Nita Ambani: ಹೈ ಪ್ರೊಫೈಲ್ ಮದುವೆಯೊಂದರಲ್ಲಿ ನೀತಾ ಅಂಬಾನಿ ಧರಿಸಿದ ಸೀರೆ ಇದೀಗ ವಿಶ್ವದ ಅತ್ಯಂತ ದುಬಾರಿಯದ್ದು

ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿಯವರು ಹೈ ಪ್ರೊಫೈಲ್ ವಿವಾಹವೊಂದರಲ್ಲಿ ಪಚ್ಚೆ ರತ್ನಗಳಿಂದ ಕೂಡಿದ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದರು. ಈ ಸೀರೆ ಇದೀಗ ವಿಶ್ವದ ಅತ್ಯಂತ ದುಬಾರಿ ಸೀರೆ ಎಂದು ಹೆಸರುವಾಸಿಯಾಗಿದೆ.

Nita Ambani: ಹೈ ಪ್ರೊಫೈಲ್ ಮದುವೆಯೊಂದರಲ್ಲಿ ನೀತಾ ಅಂಬಾನಿ ಧರಿಸಿದ ಸೀರೆ ಇದೀಗ ವಿಶ್ವದ ಅತ್ಯಂತ ದುಬಾರಿಯದ್ದು
ನೀತಾ ಅಂಬಾನಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 27, 2023 | 2:48 PM

ಉದ್ಯಮಿ ಮುಕೇಶ್ (mukesh ambani) ಅಂಬಾನಿ ಅವರ ಪತ್ನಿ ನೀತಾ ಅಂಬಾನಿ (Nita Ambani) ಅವರು ತಮ್ಮ ವಿಶಿಷ್ಟ ಸ್ಟೈಲ್ ಸ್ಟೇಟ್ಮೆಂಟ್ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರು ತೊಡುವ ದುಬಾರಿ ಬಟ್ಟೆಗಳಿಂದ ಹಿಡಿದು ಆಭರಣಗಳವರೆಗೆ ಅವರ ಸ್ಟೈಲ್ ಸ್ಟೇಟ್ಮೆಂಟ್ ಫ್ಯಾಶನ್ ಪ್ರಿಯರನ್ನು ಬೆರಗಾಗಿಸುತ್ತದೆ. ನೀತಾ ಅಂಬಾನಿ ಅವರು ಹೈ ಪ್ರೊಫೈಲ್ ಮದುವೆಯೊಂದರಲ್ಲಿ ಧರಿಸಿದ್ದ ಪಚ್ಚೆ ರತ್ನಗಳ ಹೊದಿಕೆಯಿರುವ ಸೀರೆಯನ್ನು ವಿಶ್ವದ ಅತ್ಯಂತ ದುಬಾರಿ ಸೀರೆ ಎಂದು ಹೇಳಲಾಗುತ್ತಿದೆ. ದುಬಾರಿ ಬೆಲೆಯ ಡಿಸೈನರ್ ಉಡುಪುಗಳನ್ನು ಧರಿಸುವ ನೀತಾ ಅಂಬಾನಿ, 2015ರಲ್ಲಿ ಮಾಜಿ ರಾಜ್ಯಸಭಾ ಸಂಸದ ಪರಿಮಳ ನಾಥ್ವಾಣಿ ಅವರ ಪುತ್ರನ ಮದುವೆಯಲ್ಲಿ ಪಚ್ಚೆ ರತ್ನಗಳು ಹಾಗೂ ಇತರ ಹರುಳುಗಳಿಂದ ಕೂಡಿದ ಗುಲಾಬಿ ಬಣ್ಣದ ವಿಶ್ವದ ಅತ್ಯಂತ ದುಬಾರಿ ಸೀರೆಯನ್ನು ಧರಿಸಿದ್ದರು. ಈ ವಿವಾಹ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿದ್ದರು.

