ನೀವು ಸೇವಿಸುವ ಈ ಆಹಾರಗಳು ದೇಹದ ತೂಕ ನಷ್ಟವಾಗದೇ ಇರಲು ಕಾರಣವಾಗಬಹುದು

ನೀವು ಸೇವಿಸುವ ಈ ಆಹಾರಗಳು ದೇಹದ ತೂಕ ನಷ್ಟವಾಗದೇ ಇರಲು ಕಾರಣವಾಗಬಹುದು
ಸಾಂಕೇತಿಕ ಚಿತ್ರ

ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ದೇಹಕ್ಕೆ ಯಾವ ರೀತಿಯ ಆಹಾರ ನೀಡುತ್ತೇವೋ ಆ ರೀತಿಯಲ್ಲಿ ದೇಹ ಹೊಂದಿಕೊಳ್ಳುತ್ತದೆ. ಬೆಳಗ್ಗಿನ ತಿಂಡಿಯಲ್ಲಿ ಮಾಡುವ ಕೆಲವೊಂದು ತಪ್ಪುಗಳು ನಿಮ್ಮ ದೇಹದ ತೂಕ ನಷ್ಟವಾಗದೇ ಇರಲು ಕಾರಣವಾಗುತ್ತದೆ. ಈ ಕಾರಣದಿಂದ ನಿಮ್ಮ ಉಪಹಾರದ ಕಡೆಗೆ ಹೆಚ್ಚು ಗಮನಿವಿರಲಿ.

TV9kannada Web Team

| Edited By: Pavitra Bhat Jigalemane

Dec 14, 2021 | 10:09 AM

ದೇಹದ ಅತಿಯಾದ ತೂಕ ಇಳಿಸಿಕೊಳ್ಳಲು ಡಯೆಟ್​, ಜಿಮ್ ಎಂದು ಅಭ್ಯಾಸ ಮಾಡಿಕೊಳ್ಳುವುದು ಸಹಜ. ಆದರೂ ದೇಹದ ತೂಕ ಕಡಿಮೆಯಾಗುತ್ತಿಲ್ಲವೆಂದು ಕೊರಗುವವರಿರುತ್ತಾರೆ. ಅದಕ್ಕೆ ಕಾರಣ ಸೇವಿಸುವ ಆಹಾರ. ಎಷ್ಟೇ ಜಿಮ್​ ವರ್ಕೌಟ್​ ಅಥವಾ ಡಯೆಟ್​ ಮಾಡಿದರೂ ಸೇವಿಸುವ ಆಹಾರದಲ್ಲಿ ಹಿಡಿತವಿಲ್ಲದಿದ್ದರೆ ಸಮಸ್ಯೆ ಪರಿಹಾರವಾಗವುದಿಲ್ಲ. ಹೀಗಾಗಿ ನಿಯಮಿತ, ಹಿತಮಿತ ಆಹಾರ ಸೇವನೆ ಅತೀಮುಖ್ಯ. ಬೆಳಗ್ಗಿನ ಆಹಾರ ಸೇವನೆ ದೇಹದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ದೇಹಕ್ಕೆ ಯಾವ ರೀತಿಯ ಆಹಾರ ನೀಡುತ್ತೇವೋ ಆ ರೀತಿಯಲ್ಲಿ ದೇಹ ಹೊಂದಿಕೊಳ್ಳುತ್ತದೆ. ಬೆಳಗ್ಗಿನ ತಿಂಡಿಯಲ್ಲಿ ಮಾಡುವ ಕೆಲವೊಂದು ತಪ್ಪುಗಳು ನಿಮ್ಮ ದೇಹದ ತೂಕ ನಷ್ಟವಾಗದೇ ಇರಲು ಕಾರಣವಾಗುತ್ತದೆ. ಈ ಕಾರಣದಿಂದ ನಿಮ್ಮ ಉಪಹಾರದ ಕಡೆಗೆ ಹೆಚ್ಚು ಗಮನಿವಿರಲಿ. ಇತ್ತೀಚೆಗಂತೂ ದೇಹದ ತೂಕ ಹೆಚ್ಚಾಗಿ ಅಧಿಕ ರಕ್ತದೊತ್ತಡ, ಬೊಜ್ಜು, ಸ್ನಾಯುಗಳ ಸೆಳೆತ ಹೀಗೆ ನಾನಾ ರೀತಿಯ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಆದ್ದರಿಂದ ಬೆಳಗ್ಗಿನ ಆಹಾರದೆಡೆಗೆ ನಿರ್ಲಕ್ಷ್ಯ ಸಲ್ಲದು.

ಬೆಳಗ್ಗಿನ ಈ ತಿಂಡಿಗಳು ನಿಮ್ಮ ದೇಹದ ತೂಕ ನಷ್ಟವಾಗದೇ ಇರಲು ಕಾರಣವಾಗಬಹುದು

ಅತಿಯಾದ ಸಕ್ಕರೆಯುಕ್ತ ಆಹಾರ ಬೆಳಗ್ಗೆ ದೇಹಕ್ಕೆ ಪ್ರೋಟೀನ್​ಯುಕ್ತ ಆಹಾರ ನೀಡಿ. ಇದರಿಂದ ನಿಮ್ಮ ಇಡೀ ದಿನವನ್ನು ಚೈತನ್ಯಯುತವಾಗಿ ಇಡಬಹುದು. ಸಕ್ಕರೆ ಹೆಚ್ಚಿರುವ ಜ್ಯೂಸ್​ ಅಥವಾ ಪಾನೀಯಗಳು ಕಡಿಮೆಯಿರಲಿ. ಕಿತ್ತಳೆ ಹಣ್ಣಿನ ಜ್ಯೂಸ್​ ಮಾಡುವುದರ ಬದಲು ಹಾಗೆಯೇ ಸೇವಿಸಿ. ಇದರಿಂದ ದೇಹಕ್ಕೆ ಬೇಕಾದ ಪ್ರೋಟೀನ್​ ದೊರಕುತ್ತದೆ. ಅಲ್ಲದೆ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ನೆನಪಿಡಿ ಹೆಚ್ಚು ಸಕ್ಕರೆ ಭರಿತ ಆಹಾರ ನಿಮ್ಮ ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು.

ಕ್ಯಾಲೋರಿ ಇಲ್ಲದ ಆಹಾರ ದೇಹಕ್ಕೆ ಜಂಕ್​ಫುಡ್​ಗಳು ಸದಾ ಕಾಲ ಹಾನಿಯುಂಟು ಮಾಡುವ ಆಹಾರವಾಗಿದೆ. ಅದರಲ್ಲಿ ಕೊಬ್ಬಿನಾಂಶ ಅಥವಾ ದೇಹವನ್ನು ಅನಾರೋಗ್ಯಕ್ಕೆ ಒಳಪಡಿಸುವ ಅಂಶಗಳೇ ಹೆಚ್ಚು. ಹೀಗಾಗಿ ಬೆಳಗ್ಗೆಯೇ ಹೊಟ್ಟೆ ಕೆಡುವಂತಹ ಜಂಕ್​ಫುಡ್​ಗಳ ಸೇವನೆ ಬೇಡವೇ ಬೇಡ. ಜತೆಗೆ ಮಿಠಾಯಿ, ಕೇಕ್​ನಂತಹ ಸಿಹಿ ತಿನಿಸಗಳಿಗೆ ಬ್ರೇಕ್​ ಹಾಕಿ. ಇದು ನಿಮ್ಮ ದೇಹದ ತೂಕ ಹೆಚ್ಚುವಿಕೆಗೆ ಕಾರಣವಾಗುತ್ತದೆ.

ಪ್ರೋಟೀನ್​ಯುಕ್ತ ಆಹಾರದ ಕೊರತೆ ತಿನ್ನುವ ಆಹಾರ ಕೇವಲ ಹೊಟ್ಟೆ ತುಂಬಲು ಅಥವಾ ಬಾಯಿ ರುಚಿಗೆ ಮಾತ್ರವಲ್ಲ ದೇಹಕ್ಕೆ ಪ್ರೋಟೀನ್ ಅಂಶವನ್ನು ನೀಡಿ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಂತಿರಬೇಕು. ಬೆಳಗ್ಗೆಯೇ ಮೈದಾದಿಂದ ತಯಾರಿಸಿದ ಆಹಾರ ಸೇವನೆ ಒಳ್ಳೆಯದಲ್ಲ. ಇದು ನಿಮ್ಮ ಹೊಟ್ಟೆಯಲ್ಲಿ ರಬ್ಬರ್​ನಂತೆ ಸಿಲುಕಿಕೊಳ್ಳಬಹುದು ಹಾಗೂ ಬೊಜ್ಜು ಹೆಚ್ಚಲು ಕಾರಣವಾಗಬಹುದು. ಆದ್ದರಿಂದ ಬೆಳಗ್ಗೆ ನೆನೆಸಿದ ಕಾಳು, ತರಕಾರಿಗಳ ಸಲಾಡ್​ನಂತಹ ಆಹಾರ ತಿಂಡಿಗಿರಲಿ.

ಜಿಡ್ಡು ತುಂಬಿರುವ ಆಹಾರದ ಸೇವನೆ ಬೆಳಗ್ಗೆ ದೇಹ ಉತ್ಕೃಷ್ಟ ಆಹಾರವನ್ನು ಬಯಸುತ್ತದೆ. ಏಕೆಂದರೆ ಇಡೀ ದಿನದ ನಿಮ್ಮ ಎನರ್ಜಿ ನಿರ್ಧಾರವಾಗುವುದು ಬೆಳಗ್ಗಿನ ತಿಂಡಿಯ ಆಧಾರದ ಮೇಲೆಯೆ. ಹೀಗಾಗಿ ಜಿಡ್ಡಿನಿಂದ ಕೂಡಿದ ಕರಿದ ಆಹಾರಗಳ ಸೇವೆನೆಯ ಅಭ್ಯಾಸ ಒಳ್ಳೆಯದಲ್ಲ. ಇದು ನಿಮ್ಮ ದೇಹಕ್ಕೆ ಅತಿಯಾದ ಕೊಬ್ಬು ನೀಡಿ ಕ್ಯಾನ್ಸರ್​, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಗೆ ಕಾರಣವಾಗಬಹುದು.

ಹಸಿವೆಯನ್ನು ನಿರ್ಲಕ್ಷಿಸುವುದು ಹಸಿವೆಯಾದಾಗ ತಿಂದರೆ ದೇಹಕ್ಕೆ ಎಷ್ಟು ಬೇಕೋ ಅಷ್ಟು ಆಹಾರವನ್ನು ತೆಗೆದುಕೊಳ್ಳಬಹುದು. ಅದನ್ನು ಬಿಟ್ಟು ಹಸಿವೆಯನ್ನು ನಿರ್ಲಕ್ಷಿಸಿ ತಿಂದರೆ ಅದಕ್ಕೆ ಮಿತಿಯಿರುವುದಿಲ್ಲ. ನಿಮ್ಮ ಡಯೆಟ್​ಗೆ ಅನುಗುಣವಾಗಿ ನಿರ್ದಿಷ್ಟ ಸಮಯಕ್ಕೆ ಆಹಾರ ಸೇವಿಸಿ. ಇದು ನಿಮ್ಮ ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಕಾರಿಯಾಗುವಂತೆ ಮಾಡುತ್ತದೆ.

ಇದನ್ನೂ ಓದಿ:

ಚುಮು ಚುಮು ಚಳಿ ಜೊತೆ ಬಿಸಿ ಬಿಸಿ ಜೋಳ ಸೂಪ್ ಕುಡಿಯಿರಿ; ವಿಧಾನ ಸುಲಭವಿದೆ

Carrot Benefits: ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ಎಷ್ಟು ಮುಖ್ಯ? ಸಮಸ್ಯೆ ಬಂದ ಮೇಲೆ ಚಿಂತಿಸುವ ಮೊದಲೇ ಎಚ್ಚರ ವಹಿಸಿ

Follow us on

Related Stories

Most Read Stories

Click on your DTH Provider to Add TV9 Kannada