ಬೇಸಿಗೆಯಲ್ಲಿ ತೊಡುವ ಸ್ಟೈಲಿಶ್​ ಡ್ರೆಸ್​ಗಳು ಹೀಗಿರಲಿ; ಧರಿಸಿದ ನಿಮಗೂ ಹಿತವೆನಿಸಲಿ

| Updated By: Skanda

Updated on: Jun 12, 2021 | 9:48 AM

ಬೇಸಿಗೆಯ ಬೆವರಿಗೆ ಮೈಗಂಟುವ ವಸ್ತ್ರದಿಂದ ಆದಷ್ಟು ದೂರವಿದ್ದು ಸಡಿಲವಾದ ಉಡುಪಿನ ಜತೆಗೆ ಸ್ಟೈಲಿಶ್​ ಆಗುವಂತಹ ಡ್ರೆಸ್​ ಬಳಸಿ.

ಬೇಸಿಗೆಯಲ್ಲಿ ತೊಡುವ ಸ್ಟೈಲಿಶ್​ ಡ್ರೆಸ್​ಗಳು ಹೀಗಿರಲಿ; ಧರಿಸಿದ ನಿಮಗೂ ಹಿತವೆನಿಸಲಿ
ಸಾಂದರ್ಭಿಕ ಚಿತ್ರ
Follow us on

ಬಿಸಿಲು ಎಂಬ ಪದ ಕೇಳಿದಾಕ್ಷಣವೇ ಮೈ ಸುಡುವಂತೆ ಭಾಸವಾಗುತ್ತದೆ. ಬೇಸಿಗೆಯಲ್ಲಂತೂ ಹೊರಬೀಳಲೂ ಸಾಧ್ಯವಿಲ್ಲ. ಹೀಗಿರುವಾಗ ಭಾರವಾದ ಉಡುಪು ಧರಿಸಲು ಸಾಧ್ಯವೇ ಇಲ್ಲ. ಬೇಸಿಗೆಯಲ್ಲಿ ಎಂತಹ ಬಟ್ಟೆ ಧರಿಸಿದರೆ ಹಿತವೆನಿಸುತ್ತದೆ. ಹುಡುಗಿಯರಂತೂ ನೋಡಲು ಸ್ಟೈಲಿಶ್​ ಆಗುವ ಬಟ್ಟೆಗಳನ್ನೇ ಹೆಚ್ಚು ಆರಿಸುವುದು ಸಾಮಾನ್ಯ. ಸುಡು ಬಿಸಿಲಿನ ಬೆವರಿನಲ್ಲೂ ಸುಂದರವಾಗಿ ಕಾಣುವ ಒಂದಷ್ಟು ಉಡುಗೆಯ ರಹಸ್ಯದ ಕುರಿತು ತಿಳಿಯೋಣ.

ಉಡುಪು ಅಂದಾಕ್ಷಣ ಒಂದಷ್ಟು ಆಲೋಚನೆಗಳು ಎದುರಾಗುತ್ತವೆ. ಧರಿಸುವ ಬಟ್ಟೆ ನಮಗೆ ಸರಿ ಹೊಂದಬೇಕು. ನೋಡಲು ಲುಕ್​​ ಅನಿಸಬೇಕು. ಬಿಸಿಲಿನಲ್ಲಿ ರಂಗು ರಂಗಿನ ಬಟ್ಟೆ ಧರಿಸಲು ಸಾಧ್ಯವೇ ಇಲ್ಲ. ಹಾಗಿದ್ದಾಗ ಯಾವ ತರಹದ ಬಟ್ಟೆ ಧರಿಸಬಹುದು ಎಂಬುದಕ್ಕೆ ಕೆಲವು ಸಿಂಪಲ್​ ಟಿಪ್ಸ್​​ಗಳು ಇಲ್ಲಿವೆ.

