ಬೆಳಗ್ಗೆ ಎದ್ದಾಕ್ಷಣ ಇವುಗಳನ್ನು ನೋಡುವುದರಿಂದ ಶುಭವಾಗುತ್ತಂತೆ

ದಿನದ ಆರಂಭ ಚೆನ್ನಾಗಿದ್ದರೆ, ಆ ಪೂರ್ಣ ದಿನವೇ ಉತ್ತಮವಾಗಿರುತ್ತದೆ ಅದಕ್ಕಾಗಿಯೇ ದಿನವನ್ನು ಸಕಾರಾತ್ಮಕತೆಯಿಂದ ಆರಂಭಿಸಬೇಕು ಮೊಬೈಲ್‌ ನೋಡಬಾರದು ಅನ್ನೋದು. ಮೊಬೈಲ್‌ ನೋಡಿದರೆ ಮನಸ್ಸಿಗೆ ಒತ್ತಡ ಉಂಟಾಗುತ್ತದೋ ಅದೇ ರೀತಿ ಈ ಒಂದಷ್ಟು ಶುಭ ವಿಷಯಗಳನ್ನು ನೋಡುವುದುದರಿಂದ ನಿಮ್ಮ ಸಂಪೂರ್ಣ ದಿನವೇ ಉತ್ತಮವಾಗಿರುತ್ತದೆ. ಅದಕ್ಕಾಗಿಯೇ ನಿತ್ಯ ಬೆಳಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿ.

ಬೆಳಗ್ಗೆ ಎದ್ದಾಕ್ಷಣ ಇವುಗಳನ್ನು ನೋಡುವುದರಿಂದ ಶುಭವಾಗುತ್ತಂತೆ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 03, 2026 | 9:02 PM

ಬೆಳಗಿನ ಸಮಯವನ್ನು (morning time) ದಿನದ ಪ್ರಮುಖ ಸಮಯವೆಂದು ಪರಿಗಣಿಸಲಾಗುತ್ತದೆ. ನಾವು ನಮ್ಮ ದಿನವನ್ನು ಪ್ರಾರಂಭಿಸುವ ವಿಧಾನವು ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ ನಾವು ಎದ್ದ ತಕ್ಷಣ ಸಕಾರಾತ್ಮಕಮನಸ್ಥಿತಿಯಲ್ಲಿದ್ದರೆ ಮತ್ತು ಸಕಾರಾತ್ಮಕ ಅಂಶಗಳನ್ನು ನೋಡಿದರೆ, ನಮ್ಮ ಮನಸ್ಥಿತಿ ತಾಜಾ ಮತ್ತು ಸಕಾರಾತ್ಮಕವಾಗಿರುತ್ತದೆ.  ಅದೇ ಮೊಬೈಲ್‌ ಇತ್ಯಾದಿ ನಕಾರಾತ್ಮಕ ವಿಷಯಗಳನ್ನು ನೋಡಿದರೆ, ದಿನವಿಡೀ ಉದ್ವೇಗ, ಕೋಪ ಮತ್ತು ಕಿರಿಕಿರಿಯುಂಟಾಗುತ್ತದೆ. ಅದಕ್ಕಾಗಿಯೇ ಬೆಳಗ್ಗೆ ಎದ್ದ ತಕ್ಷಣ ಧನಾತ್ಮಕ ಮನಸ್ಥಿತಿಯೊಂದಿಗೆ ದಿನವನ್ನು ಆರಂಭಿಸಬೇಕು ಅನ್ನೋದು. ಇದರ ಜೊತೆಗೆ ಬೆಳಗ್ಗೆ ಎದ್ದ ತಕ್ಷಣ ಈ ಶುಭ ವಿಷಯಗಳನ್ನು ನೋಡುವುದರಿಂದಲೂ ಆ ಸಂಪೂರ್ಣ ದಿನವೇ ಉತ್ತಮವಾಗಿರುತ್ತದೆ. ಹಾಗಿದ್ರೆ ಬೆಳಗ್ಗೆ ಎದ್ದ ತಕ್ಷಣ ಏನು ನೋಡಿದರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ಬೆಳಗ್ಗೆ ಎದ್ದಾಕ್ಷಣ ನೀವು ನೋಡಬೇಕಾದ ಸಂಗತಿಗಳು:

ಬೆಳಿಗ್ಗೆ ಎದ್ದು ನಿಮ್ಮ ಅಂಗೈಗಳನ್ನು ನೋಡಬೇಕು: ಬೆಳಗ್ಗೆ ಎದ್ದ ತಕ್ಷಣ ಮೊದಲು ನಿಮ್ಮ ಕೈಗಳನ್ನು ಒಟ್ಟಿಗೆ ಸೇರಿಸಿ ಮತ್ತು ನಿಮ್ಮ ಅಂಗೈಗಳನ್ನು ನೋಡಿ. ಪ್ರಾಚೀನ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯು ನಮ್ಮ ಕೈಗಳ ಮುಂಭಾಗದಲ್ಲಿ, ಸರಸ್ವತಿ ದೇವಿಯು ಮಧ್ಯದಲ್ಲಿ ಮತ್ತು ವಿಷ್ಣುವು ಕೆಳಭಾಗದಲ್ಲಿ ವಾಸಿಸುತ್ತಾರೆ. ಬೆಳಿಗ್ಗೆ ಅಂಗೈಯನ್ನು ನೋಡಿ ನಂತರ ಕೈಯನ್ನು ನಿಮ್ಮ ಮುಖದ ಮೇಲೆ ಸವರುವುದರಿಂದ ದೇವರ ಆಶೀರ್ವಾದ ಸಿಗುತ್ತದೆ. ಇದು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ.

