ನೆನಪಿನ ಬುತ್ತಿಗೆ ಹೊಸ ಅನುಭವಗಳನ್ನು ಸೇರಿಸಿಕೊಳ್ಳಲು ವೀಕೆಂಡ್​ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ

ನೆನಪಿನ ಬುತ್ತಿಗೆ ಹೊಸ ಅನುಭವಗಳನ್ನು ಸೇರಿಸಿಕೊಳ್ಳಲು ವೀಕೆಂಡ್​ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ
ಬೇಲೂರು

ನಿಮ್ಮ ವೀಕೆಂಡ್​ ಟ್ರಿಪ್​ಗೆ ನಮ್ಮದೇ ರಾಜ್ಯದ ಒಂದಷ್ಟು ಸ್ಥಳಗಳು ಬೆಸ್ಟ್​ ಆಯ್ಕೆಯಾಗಲಿದೆ.  ಕೆಲಸದ ಒತ್ತಡ, ಕೊರೊನಾ ಲಾಕ್​ಡೌನ್​ನಿಂದಾಗಿ ಮನೆಯಲ್ಲಿಯೇ ಕುಳಿತು ಬೋರ್​ ಆಗಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡಿ ಮನಸನ್ನು ತಿಳಿಯಾಗಿಸಿಕೊಳ್ಳಬಹುದು. 

TV9kannada Web Team

| Edited By: Pavitra Bhat Jigalemane

Jan 29, 2022 | 1:03 PM

ದೇಶ ಸುತ್ತು ಕೋಶ ಓದು ಎನ್ನುವ ಮಾತು ಎಲ್ಲರಿಗೂ ತಿಳಿದಿದೆ. ಪ್ರಯಾಣ ಮಾಡಿದಷ್ಟೂ ಹೊಸ ಅನುಭವ, ಹೊಸ ವಿಚಾರಗಳ ಅನಾವರಣವಾಗುತ್ತದೆ. ಅದಕ್ಕೆ ಕರ್ನಾಟಕ (Karnataka) ಉತ್ತಮ ಸ್ಥಳವೆಂದರೆ ತಪ್ಪಾಗದು. ಪ್ರತೀ ಜಿಲ್ಲೆಯಲ್ಲೂ ಒಂದೊಂದು ಹೊಸತನ, ಒಂದೊಂದು ವಿಶೇಷತೆ, ವಿಭಿನ್ನ ಸ್ಥಳಗಳನ್ನು ಹೊತ್ತ ಸಮೃದ್ಧ ನಾಡು ಕನ್ನಡನಾಡು ಕರ್ನಾಟಕ. ಹೀಗಿದ್ದಾಗ ನಿಮ್ಮ ವೀಕೆಂಡ್​ ಟ್ರಿಪ್ (Weekend Trip)​ಗೆ ನಮ್ಮದೇ ರಾಜ್ಯದ ಒಂದಷ್ಟು ಸ್ಥಳಗಳು ಬೆಸ್ಟ್​ ಆಯ್ಕೆಯಾಗಲಿದೆ.  ಕೆಲಸದ ಒತ್ತಡ, ಕೊರೊನಾ ಲಾಕ್​ಡೌನ್​ (Lock Dwon)ನಿಂದಾಗಿ ಮನೆಯಲ್ಲಿಯೇ ಕುಳಿತು ಬೋರ್​ ಆಗಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡಿ ಮನಸನ್ನು ತಿಳಿಯಾಗಿಸಿಕೊಳ್ಳಬಹುದು. 

