ನಿಮ್ಮ ಮಕ್ಕಳಿಗೆ ಇಷ್ಟವಾಗುವಂತೆ ಆರೋಗ್ಯಕರ ಕ್ಯಾಶೂ ಬಟರ್ ಮನೆಯಲ್ಲಿಯೇ ತಯಾರಿಸಲು ಇಲ್ಲಿದೆ ಈ ಸುಲಭ ರೆಸಿಪಿ. ಇದನ್ನು ನೀವು ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿಯೇ ಯಾವುದೇ ಕಲಬೆರಕೆಗಳಿಲ್ಲದೆ ತಯಾರಿಸಬಹುದು.
ಗೋಡಂಬಿಯು ದುಬಾರಿ ಧಾನ್ಯವಾಗಿದ್ದರೂ ಸಹ ಅದು ಅಷ್ಟೇ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಗೋಡಂಬಿಯನ್ನು ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ, ಹೊಟ್ಟೆ ಮತ್ತು ಕರುಳಿನ ಕಾಯಿಲೆಗಳು, ಚರ್ಮದ ಸಮಸ್ಯೆಗಳು ಮತ್ತು ಇತರ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.
ಬೇಕಾಗುವ ಪದಾರ್ಥಗಳು:
ಗೋಡಂಬಿ ಬೀಜ- 450 ಗ್ರಾಂ
ತೆಂಗಿನ ಕಾಯಿ ಎಣ್ಣೆ- 1ಚಮಚ
ಉಪ್ಪು-1 ಚಿಟಿಕೆ
ಮಾಡುವ ವಿಧಾನ:
ಹಂತ 1
ಸುಲಭವಾಗಿ ಕ್ಯಾಶೂ ನಟ್ ಬಟರ್ ಮನೆಯಲ್ಲಿಯೇ ತಯಾರಿಸಲು ಗೋಡಂಬಿಯನ್ನು ಬಾಣಲೆಯಲ್ಲಿ ಹುರಿಯಿರಿ ಅಥವಾ ಬೇಕಿಂಗ್ ಟ್ರೇನಲ್ಲಿ ಹರಡಿ ಮತ್ತು ಅದು ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಬಹುದು.
ಹಂತ 2
ಬ್ಲೆಂಡರ್ ತೆಗೆದುಕೊಳ್ಳಿ, ಹುರಿದ ಗೋಡಂಬಿ ಸೇರಿಸಿ ಮತ್ತು ಗೋಡಂಬಿಯನ್ನು ಚೆನ್ನಾಗಿ ಪುಡಿಮಾಡಿ. ನಂತರ ಅದಕ್ಕೆ ತೆಂಗಿನ ಎಣ್ಣೆ ಮತ್ತು ಉಪ್ಪು ಸೇರಿಸಿ. ನಯವಾದ ಮಿಶ್ರಣವಾಗಿ ಬದಲಾಗುವವರೆಗೆ ಅದನ್ನು ಮಿಶ್ರಣ ಮಾಡಿ.
ಹಂತ 3
ಕ್ಯಾಶೂ ನಟ್ ಬಟರ್ ಅನ್ನು ಗಾಜಿನ ಜಾರ್‌ನಲ್ಲಿ ಸಂಗ್ರಹಿಸಿ ಮತ್ತು ನೀವು ಅದನ್ನು ತಂಪಾದ ಸ್ಥಳದಲ್ಲಿ ಅಥವಾ ರೆಫ್ರಿಜರೇಟರ್‌ನಲ್ಲಿ ಶೇಖರಿಸಿಡಿ.
ಟೋಸ್ಟ್‌ಗಳು, ಶೇಕ್,ಬ್ರೆಡ್ ಗಳೊಂದಿಗೆ ಕ್ಯಾಶು ನಟ್ ಬಟರ್ ಆನಂದಿಸಿ.
ಇದನ್ನು ಓದಿ: ಖಾರ ಖಾರ ಊಟ ಇಷ್ಟಪಡುವವರಿಗೆ ಇಲ್ಲಿದೆ ಗ್ರೀನ್ ಚಿಲ್ಲಿ ಫ್ರೈ ರೆಸಿಪಿ
ಗೋಡಂಬಿಯಲ್ಲಿ ಮೆಗ್ನೇಶಿಯಂ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳ ಬೆಳವಣಿಗೆ ಮತ್ತು ಶಕ್ತಿ ವರ್ಧನೆಗೆ ನೆರವಾಗುತ್ತದೆ.
Published On - 6:42 pm, Wed, 2 November 22