ಕೂದಲಿನ ಆರೈಕೆ ಬಗ್ಗೆ ಒಬ್ಬೊಬ್ಬರು ಒಂದೊಂದು ಸಲಹೆಯನ್ನು ನೀಡುತ್ತಾರೆ, ಆಗಾಗ ಕೂದಲು ಕತ್ತರಿಸಿದರೆ ದಪ್ಪವಾಗಿ ಬೆಳೆಯುತ್ತದೆ. ಶ್ಯಾಂಪೂ ಹಾಕಿದ ಬಳಿಕ ಕಂಡೀಷನರ್ ಬಳಕೆ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಎಂಬೆಲ್ಲಾ ಸಲಹೆಗಳನ್ನು ನೀಡುತ್ತಾರೆ.
ಈಗಿನ ಜೀವನಶೈಲಿಯಲ್ಲಿ ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ, ಕೂದಲಿನ ಆರೈಕೆ ಬಗ್ಗೆ ಯಾರು ಏನೇ ಹೇಳಿದರೂ ಅಲರ್ಟ್ ಆಗಿಬಿಡುತ್ತೇವೆ, ಒಮ್ಮೆ ನೀವು ಪಾಲಿಸಬೇಕಾದ ಸಲಹೆಗಳ ಬಗ್ಗೆ ತಿಳಿಯುವುದು ಅಗತ್ಯ.
ಆಯಿಲಿ ಕೂದಲಾಗಿದ್ದರೆ ಶ್ಯಾಂಪೂ ಬಳಿಕ ಕಂಡೀಷನರ್ ಬಳಕೆ ಮಾಡಬೇಡಿ ಎಂದು ಕೆಲವರು ಸಲಹೆ ನೀಡುತ್ತಾರೆ ಆದರೆ ಕೂದಲಿನ ಸಂರಕ್ಷಣೆಗೆ ಶ್ಯಾಂಪೂ ಜತೆಯಲ್ಲಿ ಕಂಡೀನರ್ ಬಳಕೆ ಮಾಡಲೇಬೇಕು.
ಒಂದು ನೆರೆ ಕೂದಲು ಕಿತ್ತರೆ ಎರಡು ನೆರೆ ಕೂದಲು ಹುಟ್ಟುತ್ತದೆ ಎಂಬುದು ನಿಜವೇ?: ಒಂದು ಕೂದಲು ಕಿತ್ತ ತಕ್ಷಣ ಎರಡು ನೆರೆ ಕೂದಲು ಹುಟ್ಟುವುದಿಲ್ಲ. ಬದಲಿಗೆ ದೇಹದಲ್ಲಿ ಕೂದಲಿಗೆ ಅಗತ್ಯವಾದ ಪೋಷಕಾಂಶದ ಕೊರತೆ ಉಂಟಾದಾಗ ಅಥವಾ ಒತ್ತಡದ ಜೀವನ ಶೈಲಿಯಿಂದ ಅಕಾಲಿಕ ನೆರೆ ಮೂಡುತ್ತದೆ.
ಮೊದ ಮೊದಲು ಅಲ್ಲಲ್ಲಿ ಒಂದೊಂದು ನೆರೆ ಕೂದಲು ಕಾಣಿಸಬಹುದು. ನಂತರ ನೆರೆ ಕೂದಲು ಸಂಖ್ಯೆ ಹೆಚ್ಚಾಗುವುದು. ಆದ್ದರಿಂದ ಕೀಳುವುದರಿಂದ ನೆರೆ ಕೂದಲು ಹೆಚ್ಚಾಯಿತು ಎಂದು ಭಾವಿಸುವುದು ತಪ್ಪು. ನೆರೆಕೂದಲು ಬಂದರೆ ಅದನ್ನು ಕೀಳುವುದು ಮಾಡಬೇಡಿ. ಅದು ಕಾಣಬಾರದು ಎಂದಾದರೆ ಡೈ ಮಾಡಿ ಅಥವಾ ಹೆನ್ನಾ ಹಚ್ಚಿ.
ಕೂದಲನ್ನು ಕತ್ತರಿಸಿದರೆ ದಪ್ಪವಾಗಿ ಬೆಳೆಯುತ್ತದೆ: ಕೂದಲು ಕತ್ತರಿಸುವುದರಿಂದ ಕೂದಲು ದಪ್ಪವಾಗಿ ಬೆಳೆಯುವುದಿಲ್ಲ. ಕೂದಲು ದಪ್ಪವಾಗಿ ಬೆಳೆಯಬೇಕಾದರೆ ಕೂದಲಿನ ಬುಡದ ಆರೈಕೆ ಮಾಡಬೇಕು. ಕೂದಲು ಕವಲೊಡೆದಿದ್ದರೆ ಕತ್ತರಿಸಿದರೆ ಒಳ್ಳೆಯದು.
ಬೆಲೆ ಬಾಳುವ ಶ್ಯಾಂಪೂಗಳನ್ನು ಕೂದಲಿಗೆ ಬಳಸಿದರೆ ಕೂದಲು ದಪ್ಪವಾಗಿ ಬೆಳೆಯುತ್ತದೆ ಎಂಬುದು ಸತ್ಯವೇ?: ಕೂದಲು ದಪ್ಪವಾಗಿ ಬೆಳೆಯಲು ಆರೋಗ್ಯಕರ ಜೀವನ ಶೈಲಿ ಮತ್ತು ಆಹಾರ , ಹಾಗೂ ಪರಿಸರ ಅಗತ್ಯ ಹೊರತು ಬೆಲೆ ಬಾಳುವ ಶ್ಯಾಂಪೂ ಕಂಡೀಷನರ್‌ಗಳಲ್ಲ!
ಶ್ಯಾಂಪೂ ಹಾಕಿದ ಬಳಿಕ ಕಂಡೀಷನರ್: ಇದು ಹೆಚ್ಚಿನವರು ಮಾಡುವ ತಪ್ಪು. ಕಂಡೀಷನರ್ ಹಚ್ಚಿದ ಬಳಿಕ ಶ್ಯಾಂಪೂ ಹಚ್ಚುವುದು ಕೂದಲಿನ ಆರೈಕೆಗೆ ಒಳ್ಳೆಯದು. ಅದರಲ್ಲೂ ಮೊಟ್ಟೆಯನ್ನು ನ್ಯಾಚುರಲ್ ಕಂಡಿಷನರ್ ಆಗಿ ಬಸುವುದು ಕೂದಲಿನ ಆರೈಕೆಗೆ ತುಂಬಾ ಒಳ್ಳೆಯದು.
ಕೂದಲು ಉದುರುವಿಕೆ ಸೇರಿ ಇತರೆ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