ಕೋತಿಗಳ ಸಾಮ್ರಾಜ್ಯದಲ್ಲಿ ಆಕರ್ಷಕ ಪ್ರೊಬೊಸ್ಕಿಸ್ ತಳಿ; ಉದ್ದನೆಯ ಮೂಗುಳ್ಳ ಈ ಕೋತಿಯ ವಿಶೇಷತೆಯೇನು?

ಮಂಗಗಳು ಬುದ್ಧಿವಂತ ಪ್ರಾಣಿಗಳು. ಹೀಗಾಗಿ ಅವುಗಳ ನಡವಳಿಕೆ ಹಾಗೂ ವರ್ತನೆಗಳು ಮನುಷ್ಯರನ್ನು ಹೋಲುತ್ತವೆ. ಆದರೆ ಈ ಕೋತಿ ಮಾತ್ರ ನೋಡುವುದಕ್ಕೆ ಸ್ವಲ್ಪ ವಿಭಿನ್ನ. ತನ್ನ ನೀಳವಾದ ಮೂಗಿನಿಂದ ಎಲ್ಲರ ಹುಬ್ಬೇರಿಸುವಂತೆ ಮಾಡುವ ಈ ಕೋತಿಯೇ ಪ್ರೊಬೊಸ್ಕಿಸ್. ಇದೇನಪ್ಪಾ ಇಷ್ಟೊಂದು ಉದ್ದವಾದ ಮೂಗು ಎಂದೆನಿಸಬಹುದು. ಈ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಕೋತಿಗಳ ಸಾಮ್ರಾಜ್ಯದಲ್ಲಿ ಆಕರ್ಷಕ ಪ್ರೊಬೊಸ್ಕಿಸ್ ತಳಿ; ಉದ್ದನೆಯ ಮೂಗುಳ್ಳ ಈ ಕೋತಿಯ ವಿಶೇಷತೆಯೇನು?
ಪ್ರೊಬೊಸ್ಕಿಸ್ ಮಂಗ

Updated on: Sep 18, 2025 | 7:00 PM

ಸಾಮಾನ್ಯವಾಗಿ ಅತಿಯಾಗಿ ಆಡಿದ್ರೆ, ಮಂಗನಂತೆ (Monkey) ವರ್ತಿಸಬೇಡ ಎಂದು ಹೇಳುತ್ತೇವೆ. ನೀವು ಸಾಮಾನ್ಯವಾಗಿ ಮಂಗಗಳನ್ನು ನೋಡಿರುತ್ತೀರಿ. ಆದರೆ ಈ ಮಂಗ ಮಾತ್ರ ನೋಡಲು ಆಕರ್ಷಕ ಹಾಗೂ ಇದರ ದೇಹಾಕೃತಿಯೂ ಸ್ವಲ್ಪ ವಿಭಿನ್ನ. ಹೌದು, ಈ ವಿಶೇಷ ತಳಿಯ ಹೆಸರು ಪ್ರೊಬೊಸ್ಕಿಸ್ (Proboscis). ಈ ಕೋತಿಯನ್ನು ನೋಡಿದ ತಕ್ಷಣ ಇದೇನು ಮೂಗಾ ಎನ್ನುವ ಪ್ರಶ್ನೆಯೊಂದು ಮೂಡುತ್ತದೆ. ನೀಳವಾದ ಮೂಗು ಈ ಕೋತಿಯ ಅತ್ಯಂತ ಆಕರ್ಷಕ ಭಾಗವಾಗಿದೆ. ಹಾಗಾದ್ರೆ ಏನಿದರ ವಿಶೇಷತೆಯೇನು? ಈ ಕೋತಿಗಳು ಹೆಚ್ಚಾಗಿ ಎಲ್ಲಿ ಕಾಣಸಿಗುತ್ತದೆ? ಇದರ ಜೀವನ ಕ್ರಮ ಇತರ ಕೋತಿಗಳಿಗಿಂತ ಹೇಗೆ ಭಿನ್ನವಾಗಿರುತ್ತದೆ? ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ನೋಡಲು ಆಕರ್ಷಕ ಏಕೆ?