ಬೇಸಿಗೆಯಲ್ಲಿ ಟೀ-ಶರ್ಟ್​ಗಿಂತ ಉತ್ತಮ ಉಡುಪು ಇನ್ನೊಂದಿಲ್ಲ. ಧರಿಸಲು ಹಗುರವಾಗಿರುತ್ತದೆ. ಹಾಗೂ ಮೈಗೆ ಅಂಟಿಕೊಳ್ಳುವ ಬಟ್ಟೆಯಲ್ಲ. ಮೊದಲೆಲ್ಲಾ ಹುಡುಗರು ಮಾತ್ರ ಟೀಶರ್ಟ್​ಗಳನ್ನು ಧರಿಸುತ್ತಿದ್ದರು. ಆದರೆ ಈಗಿನ ದಿನಮಾನಗಳು ಹಾಗಿಲ್ಲ. ಹುಡುಗಿಯರೂ ಕೂಡಾ ಅಂತಹ ಬಟ್ಟೆಗಳನ್ನೂ ಧರಿಸುತ್ತಾರೆ. ಹಾಗಾಗಿ ಬೇಸಿಗೆಯಲ್ಲಿನ ಬೆವರಿಗೆ ಅಂಟಿಕೊಳ್ಳದ ಟೀ-ಶರ್ಟ್​ಗಳನ್ನು ಧರಿಸಿ.

ಹುಡುಗಿಯರು ಸ್ಕರ್ಟ್​ ಧರಿಸಬಹುದು. ಸ್ಕರ್ಟ್​ ಕೂಡಾ ಈಗಿನ ದಿನಗಳಲ್ಲಿ ಟ್ರೆಂಡ್​ ಆಗಿದೆ. ಅದೆಷ್ಟೋ ಹುಡುಗಿಯರಿಗೆ ಸ್ಕರ್ಟ್​ ಧರಿಸುವುದು ಇಷ್ಟವೂ ಕೂಡಾ. ಬೇಸಿಗೆಯಲ್ಲಿ ಹಗುರವಾದ ಸ್ಕರ್ಟ್​ ಧರಿಸುವುದು ಉತ್ತಮ. ಬೇಸಿಗೆಯಲ್ಲಿ ಸೆಕೆಯಿಂದ ದೂರವಿರಬಹುದು ಹಾಗೂ ಧರಿಸಲು ಹಗುರವಾದ ಉಡುಪು ಕೂಡಾ ಹೌದು.

ಸಡಿಲವಾದ ಉಡುಪಿನ ಜತೆಗೆ ಸ್ಲೀವ್​ಲೆಸ್​​ ಟಾಪ್​ಗಳು ಹೆಚ್ಚು ಟ್ರೆಂಡ್​ ಆಗಿಬಿಟ್ಟಿದೆ. ಹೆಚ್ಚು ಹತ್ತಿ ಬಟ್ಟೆಯ ಉಡುಪನ್ನು ಬಳಸಿ. ಧರಿಸಲು ಹಗುರವಾಗಿರುತ್ತದೆ ಹಾಗೂ ಉಡುಪು ಧರಿಸಿದಾಕ್ಷಣ ಹಿತವೆನಿಸುತ್ತದೆ. ಬೇಸಿಗೆಯ ಬೆವರಿಗೆ ಮೈಗಂಟುವ ವಸ್ತ್ರದಿಂದ ಆದಷ್ಟು ದೂರವಿದ್ದು ಸಡಿಲವಾದ ಉಡುಪಿನ ಜತೆಗೆ ಸ್ಟೈಲಿಶ್​ ಆಗುವಂತಹ ಡ್ರೆಸ್​ ಬಳಸಿ.

ಇದನ್ನೂ ಓದಿ:

ಬೇಸಿಗೆಯಲ್ಲಿ ಬೆವರುವ ಮುನ್ನ ಈ ಅಂಶಗಳು ನೆನಪಿರಲಿ.. ನಿಮ್ಮ ಆಹಾರ ಪದ್ಧತಿ ಕೊಂಚ ಬದಲಾಗಲಿ