ನಿಮಗಾಗಿ ನೀವು ಸಮಯ ಕೊಡಬೇಕೆಂದು ಹೇಳುವ ಸಂಕೇತಗಳಿವು

ಮನೆ, ಕಚೇರಿ ಕೆಲಸ ಬೇರೆಯವರಿಗೆ ತಮ್ಮನ್ನು ಹೋಲಿಕೆ ಮಾಡುವುದು, ಯಾರೋ ಏನೋ ಅಂದಿದ್ದಕ್ಕೆ ಬೇಸರಗೊಳ್ಳುವುದು ಇದನ್ನೇ ಮಾಡುತ್ತಿದ್ದರೆ ನೀವು ನಿಮಗಾಗಿ ಸಮಯ ಕೊಡುವುದು ಯಾವಾಗ?

ನಿಮಗಾಗಿ ನೀವು ಸಮಯ ಕೊಡಬೇಕೆಂದು ಹೇಳುವ ಸಂಕೇತಗಳಿವು
ಮಾನಸಿಕ ಆರೋಗ್ಯImage Credit source: Healthshots.com
Follow us
ನಯನಾ ರಾಜೀವ್
|

Updated on: May 01, 2023 | 9:00 AM

ಮನೆ, ಕಚೇರಿ ಕೆಲಸ ಬೇರೆಯವರಿಗೆ ತಮ್ಮನ್ನು ಹೋಲಿಕೆ ಮಾಡುವುದು, ಯಾರೋ ಏನೋ ಅಂದಿದ್ದಕ್ಕೆ ಬೇಸರಗೊಳ್ಳುವುದು ಇದನ್ನೇ ಮಾಡುತ್ತಿದ್ದರೆ ನೀವು ನಿಮಗಾಗಿ ಸಮಯ ಕೊಡುವುದು ಯಾವಾಗ? ನೀವು ತಿನ್ನುವುದರಿಂದ ಹಿಡಿದು ನಿಮಗೆ ಇಷ್ಟವಾಗುವ ಅಭ್ಯಾಸಗಳ ಬಗ್ಗೆಯೂ ನೀವು ಆಲೋಚಿಸಬೇಕಿದೆ, ನಿಮ್ಮನ್ನು ನೀವು ಮೊದಲು ಪ್ರೀತಿಸಬೇಕು. ಸಣ್ಣ ಸಣ್ಣ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುವ ಬದಲು ನಿಮ್ಮನ್ನು ಖುಷಿಯಾಗಿಟ್ಟುಕೊಳ್ಳಲು ಏನು ಮಾಡಬೇಕು ಎಂದು ಆಲೋಚನೆ ಮಾಡಿ. ಇದರಿಂದ ನೀವು ಹಲವು ರೀತಿಯ ಬದಲಾವಣೆಯನ್ನು ಕಾಣಬಹುದು.

ನಿಮ್ಮೊಂದಿಗೆ ನೀವು ಹೆಚ್ಚು ಸಮಯ ಕಳೆಯಬೇಕು ಎಂದು ಸೂಚಿಸುವ ಚಿಹ್ನೆಗಳಿವು

ಜನರು ತುಂಬಾ ಮಾತನಾಡುತ್ತಿದ್ದಾರೆ ಎನ್ನುವ ಭಾವನೆ ಕೆಲವೊಮ್ಮೆ ನೀವು ಇತರರೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತೀರಿ, ಕೆಲವೊಮ್ಮೆ ಅವರೊಂದಿಗೆ ಐದು ನಿಮಿಷ ಮಾತನಾಡಲೂ ಕಷ್ಟವಾಗುವುದು, ಜನರು ಮಾತನಾಡಿದರೂ ಕಿರಿ ಕಿರಿ ಅನುಭವಿಸುವುದು, ನೆಚ್ಚಿನ ಸಂಗೀತವೂ ತಲೆನೋವು ತರಿಸುವುದು, ಹೀಗಿದ್ದಾಗ ನೀವು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲೇಬೇಕು.

ಕೋಣೆಯಲ್ಲಿ ಒಬ್ಬರೇ ಕುಳಿತುಕೊಳ್ಳಿ ಕೆಲಸದ ಬಳಿಕ ನಿಮ್ಮ ಮನಸ್ಸು ತುಂಬಾ ಆಯಾಸಗೊಂಡಿದ್ದರೆ, ಏಕಾಂತವನ್ನು ಬಯಸುತ್ತಿದ್ದರೆ ಸ್ವಲ್ಪ ಹೊತ್ತು ಕೋಣೆಯಲ್ಲಿ ಸುಮ್ಮನೆ ಕುಳಿತುಕೊಳ್ಳಿ, ನೀವು ಇಷ್ಟಪಡುವ ಸಂಗೀತವನ್ನು ಕೇಳಿ.

ಮನಸ್ಸಿಗೆ ತೋಚಿದ್ದೆಲ್ಲಾ ತಿನ್ನುವುದು ಅನೇಕ ಮಂದಿ ಕೆಲವು ಸಮಯದಲ್ಲಿ ಮನಸ್ಸಿಗೆ ತೋಚಿದ್ದೆಲ್ಲಾ ತಿನ್ನುತ್ತಾರೆ, ಇದರಿಂದ ಆರೋಗ್ಯ ಕೆಡುವುದಷ್ಟೇ ಅಲ್ಲದೆ, ಮಾನಸಿಕ ಆರೋಗ್ಯವೂ ಹಾಳಾಗುವುದು, ನಿತ್ಯ ಧ್ಯಾನ ಮಾಡಿ.

ಮತ್ತಷ್ಟು ಓದಿ: ಆಕಳಿಕೆ ಏಕೆ ಉಂಟಾಗುತ್ತದೆ ಮತ್ತು ಅದು ಸಾಂಕ್ರಾಮಿಕವೇ?: ಆರೋಗ್ಯ ತಜ್ಞರು ಈ ಕುರಿತು ಏನು ಹೇಳುತ್ತಾರೆ

ಸುಮ್ಮನೆ ಅಳುವುದು ಒತ್ತಡವು ದೇಹದಿಂದ ಅಳು, ಕೋಪ ಹೀಗೆ ಯಾವುದೇ ರೀತಿಯಿಂದಲಾದರೂ ಹೊರಬರಬಹುದು, ಅಳುತ್ತಿದ್ದರೆ ಅವರು ಯಾವುದೋ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ಒತ್ತಡದಲ್ಲಿರುವಾಗ ಚಿಕ್ಕಿಚಿಕ್ಕ ವಿಷಯಗಳಿಗೂ ಅಳು ಬರುವುದು. ಆಗ ನೀವು ನಿಮಗಾಗಿ ಸ್ವಲ್ಪ ಸಮಯ ನೀಡಬೇಕೆಂಬುದನ್ನು ತಿಳಿದುಕೊಳ್ಳಿ.

ಸಣ್ಣ ವಿಷಯಗಳಿಗೆ ಅಸಮಾಧಾನಗೊಳ್ಳುವುದು ನಾವು ಮಾನಸಿಕವಾಗಿ ತೊಂದರೆಗೊಳಗಾದಾಗ ಯಾರಾದರೂ ಏನಾದರೂ ಹೇಳಿದರೆ ಸಾಕು ಅಳು ಬರುವುದು, ಸಣ್ಣ ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದನ್ನು ಮಾಡುತ್ತಾರೆ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಭಿನ್ನ ಮಾರ್ಗಗಳಿಗೆ ಅದನ್ನು ಅಳವಡಿಸಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್