ಪ್ರೊಬೊಸ್ಕಿಸ್ ಮಂಗ ಅಥವಾ ಕೋತಿಯೂ ನೋಡಲು ತನ್ನ ನೀಳವಾದ ಮೂಗಿನಿಂದಲೇ ಆಕರ್ಷಕವಾಗಿದೆ. ಮುಖದ ತುಂಬಾ ಆವರಿಸಿಕೊಂಡಿರುವ ಉದ್ದನೆಯ ಮೂಗು, ಗಂಡು ಹೆಣ್ಣಿಗಿಂತ ಸ್ವಲ್ಪ ಉದ್ದನೆಯ ಮೂಗನ್ನು ಹೊಂದಿರುತ್ತವೆ. ತಿಳಿ ಕಂದು, ಕಪ್ಪು ಹಾಗೂ ಬಿಳಿ ಬಣ್ಣದ ತುಪ್ಪಳವನ್ನು ಹೊಂದಿದ್ದು, ಅಂಗೈಯ ಬಣ್ಣ ಕಪ್ಪು. ಉದ್ದನೆಯ ಬಾಲ, ತಲೆಭಾಗದಲ್ಲಿ ಕಂದು ಬಣ್ಣದ ಕೂದಲು ಹಾಗೂ ಮನುಷ್ಯಂತೆ ಹೋಲುವ ಕಿವಿಗಳು. ಹೀಗಾಗಿ ಬೇರೆ ತಳಿಯ ಕೋತಿಗಳಿಗೆ ಹೋಲಿಸಿದರೆ ಇದು ಸ್ವಲ್ಪ ವಿಭಿನ್ನ ಎನ್ನಬಹುದು.

ಇದನ್ನೂ ಓದಿ
ನೋಡಲು ಆಕರ್ಷಕ, ಈ ಮಂಗಟ್ಟೆ ಹಕ್ಕಿಗಳ ಬದುಕು ಇನ್ನೂ ರೋಚಕ
ನಾಗರಹಾವುಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳೇನು?
ಶ್ವಾನಗಳು ನಿಮ್ಮ ಭವಿಷ್ಯ ಹೇಳುತ್ತೆ, ಅದೇಗೆ ಅಂತೀರಾ?
ಮಳೆಗಾಲದಲ್ಲಿ ಕಪ್ಪೆಗಳು ಮನೆಯೊಳಗೆ ಬಂದ್ರೆ ಅದೃಷ್ಟ ಖುಲಾಯಿಸುತ್ತಾ?

ಹೆಚ್ಚಾಗಿ ಎಲ್ಲಿ ಕಾಣಸಿಗುತ್ತದೆ?

ಜೀವ ಸಂಕುಲಗಳಲ್ಲಿ ವಿಶೇಷ ಹಾಗೂ ಆಕರ್ಷಕ ಪ್ರಾಣಿಗಳ ಸಾಲಿಗೆ ಸೇರುವ ಈ ಪ್ರೊಬೊಸ್ಕಿಸ್ ಮಂಗವೂ ಇದು ಏಷ್ಯಾದ ಅತಿ ದೊಡ್ಡದಾದ ಕೋತಿಯ ತಳಿಗಳಲ್ಲಿ ಒಂದು. ಇಂಡೊನೇಷ್ಯಾದ ಬೊರ್ನೋಯೊ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇನ್ನು, ನದಿ ಸುತ್ತಮುತ್ತಲಿನ ಪ್ರದೇಶ, ಜೌಗು ಪ್ರದೇಶಗಳು ಇವುಗಳ ಪ್ರಮುಖ ನೆಲೆಗಳಾಗಿವೆ.

