
ಪ್ರೇಮ ಸಂಬಂಧವಾಗಿರಬಹುದು ಅಥವಾ ದಾಂಪತ್ಯ ಜೀವನವಾಗಿರಬಹುದು ಈ ಸಂಬಂಧ (relationship) ನಿಂತಿರುವುದೇ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯ ಆಧಾರದ ಮೇಲೆ. ಹೀಗೆ ಸಂಬಂಧದಲ್ಲಿ ನಂಬಿಕೆ ಮತ್ತು ಗೌರವ ಎನ್ನುವುದು ತುಂಬಾನೇ ಮುಖ್ಯ. ಆದರೆ ಕೆಲವೊಮ್ಮೆ ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಈ ಸಣ್ಣಪುಟ್ಟ ವಿಷಯಗಳು ಹಾಲು ಜೇನಿನಂತಹ ಸಂಬಂಧವನ್ನು ಹಾಳು ಮಾಡಬಹುದು. ಅದರಲ್ಲೂ ನಿಮ್ಮ ಈ ಕೆಲವೊಂದಿಷ್ಟು ಅಭ್ಯಾಸಗಳು ನಿಮ್ಮ ಪ್ರೇಮ ಸಂಬಂಧದಲ್ಲಿ ಬಿರುಕನ್ನು ಮೂಡಿಸಬಹುದು. ಸಂಬಂಧವನ್ನು ಹಾಳು ಮಾಡುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಸಂಗಾತಿಯನ್ನು ಹಗುರವಾಗಿ ಪರಿಗಣಿಸುವುದು: ಸಂಬಂಧದಲ್ಲಿ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ಪರಸ್ಪರ ಪ್ರಶಂಸಿಸುವುದು ಮುಖ್ಯ. ನೀವು ನಿಮ್ಮ ಸಂಗಾತಿಯ ಪ್ರಯತ್ನಗಳನ್ನು ನಿರ್ಲಕ್ಷ್ಯಿಸಲು ಪ್ರಾರಂಭಿಸಿದಾಗ ಅಥವಾ ಯಾವಾಗಲೂ ಅವರನ್ನು ಹಗುರವಾಗಿ ಪರಿಗಣಿಸಿದಾಗ, ಇದು ಖಂಡಿತವಾಗಿಯೂ ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸುತ್ತದೆ.
ಸಂವಹನದ ಕೊರತೆ: ಸಂವಹದ ಕೊರತೆಯಿಂದಲೂ ಸಂಬಂಧ ಹಾಳಾಗುತ್ತವೆ. ಹೌದು ನೀವು ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳದಿದ್ದರೆ ಅಥವಾ ನಿಮ್ಮ ಸಂಗಾತಿ ತಮ್ಮ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೆ, ಈ ಸಂವಹನ ಅಂತರವು ಸಂಬಂಧವನ್ನು ಹಾಳುಮಾಡಬಹುದು. ಅಲ್ಲದೆ ಸಂವಹನದ ಕೊರತೆಯಿಂದ ಸಂಬಂಧದಲ್ಲಿ ಅಪನಂಬಿಕೆಯೂ ಉಂಟಾಗುತ್ತದೆ.
ಸಮಯ ನೀಡದಿರುವುದು: ಇಂದಿನ ಕಾರ್ಯನಿರತ ಜೀವನದಲ್ಲಿ, ಹಲವರು ತಮ್ಮ ಸಂಗಾತಿಗೆ ಸಮಯ ನೀಡಲು ಮರೆತುಬಿಡುತ್ತಾರೆ. ಮತ್ತು ತಮ್ಮಷ್ಟಕ್ಕೆ ಇದ್ದು ಬಿಡುತ್ತಾರೆ. ಇವೆಲ್ಲವೂ ಸಂಬಂಧದಲ್ಲಿ ಅಂತರವನ್ನು ಉಂಟುಮಾಡಬಹುದು. ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ಸಂಬಂಧ ಎನ್ನುವಂತಹದ್ದು ಬಲಗೊಳ್ಳುತ್ತದೆ.
