ಕೊತ್ತಂಬರಿ ಸೊಪ್ಪು, ಕಡ್ಲೆ ಹಿಟ್ಟಿನಿಂದ ತಯಾರಿಸಿ ವಡಾ ಇಲ್ಲಿದೆ, ಇದು ತೂಕ ಇಳಿಕೆಗೆ ಸಹಕಾರಿ

ತೂಕ ಇಳಿಕೆಯ ಸಲುವಾಗಿ ಅನೇಕಕರು ಡಯೇಟ್ ಕ್ರಮವನ್ನು ಪಾಲಿಸುತ್ತಾರೆ. ಈ ಸಂದರ್ಭದಲ್ಲಿ ವಡೆ, ಭಜ್ಜಿ ಮುಂತಾದ ಯಾವುದೇ ಎಣ್ಣೆಯಲ್ಲಿ ಕರಿದ ಆಹಾರವನ್ನು ಸೇವನೆ ಮಾಡುವುದಿಲ್ಲ. ಆದರೆ ಈ ಬಗೆಯ ಆಹಾರವನ್ನು ತಿನ್ನುವ ಬಯಕೆ ಹಲವರಲ್ಲಿ ಇರುತ್ತದೆ. ಹಾಗಿದ್ದರೆ ತಯಾರಿಸಿ ಆರೋಗ್ಯಕರ ವಡಾ ರೆಸಿಪಿ.

ಕೊತ್ತಂಬರಿ ಸೊಪ್ಪು, ಕಡ್ಲೆ ಹಿಟ್ಟಿನಿಂದ ತಯಾರಿಸಿ ವಡಾ ಇಲ್ಲಿದೆ, ಇದು ತೂಕ ಇಳಿಕೆಗೆ ಸಹಕಾರಿ
ಸಾಂದರ್ಭಿಕ ಚಿತ್ರ
Edited By:

Updated on: Aug 09, 2023 | 6:32 PM

ಜನರು ಸಾಮಾನ್ಯವಾಗಿ ಬೆಳಗಿನ ಉಪಹಾರಕ್ಕಾಗಿ ರುಚಿಕರವಾದ ಹಾಗೆಯೇ ಆರೋಗ್ಯಕರವಾಗಿರುವ ತಿಂಡಿಯ ಆಯ್ಕೆಯನ್ನು ಮಾಡುತ್ತಾರೆ. ಪ್ರತಿದಿನ ದೋಸೆ, ಇಡ್ಲಿ, ಉಪ್ಪಿಟ್ಟು ಈ ರೀತಿಯ ಉಪಹಾರಗಳನ್ನು ತಿಂದು ಬೇಜಾರಾಗಿದ್ಯಾ. ಹಾಗಿದ್ದರೆ ನೀವು ತಯಾರಿಸಿ ಮಹಾರಾಷ್ಟ್ರದ ಫೇಮಸ್ ತಿಂಡಿ ಕೊತ್ತಂಬರಿ ವಡಾ. ಇದನ್ನು ಕೊತ್ತಂಬರಿ ಸೊಪ್ಪು ಮತ್ತು ಕಡ್ಲೆ ಹಿಟ್ಟಿನಿಂದ ತಯಾರಿಸಲಾಗುವುದರಿಂದ ಈ ತಿನಿಸು ತಿನ್ನಲು ರುಚಿಕರವಾದದ್ದು ಮಾತ್ರವಲ್ಲದೆ, ಬೆಳಗಿನ ತಿಂಡಿಯ ಆರೋಗ್ಯಕರ ಆವೃತ್ತಿಯಾಗಿದೆ. ಅಲ್ಲದೆ ನೀವು ತೂಕ ಇಳಿಕೆಯ ಪಯಣದಲ್ಲಿದ್ದರೆ ಈ ತಿನಿಸು ನಿಮ್ಮ ತೂಕ ಇಳಿಕೆಗೆ ಸಹಾಯಕವಾಗಲಿದೆ. ಈ ಆರೋಗ್ಯಕರ ತಿನಿಸಿನ ಪಾಕವಿಧಾನದ ಮಾಹಿತಿ ಇಲ್ಲಿದೆ.