ರಂಗನತಿಟ್ಟು ಪಕ್ಷಿಧಾಮ, ಶಿವಸಮುದ್ರ, ಸೋಮನಾಥಪುರ bird century ನಿಮ್ಮ ಒತ್ತಡದ ದಿನಗಳನ್ನು ಕಳೆಯಲು ಮೈಸೂರಿನ ಸುತ್ತಮುತ್ತ ಇರುವ ರಂಗನತಿಟ್ಟು ಪಕ್ಷಿಧಾಮ, ಶಿವಸಮುದ್ರ, ಸೋಮನಾಥಪುರ ಉತ್ತಮ ಆಯ್ಕೆಯಾಗಲಿದೆ. ಮೈಸೂರಿನಿಂದ ಕೇವಲ 18 ಕಿಮೀ ದೂರದಲ್ಲಿರುವ ರಂಗನತಿಟ್ಟು ಪಕ್ಷಿಧಾಮ ಪರಿಸರದ ನಡುವೆ ವಿವಿಧ ಪಕ್ಷಿಗಳನ್ನು ನೋಡಲು ಉತ್ತಮ ಸ್ಥಳವಾಗಿದೆ. ಇಲ್ಲಿ 170ಕ್ಕೂ ಹೆಚ್ಚು ಪಕ್ಷಿಗಳನ್ನು ಕಾಣಬಹುದು. ಜತೆಗೆ ಇಲ್ಲಿ ಬೋಟಿಂಗ್​ಗಳನ್ನೂ ಕೂಡ ಮಾಡಲು ಅವಕಾಶವಿದೆ. ರಂಗನತಿಟ್ಟು ಪಕ್ಷಿಧಾಮದಿಂದ 38 ಕಿಮೀ ದೂರದಲ್ಲಿ ಇರುವುದು ಸೋಮನಾಥಪುರ ದೇವಸ್ಥಾನ. ಇಲ್ಲಿರುವ ಹೊಯ್ಸಳ ಕಾಲದ  ಚೆನ್ನಕೇಶವ ದೇವಾಲಯ ಪ್ರವಾಸಿಗರನ್ನು ಆಕರ್ಷಿಸಿ, ಇತಿಹಾಸದ ಪುಟಗಳನ್ನು ತಿರುವುತ್ತದೆ. ಅಲ್ಲಿಂದ 55 ಕಿಮೀ ದೂರದಲ್ಲಿರುವುದು ಸದಾ ಕಾಲ ಪ್ರವಾಸಿಗರನ್ನು ಸೆಳೆಯುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಇವುಗಳನ್ನು ಒಟ್ಟಾಗಿ ಶಿವಸಮುದ್ರಮ್​ ಎಂದು ಕರೆಯುತ್ತಾರೆ. ವೀಕೆಂಡ್​ನಲ್ಲಿ ಸಮಯಕಳೆಯಲು ಇದು ಅತ್ಯುತ್ತಮ ಸ್ಥಳವಾಗಿದೆ. ಒಟ್ಟಿನಲ್ಲಿ ಒಂದು ದಿನದ ಮೈಸೂರು ವೀಕೆಂಡ್​ ಹೊಸ ಅನುಭವ, ಹೊಸ ವಿಚಾರಗಳನ್ನೂ ನಿಮಗೆ ನೀಡಿ ನೆನಪಿನ ಬುತ್ತಿಯನ್ನು ಮತ್ತಷ್ಟು ಸುಂದರವಾಗಿಸುತ್ತದೆ.

ನಂದಿ ಬೆಟ್ಟ-ಮುದ್ದೇನಹಳ್ಳಿ ಬೆಂಗಳೂರಿನಿಂದ 61 ಕಿಮೀ ದೂರದಲ್ಲಿರುವ ನಂದಿ ಬೆಟ್ಟ ಎಲ್ಲರನ್ನೂ ಸೆಳೆಯುವ ಸುಂದರ ಸ್ಥಳ. ಇಲ್ಲಿರುವ ಟಿಪ್ಪುವಿನ ಕೋಟೆ, ಕಣ್ಸೆಳೆಯುವ ಸೂರ್ಯೋದಯ ಎಲ್ಲವೂ ಒಂದು ರೀತಿಯ ವಿಭಿನ್ನ ಅನುಭವವನ್ನು ನೀಡುತ್ತದೆ. ನಂದಿ ಬೆಟ್ಟದಲ್ಲಿ ಈಗ ಒಂದು ಪಾರ್ಕ್​ಅನ್ನೂ ನಿರ್ಮಿಸಲಾಗಿದೆ. ಹೀಗಾಗಿ ಆರಾಮವಾಗಿ ಕುಳಿತು, ತಣ್ಣನೆಯ ಗಾಳಿಗೆ ಮೈಯೊಡ್ಡಿ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಇನ್ನು ನಂದಿ ಬೆಟ್ಟದಿಂದ 55 ಕಿಮೀ ದೂರದಲ್ಲಿರುವ ಮುದ್ದೇನಹಳ್ಳಿ ಪರಿಸರ ಪ್ರಿಯರಿಗೆ ಇನ್ನೊಂದು ನೆಚ್ಚಿನ ತಾಣವಾಗಲಿದೆ. 140 ಎಕರೆಗಳ ಸುಂದರ ಗಾರ್ಡನ್​ ಅನ್ನು ಇತ್ತೀಚೆಗೆ ರಾಜ್ಯ ತೋಟಗಾರಿಕೆ ಇಲಾಖೆ ನಿರ್ಮಿಸಿದೆ. ಹೀಗಾಗಿ ವೀಕೆಂಡ್​ ಕಳೆಯಲು ಮುದ್ದೇನಹಳ್ಳಿ ಉತ್ತಮ ಸ್ಥಳವಾಗಲಿದೆ.

ಹೊಗೇನಕಲ್​ ಜಲಪಾತ-ಕೃಷ್ಣಗಿರಿ ಡ್ಯಾಮ್​ ಕರ್ನಾಟಕದ ಗಡಿಯಲ್ಲಿರುವ ಎರಡು ಸುಂದರ ಸ್ಥಳಗಳೆಂದರೆ ಅದು ಹೊಗೇನಕಲ್​ ಜಲಪಾತ ಮತ್ತು ಕೃಷ್ಣಗಿರಿ ಡ್ಯಾಮ್​. ಬೆಂಗಳೂರಿನಿಂದ 55 ಕಿಮೀ ದೂರದಲ್ಲಿರುವ ಕರಷ್ಣಗಿರಿ ಡ್ಯಾಮ್​ಗೆ ಮೊದಲು ಭೇಟಿ ನೀಡದರೆ ಒಂದೊಳ್ಳೆಯ ಡ್ಯಾಮ್​ಅನ್ನು ನೋಡಬಹುದು. ಅಲ್ಲಿಂದ ಮುಂದೆ ತೆರಳಿದರೆ ನೀವು ಹೋಗೇನಕಲ್​ ಜಲಪಾತಕ್ಕೆ ಹೋಗಬಹುದು. ಕೃಷ್ಣಗಿರಿಯಿಂದ 89 ಕಿಮೀ ದೂರದಲ್ಲಿ ಹೊಗೇನಕಲ್​ ಜಲಪಾತ ಸಿಗಲಿದೆ. ವಿಶಾಲವಾದ ವೀವ್​ ಪಾಯಿಂಟ್​ ಇರುವ ಸ್ಥಳ ಹೊಗಗೇನಕಲ್​ ಜಲಪಾತದ ಸ್ಥಳ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಸಂಗಂ-ಮೇಕೆದಾಟು ವೀಕೆಂಡ್​ನಲ್ಲಿ ಟ್ರೆಕ್ಕಿಂಗ್​ ಆಡುವ ಹಂಬಲವಿದ್ದರೆ ನೀವು ಸಂಗಮ್​ಗೆ ತೆರಳಬಹುದು.ಇಲ್ಲಿ ಅರ್ಕಾವತಿ ಮತ್ತು ಕಾವೇರಿ ನದಿಗಳ ವಿಹಂಗಮ ನೋಡವನ್ನು ಕಾಣಬಹುದು. ಬೆಂಗಳೂರು ಮತ್ತು ಮೈಸೂರು ಜನರಿಗೆ ಸನಿಹವಾಗುವ ಸ್ಥಳ ಇದಾಗಿದೆ. ಸಂಗಂನಿಂದ ಕೇಲವು ಕಿಮೀ ಗಳ ದೂರದಲ್ಲಿರುವುದು ಮೇಕೆದಾಟು. ಇಲ್ಲಿ ನೀವು ಚಿಕ್ಕದಾದ ಟ್ರೆಕ್ಕಿಂಗ್​ ಅನುಭವವನ್ನು ಪಡೆಯಬಹುದು. ಜತೆಗೆ ಆರಾಮವಾಘಿ ಕುಳಿತು ಕಾವೇರಿ ಶಾಂತ ಹರಿವನ್ನು ನೋಡಬಹುದು.