ವಿವಾಹ ಪತ್ತು ಎಂದು ಕರೆಯಲ್ಪಡುವ ಚೆನ್ನೈ ಸಿಲ್ಕ್ಸ್​ನ ನಿರ್ದೇಶಕ ಶಿವಲಿಂಗಂ ಅವರು ವಿನ್ಯಾಸಗೊಳಿಸಿದ್ದಾರೆ. ಇವರು ರೂಪಿಸಿದ ಸೀರೆಯ ವಿಸ್ತಾರವಾದ ಥ್ರೆಡ್ ವರ್ಕ್, ಸುಂದರವಾದ ಪಲ್ಲು ಮತ್ತು ರವಿಕೆಯ ವಿಶಿಷ್ಟ ವಿನ್ಯಾಸ ಎಲ್ಲರ ಗಮನ ಸೆಳೆದಿತ್ತು.

ನೀತಾ ಅಂಬಾನಿ ಸೀರೆ ಬೆಲೆ:

ಈ ಸೀರೆಯ ಬೆಲೆ 40 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ನೀತಾ ಅಂಬಾನಿಯವರ ಈ ಸೀರೆ ಪ್ರಸ್ತುತ ವಿಶ್ವದ ಅತ್ಯಂತ ದುಬಾರಿ ಸೀರೆ ಎಂದು ಗುರುತಿಸಲ್ಪಟ್ಟಿದೆ. ಗುಲಾಬಿ ಬಣ್ಣದ ಸೀರೆಗೆ ನಿಜವಾದ ಮುತ್ತುಗಳು, ಪಚ್ಚೆಗಳು, ಮಾಣಿಕ್ಯ ಮತ್ತು ಇತರ ರತ್ನಗಳಿಂದ ಕೈಯಲ್ಲಿ ಕಸೂತಿ ಮಾಡಲಾಗಿದೆ. ಈ ಸೀರೆಯ ಗಮನ ಸೆಳೆಯುವ ವೈಶಿಷ್ಟ್ಯವೆಂದರೆ ಕುಪ್ಪಸ. ಇದರಲ್ಲಿ ನಾಥದ್ವಾರದ ಕೃಷ್ಣನ ಚಿತ್ರವನ್ನು ರೂಪಿಸಲಾಗಿದೆ. ಶಿವಲಿಂಗಂ ಅವರು ಡಿಸೈನ್ ಮಾಡಿದ ಈ ದುಬಾರಿ ಸೀರೆಯನ್ನು ಕಾಂಚೀಪುರಂನ 35 ಮಹಿಳಾ ಕುಶಲಕರ್ಮಿಗಳು ರಚಿಸಿದ್ದಾರೆ.

ಇದನ್ನೂ ಓದಿ:Mukesh Ambani: ಮುಕೇಶ್, ನೀತಾ ಅಂಬಾನಿ ಚಾಲಕ ತಿಂಗಳಿಗೆ ಪಡೆಯುವ ವೇತನ ಎಷ್ಟು?

ಬರೋಬ್ಬರಿ 8 ಕೆಜಿಗೂ ಹೆಚ್ಚು ತೂಕವಿರುವ ಈ ಸೀರೆಯನ್ನು ಇದೀಗ ವಿಶ್ವದ ದುಬಾರಿ ಸೀರೆಯೆಂದು ಹೇಳಲಾಗುತ್ತಿದೆ. ಇನ್ನೂ ನೀತಾ ಅಂಬಾನಿಯವರ ಮಗಳು ಇಶಾ ಅಂಬಾನಿಯವರ ಮದುವೆಯ ಲೆಹೆಂಗಾ 90 ಕೋಟಿ ಮೌಲ್ಯದ್ದಾಗಿದೆ. ಇದು ಇದುವರೆಗೆ ವಿನ್ಯಾಸಗೊಳಿಸಲಾದ ವಿಶ್ವದ ಅತ್ಯಂತ ದುಬಾರಿ ಲೆಹೆಂಗಾವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