ನಗುತ್ತಿರುವ ಫೋಟೋ ಅಥವಾ ದೇವರ ವಿಗ್ರಹ: ಬೆಳಗ್ಗೆ ಎದ್ದಾಗ, ನೀವು ಮೊದಲು ದೇವರ ಫೋಟೋವನ್ನು ನೋಡುವುದು ಕೂಡ ಶುಭದ ಸಂಕೇತ. ಬೆಳಿಗ್ಗೆ ದೇವರ ಮುಖವನ್ನು ನೋಡುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ. ಹಾಗಾಗಿ ಶಾಂತ ಹಾಗೂ ನಗು ಮುಖದ ದೇವರ ಫೋಟೋವನ್ನು ಮಲಗುವ ಕೋಣೆಯಲ್ಲಿ ಇರಿಸಿ.

ತಂದೆತಾಯಿ, ಹಿರಿಯರ ಮುಖ ನೋಡಿ ಅವರ ಪಾದಗಳನ್ನು ಮುಟ್ಟುವುದು: ಬೆಳಿಗ್ಗೆ ಎದ್ದು ನಿಮ್ಮ ಹೆತ್ತವರ ಅಥವಾ ಮನೆಯ ಹಿರಿಯೆ ಮುಖವನ್ನು ನೋಡಿ, ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರೆ, ತುಂಬಾನೇ ಒಳ್ಳೆಯದಾಗುತ್ತದಂತೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವು ಸೃಷ್ಟಿಯಾಗುತ್ತದೆ, ಕುಟುಂಬದಲ್ಲಿ ಪ್ರೀತಿ ಬೆಳೆಯುತ್ತದೆ ಮತ್ತು ಇದರೊಂದಿಗೆ, ನಿಮ್ಮ ಇಡೀ ದಿನವು ತುಂಬಾ ಉತ್ತಮವಾಗಿರುತ್ತದೆ.

ಇದನ್ನೂ ಓದಿ: ತಪ್ಪುಗಳನ್ನು ಮಾಡಿದರೆ ಎಂದಿಗೂ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದಿಲ್ಲ

ಹಚ್ಚ ಹಸಿರಿನ ಗಿಡ, ಮರಗಳನ್ನು ನೋಡುವುದು: ಬೆಳಿಗ್ಗೆ ಎದ್ದು ನಿಮ್ಮ ಬಾಲ್ಕನಿ, ಟೆರೇಸ್ ಅಥವಾ ಕಿಟಕಿಯಿಂದ ಹಚ್ಚ ಹಸಿರಿನ ಸಸ್ಯಗಳು, ಮರಗಳು ಅಥವಾ ಅರಳಿರುವವ ಹೂವುಗಳನ್ನು ನೋಡುವುದು ಕೂಡ ತುಂಬಾನೇ ಒಳ್ಳೆಯದು.  ಹಸಿರು ಶಾಂತಿ ಮತ್ತು ಪ್ರಗತಿಯನ್ನು ಸಂಕೇತವಾಗಿದ್ದು, ಹಚ್ಚ ಹಸಿರಿನ ವಾತಾವರಣವನ್ನು ನೋಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ, ಸಂಪೂರ್ಣ ದಿನವೇ ಆಹ್ಲಾದಕರವಾಗಿರುತ್ತದೆ.

ಪಕ್ಷಿಗಳ ಶಬ್ದ ಕೇಳುವುದು ಮತ್ತು ನೀರಿನಿಂದ ತುಂಬಿದ ಪಾತ್ರೆಯನ್ನು ನೋಡುವುದು: ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿಯನ್ನು ಕೇಳುವುದು, ಬೆಳಿಗ್ಗೆ ಎದ್ದ ತಕ್ಷಣ ನೀರಿನಿಂದ ತುಂಬಿದ ಪಾತ್ರೆಯನ್ನು ನೋಡುವುದು ತುಂಬಾನೇ ಒಳ್ಳೆಯದು. ಅಲ್ಲದೆ ನೀರು ಮತ್ತು ಜಲಪಾತಗಳ ಚಿತ್ರಗಳನ್ನು ನೋಡುವುದು ಕೂಡ ಒಳ್ಳೆಯದು. ಇದರಿಂದ ಮಾನಸಿಕ ಶಾಂತಿ ದೊರೆಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us