ಸಣ್ಣ ವಿಷಯಗಳಿಗೂ ಜಗಳವಾಡುವುದು: ಪ್ರತಿಯೊಂದು ಸಂಬಂಧದಲ್ಲೂ ವಾದಗಳು, ಸಣ್ಣಪುಟ್ಟ ಜಗಳಗಳು ಮತ್ತು ಭಿನ್ನಾಭಿಪ್ರಾಯಗಳು ಇರುತ್ತವೆ, ಆದರೆ ಸಣ್ಣ ವಿಷಯಗಳಿಗೆ ಪದೇ ಪದೇ ಅನಗತ್ಯವಾಗಿ ಜಗಳವಾಡುವುದರಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು.
ಗೌರವ ನೀಡದಿರುವುದು: ನೀವು ನಿಮ್ಮ ಸಂಗಾತಿಯನ್ನು ಗೌರವಿಸದಿದ್ದರೆ, ಸಂಬಂಧವು ಎಂದಿಗೂ ಬಲವಾಗಿರಲು ಸಾಧ್ಯವಿಲ್ಲ. ನೀವು ಅವರ ಆಲೋಚನೆಗಳನ್ನು ಗೌರವಿಸದಿರುವ ಅಥವಾ ಇತರರ ಮುಂದೆ ಅವರನ್ನು ಕೀಳಾಗಿ ನೋಡುವ ಅಭ್ಯಾಸಗಳು ಸಂಗಾತಿಯ ಆತ್ಮವಿಶ್ವಾಸವನ್ನು ಘಾಸಿಗೊಳಿಸುತ್ತವೆ ಮತ್ತು ಸಂಬಂಧವನ್ನು ಹಾಳು ಮಾಡುತ್ತದೆ.
ತಪ್ಪುಗಳ ಬಗ್ಗೆಯೇ ಮಾತನಾಡುವುದು: ನೀವು ನಿಮ್ಮ ಸಂಗಾತಿಯ ನ್ಯೂನತೆಗಳು ಮತ್ತು ತಪ್ಪುಗಳ ಬಗ್ಗೆಯೇ ಹೆಚ್ಚು ಮಾತನಾಡಿದಾಗ ಸಂಬಂಧದಲ್ಲಿ ನಕಾರಾತ್ಮಕತೆ ಎನ್ನುವುಂತಹದ್ದು ಸೃಷ್ಟಿಯಾಗುತ್ತದೆ. ಮತ್ತು ನಂತರದಲ್ಲಿ ಇದರಿಂದ ಸುಂದರ ಸಂಬಂಧವೇ ಹಾಳಾಗಿ ಹೋಗುತ್ತದೆ.
ಇದನ್ನೂ ಓದಿ: ಮಹಿಳೆಯರು ತಮ್ಮ ಗಂಡನಿಗೆ ತಮಾಷೆಗೂ ಈ ಮಾತುಗಳನ್ನು ಹೇಳಬಾರದು ಎನ್ನುತ್ತಾರೆ ತಜ್ಞರು
ಅತಿಯಾದ ನಿಯಂತ್ರಣ: ಸಂಬಂಧದಲ್ಲಿ ನಂಬಿಕೆ ಅತ್ಯಂತ ಮುಖ್ಯವಾದ ವಿಷಯ. ಹೀಗಿರುವಾಗ ನೀವು ನಿಮ್ಮ ಸಂಗಾತಿಯನ್ನು ಅನುಮಾನಿಸಲು ಪ್ರಾರಂಭಿಸಿದರೆ ಅಥವಾ ನಿಮ್ಮ ಇಚ್ಛೆಗಳನ್ನು ಸಂಗಾತಿಯ ಮೇಲೆ ಹೇರಲು ಪ್ರಾರಂಭಿಸಿ ಅವರನ್ನು ನಿಯಂತ್ರಿಸಲು ಬಯಿಸಿದರೆ ಇದರಿಂದ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ.
ಯಾವಾಗಲೂ ಟೀಕಿಸುವುದು: ನೀವು ಯಾವಾಗಲೂ ನಿಮ್ಮ ಸಂಗಾತಿಯನ್ನು ಟೀಕಿಸಿದರೆ ಮತ್ತು ಅವರ ಒಳ್ಳೆಯತನವನ್ನು ನಿರ್ಲಕ್ಷಿಸಿದರೆ, ಇದು ಸಂಬಂಧದ ಮಾಧುರ್ಯವನ್ನು ಕೊನೆಗೊಳಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