ಕೊತ್ತಂಬರಿ ಸೊಪ್ಪಿನ ವಡೆ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

ಕೊತ್ತಂಬರಿ ಸೊಪ್ಪು 150 ಗ್ರಾಂ

ಕಡ್ಲೆ ಹಿಟ್ಟು 100 ಗ್ರಾಂ

ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಪೇಸ್ಟ್

ಅಚ್ಚಖಾರದ ಪುಡಿ

ಹಸಿಮೆಣಸಿನಕಾಯಿ

ಅರಶಿನ ಪುಡಿ

ಎರಡು ಚಿಟಿಕೆ ಇಂಗು/ಹಿಂಗು

ರುಚಿಗೆ ತಕ್ಕಷ್ಟು ಉಪ್ಪು

ಸಾಸಿವೆ 2 ಚಮಚ

ಬಿಳಿ ಎಳ್ಳು ಅರ್ಧ ಚಮಚ

ಮೊಸರು

ಎಣ್ಣೆ

ಸ್ವಲ್ಪ ನೀರು

ಇದನ್ನೂ ಓದಿ: Aಸಂಜೆಯ ಸ್ನಾಕ್ಸ್​​ಗೆ ಆಲೂಗಡ್ಡೆ-ಅವಲಕ್ಕಿ ಕಟ್ಲೆಟ್ ಸೂಪರ್​​, ಇಲ್ಲಿದೆ ಪಾಕವಿಧಾನ

ಕೊತ್ತಂಬರಿ ಸೊಪ್ಪಿನ ವಡೆ ತಯಾರಿಸುವ ವಿಧಾನ:

ಮೊದಲು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಒಂದು ಪಾತ್ರೆಗೆ ಆ ಕೊತ್ತಂಬರಿ ಸೊಪ್ಪನ್ನು ಹಾಕಿ ಅದಕ್ಕೆ ಕಡ್ಲೆ ಹಿಟ್ಟನ್ನು ಸೇರಿಸಿ. ಈ ಮಿಶ್ರಣಕ್ಕೆ ಮೊಸರು ಅಚ್ಚಖಾರದ ಪುಡಿ, ಅರಶಿನ ಪುಡಿ, ಸಣ್ಣದಾಗಿ ಕೊಚ್ಚಿದ ಹಸಿಮೆಣಸಿನಕಾಯಿ, ಹಾಗೂ ಹಸಿಮೆಣಸಿಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇಂಗನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ನೀರನ್ನು ಸೇರಿಸಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ತಯಾರಿಸಿ. ತಯಾರಾದ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ಸವರಿ ಅದನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿ. ಇದು ಬೆಂದ ಬಳಿಕ ಹೊರ ತೆಗೆದು ಬಟ್ಟಲಿನಲ್ಲಿರುವ ವಡೆಯನ್ನು ಸಣ್ಣಗೆ ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಿ. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ ಒಗ್ಗರಣೆ ಕೊಡಿ. ಅದರೊಂದಿಗೆ ಬಿಳಿ ಎಳ್ಳನ್ನು ಕೂಡಾ ಸೇರಿಸಿ. ಕೊನೆಗೆ ಕತ್ತರಿಸಿದ ವಡಾ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಒಂದು ರುಚಿಕರವಾದ ಹಾಗೂ ಪೌಷ್ಟಿಕವಾದ ತಿನಿಸು ಉಪಹಾರಕ್ಕೆ ಮಾತ್ರವಲ್ಲದೆ ಸಂಜೆ ಸ್ಯಾಕ್ಸ್ ಸಮಯದಲ್ಲೂ ತಿನ್ನಲು ಸೂಕ್ತವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: