ಅಡುಗೆಮನೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಲು ಹೋಗ್ಬೇಡಿ

ಅಡುಗೆ ಕೋಣೆಯು ಮನೆಯ ಅತೀ ಮುಖ್ಯ ಭಾಗವಾಗಿದ್ದು, ಅದರ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಅಡುಗೆಮನೆಯ ಸ್ವಚ್ಛತೆಯ ಬಗ್ಗೆ ಗಮನ ಕೊಡದಿರುವುದು, ಗೊತ್ತಿಲ್ಲದೆ ಮಾಡುವ ಕೆಲವೊಂದು ತಪ್ಪುಗಳು ಇವೆಲ್ಲದರ ಕಾರಣದಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಯ, ನೈರ್ಮಲ್ಯದ ಜೊತೆಗೆ ಅಡುಗೆಮನೆಯಲ್ಲಿ ಈ ಕೆಲವು ವಿಷಯಗಳ ವಿಶೇಷ ಕಾಳಜಿ ವಹಿಸಿ.

ಅಡುಗೆಮನೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಲು ಹೋಗ್ಬೇಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Nov 24, 2026 | 7:11 PM

ನಾವು ಸೇವಿಸುವ ಆಹಾರ ಮಾತ್ರವಲ್ಲ, ಬಗೆಬಗೆಯ ಭಕ್ಷ್ಯಗಳು ತಯಾರಾಗುವ ಅಡುಗೆ ಕೋಣೆಯೂ ಸಹ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತವೆ. ಹೌದು ಅಡುಗೆಮನೆಯ (kitchen) ಸ್ವಚ್ಛತೆಯು ಇಡೀ ಕುಟುಂಬದ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ನೇರವಾಗಿ ಸಂಬಂಧಿಸಿದೆ. ಹಾಗಾಗಿ ಅಡುಗೆಯಮನೆಯ ಸ್ವಚ್ಛತೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಪ್ರತಿಯೊಬ್ಬರೂ ಸಹ ಅಡುಗೆಮನೆಯನ್ನು ಕ್ಲೀನ್‌ ಆಗಿಯೇ ಇಟ್ಟುಕೊಳ್ಳುತ್ತಾರೆ. ಕಿಚನ್‌ ಅನ್ನು ಸ್ವಚ್ಛವಾಗಿಟ್ಟರೂ ಸಹ ಅಡುಗೆಮನೆಯಲ್ಲಿ ತಿಳಿಯದೆ ಮಾಡುವ ಈ ಕೆಲವೊಂದು ತಪ್ಪುಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಅಡುಗೆಕೋಣೆಯಲ್ಲಿ ಗೊತ್ತಿಲ್ದೆ ಮಾಡುವ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಅಡುಗೆಮನೆಯಲ್ಲಿ ಈ ತಪ್ಪುಗಳನ್ನು ಮಾಡಬಾರದು

ಪ್ರತಿಯೊಂದು ಕೆಲಸಕ್ಕೂ ಒಂದೇ ಬಟ್ಟೆಯನ್ನು ಬಳಸುವುದು:

ಕೈಗಳನ್ನು ಒರೆಸಲು, ಬಿಸಿ ಪಾತ್ರೆಗಳನ್ನು ಹಿಡಿಯಲು, ಕೌಂಟರ್‌ಪಾಟ್‌ಗಳನ್ನು ಸ್ವಚ್ಛಗೊಳಿಸಲು ಬಟ್ಟೆಗಳು ಬೇಕಾಗುತ್ತದೆ. ಕೆಲವರು ಇದಕ್ಕೆಲ್ಲಾ ಒಂದೇ ಬಟ್ಟೆಯನ್ನು ಉಪಯೋಗ ಮಾಡುತ್ತಾರೆ. ಇದರಿಂದ ಆ ಕೊಳಕು ಬಟ್ಟೆಯಲ್ಲಿರುವ ಸೂಕ್ಷ್ಮಾಣು ಜೀವಿಗಳು ಆಹಾರಕ್ಕೆ ಹರಡಿ, ಆರೋಗ್ಯವನ್ನು ಹದಗೆಡಿಸುತ್ತವೆ.  ಆದ್ದರಿಂದ ಪ್ರತಿಯೊಂದು ಕೆಲಸಕ್ಕೂ ಬೇರೆ ಬೇರೆ ಸ್ವಚ್ಛ ಬಟ್ಟೆಗಳನ್ನೇ ಉಪಯೋಗ ಮಾಡಿ. ಪ್ರತಿ ಬಳಕೆಯ ನಂತರ ಚೆನ್ನಾಗಿ ಸ್ವಚ್ಛಗೊಳಿಸಿ

Loading...

ಕೈ ತೊಳೆಯದೆ ಪದೇ ಪದೇ ರೆಫ್ರಿಜರೇಟರ್ ಬಾಗಿಲು ತೆರೆಯುವುದು:

ಫ್ರಿಡ್ಜ್‌ ಬಾಗಿಲನ್ನು ನಾವು ಆಗಾಗ್ಗೆ ತೆರೆಯುತ್ತಿರುತ್ತೇವೆ. ನಾವು ಹೆಚ್ಚಾಗಿ ಕೈ ತೊಳೆಯದೆ ರೆಫ್ರಿಜರೇಟರ್ ಬಾಗಿಲನ್ನು ತೆರೆಯುತ್ತೇವೆ. ಇದು ನಮ್ಮ ಕೈಗಳಿಂದ ಕೊಳಕು ಮತ್ತು ಸೂಕ್ಷ್ಮಜೀವಿಗಳು ಬಾಗಿಲಿನ ಹಿಡಿಕೆಗೆ ಅಂಟಿಕೊಳ್ಳಲು ಕಾರಣವಾಗುತ್ತದೆ. ನಂತರ, ಬೇರೆಯವರು ಅದನ್ನು ಮುಟ್ಟಿದಾಗ, ಆ ಸೂಕ್ಷ್ಮಜೀವಿಗಳು ಅವರ ಕೈಗಳಿಗೂ ವರ್ಗಾಯಿಸಲ್ಪಡುತ್ತವೆ. ಆದ್ದರಿಂದ ಫ್ರಿಡ್ಜ್‌ ಓಪನ್‌ ಮಾಡುವ ಮುನ್ನ ಕೈಗಳನ್ನು ತೊಳೆಯಿರಿ ಮತ್ತು ಫ್ರಿಡ್ಜ್‌ ಬಾಗಿಲಿನ ಹಿಡಿಕೆಗಳನ್ನು ಸ್ವಚ್ಛಗೊಳಿಸುತ್ತಿರಿ.

ಪಾತ್ರೆ ತೊಳೆಯುವ ಸ್ಪಾಂಜ್, ಸ್ಕ್ರಬ್ಬರ್‌ಗಳನ್ನು ಬದಲಾಯಿಸದಿರುವುದು:

ಸಾಮಾನ್ಯವಾಗಿ ಹೆಚ್ಚಿನವರು ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್ ಅಥವಾ ಸ್ಕ್ರಬ್ಬರ್‌ ಅನ್ನು ಅದು ಸವೆದು ಹೋಗುವವರೆಗೂ ಬಳಕೆ ಮಾಡುತ್ತಾರೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವು ಒದ್ದೆಯಾದ ಸ್ಪಂಜುಗಳಲ್ಲಿ ವೇಗವಾಗಿ ಬೆಳೆಯುತ್ತದೆ. ಈ ಸ್ಪಾಂಜುಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸದಿದ್ದರೆ, ಇದರಲ್ಲಿ ಸಂಗ್ರಹವಾದ ಬ್ಯಾಕ್ಟೀರಿಯಾಗಳು ಪಾತ್ರೆಗಳಿಗೆ ವರ್ಗಾಯಿಸಲ್ಪಡುತ್ತವೆ. ಇದು ನಮ್ಮ ಆರೋಗ್ಯವನ್ನೇ ಹದಗೆಡಿಸುತ್ತದೆ.

ಹಸಿ ಮತ್ತು ಬೇಯಿಸಿದ ಆಹಾರಗಳನ್ನು ಒಟ್ಟಿಗೆ ಸಂಗ್ರಹಿಸುವುದು:

ಅಡುಗೆಮನೆಯಲ್ಲಿ, ಜನರು ಹೆಚ್ಚಾಗಿ ಹಸಿ ತರಕಾರಿಗಳು, ಮಾಂಸ ಅಥವಾ ಮೀನುಗಳನ್ನು ಬೇಯಿಸಿದ ಆಹಾರಗಳ ಬಳಿ ಇಡುತ್ತಾರೆ. ಇದು ಕಚ್ಚಾ ಆಹಾರಗಳಿಂದ ಬೇಯಿಸಿದ ಆಹಾರಗಳಿಗೆ ಬ್ಯಾಕ್ಟೀರಿಯಾವನ್ನು ವರ್ಗಾಯಿಸಬಹುದು, ಇದು ಫುಡ್‌ ಪಾಯಿಸನ್‌ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಚ್ಚಾ ಮತ್ತು ಬೇಯಿಸಿದ ಆಹಾರಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಸಂಗ್ರಹಿಸಲು ಮರೆಯದಿರಿ.

ಇದನ್ನೂ ಓದಿ: ಅಪ್ಪಿ ತಪ್ಪಿಯೂ ಈ ಒಂದಷ್ಟು ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡ್ಬೇಡಿ

ಪಾತ್ರೆಗಳನ್ನು ಸರಿಯಾಗಿ ತೊಳೆಯದಿರುವುದು:

ಕೆಲವೊಮ್ಮೆ, ಆತುರದಲ್ಲಿ, ಪಾತ್ರೆಗಳನ್ನು ಸರಿಯಾಗಿ ತೊಳೆಯುವುದಿಲ್ಲ. ಆದರೆ ಇದು ಅಪಾಯಕಾರಿ. ಏಕೆಂದರೆ ಪಾತ್ರೆಗಳ ಮೇಲೆ ಸೋಪಿನ ಅವಶೇಷಗಳು ಅಥವಾ ಎಣ್ಣೆಯ ಪದರವು ಉಳಿದು ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ. ಇದು ನಮ್ಮ ದೇಹ ಸೇರಿದರೆ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾತ್ರೆಗಳನ್ನು ಬಿಸಿ ನೀರಿನಿಂದ ತೊಳೆಯಿರಿ ಮತ್ತು ಅವುಗಳನ್ನು ಚೆನ್ನಾಗಿ ಒಣಗಿಸಿ.

ಕೈ ತೊಳೆಯದೆ ಅಡುಗೆ ಮಾಡುವುದು:

ಅಡುಗೆಮನೆಗೆ ಪ್ರವೇಶಿಸುವ ಮೊದಲು ಮತ್ತು ಅಡುಗೆ ಮಾಡುವ ಮೊದಲು ನಿಮ್ಮ ಕೈಗಳನ್ನು ತೊಳೆಯುವುದು ಬಹಳ ಮುಖ್ಯ. ಕೆಲವರು ಹೊರಗಿನಿಂದ ಹಿಂತಿರುಗಿ ಅಡುಗೆಮನೆಯಲ್ಲಿ ಕೈ ತೊಳೆಯದೆ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಇದರಿಂದ ಕೊಳಕು ಮತ್ತು ಬ್ಯಾಕ್ಟೀರಿಯಾವನ್ನು ನೇರವಾಗಿ ಆಹಾರಕ್ಕೆ ವರ್ಗಾಯಿಸುತ್ತದೆ. ಆದ್ದರಿಂದ ತಿನ್ನುವ ಮೊದಲು ಅಥವಾ ಯಾವುದೇ ಅಡುಗೆ ಕೆಲಸವನ್ನು ಪ್ರಾರಂಭಿಸುವ ಮೊದಲು ಕನಿಷ್ಠ ಇಪ್ಪತ್ತು ಸೆಕೆಂಡುಗಳ ಕಾಲ ಕೈಗಳನ್ನು ಸೋಪಿನಿಂದ ತೊಳೆಯುವುದು ತುಂಬಾನೇ ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us