Monsoon Food Tips : ಮಳೆಗಾಲದಲ್ಲಿ ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

ಮಳೆಗಾಲದಲ್ಲಿ ಬಿಡದೇ ಸುರಿಯುವ ಮಳೆಯ ನಡುವೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತವೆ. ಈ ಸಮಯದಲ್ಲಿ ಆಹಾರ ಪದ್ಧತಿಯನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳಬಹುದು. ಸಮತೋಲಿತ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯತ್ತ ಗಮನ ಹರಿಸಬೇಕು. ಅದಲ್ಲದೇ ಈ ಋತುಮಾನದಲ್ಲಿ ಈ ತರಕಾರಿಯನ್ನು ಆದಷ್ಟು ಸೇವಿಸದೇ ಇರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

Monsoon Food Tips : ಮಳೆಗಾಲದಲ್ಲಿ ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ
Edited By:

Updated on: Jun 05, 2024 | 10:39 AM

ಮಳೆಗಾಲವೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ತುಂಬಾನೇ ಕಷ್ಟ. ಹವಾಮಾನದಲ್ಲಾಗುವ ಸಾಕಷ್ಟು ಬದಲಾವಣೆಗಳು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ತಂಪಾದ ವಾತಾವರಣವಿರುವ ಕಾರಣ ಆರೋಗ್ಯವು ಕೈ ಕೊಡುವ ಸಾಧ್ಯತೆಯೇ ಹೆಚ್ಚು. ಮಳೆಗಾಲದಲ್ಲಿ ಕೆಲವು ತರಕಾರಿಗಳು ಪ್ರತಿರಕ್ಷಣಾ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡುತ್ತದೆ. ಹೀಗಾಗಿ ಈ ತರಕಾರಿಯನ್ನು ಆದಷ್ಟು ತ್ಯಜಿಸುವುದು ಉತ್ತಮ.

* ಹಸಿರು ಎಲೆಗಳು ರಕಾರಿಗಳು : ಹಸಿರು ಎಲೆಗಳ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಈ ಸಮಯದಲ್ಲಿ ಇದರ ಸೇವನೆಯು ಒಳ್ಳೆಯದಲ್ಲ.. ತರಕಾರಿಗಳನ್ನು ಸುಲಭವಾಗಿ ಕಲುಷಿತಗೊಳಿಸುವ ವಿವಿಧ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಈ ಮಳೆಗಾಲ ಸರಿಯಾದ ಸಮಯವಾಗಿದೆ. ಮಣ್ಣು ಕೂಡ ಕಲುಷಿತವಾಗಿರುವ ಕಾರಣ ಈ ಹಸಿರು ತರಕಾರಿಗಳ ಸೇವನೆಯನ್ನು ಆದಷ್ಟು ತಪ್ಪಿಸಿ.

* ಟೊಮೆಟೋ : ಮಳೆಗಾಲದಲ್ಲಿ ಟೊಮೆಟೋದ ಹುಳಿ ಅಂಶವು ಗ್ಯಾಸ್‌ ಅಥವಾ ಆಮ್ಲೀಯತೆ ಉಂಟು ಮಾಡುವ ಕಾರಣ ಇವುಗಳ ಸೇವನೆಯನ್ನು ಕಡಿಮೆ ಮಾಡುವುದು ಒಳಿತು.

ಇದನ್ನೂ ಓದಿ: ಎಚ್ಚರವಿರಲಿ… ಮುಂದೊಂದು ದಿನ ಮನುಷ್ಯನ ನಾಶಕ್ಕೆ ಇದು ಕಾರಣವಾಗಬಹುದು

* ಪಾಲಕ್ : ಮಳೆಗಾಲದಲ್ಲಿ ಕಬ್ಬಿಣ ಅಂಶವು ಕಡಿಮೆಯಿರುವ ಆಹಾರವನ್ನು ಸೇವಿಸಬೇಕಾಗಿರುವ ಕಾರಣ ಪಾಲಕ್ ಸೊಪ್ಪನ್ನು ಆದಷ್ಟು ತಪ್ಪಿಸಿ. ಮಳೆಗಾಲದಲ್ಲಿ ಇದರ ಸೇವನೆಯು ಜಠರ ಹಾಗೂ ಕರುಳಿನ ಸೋಂಕನ್ನು ಉಂಟು ಮಾಡುವ ಸಾಧ್ಯತೆಯೇ ಅಧಿಕ.

* ಹೂಕೋಸು : ಈ ತರಕಾರಿಯು ಗ್ಲುಕೋಸಿನೋಲೇಟ್‌ಗಳು ಎಂಬ ಸಂಯುಕ್ತಗಳನ್ನು ಹೊಂದಿದೆ. ಇದು ಅಲರ್ಜಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಮಾನ್ಸೂನ್ ನಲ್ಲಿ ಈ ತರಕಾರಿಯನ್ನು ಸೇವಿಸದೆ ಇರುವುದೇ ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: