Spirit of Goa: ಗೋವಾದಲ್ಲಿ ಏ.21 ರಿಂದ 23ರವರೆಗೆ ನಡೆಯಲಿದೆ ‘ಸ್ಪಿರಿಟ್ ಆಫ್ ಗೋವಾ’ ಉತ್ಸವ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 21, 2023 | 6:18 PM

3 ದಿನಗಳ ಕಾಲ ನಡೆಯಲಿರುವ ‘ಸ್ಪಿರಿಟ್ ಆಫ್ ಗೋವಾ’ ಕೊಲ್ಟಾ ಬೀಚ್​​ನಲ್ಲಿ ನಡೆಯಲಿದೆ. ಈ ಉತ್ಸವದಲ್ಲಿ ಗೋವಾದ ಪ್ರಮುಖ ಬೆಳೆಗಳಾದ ತೆಂಗಿನಕಾಯಿ ಮತ್ತು ಗೋಡಂಬಿ ಹಣ್ಣುಗಳಿಂದ ತಯಾರಿಸಿದ ಉತ್ಪನ್ನಗಳು, ತಿನಿಸುಗಳು, ಪಾನೀಯಗಳು ಹಾಗೂ ಇನ್ನಿತರ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ.

Spirit of Goa: ಗೋವಾದಲ್ಲಿ ಏ.21 ರಿಂದ 23ರವರೆಗೆ ನಡೆಯಲಿದೆ ‘ಸ್ಪಿರಿಟ್ ಆಫ್ ಗೋವಾ’ ಉತ್ಸವ
ಸಾಂದರ್ಭಿಕ ಚಿತ್ರ
Follow us on

ಗೋವಾ ಪ್ರವಾಸೋದ್ಯಮ ಇಲಾಖೆಯು ಇಂದಿನಿಂದ ರಿಂದ ಏಪ್ರಿಲ್ 23 ರ ವರೆಗೆ ತೆಂಗಿನಕಾಯಿ ಮತ್ತು ಗೋಡಂಬಿ ಹಣ್ಣುಗಳಿಂದ ತಯಾರಿಸಿದ ಉತ್ಪನ್ನಗಳು, ತಿನಿಸುಗಳು, ಪಾನೀಯಗಳು ಹಾಗೂ ಇನ್ನಿತರ ಕರಕುಶಲ ವಸ್ತುಗಳ ಪ್ರದರ್ಶನದ ಉತ್ಸವವನ್ನು ಏರ್ಪಡಿಸಿದೆ. ‘ಸ್ಪಿರಿಟ್ ಆಫ್ ಗೋವಾ’ ಎಂಬ ಹೆಸರಿನಡಿಯಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ದಕ್ಷಿಣ ಗೋವಾದ ಕೊಲ್ಟಾ ಬೀಚ್​​​ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗೋವಾದ ಸ್ಥಳೀಯ ಬೆಳೆಗಳಾದ ತೆಂಗಿನಕಾಯಿ ಮತ್ತು ಗೋಡಂಬಿಯಿಂದ ತಯಾರಿಸಲಾದ ವಿವಿಧ ಉತ್ಪನ್ನಗಳು, ಪಾನೀಯಗಳು ಹಾಗೂ ಇನ್ನಿತರ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಫೆನಿ ಮತ್ತು ಉರಕ್ ನಂತಹ ಮನೆಯಲ್ಲಿಯೇ ತಯಾರಿಸಿದ ಮದ್ಯಗಳ ಪ್ರದರ್ಶನವೂ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೋವಾದ ಅತ್ಯಂತ ರುಚಿಕರವಾದ ಹೆರಿಟೇಜ್ ಬ್ರೂ ಫೆನಿ ಎಂಬ ಹೆಸರಿನ ಮದ್ಯವನ್ನು ಗೋಡಂಬಿ ಮತ್ತು ತೆಂಗಿನಕಾಯಿ ರಸ ಬಳಸಿ ಅದನ್ನು ಬಟ್ಟಿ ಇಳಿಸುವ ಲೈವ್ ಡೆಮೊಗಳು ನಡೆಯಲಿದೆ.

ಇದನ್ನೂ ಓದಿ:Goan-Style Breakfast: ರುಚಿಕರವಾದ ಉಪಹಾರಕ್ಕಾಗಿ ತಯಾರಿಸಿ ಗೋವಾನ್ ಶೈಲಿಯ ಪುರಿ-ಆಲೂ ಭಾಜಿ

ಮಾಸ್ಟರ್ ತರಗತಿಗಳೊಂದಿಗೆ ಗೋಡಂಬಿ ಸ್ಟಪಿಂಗ್ ಸ್ಪರ್ಧೆ ಮತ್ತು ಖ್ಯಾತ ಬಾಣಸಿಗರಿಂದ ಅಧಿಕೃತ ಗೋವಾದ ಪಾಕಪದ್ಧತಿಯನ್ನು ಪ್ರದರ್ಶಿಸುವ ಅಡುಗೆ ಪ್ರದರ್ಶನಗಳು ಕೂಡಾ ಈ ಉತ್ಸವದಲ್ಲಿ ನಡೆಯಲಿವೆ ಎಂದು ಅವರು ಹೇಳಿದರು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Fri, 21 April 23