ಹಾರ್ಡ್​ವರ್ಕ್ ಜತೆಗೆ ಸ್ಮಾರ್ಟ್​ ವರ್ಕ್​ ಕೂಡಾ ಮುಖ್ಯ, ಉತ್ಪಾದಕತೆ ಹೆಚ್ಚಿಸುವ 5 ಸಲಹೆಗಳು ಇಲ್ಲಿವೆ

ಒಂದೆಡೆ ನಾವು ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್​ ಆಗಿರಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತೇವೆ. ಮತ್ತೊಂದೆಡೆ ಮಾನಸಿಕ ಆರೋಗ್ಯದ ವಿಚಾರಕ್ಕೆ ಬಂದಾಗ ನಮಗೆ ಯಾವುದರಿಂದ ಸಂತೋಷ ಸಿಗುವುದೋ ಆ ವಿಷಯವನ್ನು ನಿರ್ಲಕ್ಷಿಸುತ್ತೇವೆ.

ಹಾರ್ಡ್​ವರ್ಕ್ ಜತೆಗೆ ಸ್ಮಾರ್ಟ್​ ವರ್ಕ್​ ಕೂಡಾ ಮುಖ್ಯ, ಉತ್ಪಾದಕತೆ ಹೆಚ್ಚಿಸುವ 5 ಸಲಹೆಗಳು ಇಲ್ಲಿವೆ
ವರ್ಕ್​
Follow us
ನಯನಾ ರಾಜೀವ್
|

Updated on: May 02, 2023 | 9:00 AM

ಒಂದೆಡೆ ನಾವು ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್​ ಆಗಿರಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತೇವೆ. ಮತ್ತೊಂದೆಡೆ ಮಾನಸಿಕ ಆರೋಗ್ಯದ ವಿಚಾರಕ್ಕೆ ಬಂದಾಗ ನಮಗೆ ಯಾವುದರಿಂದ ಸಂತೋಷ ಸಿಗುವುದೋ ಆ ವಿಷಯವನ್ನು ನಿರ್ಲಕ್ಷಿಸುತ್ತೇವೆ. ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ನಿಧಾನವಾಗಿ ಅದರ ಪರಿಣಾಮ ನಮ್ಮ ಕೆಲಸದ ದಕ್ಷತೆಯ ಮೇಲೆ ಗೋಚರಿಸುತ್ತದೆ. ಕ್ರಮೇಣವಾಗಿ ಇದು ಉತ್ಪಾದಕತೆಯ ಮೇಲೂ ಪರಿಣಾಮ ಬೀರುತ್ತದೆ.

ನಿಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಸಲಹೆಗಳು ಇಲ್ಲಿವೆ

ಕೆಲಸದ ನಡುವೆ ವಿರಾಮ ತೆಗೆದುಕೊಳ್ಳಿ ದಿನವಿಡೀ ಕೆಲಸ ಮಾಡುತ್ತಿದ್ದರೆ ಕೆಲಸವೇನೋ ಮುಗಿಸಿದ ಖುಷಿ ಸಿಗಬಹುದು ಆದರೆ, ನೀವು ಅಂದುಕೊಂಡ ರೀತಿಯಲ್ಲಿ ಆಗಿರುವುದಿಲ್ಲ, ಹಾಗಾಗಿ ನೀವು ಉಲ್ಲಾಸ ಅನುಭವಿಸುವುದು ಮುಖ್ಯ, ಕೆಲಸದ ನಡುವೆ ಆಗಾಗ ಬಿಡುವು ಪಡೆಯಬೇಕು.

ಒಂದೇ ಸಮಯದಲ್ಲಿ ಹಲವು ಕಾರ್ಯಗಳನ್ನು ಮಾಡಬೇಡಿ ನೀವು ನಿಷ್ಠೆಯಿಂದ ಕೆಲಸ ಮಾಡಿದರೆ ನಿಮಗೆ ಯಶಸ್ಸು ಖಂಡಿತಾ ಸಿಗುವುದು, ಲ್ಯಾಪ್​ಟಾಪ್​ ಮುಂದೆ ಹಲವು ಟಾಸ್ಕ್​ಗಳನ್ನು ಒಟ್ಟಾಗಿ ಮಾಡುವುದರಿಂದ ಮನಸ್ಸು ಬೇರೆಡೆಗೆ ತಿರುಗಲು ಪ್ರಾರಂಭಿಸುತ್ತದೆ. ಒಂದೇ ಕಾರ್ಯದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ.

ಸಾಕಷ್ಟು ನಿದ್ರೆ ಅಗತ್ಯ ನೀವು 7,8 ತಾಸುಗಳ ಕಾಲ ನಿದ್ರೆ ಮಾಡಿದರೆ, ದಿನವಿಡೀ ಆನಂದವಾಗಿರುತ್ತೀರಿ ಮತ್ತು ಸಮಯಕ್ಕೆ ಮುಂಚಿತವಾಗಿ ಕೆಲಸವನ್ನು ಮುಗಿಸಲು ಸಾಧ್ಯವಾಗುತ್ತದೆ. ತಡವಾಗಿ ಮಲಗಿ ಬೇಗ ಎದ್ದರೆ ಅದು ನಿಮ್ಮ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ ಹೀಗಾಗಿ ಪೂರ್ಣ ನಿದ್ರೆ ಅಗತ್ಯ.

ಧ್ಯಾನ, ವ್ಯಾಯಾಮವಿರಲಿ ಬೆಳಗ್ಗೆ ಎದ್ದ ನಂತರ ನೀವು ಧ್ಯಾನ ಮಾಡಿದರೆ ಸ್ವಯಂ ಪ್ರೀತಿ, ಸ್ವಯಂ ನಿಯಂತ್ರಣ ಹೆಚ್ಚುತ್ತದೆ. ಧ್ಯಾನದ ನಂತರ ದೇಹವು ಸಕ್ರಿಯವಾಗುತ್ತದೆ. ಪ್ರತಿಯೊಂದು ಕೆಲಸವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ನಡವಳಿಕೆಯಲ್ಲಿ ಸ್ಪಷ್ಟತೆ ಕಾಣುತ್ತದೆ.

ಅತಿಯಾದ ಕೆಲಸದ ಹೊರೆ ತಪ್ಪಿಸಿ

ಒಂದು ದಿನದಲ್ಲಿ ನೀವು 15 ರಿಂದ 20 ಕಾರ್ಯಗಳನ್ನು ಮಾಡಿದರೆ, ನಂತರ ನೀವು ಹೆಚ್ಚಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಯಾವ ದಿನ ಯಾವ ಕೆಲಸವನ್ನು ಮಾಡುವುದು ಹೆಚ್ಚು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಿ. ಇದು ನಮ್ಮ ಸಮಯವನ್ನು ಉಳಿಸುವುದಲ್ಲದೆ ಹೆಚ್ಚಿನ ಉತ್ಪಾದನೆ ಕಾರಣವಾಗುತ್ತದೆ. ​ಹೀಗಾಗಿ ಒಂದೇ ಹೆಚ್ಚು ಕೆಲಸದ ಹೆಚ್ಚು ಭಾರವನ್ನು ಹೊರುವುದು ಬೇಡ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