ಇದನ್ನೂ ಓದಿ: ನೋಡಲು ಆಕರ್ಷಕ, ಈ ಮಂಗಟ್ಟೆ ಹಕ್ಕಿಗಳ ಬದುಕು ಇನ್ನೂ ರೋಚಕ

ಆಹಾರ ಹಾಗೂ ಜೀವನ ಕ್ರಮ ಹೇಗಿರುತ್ತದೆ?

ನೋಡಲು ಆಕರ್ಷಕ ಎನಿಸುವ ಪ್ರೊಬೊಸ್ಕಿಸ್ ಮಂಗಗಳು ಎಲೆಗಳು, ಕಾಳುಗಳು ಹಾಗೂ ಹಣ್ಣುಗಳನ್ನು ತಿಂದು ಬದುಕುತ್ತವೆ. ಸದಾ ಮರದ ಮೇಲೆ ಇರುವ ಈ ಪ್ರೊಬೊಸ್ಕಿಸ್ ಆಹಾರ ಹುಡುಕಾಟಕ್ಕಾಗಿ ಮಾತ್ರ ಮರದಿಂದ ಕೆಳಗೆ ಇಳಿಯುವುದು ವಿಶೇಷ. ಸದಾ ತನ್ನ ಸಂಗಾತಿ ಹಾಗೂ ಬಳಗದೊಂದಿಗೆ ಗುಂಪಿನಲ್ಲಿ ವಾಸಿಸಲು ಬಯಸುವ ಈ ಪ್ರೊಬೊಸ್ಕಿಸ್ ಮಂಗಗಳು ಅಪಾಯಗಳು ಎದುರಾದಾಗ ತನ್ನ ಬಳಗಕ್ಕೆ ಕಿರುಚಿ ಕೂಗಿ ಕರೆಯುತ್ತವೆ. ಈ ಕೋತಿಗಳಿಗೆ ಈಜುವ ಕಲೆ ಚೆನ್ನಾಗಿ ಗೊತ್ತಿದೆ. ಸದಾ ಚುರುಕಿನಿಂದ ಕೂಡಿದ್ದು ರಾತ್ರಿಯ ವೇಳೆಯಲ್ಲಿ ಮರಗಳೇ ಇವುಗಳ ವಾಸಸ್ಥಾನ. ರೆಂಬೆ ಕೊಂಬೆಗಳ ಮೇಲೆ ನಿದ್ರಿಸುವ ಈ ಕೋತಿಗಳು ಒಂಟಿಯಾಗಿ ಇರುವುದಿಲ್ಲ. ಇನ್ನು, ತನ್ನ ಆಕರ್ಷಕ ಮೂಗಿನ ಮೂಲಕವೇ ಗಂಡು ಪ್ರೊಬೊಸ್ಕಿಸ್ ಗಳು ಹಾಗೂ ಹೆಣ್ಣುಗಳನ್ನು ಸೆಳೆಯುತ್ತವೆ. ಆಹಾರ ಸಿಗುವ ಸಮಯದಲ್ಲಿ ಮಾತ್ರ ಹೆಣ್ಣು ಪ್ರೊಬೊಸ್ಕಿಸ್ ಗಳು ಸಂತಾನೋತ್ಪತ್ನಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಇನ್ನು ಕೋತಿಗಳ ಜೀವಿತಾವಧಿ ಹದಿನೈದರಿಂದ ಇಪ್ಪತ್ತು ವರ್ಷಗಳ ಕಾಲ ಮಾತ್ರ. ಹೀಗಾಗಿ ತನ್ನದೇ ಆಹಾರ ಹಾಗೂ ಜೀವನಕ್ರಮದಿಂದ ಈ ಪ್ರೊಬೊಸ್ಕಿಸ್ ಕೋತಿಗಳು ವಿಭಿನ್ನ ಎನಿಸುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:59 pm, Thu, 18 September 25