ಮೈಸೂರು-ಊಟಿ-ಕೊಡೈಕೆನಾಲ್​

ಬಹತೇಕರಿಗೆ ತಿಳಿದ ಸ್ಥಳ ಊಟಿ. ಮೈಗೆ ಸೋಕುವ ತಣ್ಣನೆಯ ಗಾಳಿಯ ನಡುವೆ ಹಸಿರು ಹೊದ್ದ ಪ್ರಕೃತಿಯನ್ನು ವೀಕ್ಷಿಸುವುದು ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಅನುಭವ. ದಕ್ಷಿಣ ಭಾರತದ ಪ್ರಸಿದ್ಧ ಸ್ಥಳಗಳಲ್ಲಿ ಊಟಿ ಕೂಡ ಒಂದು. ಹೀಗಾಗಿ ನಿಮ್ಮ ವೀಕೆಂಡ್​​ ಟ್ರಿಪ್​ ಪ್ಲಾನ್​ಗೆ ಊಟಿ ಪರ್ಫೆಕ್ಟ್​​ ಸ್ಥಳವಾಗಲಿದೆ. ಇದರ ಜತೆಗೆ ಕೊಡೈಕೆನಾಲ್​ ಕೂಡ ಮನಸೂರೆಗೊಳ್ಳುವ ಇನ್ನೊಂದು ಸ್ಥಳ. ನಿಮ್ಮಲ್ಲಾ ಒತ್ತಡವನ್ನು ಬದಿಗೊತ್ತಿ ಆಹ್ಲಾದತೆಯ ಅನುಭವ ನೀಡುವ ಸುಂದರ ಸ್ಥಳ. ಒಮ್ಮೆಯಾದರೂ ಭೇಟಿ ನೀಡಬೇಕೆಂಬ ಸ್ಥಳಗಳಲ್ಲಿ ಊಟಿ ಮತ್ತು ಕೊಡೈಕೆನಾಲ್​ಅನ್ನು ನೀವು ಮಿಸ್​ ಮಾಡುವಂತಿಲ್ಲ.

ಮಡಿಕೇರಿ

ಸದಾಕಾಲ ಬೀಸುವ ತಣ್ಣನೆಯ ಗಾಳಿ, ಅದಕ್ಕೆ ತಕ್ಕಹಾಗೆ ಬಿಸಿಬಿಸಿ ಕಾಫಿ ಇವೆಲ್ಲವೂ ಸಿಗುವುದು ಮಡಿಕೇರಿಯಲ್ಲಿ.  ಮಂಜು ತುಂಬಿದ ವೀವ್​ ಪಾಯಿಂಟ್​​ಗಳು, ಐತಿಹಾಸಿಕ ಸ್ಥಳಗಳು, 17 ನೇ ಶತಮಾನದ ದೇವಾಲಯಗಳು, ರಾಜಾ ಸೀಟ್​, ಮಡಿಕೇರಿ ಕೋಟೆ ಹಾಗೂ ಓಂಕಾರೇಶ್ವರ ದೇವಸ್ಥಾನ ಮಡಿಕೇರಿಯ ಭೇಟಿಯನ್ನು ಅರ್ಥಪೂರ್ಣವಾಗಿಸುತ್ತದೆ.

ನಾಗರಹೊಳೆ-ನಿಸರ್ಗಧಾಮ ಕರ್ನಾಟಕದ ವನ್ಯ ಜೀವಿಯ ಬಗ್ಗೆ ಅಧ್ಯಯನ ಮಾಡಲು ನಿಮಗೆ ನಾಗರಹೊಳೆ ಉತ್ತಮ ಸ್ಥಳವಾಗಿದೆ. ಇಲ್ಲಿ ಕರ್ನಾಟಕದಲ್ಲಿ ಕಂಡುಬರುವ, ಕಣದ ಎಲ್ಲ ರೀತಿಯ ಪ್ರಾಣಿಗಳನ್ನು ಕಾಣಬಹುದು. ಜತೆಗೆ 250ಕ್ಕೂ ಹೆಚ್ಚು ಪಕ್ಷಿಗಳನ್ನು ನಾವು ಇಲ್ಲಿ ಕಾಣಬಹುದು. ಹೀಗಾಗಿ ವೀಕೆಂಡ್​ ಟ್ರಿಪ್​ನಲ್ಲಿ ನಾಗರಹೊಳೆ ನಿಮ್ಮ ಆಯ್ಕೆಯಾದರೆ ಮಾಹಿತಿಯೊಂದಿಗೆ ನೆನಪಿನ ದಿನಗಳಲ್ಲಿ ಒಂದಾಗುತ್ತದೆ. ಇನ್ನು ನಿಸರ್ಗಧಾಮ 64 ಎಕರೆಗಳ ಸುಂದರ ಸ್ಥಳ. ಪರಿಸರವನ್ನು ಆಹ್ಲಾದಿಸುವ ಮನಸ್ಥಿತಿಯುಳ್ಳವರಿಗೆ ನಿಸರ್ಗಾಧಾಮ ಉತ್ತಮ ಸ್ಥಳವಾಗಲಿದೆ. ಇದನ್ನು ಕಾವೇರಿ ನಿಸರ್ಗಧಾಮ ಎಂದೂ ಕರೆಯುತ್ತಾರೆ.

