
ಉಗುರು ಕಚ್ಚುವುದು (Nail biting) ಮಕ್ಕಳು ಮತ್ತು ವಯಸ್ಕರಲ್ಲಿ ಕಂಡುಬರುವ ಸಾಮಾನ್ಯ ಅಭ್ಯಾಸ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲದೆ, ಜ್ಯೋತಿಷ್ಯದ ಪ್ರಕಾರ, ಇದು ನಮ್ಮ ಜೀವನ ಮತ್ತು ಗ್ರಹಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿ ಉಗುರು ಕಚ್ಚುವುದರಿಂದ ದೇಹದಲ್ಲಿ ವಿವಿಧ ರೀತಿಯ ಕಾಯಿಲೆಗಳು ಕಂಡುಬರಬಹುದು. ಉಗುರುಗಳ ಕೆಳಗೆ ಮತ್ತು ನಮ್ಮ ಬೆರಳುಗಳ ಚರ್ಮದ ಮೇಲೆ ವಿವಿಧ ರೀತಿಯ ಬ್ಯಾಕ್ಟೀರಿಯಾಗಳು, ಸೂಕ್ಷ್ಮಜೀವಿಗಳು ಮತ್ತು ಧೂಳು ನಮಗರಿವಿಲ್ಲದಂತೆ ಸಂಗ್ರಹವಾಗಿರುತ್ತದೆ. ಆ ಉಗುರುಗಳನ್ನು ಕಚ್ಚಿದಾಗ, ಈ ಸೂಕ್ಷ್ಮಜೀವಿಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಪ್ರವೇಶಿಸಿ ಹೊಟ್ಟೆಯ ಅಸ್ವಸ್ಥತೆ, ಸೋಂಕು ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು. ಮಾತ್ರವಲ್ಲ ಜ್ಯೋತಿಷ್ಯದ ಪ್ರಕಾರ, ಉಗುರು ಕಚ್ಚುವ ಅಭ್ಯಾಸವು ವ್ಯಕ್ತಿಗಳ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ ಹಾಗಾದರೆ ಇದರಿಂದ ಯಾವ ರೀತಿಯ ತೊಂದರೆಗಳು ಉಂಟಾಗುತ್ತದೆ? ಯಾಕೆ ಈ ಅಭ್ಯಾಸ ಕೆಟ್ಟದ್ದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಉಗುರುಗಳನ್ನು ಬಾಯಿ ಮೂಲಕ ಕತ್ತರಿಸುವುದರಿಂದ ದೇಹದಲ್ಲಿ ವಿವಿಧ ರೀತಿಯ ಕಾಯಿಲೆಗಳು ಕಂಡುಬರಬಹುದು. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಉಗುರು ಕಚ್ಚುವ ಅಭ್ಯಾಸವು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪದೇ ಪದೇ ಉಗುರು ಕಚ್ಚುವ ವ್ಯಕ್ತಿಯ ಸೂರ್ಯ ಗ್ರಹವು ದುರ್ಬಲವಾಗುತ್ತದೆ ಇದರ ಪರಿಣಾಮ ವ್ಯಕ್ತಿಯ ಜೀವನದಲ್ಲಿ ಆತ್ಮ ವಿಶ್ವಾಸ ಕುಂಠಿತಗೊಳ್ಳುತ್ತದೆ, ವೃತ್ತಿಜೀವನದಳ್ಳಿ ಅಡೆತಡೆಗಳು ಬರಲು ಪ್ರಾರಂಭವಾಗುತ್ತದೆ. ನಾನಾ ರೀತಿಯ ತೊಂದರೆಗಳನ್ನು ಎದುರಿಸುತ್ತಾರೆ. ಇದಲ್ಲದೆ, ನಿರ್ಧಾರಗಳನ್ನು ತೆಗೆದುಕೊಳ್ಳುವ ಅವರ ಸಾಮರ್ಥ್ಯ ಕೂಡ ಕಡಿಮೆಯಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ಉಗುರು ಕಡಿಯುವುದು ಶನಿ ದೋಷದ ಸಂಕೇತವಾಗಿದೆ. ಇದರಿಂದ ಶನಿಯ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ಇದು ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮಾತ್ರವಲ್ಲ ಈ ಅಭ್ಯಾಸದಿಂದ ಜನರು ಜೀವನದಲ್ಲಿ ಹಣದ ಕೊರತೆ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಈ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸುವುದು ಬಹಳ ಉತ್ತಮ.
ಇದನ್ನೂ ಓದಿ: Nail Care: ನಿಮಗೆ ಉಗುರು ಕಚ್ಚುವ ಅಭ್ಯಾಸವಿದ್ದರೆ ಹೀಗೆ ಮಾಡಿ
ಉಗುರು ಕಚ್ಚುವ ಅಭ್ಯಾಸವನ್ನು ತಪ್ಪಿಸಲು ನಿಯಮಿತವಾಗಿ ಉಗುರುಗಳನ್ನು ಕತ್ತರಿಸಬೇಕು. ಮಾರುಕಟ್ಟೆಯಲ್ಲಿ ಕಹಿ ರುಚಿಯನ್ನು ಹೊಂದಿರುವ ವಿಶೇಷ ಉಗುರು ಬಣ್ಣ ಲಭ್ಯವಿದ್ದು ಇದನ್ನು ಹಚ್ಚಿಕೊಳ್ಳುವುದರಿಂದ ನಿಮ್ಮ ಉಗುರುಗಳನ್ನು ಕಚ್ಚುವ ಅಭ್ಯಾಸ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ, ಒತ್ತಡ ಅಥವಾ ಆತಂಕದಲ್ಲಿದ್ದಾಗ ಉಗುರು ಕಚ್ಚುತ್ತಾರೆ. ಹಾಗಾಗಿ ಇದನ್ನು ನಿಯಂತ್ರಿಸಲು ಯೋಗ ಮತ್ತು ಧ್ಯಾನ ಮಾಡಲು ಆದಷ್ಟು ಪ್ರಯತ್ನಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