರಿದ ಬೀಜಗಳು ರುಚಿಯಾಗಿರುತ್ತವೆ.
ಹುಣಸೆ ಹಣ್ಣಿನ ಪಾನಕ ಮಾಡುವ ವಿಧಾನ:
ಹಣ್ಣಿನ ಸಿಪ್ಪೆಯನ್ನು ಬಿಡಿಸಿಕೊಂಡು ನೀರಲ್ಲಿ ತುಸು ಹೊತ್ತು ನೆನೆಯಲು ಬಿಡಿ.
ಜೀರಿಗೆ, ಶುಂಠಿ, ಕರಿಬೇವು ಸೇರಿಸಿ ಉಪ್ಪಿನೊಂದಿಗೆ ಕುಟ್ಟಿಕೊಂಡು ನೆನೆಸಿಟ್ಟ ಹುಣಸೆ ಹಣ್ಣಿಗೆ ಹಾಕಿಕೊಳ್ಳಿ.
ಬಳಿಕ ಬೆಲ್ಲವನ್ನು ಸೇರಿಸಿ ಕಿವುಚಿಕೊಂಡರೆ ಹಣ್ಣಿನ ತಿರುಳಿನ ಸಾರವು ಬಿಟ್ಟುಕೊಳ್ಳುತ್ತದೆ, ಸಿಹಿ ಹಾಗೂ ಸುವಾಸನೆಯೊಂದಿಗೆ ಸೇರಿಕೊಳ್ಳುತ್ತದೆ.
ಒಂದು ಲೋಟ ನೀರಿಗೆ 2-4 ಹುಣಸೆ ಹಣ್ಣು ಹಾಕಿ ತಯಾರಿಸಿದ ಪಾನಕ ಒಬ್ಬರಿಗೆ ಸಾಕಾದೀತು. ರುಚಿಕರವಾದ ಈ ಪಾನಕ ಹಿತವಾಗಿರುತ್ತದೆ.