ಬೇಲೂರು-ಚಿಕ್ಕಮಗಳೂರು-ಮುಳ್ಳಯನಗಿರಿ-ಕೆಮ್ಮಣ್ಣುಗುಂಡಿ ಹೊಯ್ಸಳ ಕಾಲದ ಅದ್ಭುತ ಕಲಾಶೈಲಿ ಮತ್ತು ವಾಸ್ತು ಶಿಲ್ಪವನ್ನು ಹೊಂದಿರುವ ಸ್ಥಳ ಬೇಲೂರು. ಚೆನ್ನಕೇಶವ ನೆಲಸಿರುವ ಈ ಸ್ಥಳ ಇತಿಹಾಸ ಮತ್ತು ವಾಸ್ತು ಶಿಲ್ಪದ ಬಗ್ಗೆ ಅಧ್ಯಯನ ಮಾಡಲು ಉತ್ತಮ ಸ್ಥಳವಾಗಿದೆ. ಇನ್ನು ಚಿಕ್ಕಮಗಳೂರಿನ ಆಸುಪಾಸಿನಲ್ಲಿರುವ ಮುಳ್ಳಯನಗಿರಿ , ಕೆಮ್ಮಣ್ಣುಗುಂಡಿ ವೀಕೆಂಡ್​​ ಭೇಟಿಗೆ ಉತ್ತಮ ಸ್ಥಳವಾಗಿದೆ. ಟ್ರೆಕ್ಕಿಂಗ್​ ಬಯಸುವವರಿಗೆ ಮುಳ್ಳಯ್ಯನಗಿರಿ ಬೆಸ್ಟ್​ ಸ್ಥಳವಾಗಲಿದೆ.

ಜೋಗ-ಸಿಗಂಧೂರು ಭಾರತದ ಅತೀ ಎತ್ತರದ ಜಲಪಾತ ಎಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ನಿಮ್ಮ ವೀಕೆಂಡ್​ಗೆ ಉತ್ತಮ ಸ್ಥಳವಾಗಲಿದೆ. ರಾಜ, ರಾಣಿ, ರೋರರ್​, ರಾಕೆಟ್​ ಎನ್ನುವ ಹೆಸರಿನ ಮೂಲಕ ಜನಪ್ರಿಯತೆ ಪಡೆಯುವ ಮೂಲಕ ಪ್ರವಾಸಿಗರನ್ನು ಸೆಳೆಯುತ್ತಿದೆ. ಇನ್ನು ಸಾಗರದ ಬಳಿ ಇರುವ ಇನ್ನೊಂದು ಸ್ಥಳವೆಂದರೆ ಸಿಗಂಧೂರು. ಸಾಗರ ತಾಲೂಕಿನ ಪುಟ್ಟ ಹಳ್ಳಿ ಸಿಗಂಧೂರು ದೇವಿ ಚಾಮುಂಡೇಶ್ವರಿಯ  ಕ್ಷೇತ್ರವಾಗಿದೆ. ಪ್ರವಾಸಿಗರನ್ನು ಸೆಳೆಯುವ ಶರಾವತಿ ಹಿನ್ನೀರು. ಕಣ್ಣು ಹಾಯಿಸಿದಷ್ಟು ದೂರ ಕಾಣುವ ಜಲರಾಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಮಲೆಮಹದೇಶ್ವರ ಬೆಟ್ಟ- ಬಿಳಿಗಿರಿ ರಂಗನಬೆಟ್ಟ-ನಂಜನಗೂಡು ಟ್ರೆಕಿಂಗ್​ ಮಾಡುವ ಆಸೆಯಿದ್ದರೆ, ಹಸಿರ ನಡುವೆ ಬೆರೆಯುವ , ಹೆಜ್ಜೆ ಹಾಕುವ ಬಯಕೆಯಿದ್ದರೆ ನೀವು ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟಗಳಿಗೆ ಭೇಟಿ ನೀಡಬಹುದು.  ಈ ಭೇಟಿಯ ವೇಳೆ ನೀವು ಕಾಡುಪ್ರಾಣಿಗಳನ್ನೂ ಕಾಣಬಹುದು.  ಹೀಗಾಗಿ ವೀಕೆಂಡ್​ಗೆ ಈ ಸ್ಥಳಗಳು ನಿಮಗೆ ಅನುಭವದ ಜತೆಗೆ ಒತ್ತಡವನ್ನು ನಿವಾರಿಸುವ ಜಾಗವಾಗಲಿದೆ. ಇನ್ನು ನಂಜನಗೂಡನ್ನು ದಕ್ಷಿಣ ಕಾಶಿ ಎಂದೆ ಕರೆಯುತ್ತಾರೆ.

Follow us on

Related Stories

Most Read Stories

Click on your DTH Provider to Add TV9 Kannada